ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಡಿಯೋ: ಕೊವಿಡ್19 ಬಗ್ಗೆ ಅರಿವು; ಕೈ ತೊಳೆಯುವುದು ಹೇಗೆ?

|
Google Oneindia Kannada News

ಕೊರೊನಾ ವೈರಸ್‌ಗೆ ಚಿಕಿತ್ಸೆ ಇನ್ನೂ ಕಂಡುಹಿಡಿಯಲಾಗಿಲ್ಲ. ಆದರೆ ರೋಗ ಹರಡದಂತೆ ಕೊಂಚ ಮಟ್ಟಿಗೆ ತಡೆಗಟ್ಟಬಹುದಾಗಿದೆ. ಕೈಕಾಲುಗಳನ್ನು ಸೋಪು, ನೀರಿನಿಂದ ಕೈತೊಳೆದುಕೊಳ್ಳಬೇಕು. ಕಣ್ಣು, ಮೂಗು, ಬಾಯಿಯನ್ನು ಕೈನಿಂದ ಮುಟ್ಟಿಕೊಳ್ಳುವುದನ್ನು ಕಡಿಮೆ ಮಾಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಈಗಾಗಲೇ ಸೋಂಕಿನ ಲಕ್ಷಣಗಳು ಕಂಡು ಬಂದಿರುವವರಿಂದ ದೂರವಿರಬೇಕು.

ಒಂದೊಮ್ಮೆ ಇಂತಹ ಲಕ್ಷಣಗಳು ಕಂಡು ಬಂದರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ ಎಂಬ ಸಂದೇಶ ಎಲ್ಲೆಡೆ ಕೇಳಿರುತ್ತೀರಿ, ನೋಡಿರುತ್ತೀರಿ. ಕೇಂದ್ರಿಯ ರೋಗ ನಿಯಂತ್ರಣ ವಿಭಾಗ(ಸಿಡಿಸಿ) ಜಾಗೃತಿ ವಿಡಿಯೋಗಳನ್ನು ಮಾಡಿದೆ. ಇದನ್ನು ಕನ್ನಡದಲ್ಲಿ ಡಾ. ಸುಶಿ ಕಾಡನಕುಪ್ಪೆ ಅವರು ಇಲ್ಲಿ ಪ್ರಸ್ತುಪಡಿಸಿದ್ದಾರೆ.

ವಿಜ್ಞಾನಿಯಿಂದ ವಿಡಿಯೋ: ವೈರಸ್ ಭಯ ಬಿಡಿ, ಎಚ್ಚರಿಕೆಯಿಂದಿರಿವಿಜ್ಞಾನಿಯಿಂದ ವಿಡಿಯೋ: ವೈರಸ್ ಭಯ ಬಿಡಿ, ಎಚ್ಚರಿಕೆಯಿಂದಿರಿ

ವೈರಸ್ ಹರಡದಂತೆ ತಡೆಯಲು ಕೈ ತೊಳೆಯುವುದು ಉತ್ತಮ ವಿಧಾನ ಎಂದು ಎಲ್ಲರೂ ಹೇಳುತ್ತಿದ್ದಾರೆ. ಆದರೆ ಕೈ ತೊಳೆಯುವುದು ಹೇಗೆ? ಯಾವ ಸೋಪು, ಹ್ಯಾಂಡ್ ವಾಶ್ ಬಳಸಬೇಕು? ಎಷ್ಟು ಸಮಯ ಕೈ ತೊಳೆಯಬೇಕು? ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ. ಇದನ್ನು ಸರಳವಾಗಿ ಈ ವಿಡಿಯೋದಲ್ಲಿ ಡಾ. ಸುಶಿ ವಿವರಿಸಿದ್ದಾರೆ. ಈ ವಿಡಿಯೋವನ್ನು ತಿಳಿ ತಂಡದವರು ಹೊರ ತಂದಿದ್ದಾರೆ.

How to Wash Hands with Soap and prevent Coronavirus

ಕೊರೊನಾ ವೈರಸ್ ಎಂದರೆ ಸಾಮಾನ್ಯ ವೈರಸ್ ಗಳ ಒಂದು ಗುಂಪು. ವೈರಸ್ ಗಳ ಮೇಲ್ಮೈಯಲ್ಲಿ ಕಿರೀಟದಂತಹ ವಿನ್ಯಾಸವಿರುವ ಕಾರಣದಿಂದಾಗಿ ಹೀಗೆ ಹೆಸರಿಡಲಾಗಿದೆ. ಕೆಲವು ಕೊರೊನಾ ವೈರಸ್ ಕೇವಲ ಪ್ರಾಣಿಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಮನುಷ್ಯರನ್ನು ಕಾಡುವಂತಹ ಕೊರೊನಾ ವೈರಸ್ ನಲ್ಲಿ ಹಲವು ವಿಧಗಳು ಇವೆ. ಇದರಲ್ಲಿ ಮೆರ್ಸ್ ಮತ್ತು ಸಾರ್ಸ್ ವೈರಸ್ ಸೇರಿದೆ.

ಕೊವಿಡ್19 ಪಿಡುಗು ಕಾರಣ ಹೇಳಿ ಇಪಿಎಫ್ ವಿಥ್ ಡ್ರಾ ಮಾಡುವುದು ಹೇಗೆ? ಕೊವಿಡ್19 ಪಿಡುಗು ಕಾರಣ ಹೇಳಿ ಇಪಿಎಫ್ ವಿಥ್ ಡ್ರಾ ಮಾಡುವುದು ಹೇಗೆ?

ವೈರಸ್ ನಿಂದಾಗಿ ಸಾಮಾನ್ಯ ಶೀತ, ನ್ಯುಮೋನಿಯಾ ಮತ್ತು ತೀವ್ರ ರೀತಿಯ ಶ್ವಾಸಕೋಶದ ಸಮಸ್ಯೆ(ಎಸ್ ಎಆರ್ ಎಸ್) ಕಾಣಿಸಿಕೊಳ್ಳುವುದು ಮತ್ತು ಇದು ಹೊಟ್ಟೆಯ ಮೇಲೂ ಪರಿಣಾಮ ಬೀರುವುದು. ಮೊದಲು ಶೀತ ಕಾಣಿಸಿಕೊಳ್ಳುತ್ತದೆ ಕ್ರಮೇಣವಾಗಿ ತಲೆನೋವು ಕಾಣಿಸಿಕೊಂಡು ಇಡೀ ದೇಹವನ್ನು ಆವರಿಸುತ್ತದೆ.

English summary
Washing hands with soap prevent Coronavirus from spreading. Washing hands for a minimum of 20 seconds is recommended to clean viruses. In this video, Dr. Sushi Kadanakuppe explains about a method of washing hands to protect from Viruses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X