ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್‌ನ ಹೊಸ ಗ್ರೂಪ್ ವಾಯ್ಸ್ ಕಾಲ್ ಫೀಚರ್ ಬಳಕೆ ಹೇಗೆ?

|
Google Oneindia Kannada News

ವಾಟ್ಸಾಪ್ ಇತ್ತೀಚೆಗೆ ಹೊಸ ಗ್ರೂಪ್ ವಾಯ್ಸ್ ಕಾಲ್ ಫೀಚರ್ ಅನ್ನು ಪರಿಚಯಿಸಿದೆ. ಈ ಫೀಚರ್ iOS ಮತ್ತು Android ನಲ್ಲಿ ಲಭ್ಯವಿರಲಿದೆ. ಆಂಡ್ರಾಯ್ಡ್ ಫೋನ್‌ಗಳಲ್ಲಿ ಈ ಹೊಸ ಫೀಚರ್ ಬಳಕೆ ಮಾಡಬಹುದಾಗಿದೆ. ಈ ಹೊಸ ಫೀಚರ್ ಮೂಲಕ 32 ಮಂದಿಗೆ ಒಂದೇ ಬಾರಿಗೆ ಒಂದೇ ವಾಯ್ಸ್ ಕಾಲ್ ಮಾಡಬಹುದಾಗಿದೆ.

ಈ ಫೀಚರ್ ಕೇವಲ ವಾಯ್ಸ್ ಕಾಲ್‌ಗೆ ಸೀಮಿತವಾಗಿದೆಯೇ ಹೊರತು ವೀಡಿಯೊ ಕರೆಗಳಿಗೆ ಅಲ್ಲ. ಗ್ರೂಪ್ ವಾಯ್ಸ್ ಕಾಲ್‌ ಮಾಡುವಾಗ ಅಥವಾ ಸ್ವೀಕರಿಸುವಾಗ ನೀವು ಮತ್ತು ನಿಮ್ಮೊಂದಿಗೆ ಗ್ರೂಪ್ ವಾಯ್ಸ್ ಕಾಲ್‌ನಲ್ಲಿ ಮಾತನಾಡುವವರು ಇಂಟರ್ನೆಟ್ ಸಂಪರ್ಕವನ್ನು ಹೊಂದಿರುವುದು ಮುಖ್ಯವಾಗಿದೆ.

ಗ್ರೂಪ್‌ ಮಾಡದೆಯೇ ವಾಟ್ಸಾಪ್ ಮೂಲಕ 250 ಮಂದಿಗೆ ಮೆಸೇಜ್‌ ಮಾಡಿ: ಹೇಗೆ?ಗ್ರೂಪ್‌ ಮಾಡದೆಯೇ ವಾಟ್ಸಾಪ್ ಮೂಲಕ 250 ಮಂದಿಗೆ ಮೆಸೇಜ್‌ ಮಾಡಿ: ಹೇಗೆ?

ಗ್ರೂಪ್ ವಾಯ್ಸ್ ಕಾಲ್ ಸಮಯದಲ್ಲಿ ಕರೆಯನ್ನು ವೀಡಿಯೊ ಕರೆಗೆ ಬದಲಾಯಿಸಲು ನಿಮಗೆ ಸಾಧ್ಯವಾಗುವುದಿಲ್ಲ. ಗ್ರೂಪ್ ವಾಯ್ಸ್ ಕಾಲ್ ವೇಳೆ ನೀವು ಕರೆಯಲ್ಲಿ ಇರುವವರನ್ನು ಆ ಗ್ರೂಪ್ ವಾಯ್ಸ್ ಕಾಲ್‌ನಿಂದ ತೆಗೆದುಹಾಕಲು ಸಾಧ್ಯವಾಗುವುದಿಲ್ಲ. ನೀವು ಕರೆಯಲ್ಲಿ ಭಾಗಿಯಾಗಲು ಬಯಸದಿದ್ದರೆ, ಕರೆಯನ್ನು ಸ್ವೀಕರಿಸದೆ ಇರುವುದು ಮಾತ್ರ ಆಯ್ಕೆಯಾಗಿದೆ.

How to use WhatsApps new Group Voice Call feature, Heres Details in Kannada

ನೀವು ಬ್ಲಾಕ್ ಮಾಡಿದ ನಂಬರ್ ಅನ್ನು ಅಥವಾ ನಿಮ್ಮನ್ನು ಬ್ಲಾಕ್ ಮಾಡಿದ ವ್ಯಕ್ತಿಯ ಮೊಬೈಲ್ ನಂಬರ್ ಅನ್ನು ನೀವು ಈ ಗ್ರೂಪ್‌ ವಾಯ್ಸ್ ಕಾಲ್‌ಗೆ ಸೇರಿಸಲು ಸಾಧ್ಯವಾಗುವುದಿಲ್ಲ. ನೀವು ಬ್ಲಾಕ್ ಮಾಡಿದ ವ್ಯಕ್ತಿಯನ್ನು ಗ್ರೂಪ್ ವಾಯ್ಸ್ ಕಾಲ್‌ಗೆ ಸೇರ್ಪಡೆ ಮಾಡಲು ಬಯಸದಿದ್ದರೆ, ಕರೆಯನ್ನು ನಿರ್ಲಕ್ಷಿಸಬಹುದು. ಹಾಗಾದರೆ ಗ್ರೂಪ್ ವಾಯ್ಸ್ ಕಾಲ್ ಮಾಡುವುದು ಹೇಗೆ, ಈ ಫೀಚರ್ ಬಳಕೆ ಮಾಡುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ..

ಆಗಸ್ಟ್‌ನಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ್ದ ವಾಟ್ಸಾಪ್ಆಗಸ್ಟ್‌ನಲ್ಲಿ 20 ಲಕ್ಷ ಭಾರತೀಯರ ಖಾತೆಗಳನ್ನು ನಿಷೇಧಿಸಿದ್ದ ವಾಟ್ಸಾಪ್

ಗ್ರೂಪ್ ಚಾಟ್‌ನಿಂದ ಗ್ರೂಪ್‌ ವಾಯ್ಸ್ ಕಾಲ್ ಮಾಡುವುದು ಹೇಗೆ?

* ನೀವು ಮೊದಲು ಗ್ರೂಪ್‌ ವಾಯ್ಸ್ ಕಾಲ್ ಮಾಡಲು ಬಯಸುವ ಗ್ರೂಪ್‌ ಅನ್ನು ತೆರೆಯಬೇಕು
* ವಾಟ್ಸಾಪ್ ಗ್ರೂಪ್‌ನಲ್ಲಿ 33 ಕ್ಕಿಂತ ಅಧಿಕ ಮಂದಿ ಇದ್ದರೆ, ನಂತರ ಗ್ರೂಪ್ ಕರೆ ಬಟನ್ ಮೇಲೆ ಟ್ಯಾಪ್ ಮಾಡಿ
* ನಿಮ್ಮ ಗ್ರೂಪ್ ಚಾಟ್‌ನಲ್ಲಿ ನೀವು 32 ಅಥವಾ ಅದಕ್ಕಿಂತ ಕಡಿಮೆ ಸದಸ್ಯರನ್ನು ಹೊಂದಿದ್ದರೆ, ವಾಯ್ಸ್ ಕಾಲ್ ಮೇಲೆ ಟ್ಯಾಪ್ ಮಾಡಿ
* ಮೊದಲ 7 ದಿನಗಳವರೆಗೆ, ಈ ಗ್ರೂಪ್ ವಾಯ್ಸ್ ಕಾಲ್‌ಗೆ ಸೈನ್‌ ಇನ್ ಮಾಡಿದವರು ಹಾಗೂ ಸದಸ್ಯರು ಮಾತ್ರ ಭಾಗವಹಿಸಬಹುದು
* ನೀವು ಕರೆಗೆ ಸೇರಿಸಲು ಬಯಸುವ ಸಂಪರ್ಕವನ್ನು ಹುಡುಕಿ, ನಂತರ ವಾಯ್ಸ್ ಕಾಲ್‌ ಅನ್ನು ಟ್ಯಾಪ್ ಮಾಡಬಹುದು

How to use WhatsApps new Group Voice Call feature, Heres Details in Kannada

ಗ್ರೂಪ್‌ ಚಾಟ್‌ ಇಲ್ಲದೆ ಗ್ರೂಪ್‌ ವಾಯ್ಸ್ ಕಾಲ್ ಮಾಡುವುದು ಹೇಗೆ?

* ನೀವು ಗ್ರೂಪ್ ವಾಯ್ಸ್ ಕಾಲ್ ಮಾಡಲು ಬಯಸುವ ಸಂಪರ್ಕಗಳಲ್ಲಿ ಒಬ್ಬರ ವೈಯಕ್ತಿಕ ಚಾಟ್ ತೆರೆಯಿರಿ
* ವಾಯ್ಸ್ ಕಾಲ್ ಬಟನ್ ಮೇಲೆ ಕ್ಲಿಕ್ ಮಾಡಿ
* ಆ ವ್ಯಕ್ತಿಯು ನಿಮ್ಮ ಕರೆಯನ್ನು ಸ್ವೀಕಾರ ಮಾಡಿದ ಬಳಿಕ, 'Add Participant' ಮೇಲೆ ಕ್ಲಿಕ್ ಮಾಡಿ
* ನೀವು ಕರೆಗೆ ಸೇರಿಸಲು ಬಯಸುವ ಇನ್ನೊಂದು ಸಂಪರ್ಕವನ್ನು ಹುಡುಕಿ, ನಂತರ 'Add' ಮೇಲೆ ಕ್ಲಿಕ್ ಮಾಡಿ
* ನೀವು ಹೆಚ್ಚಿನ ಸಂಪರ್ಕಗಳನ್ನು ಸೇರಿಸಲು ಬಯಸಿದರೆ, ನಂತರ ಮತ್ತೆ 'Add Participants' ಮೇಲೆ ಕ್ಲಿಕ್ ಮಾಡಿ ಸೇರ್ಪಡೆ ಮಾಡಿಕೊಳ್ಳಿ

English summary
How to use WhatsApp's new Group Voice Call feature, Here's Details in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X