ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊವಿಡ್19 ಪಿಡುಗು ಕಾರಣ ಹೇಳಿ ಇಪಿಎಫ್ ವಿಥ್ ಡ್ರಾ ಮಾಡುವುದು ಹೇಗೆ?

|
Google Oneindia Kannada News

ಬೆಂಗಳೂರು, ಮಾರ್ಚ್ 30: ಕೊರೊನಾ ವೈರಾಣು ಹಬ್ಬದಿರುವಂತೆ ಸರ್ಕಾರದಿಂದ 21 ದಿನಗಳ ಲಾಕ್ ಡೌನ್ ಘೋಷಿಸಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾಗೆ ಸಂಬಂಧಿಸಿದಂತೆ ಹೊಸದಾಗಿ ವಿನಾಯ್ತಿ ನೀಡಲಾಗಿದೆ. ಅದರರ್ಥ EPFO ಸದಸ್ಯರು ತಮ್ಮ ಅಗತ್ಯಗಳಿಗೆ ಹಣ ವಿಥ್ ಡ್ರಾ ಮಾಡಬಹುದು. ಆದರೆ ಎಷ್ಟು ಹಣ ತೆಗೆದುಕೊಳ್ಳಬಹುದು, ಹೇಗೆ ತೆಗೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ಅನಾರೋಗ್ಯ, ಮನೆ ಖರೀದಿ ಸೇರಿದಂತೆ ಇತರ ಕಾರಣಗಳಿಗಾಗಿ ಮರುಪಾವತಿ ಮಾಡುವ ಅಗತ್ಯ ಇಲ್ಲದೆ ಪಿಎಫ್ ಹಣ ವಿಥ್ ಡ್ರಾ ಮಾಡಬಹುದಿತ್ತು. ಆದರೆ ಕೊರೊನಾ ವ್ಯಾಪಕವಾಗಿ ಹರಡಿರುವುದರಿಂದ ತುರ್ತು ಹಣಕಾಸಿನ ಅಗತ್ಯಗಳಿಗೆ ಸಮಸ್ಯೆ ಆಗಬಾರದು ಎಂದು ಸರ್ಕಾರದಿಂದ ಈ ನಿರ್ಧಾರ ಮಾಡಲಾಗಿದೆ.

ಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರಕೊರೊನಾ ಹೊಡೆತ: ವಿಮೆ, ಭವಿಷ್ಯ ನಿಧಿ, ಮಹಿಳೆಗೆ ಆರ್ಥಿಕ ಬಲ ತಂದ ಸರ್ಕಾರ

ಕೊರೊನಾವೈರಸ್ ಹಬ್ಬುತ್ತಿರುವ ಸಂದರ್ಭದಲ್ಲಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭವಿಷ್ಯ ನಿಧಿ ವಿಥ್ ಡ್ರಾ ಕುರಿತಂತೆ ಕೂಡಾ ಪ್ರಮುಖ ಘೋಷಣೆ ಮಾಡಿದರು. ಈ ಹೊಸ ಇಪಿಎಫ್ ನಿಯಮದಂತೆ ಎಷ್ಟು ವಿಥ್ ಡ್ರಾ ಮಾಡಬಹುದು ಎಂಬ ಮಾಹಿತಿ ಮುಂದಿದೆ.

 ಪಿಎಫ್ ಒಟ್ಟು ಮೊತ್ತದ ಶೇಕಡಾ 75ರಷ್ಟು

ಪಿಎಫ್ ಒಟ್ಟು ಮೊತ್ತದ ಶೇಕಡಾ 75ರಷ್ಟು

ಮೂಲವೇತನ(Basic Pay)+ ತುಟ್ಟಿ ಭತ್ಯೆ (DA) ಸೇರಿ ಮೂರು ತಿಂಗಳ ಮೊತ್ತ (ಪೂರ್ತಿ ವೇತನ ಅಲ್ಲ) ಅಥವಾ ಪಿಎಫ್ ಒಟ್ಟು ಮೊತ್ತದ ಶೇಕಡಾ 75ರಷ್ಟು ಇವೆರಡರಲ್ಲಿ ಯಾವ ಮೊತ್ತವು ಕಡಿಮೆಯೋ ಅಷ್ಟನ್ನು ಮಾತ್ರ ವಿಥ್ ಡ್ರಾ ಮಾಡಬಹುದು. ಆ ಮುಂಗಡವನ್ನು ಹಿಂತಿರುಗಿಸಬೇಕು ಅಂತೇನೂ ಇಲ್ಲ. ಇದಕ್ಕಾಗಿ ಇಪಿಎಫ್ ಯೋಜನೆ 1952ರಲ್ಲಿ ಬದಲಾವಣೆ ಮಾಡಲಾಗಿದೆ.

ಶೇ 75 ರಷ್ಟು ಮೊತ್ತ ಪಡೆದುಕೊಳ್ಳಬಹುದೇ?

ಶೇ 75 ರಷ್ಟು ಮೊತ್ತ ಪಡೆದುಕೊಳ್ಳಬಹುದೇ?

ಭವಿಷ್ಯ ನಿಧಿ ಖಾತೆ (ಪಿಎಫ್)ಯಿಂದ ಶೇ. 75 ಹಣವನ್ನು ಪಡೆದುಕೊಳ್ಳುವ ಅವಕಾಶ ಕಲ್ಪಿಸಲು ಕಾರ್ವಿುಕರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್​ಒ) ನಿರ್ಧರಿಸಿದೆ. ಇಪಿಎಫ್ಒ ಎಲ್ಲ ನೌಕರರ ಪಿಎಫ್ ನಿಧಿಯನ್ನು ನೋಡಿಕೊಳ್ಳುತ್ತದೆ. ಇದ್ರಲ್ಲಿ 60 ಲಕ್ಷಕ್ಕೂ ಹೆಚ್ಚು ಸದಸ್ಯರಿದ್ದಾರೆ. ಉದ್ಯೋಗಿಗಳು ತಮ್ಮ ಖಾತೆಯಲ್ಲಿನ ಬಾಕಿ ಶೇ. 25 ಹಣವನ್ನು ಎರಡು ತಿಂಗಳ ನಿರುದ್ಯೋಗದ ನಂತರ ಪಡೆಯಬಹುದಾಗಿದೆ ಅಥವಾ ಸಂಪೂರ್ಣ ಹಣವನ್ನು ಪಡೆದು ಖಾತೆ ಮುಚ್ಚಲು ಕೂಡ ಅವಕಾಶ ನೀಡಲು ಇಪಿಎಫ್​ಒ ಮುಂದಾಗಿದೆ.

ಸರ್ಕಾರ ಕೊಟ್ಟ ಆರ್ಥಿಕ ಪ್ಯಾಕೇಜ್ ನಲ್ಲಿ ಏನಿದೆ, ಏನು ಬೇಕಿತ್ತು?ಸರ್ಕಾರ ಕೊಟ್ಟ ಆರ್ಥಿಕ ಪ್ಯಾಕೇಜ್ ನಲ್ಲಿ ಏನಿದೆ, ಏನು ಬೇಕಿತ್ತು?

ಭವಿಷ್ಯ ನಿಧಿ ಲೆಕ್ಕಾಚಾರ ಹೇಗೆ?

ಭವಿಷ್ಯ ನಿಧಿ ಲೆಕ್ಕಾಚಾರ ಹೇಗೆ?

ಮೂಲ ವೇತನ ಮತ್ತು ತುಟ್ಟಿಭತ್ಯೆ(ಡಿಎ) ಒಟ್ಟು ಮೊತ್ತದ ಶೇ 12ರಷ್ಟು ಪರಿಗಣಿಸಲಾಗುತ್ತದೆ. ಈ ಪೈಕಿ ಉದ್ಯೋಗದಾತರ ವಂತಿಗೆ ಶೇ 3.67ರಷ್ಟು ಪಿಎಫ್ ಗೆ ಹಾಗೂ ಶೇ 8.33ರಷ್ಟು ಪಿಎಫ್ ಪಿಂಚಣಿ ನಿಧಿಗೆ ಹಾಗೂ ಶೇ 0.5% ಉದ್ಯೋಗಿಗಳ ವಿಮಾ ಯೋಜನೆಗೆ ಸೇರಲಿದೆ. ನೌಕರನ ಸಂಬಳ 15 ಸಾವಿರಕ್ಕಿಂತ ಕಡಿಮೆಯಿದ್ರೆ ಆತನ ಸಂಬಳದಲ್ಲಿ ಪ್ರತಿ ತಿಂಗಳು ಶೇಕಡಾ 12ರಷ್ಟು ಭಾಗ ಪಿಎಫ್ ಖಾತೆ ಸೇರುತ್ತದೆ. ಕಂಪನಿ ಶೇಕಡಾ 8.33ರಷ್ಟು ಪಿಂಚಣಿ ಯೋಜನೆಗೆ ಹಾಗೂ ಶೇಕಡಾ 3.67ರಷ್ಟು ಇಪಿಎಫ್ ಗೆ ಹಣ ನೀಡುತ್ತದೆ.

ನಿರ್ಮಲಾರಿಂದ ಪ್ರಮುಖ ಘೋಷಣೆ

ನಿರ್ಮಲಾರಿಂದ ಪ್ರಮುಖ ಘೋಷಣೆ

ಶೇ24ರಷ್ಟು ಹಣ ಸರ್ಕಾರವೇ ಭರಿಸಲಿದೆ. ಉದ್ಯೋಗದಾತ ಹಾಗೂ ಉದ್ಯೋಗಿಗಳ ಕೊಡುಗೆಯನ್ನು ಕೇಂದ್ರ ಸರ್ಕಾರವೇ ಭರಿಸಲಿದ್ದು, ಇದು ಮುಂದಿನ ಮೂರು ತಿಂಗಳ ಅವಧಿಗೆ ನೀಡಲಿದೆ. 100 ಉದ್ಯೋಗಿಗಳನ್ನು ಒಳಗೊಂಡ ಸಂಸ್ಥೆಯಾಗಿರಬೇಕು, ಆ ಸಂಸ್ಥೆಯ ಶೇ 90ರಷ್ಟು ಉದ್ಯೋಗಿಗಳು 15 ಸಾವಿರ ರು ಗೂ ಕಡಿಮೆ ತಿಂಗಳ ಆದಾಯ ಹೊಂದಿರಬೇಕು

ಇದರೊಂದಿಗೆ ಈ ಮೊದಲೇ ಹೇಳಿದಂತೆ, ಇಪಿಎಫ್ಒ ನಿಯಂತ್ರಣ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದ್ದು, ಶೇ 75 ರಷ್ಟು ಹಣ ಅಥವಾ ಮೂರು ತಿಂಗಳ ಸಂಬಳ ವಿಥ್ ಡ್ರಾ ಮಾಡಲು ಅನುಮತಿ ಸಿಗಲಿದೆ. ಇದರಿಂದ 4 ಕೋಟಿ 80 ಲಕ್ಷ ಚಂದಾದಾರರಿಗೆ ಅನುಕೂಲವಾಗಲಿದೆ.

ಇಪಿಎಫ್ ವಿಥ್ ಡ್ರಾ ವಿಧಾನ

ಇಪಿಎಫ್ ವಿಥ್ ಡ್ರಾ ವಿಧಾನ

ಅಧಿಕೃತ ವೆಬ್ ತಾಣ (unifiedportal-mem.epfindia.gov.in)ಕ್ಕೆ ಭೇಟಿ ಕೊಡಿ, ಮುಖಪುಟದಲ್ಲಿ ಅಡ್ವಾನ್ಸ್ಡ್ ಕ್ಲೇಮು ಮಾಡಲು ಕ್ಲಿಕ್ ಮಾಡಿ ಎಂಬ ಲಿಂಕ್ ನೋಡಿ.. ಅದರಲ್ಲಿರುವ ನಿಬಂಧನೆಗಳನ್ನು ಪರೀಕ್ಷಿಸಿ ಅರ್ಜಿ ಸಲ್ಲಿಸಿ. ನಿಮ್ಮ ಅರ್ಜಿ ನಿಮ್ಮ ಉದ್ಯೋಗದಾತರಿಗೆ ತಲುಪಿ ಅಪ್ರೂ ಆದ ಕೂಡಲೇ ನಿಮ್ಮ ಕ್ಲೇಮು ಪ್ರಕ್ರಿಯೆಗೆ ಚಾಲನೆ ಸಿಗಲಿದೆ.
1. UAN ಹಾಗೂ ಪಾಸ್ವರ್ಡ್ ಬಳಸಿ ಲಾಗಿನ್ ಆಗಿ
2. ಆನ್ ಲೈನ್ ಸರ್ವೀಸಸ್ ವಿಭಾಗಕ್ಕೆ ಭೇಟಿ ನೀಡಿ ಕ್ಲೇಮ್ ಆಯ್ಕೆ ಮಾಡಿಕೊಳ್ಳಿ.
3. ನಿಮ್ಮ ಬ್ಯಾಂಕ್ ಅಕೌಂಟ್ ಸಂಖ್ಯೆ ದೃಢಪಡಿಸಿ.
4. ಚೆಕ್ ಅಥವಾ ಪಾಸ್ ಬುಕ್ ಸ್ಕ್ಯಾನ್ಡ್ ಕಾಪಿ ಸಲ್ಲಿಸಿ
5.ಮುಂಗಡವಾಗಿ ವಿಥ್ ಡ್ರಾ ಮಾಡುತ್ತಿರುವುದೇಕೆ ಎಂಬುದಕ್ಕೆ ಕಾರಣ ನೀಡಿ. ಇಲ್ಲಿ'outbreak of pandemic' ಕಾರಣ ಆಯ್ಕೆ ಮಾಡಿಕೊಳ್ಳಿ
6. ಆಧಾರ್ ಬಳಸಿ ಒಟಿಪಿ ಸೃಷ್ಟಿಸಿಕೊಳ್ಳಿ. ನಿಮ್ಮ ಕ್ಲೇಮು ಉದ್ಯೋಗ ಸಂಸ್ಥೆ ತಲುಪಲಿದ್ದು, ನಿಮ್ಮ ಸಂಸ್ಥೆ ಒಪ್ಪಿಗೆ ಸೂಚಿಸುತ್ತಿದ್ದಂತೆ ನೀವು ಮೊತ್ತ ಪಡೆದುಕೊಳ್ಳಬಹುದು.

English summary
According to a new EPF rule, subscribers can withdraw 75 percent of balance or three months' wages, whichever is lower, as non-refundable advance from their account.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X