ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಖತ್ ಸುದ್ದಿ: ಭಾರತದಲ್ಲಿ ಕೊರೊನಾವೈರಸ್ ನಿವಾರಣೆಗೆ UV-C ಬೆಳಕಿನ ಕಿರಣ!

|
Google Oneindia Kannada News

ನವದೆಹಲಿ, ಮೇ 24: ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಅಲೆಗಳ ರೂಪದಿಂದ ಒಂದರ ಹಿಂದೆ ಒಂದು ದಾಳಿ ನಡೆಸುತ್ತಿವೆ. ಸಾರ್ಸ್-ಕೊವಿ-2 ರೋಗಾಣು ಗಾಳಿಯಲ್ಲಿ ತೇಲಾಡುವ ದ್ರವ ಕಣಗಳ ಮೂಲಕ ಹರಡುವುದಕ್ಕೆ ಸಾಕ್ಷ್ಯಗಳು ಸಿಗುತ್ತಿವೆ.

ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಆರೋಗ್ಯ ಇಲಾಖೆಗಳು ಮತ್ತು ವಿಶ್ವ ಆರೋಗ್ಯ ಸಂಸ್ಥೆ, ರೆಹ್ವಾ, ಆಶ್ರೆ ಸಂಸ್ಥೆಗಳು ಕೊರೊನಾವೈರಸ್ ಹರಡುವಿಕೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿವೆ. ನಾಲ್ಕು ಗೋಡೆಗಳ ನಡುವಿನ ಗಾಳಿಯಲ್ಲಿ ಕೊವಿಡ್-19 ಸೋಂಕು ಹೆಚ್ಚಾಗಿ ಹರಡುವ ಅಪಾಯವಿದೆ.

ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?ಗಾಳಿಯಲ್ಲಿ ವೈರಸ್ 10 ಮೀಟರ್‌ವರೆಗೂ ಹರಡುತ್ತದೆ; ಹೊಸ ಮಾರ್ಗಸೂಚಿಯಲ್ಲಿ ಏನೇನಿದೆ?

2020 ಸಪ್ಟೆಂಬರ್ ತಿಂಗಳಿನಲ್ಲಿ ಸೂಕ್ಷ್ಮಾಣು ವಿಜ್ಞಾನ ತಂತ್ರಜ್ಞಾನ ಸಂಸ್ಥೆ(CSIR) ನಡೆಸಿದ ಸಂಶೋಧನೆಯಲ್ಲಿ ರೋಗಣು ಗಾಳಿಯಲ್ಲಿ ಹರಡುವುದರ ಬಗ್ಗೆ ಪ್ರಾಯೋಗಿಕವಾಗಿ ಪ್ರದರ್ಶಿಸಲಾಗಿತ್ತು. ಒಂದು ಕೋಣೆಯಿಂದ ಒಬ್ಬ ಕೊರೊನಾವೈರಸ್ ಸೋಂಕಿತ ವ್ಯಕ್ತಿಯು ನಿರ್ಗಮಿಸಿದ 2 ಗಂಟೆಗಳ ನಂತರವೂ ರೋಗಾಣುವಿನ ಕಣಗಳು ಈ ಒಳಾಂಗಣ ಗಾಳಿಯಲ್ಲಿ ಇರುತ್ತದೆ ಎಂಬುದು ಸಂಶೋಧನೆಯಲ್ಲಿ ಪತ್ತೆಯಾಗಿತ್ತು.

ಕೊರೊನಾವೈರಸ್ ಗಾಳಿಯಲ್ಲಿ ಹರಡದಿರಲು ಹೊಸ ಅಸ್ತ್ರ

ಕೊರೊನಾವೈರಸ್ ಗಾಳಿಯಲ್ಲಿ ಹರಡದಿರಲು ಹೊಸ ಅಸ್ತ್ರ

ಜಾಗತಿಕ ಸಂಸ್ಥೆಗಳು ನಡೆಸಿದ ಪ್ರಾಯೋಗಿಕ ಸಂಶೋಧನೆಗಳನ್ನು ಆಧಾರವಾಗಿಟ್ಟುಕೊಂಡು ವಿಶೇಷ ಸಾಧನವನ್ನು ಅಭಿವೃದ್ಧಿಪಡಿಸುವ ಸವಾಲು ಎದುರಾಗಿತ್ತು. ಸಾರ್ವಜನಿಕ ಪರಿಸರ, ಕೈಗಾರಿಕೆ ಮತ್ತು ಒಳಾಂಗಣ ಪ್ರದೇಶದ ಗಾಳಿಯಲ್ಲಿ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಾಗುವಂತಾ ಅಸ್ತ್ರವನ್ನು ಅಭಿವೃದ್ಧಿಪಡಿಸುವತ್ತ ಲಕ್ಷ್ಯ ನೆಡಲಾಗಿತ್ತು. ಕೈಗಾರಿಕೆ ಮತ್ತು ವಾಣಿಜ್ಯ ಕಟ್ಟಡಗಳಲ್ಲಿ ಅಸ್ತಿತ್ವದಲ್ಲಿ ಇರುವ ಸಾಧನವನ್ನೇ ಮಾರ್ಪಾಡು ಮಾಡುವ ರೀತಿಯಲ್ಲಿ ಸಾಧನವನ್ನು ಅಭಿವೃದ್ಧಿಪಡಿಸಬೇಕು. ಈ ಸಾಧನವು ಗಾಳಿ ಬೆಳಕಿನ ವ್ಯವಸ್ಥೆಯಲ್ಲಿ ಹೆಚ್ಚು ವಾಯುನಾಳದ ಅಗತ್ಯವಿಲ್ಲದೇ ಅಳವಡಿಸುವ ಮತ್ತು ಅತ್ಯಧಿಕ ಗಾಳಿಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿರವಂತಿರಬೇಕು. ಈ ಅಂಶಗಳನ್ನೆಲ್ಲ ಒಗ್ಗೂಡಿಸಿ ಗಮನದಲ್ಲಿ ಇಟ್ಟುಕೊಂಡು CSIR ಮತ್ತು CSIO ಸಂಸ್ಥೆಗಳು ಯುವಿ-ಸಿ ವಾಯುನಾಳ ಸೋಂಕು ನಿವಾರಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.

ಗಾಳಿಯಲ್ಲಿ ಸಾರ್ಸ್-ಕೊವಿ-2 ನಿಷ್ಕ್ರಿಯಗೊಳಿಸುವ ತಂತ್ರಜ್ಞಾನ

ಗಾಳಿಯಲ್ಲಿ ಸಾರ್ಸ್-ಕೊವಿ-2 ನಿಷ್ಕ್ರಿಯಗೊಳಿಸುವ ತಂತ್ರಜ್ಞಾನ

ಸಾರ್ಸ್-ಕೊವಿ-2 ರೋಗಾಣು ಗಾಳಿಯ ಮೂಲಕ ಹರಡುವುದನ್ನು ತಡೆಯಲು ಹಾಗೂ ಗಾಳಿಯಲ್ಲೇ ರೋಗಾಣು ನಿಷ್ಕ್ರಿಯಗೊಳಿಸುವ ಅಗತ್ಯಕ್ಕೆ ಅನುಗುಣವಾಗಿ ಯುವಿ-ಸಿ ತಂತ್ರಜ್ಞಾನ ರೂಪಿಸಲಾಗಿದೆ. ದೊಡ್ಡ ಸಮಾವೇಶ ನಡೆಯುವ ಸಭಾಂಗಣ, ಶಾಲಾ ಕೊಠಡಿಗಳು, ಮಾಲ್ ಹಾಗೂ ಇತರೆ ಒಳಾಂಗಣ ಪ್ರದೇಶದಲ್ಲಿ ಈ ಸೋಂಕು ನಿವಾರಕ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ. ಒಳಾಂಗಣ ಪ್ರದೇಶದಲ್ಲಿ ಈ ವ್ಯವಸ್ಥೆಯಿಂದ ಸುರಕ್ಷಿತ ವಾತಾವರಣ ಸೃಷ್ಟಿಯಾಗುತ್ತದೆ. ಗಾಳಿ-ಬೆಳಕಿಗೆ ವ್ಯವಸ್ಥೆಯನ್ನು ಬಳಕೆ ಮಾಡಿಕೊಳ್ಳುವ ಮೂಲಕ ʻಜೈವಿಕ-ಸುರಕ್ಷತೆʼ ಮಾನದಂಡದ ಅನುಸರಣೆ ಸೇರಿದಂತೆ ಮುಂತಾದ ಅಗತ್ಯ ಸುರಕ್ಷತಾ ಕ್ರಮಗಳನ್ನು ಗಮನದಲ್ಲಿ ಇರಿಸಿಕೊಂಡು ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ.

ಕರ್ನಾಟಕದಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಅತಿಹೆಚ್ಚು ಜನರು ಸಾವು!ಕರ್ನಾಟಕದಲ್ಲಿ ಮೊದಲ ಬಾರಿಗೆ ಕೊರೊನಾದಿಂದ ಅತಿಹೆಚ್ಚು ಜನರು ಸಾವು!

ಕೊರೊನಾವೈರಸ್ ಅಲ್ಲದೇ ಶಿಲೀಂಧ್ರಗಳಿಗೂ ಚಿಕಿತ್ಸೆ

ಕೊರೊನಾವೈರಸ್ ಅಲ್ಲದೇ ಶಿಲೀಂಧ್ರಗಳಿಗೂ ಚಿಕಿತ್ಸೆ

ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಲ್ಲಿ ಕಪ್ಪು ಮತ್ತು ಬಿಳಿ ಶಿಲೀಂಧ್ರಗಳ ಅಪಾಯವೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಈ ಸಂದರ್ಭಗಳಲ್ಲಿ ಯುವಿ-ಸಿ ಸಾಧನದ ಮೂಲಕ 254ಎನ್ಎಂ ನೇರಳಾತೀತ ಬೆಳಕನ್ನು ಬಳಸಿ ಶೇ.99ರಷ್ಟು ರೋಗಾಣು, ಬ್ಯಾಕ್ಟೀರಿಯಾ, ಕಪ್ಪು ಹಾಗೂ ಬಿಳಿ ಶಿಲೀಂಧ್ರ ಮತ್ತು ಇತರೆ ಜೈವಿಕ ಕಣಗಳನ್ನು ಗಾಳಿಯಿಂದ ನಿಷ್ಕ್ರಿಯಗೊಳಿಸಲು ಸಾಧ್ಯವಾಗುತ್ತದೆ. ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಹಾವಳಿಗೆ ಕಡಿವಾಣ ಹಾಕುವುದಕ್ಕೆ ಈ ಯುವಿ-ಸಿ ತಂತ್ರಜ್ಞಾನವು ಅತಿಹೆಚ್ಚು ಉಪಯುಕ್ತವಾಗಲಿದೆ.

ಶೇ.99ರಷ್ಟು ಸೋಂಕು ನಿವಾರಿಸುವ ಯುವಿ-ಸಿ ತಂತ್ರಜ್ಞಾನ

ಶೇ.99ರಷ್ಟು ಸೋಂಕು ನಿವಾರಿಸುವ ಯುವಿ-ಸಿ ತಂತ್ರಜ್ಞಾನ

CSIR ಮತ್ತು CSIO ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಯುವಿ-ಸಿ ತಂತ್ರಜ್ಞಾನವು ಗಾಳಿಯಲ್ಲಿನ ಸೋಂಕನ್ನು ಶೇ.99ರಷ್ಟು ನಿವಾರಿಸುವ ಸಾಮರ್ಥ್ಯವನ್ನು ಹೊಂದಿರುವುದು ಸಾಬೀತಾಗಿದೆ. ಪ್ರಸ್ತುತ ವ್ಯವಸ್ಥೆಯನ್ನು ಕಟ್ಟಡಗಳಲ್ಲಿ ಇರುವ ವಾಯು ನಿರ್ವಹಣೆ ಘಟಕ, ಸರಕು-ಸಾಗಣೆ ವಾಹನ ಮತ್ತು ಇತರೆ ಉಪೋತ್ಪನ್ನಗಳಲ್ಲಿ ಬಳಸಬಹುದು. ಯುವಿ-ಸಿ ಇಂಧನ ದಕ್ಷ ವ್ಯವಸ್ಥೆಯನ್ನು ಹೊಂದಿದ್ದು, ಕಾಯಿಲ್ ಮೂಲಕ ಗಾಳಿಯ ಹರಿವನ್ನು ಸುಧಾರಿಸುತ್ತದೆ. ಅಲ್ಲದೇ ಒಳಾಂಗಣ ಪ್ರದೇಶದಲ್ಲಿ ಗಾಳಿಯ ಗುಣಮಟ್ಟವನ್ನು ಹೆಚ್ಚುವಂತೆ ಮಾಡುತ್ತದೆ. ಈ ಯುವಿ-ಸಿ ಸಾಧನಗಳ ಮೇಲಿನ ಆರಂಭಿಕ ಹೂಡಿಕೆ ಪ್ರಮಾಣ ಕಡಿಮೆಯಾಗಿದ್ದು, ಈ ವ್ಯವಸ್ಥೆಯು ವಾಣಿಜ್ಯ ಮಾನದಂಡ ಮತ್ತು ಪ್ರಮಾಣಪತ್ರವನ್ನು ಹೊಂದಿರುತ್ತದೆ.

ಸಿಎಸ್ಐಆರ್-ಸಿಎಸ್ಐಒ ತಂತ್ರಜ್ಞಾನ ವರ್ಗಾಯಿಸಿದ ಕಂಪನಿಗಳು

ಸಿಎಸ್ಐಆರ್-ಸಿಎಸ್ಐಒ ತಂತ್ರಜ್ಞಾನ ವರ್ಗಾಯಿಸಿದ ಕಂಪನಿಗಳು

ಭಾರತದಲ್ಲಿ ಸಿಎಸ್ಐಆರ್-ಸಿಎಸ್ಐಒ ಅಭಿವೃದ್ಧಿಪಡಿಸಿರುವ ಯುವಿ-ಸಿ ತಂತ್ರಜ್ಞಾನವನ್ನು ಕೆಲವೇ ಕೆಲವು ಕಂಪನಿಗಳಿಗೆ ಮಾತ್ರ ವರ್ಗಾಯಿಸಿದೆ. ಅವು ಯಾವ ಕಂಪನಿಗಳು ಎಂಬ ಪಟ್ಟಿ ಇಲ್ಲಿದೆ ನೋಡಿ.

1. ಆರ್ಕೊ ಎಂಜಿನಿಯರಿಂಗ್ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್

2. ಫ್ಲೆಕ್ಸಾಥರ್ಮ್ ಎಕ್ಸ್‌ಪಾನ್‌ಲೊ ಪ್ರೈವೇಟ್ ಲಿಮಿಟೆಡ್, ವಡೋದರಾ, ಗುಜರಾತ್

3. ಎಯಾನ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್, ಮುಂಬೈ, ಮಹಾರಾಷ್ಟ್ರ

4. ಶ್ರೀಸನ್ ಟೆಕ್ನಾಲಜೀಸ್ ಪ್ರೈ.ಲಿ., ನಾಸಿಕ್, ಮಹಾರಾಷ್ಟ್ರ

5. ರೀಜ್ ಎಲೆಕ್ಟ್ರೋ ಕಂಟ್ರೋಲ್ಸ್ ಪ್ರೈವೇಟ್ ಲಿಮಿಟೆಡ್, ಗುರುಗ್ರಾಮ, ಹರಿಯಾಣ

6. ಸರಸ್ ಎಂಜಿನಿಯರಿಂಗ್ ಮತ್ತು ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್, ಸಿಕಂದರಾಬಾದ್

7. ಇಂಡಿಕೇರ್ ಹೆಲ್ತ್ ಸೊಲ್ಯೂಷನ್ಸ್ ಪ್ರೈ. ಲಿ., ನವದೆಹಲಿ

8. ಡಿವೈನ್‌ಟೆಕ್ ಎಲೆಕ್ಟ್ರಿಕಲ್ ಟೆಕ್ನಾಲಜೀಸ್, ಜಲಂಧರ್, ಪಂಜಾಬ್

9. ಶ್ರೀಯಾಸ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್, ತೆಲಂಗಾಣ

10. ಓಝೋನ್ ರಿಸರ್ಚ್ & ಅಪ್ಲಿಕೇಶನ್ (ಐ) ಪ್ರೈ.ಲಿ., ನಾಗ್ಪುರ

11. ಎಲೈಟ್ ಏರ್ ಟೆಕ್ನಿಕ್ಸ್ ಪ್ರೈ.ಲಿ., ಬಹದ್ದೂರ್ಗಢ, ಹರಿಯಾಣ

12. ಐರಿಫಿಕ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟೆಡ್, ನೋಯ್ಡಾ

13. ಕ್ವಾಲಿಟಿ ನೀಡ್ಸ್‌ ಆಟೋಮೋಟಿವ್ಸ್ ಪ್ರೈವೇಟ್ ಲಿಮಿಟೆಡ್ ಭಿವಾಡಿ, ಜಿಲ್ಲೆ ಅಲ್ವಾರ್ ರಾಜಸ್ಥಾನ.

14. ಟಿಸೈಸನ್-ಎಚ್ ಎಚ್‌ಎಸ್‌ಇ ಎಲ್‌ಎಲ್‌ಪಿ, ಚಿಂಗಾವನಮ್ ಪಿಒ, ಕೊಟ್ಟಾಯಂ, ಕೇರಳ

15. ಆಲ್ಫಾ ಲೀನಿಯರ್, ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್, ಬೆಂಗಳೂರು

16. ಕೊಯ್ನಾ ಎಂಜಿನಿಯರ್ಸ್, ನಾಸಿಕ್

17. ಅಲ್ಟ್ರಾಫ್ರೆಶ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್, ಮುಂಬೈ

18. ಸೆನೌರಾ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಹೈದರಾಬಾದ್

19. ಐಡಿಯಾಮೈನ್ಸ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ಸ್ ಪ್ರೈವೇಟ್ ಲಿಮಿಟೆಡ್ ಗೌತಮ್ ಬುದ್ಧ ನಗರ, ಉತ್ತರ ಪ್ರದೇಶ

20. ಮೆಸರ್ಸ್ ಪೆಂಗ್ವಿನ್ಸ್‌ ಇಂಡಿಯಾ, ರೂರ್ಕೆಲಾ, ಸುಂದರ್ಗಢ, ಒಡಿಶಾ

21. ಸಾಫ್ಟ್‌ರೇಸ್‌ ಪವರ್ ಸೊಲ್ಯೂಷನ್ಸ್, ತಿರುವನಂತಪುರಂ, ಕೇರಳ

22. ಕಿರೀಟ್ ಎಂಜಿನಿಯರಿಂಗ್, ಜಲಗಾಂವ್ ಮಹಾರಾಷ್ಟ್ರ

23. ಚೋಳ ಜಿಯೋ ಎನರ್ಜಿ ಪ್ರೈವೇಟ್ ಲಿಮಿಟೆಡ್ ತಂಜಾವೂರ್, ತಮಿಳುನಾಡು,

24. ಬಿಡಿಎಸ್ ಡೆಕೋರ್ & ಪ್ರಿಫ್ಯಾಬ್ ಪ್ರೈವೇಟ್ ಲಿಮಿಟೆಡ್, ಚಂಡೀಗಢ

25. ಲಧಾ ಎಂಟರ್‌ಪ್ರೈಸಸ್ ಅಕೋಲಾ, ನಾಗಪುರ

26. ಸುಕ್ರುತ್ ಯುವಿ ಸಿಸ್ಟಮ್ಸ್ ಪ್ರೈ.ಲಿ., ಪುಣೆ

27. ಎಬಿಎಸ್ ಏರ್‌ಟೆಕ್ ಪ್ರೈವೇಟ್ ಲಿಮಿಟೆಡ್, ಗುರ್‌ಗಾಂವ್, ಹರಿಯಾಣ

28. ಯುನಿಸೆಮ್ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು

ಯುವಿ-ಸಿ ತಂತ್ರಜ್ಞಾನದ ಬಗ್ಗೆ ತಜ್ಞರು ಹೇಳುವುದೇನು?

ಯುವಿ-ಸಿ ತಂತ್ರಜ್ಞಾನದ ಬಗ್ಗೆ ತಜ್ಞರು ಹೇಳುವುದೇನು?

ದೇಶಾದ್ಯಂತ ಡಾ. ಹ್ಯಾರಿ ಗಾರ್ಗಿಸ್ ನೇತೃತ್ವದ ಫ್ಯಾಬ್ರಿಯೋನಿಕ್ಸ್ ವಿಭಾಗವು ಅಭಿವೃದ್ಧಿಪಡಿಸಿದ ಯುವಿ-ಸಿ ತಂತ್ರಜ್ಞಾನ ಲಭ್ಯವಿದೆ ಎಂದು ʻಸಿಎಸ್ಐಆರ್-ಸಿಎಸ್ಐಒʼ ನಿರ್ದೇಶಕ ಪ್ರೊ. ಎಸ್. ಅನಂತ ರಾಮಕೃಷ್ಣ ಹೇಳಿದ್ದಾರೆ. ಭವಿಷ್ಯದ ದೃಷ್ಟಿಯಿಂದ ಡಾ. ಗಾರ್ಗ್ ಸಂಸ್ಥೆಯು ಮತ್ತಷ್ಟು ಯುವಿ ಆಧಾರಿತ ಸ್ಯಾನಿಟೈಸೇಶನ್ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುತ್ತಿದೆ. ನೇರಳಾತೀತ ಬೆಳಕು ಆಧಾರಿತ ಪರಿಹಾರಗಳ ಬಗ್ಗೆ ಜನರಲ್ಲಿ ವಿಶ್ವಾಸ ಹೆಚ್ಚಿಸುವುದಕ್ಕೆ ಸಾಧ್ಯವಿದೆ ಎಂದಿದ್ದಾರೆ.

ಯುವಿ-ಎ, ಯುವಿ-ಬಿ ಮತ್ತು ಯುವಿ-ಸಿ ಬಗ್ಗೆ ತಿಳಿಯಿರಿ

ಯುವಿ-ಎ, ಯುವಿ-ಬಿ ಮತ್ತು ಯುವಿ-ಸಿ ಬಗ್ಗೆ ತಿಳಿಯಿರಿ

ಸೂರ್ಯನಿಂದ ಹಾದು ಭೂಮಿಗೆ ತಲುಪುವ ವಿಕಿರಣಗಳನ್ನು ವಿಭಾಗಿಸಲಾಗಿದ್ದು, ನೇರಳಾತೀತ ಬೆಳಕಾಗಿ ವಿಭಾಗಿಸಲಾಗಿದೆ. ಇದರಲ್ಲೂ ಮೂರು ರೀತಿಯಲ್ಲಿ ಉಪ ವಿಭಾಗಗಳನ್ನು ಮಾಡಲಾಗಿದೆ. UV-A ವಿಭಾಗವು 320 ರಿಂದ 400 ನ್ಯಾನೋ ಮೀಟರ್, UV-B ವಿಭಾಗವು 280 ರಿಂದ 320 ನ್ಯಾನೋ ಮೀಟರ್ ಹಾಗೂ UV-C ವಿಭಾಗವು 200 ರಿಂದ 280 ನ್ಯಾನೋ ಮೀಟರ್ ಬೆಳಕನ್ನು ಹೊರಸೂಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.

ನೇರಳಾತೀತ ಬೆಳಕು ಇದ್ದಲ್ಲಿ ಕೊರೊನಾವೈರಸ್ ಹೋಗುವುದೇ?

ನೇರಳಾತೀತ ಬೆಳಕು ಇದ್ದಲ್ಲಿ ಕೊರೊನಾವೈರಸ್ ಹೋಗುವುದೇ?

ನೇರಳಾತೀತ ದೀಪಗಳಲ್ಲಿ ಕ್ರಿಮಿನಾಶಕ ಮತ್ತು ಸೋಂಕು ಹರಡುವ ವೈರಸ್ ಗಳ ಶಕ್ತಿಯನ್ನು ಕುಗ್ಗಿಸುವಂತಾ ಶಕ್ತಿಯಿರುವುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆದರೆ ಎಲ್ಲ ಬಗೆಯ ನೇರಳಾತೀತ ದೀಪಗಳು ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಕಡಿವಾಣ ಹಾಕುವಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ. UV ದೀಪಗಳಲ್ಲಿನ ತರಂಗಾಂತರ ಶಕ್ತಿ, ಬೆಳಕಿನ ತೀವ್ರತೆ, ಮಾನ್ಯತೆಯ ಅವಧಿಯು ಸೂಕ್ಷ್ಮಾಣು ಜೀವಿಗಳ ವಿರುದ್ಧ ಎಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎನ್ನುವುದನ್ನು ಪತ್ತೆ ಮಾಡುವ ಪ್ರಮುಖ ಅಂಶಗಳಾಗಿವೆ.

ಕೊವಿಡ್-19 ವಿರುದ್ಧ ಹೋರಾಟಕ್ಕೆ ಬೆಳಕಿನ ವಿಕಿರಣ

ಕೊವಿಡ್-19 ವಿರುದ್ಧ ಹೋರಾಟಕ್ಕೆ ಬೆಳಕಿನ ವಿಕಿರಣ

ನೇರಳಾತೀತ ಲೈಟ್ ಗಳೆಲ್ಲ ಕೊರೊನಾ ವೈರಸ್ ನಾಶಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. 260 ನ್ಯಾನೋ ಮೀಟರ್ ನಿಂದ 275 ನ್ಯಾನೋ ಮೀಟರ್ ಗರಿಷ್ಠ ತರಂಗಾಂತರವನ್ನು ಹೊಂದಿರುವ UV ಲೈಟ್ ಗಳಿಂದ ಮಾತ್ರ ಕೊರೊನಾ ವೈರಸ್ ಸೋಂಕು ನಾಶಗೊಳಿಸುವ ಸಾಮರ್ಥ್ಯವಿರುತ್ತದೆ. ಕನಿಷ್ಠ 260 ರಿಂದ 275 ನ್ಯಾನೋ ಮೀಟರ್ ವಿಕಿರಣದ UV ಲೈಟ್ ಗಳು ಬ್ಯಾಕ್ಟಿರಿಯಾ ಹಾಗೂ ಕೊರೊನಾ ವೈರಸ್ ಗಳಲ್ಲಿರುವ ಸಂತಾನೋತ್ಪತ್ತಿಯ ಸಾಮರ್ಥ್ಯವನ್ನು ನಾಶಗೊಳಿಸುತ್ತದೆ.

Recommended Video

ಬ್ಲಾಕ್ ಫಂಗಸ್ ಕಾಯಿಲೆ ಹೇಗೆಲ್ಲಾ ಹರಡುತ್ತೆ ಗೊತ್ತಾ? | Oneindia Kannada
ಯುವಿ-ಸಿ ಅಡ್ಡ ಪರಿಣಾಮಗಳ ಆತಂಕಕ್ಕೆ ಸಿಕ್ಕಿತು ಉತ್ತರ

ಯುವಿ-ಸಿ ಅಡ್ಡ ಪರಿಣಾಮಗಳ ಆತಂಕಕ್ಕೆ ಸಿಕ್ಕಿತು ಉತ್ತರ

ಸಾಮಾನ್ಯವಾಗಿ ವಸ್ತುಗಳು ಮತ್ತು ನಿರ್ದಿಷ್ಟ ಪ್ರದೇಶದಲ್ಲಿರುವ ಸೂಕ್ಷ್ಮಾಣುಗಳನ್ನು ನಾಶಪಡಿಸುವ ನಿಟ್ಟಿನಲ್ಲಿ UV ದೀಪಗಳನ್ನು ಬಳಲಾಗುತ್ತದೆ. ಇದರ ಬೆಳಕಿನಿಂದ ಮನುಷ್ಯರಿಗೆ ಅಪಾಯವಾಗುತ್ತದೆಯೇ ಎಂದು ಪ್ರಶ್ನಿಸಿದರೆ ಖಂಡಿತವಾಗಿಯೂ ಇಲ್ಲ. ಮನುಷ್ಯರ ಮೇಲ್ಮೈ ಚರ್ಮದ ಮೇಲಷ್ಟೇ UV-C ದೀಪಗಳು ಪ್ರಭಾವವನ್ನು ಬೀರಬಲ್ಲದು. ಇದರಿಂದ ಮೇಲ್ಮೈ ಚರ್ಮ ಹಾಗೂ ಕಣ್ಣುಗಳ ಮೇಲೆಷ್ಟೇ ಇದು ಪ್ರಭಾವ ಬೀರುತ್ತದೆ. ಹೀಗಾಗಿ ಯಾವುದೇ ರೀತಿ ಕೆಟ್ಟ ಪರಿಣಾಮಗಳೂ ಆಗುವುದಿಲ್ಲ.

English summary
How UV-C Technology Controlled Coronavirus Spreading In Air; In India 28 Companies Manufacture This One.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X