ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಹೀಗೆ ಹುಡುಕಿರಿ

|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಲೋಕಸಭೆ ಚುನಾವಣೆ 2019ರ ಮೊದಲ ಹಂತದ ಮತದಾನ ರಾಜ್ಯದ 14 ಕ್ಷೇತ್ರಗಳಲ್ಲಿ ಏಪ್ರಿಲ್ 18ಕ್ಕೆ ನಡೆಯಲಿದೆ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತದಾರರಿಗೆ ಅಗ್ರ ಮಹತ್ವ. ಪ್ರತಿ ಚುನಾವಣೆಯಲ್ಲಿ ಹಲವು ಕಾರಣಗಳಿಂದಾಗಿ ಮತದಾನ ಕಡಿಮೆ ಆಗುತ್ತದೆ ಅದರಲ್ಲಿ ಮತದಾರರಿಗೆ ತಮ್ಮ ಮತಗಟ್ಟೆ ಮಾಹಿತಿ, ಮತದಾನದ ಹಕ್ಕು ಎಲ್ಲಿದೆ ಎಂಬುದು ತಿಳಿಯದಿರುವುದೂ ಒಂದು. ಈ ಗೊಂದಲಗಳನ್ನು ನಿವಾರಿಸುವ ಮಾಹಿತಿ ಈ ಲೇಖನದಲ್ಲಿ ಅಡಕವಾಗಿದೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಆನ್‌ಲೈನ್‌ ನ ಈ ಯುಗದಲ್ಲಿ ಮತದಾನಕ್ಕೆ ಸಂಬಂಧಪಟ್ಟ ಬಹುತೇಕ ಮಾಹಿತಿಯನ್ನು ಮೊಬೈಲ್, ಕಂಪ್ಯೂಟರ್‌ನಲ್ಲಿಯೇ ಪಡೆಯಬಹುದು. ಮತದಾರರ ಚೀಟಿಗೆ ಅರ್ಜಿ ಹಾಕುವುದರಿಂದ ಹಿಡಿದು, ನಮ್ಮ ಮತಗಟ್ಟೆ ಎಲ್ಲಿದೆ, ನಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಸಹ ಆನ್‌ಲೈನ್‌ನಲ್ಲಿ ತಿಳಿಯಬಹುದು. ಅದು ಹೇಗೆಂದು ನೋಡೋಣ.

ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ? ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಹೇಗೆ?

ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಕರ್ನಾಟಕ ಚುನಾವಣಾ ಆಯೋಗದ ವೆಬ್‌ಸೈಟ್ ತೆರೆಯಿರಿ (www.ceokarnataka.kar.nic.in), ಮತದಾರರ ಅನುಕೂಲಕ್ಕಾಗಿ ಹೋಮ್‌ಪೇಜ್‌ನಲ್ಲಿಯೇ ದೊಡ್ಡ ಅಕ್ಷರಗಳಲ್ಲಿ ಲೋಕಸಭೆ ಚುನಾವಣೆ ಮತಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕಿ (Search your name in Lok Sabha Election roll) ಎಂದು ದೊಡ್ಡ ಅಕ್ಷರಗಳಲ್ಲಿ ಕಾಣುತ್ತಿರುತ್ತದೆ, ಅದನ್ನು ಕ್ಲಿಕ್ ಮಾಡಿದರೆ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ.

How to search name in voters list

ಹೊಸದಾಗಿ ತೆರೆದ ವೆಬ್‌ಪುಟದಲ್ಲಿ ಮೂರು ಆಯ್ಕೆಗಳು ಕಾಣುತ್ತವೆ. ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳ ಮತದಾರರ ಪಟ್ಟಿ, ಎರಡನೇ ಹಂತದ ಮತದಾನ ನಡೆಯುವ ಮತದಾರರ ಪಟ್ಟಿ ಮತ್ತು ಬೆಂಗಳೂರು ಮತದಾರರು ಹೆಸರು ಹುಡುಕಲು ಪ್ರತ್ಯೇಕ ಪಟ್ಟಿಯ ಲಿಂಕ್‌ಗಳು ಕಾಣುತ್ತವೆ. (https://www.ceokarnataka.kar.nic.in/mirrorlinks.aspx) ಬಳಕೆದಾರರು ತಮ್ಮ ಕ್ಷೇತ್ರಕ್ಕೆ ಅನುಗುಣವಾಗಿ ಸೂಕ್ತ ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು.

ಮತದಾರರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕುವುದು ಹೇಗೆ?ಮತದಾರರರ ಪಟ್ಟಿಯಲ್ಲಿ ನಿಮ್ಮ ಹೆಸರು ಹುಡುಕುವುದು ಹೇಗೆ?

ನಂತರ ತೆರೆದುಕೊಳ್ಳುವ ಪುಟದಲ್ಲಿಯೂ ಮೂರು ಆಯ್ಕೆಗಳು ಗೋಚರಿಸುತ್ತವೆ. (1) ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕುವುದು (search with EPIC number), (2) ಹೆಸರು ಮತ್ತು ಇತರ ವಿವರಗಳಿಂದ ಹುಡುಕುವುದು (search with name and other detail), (3) ಮೊಬೈಲ್ ಸಂಖ್ಯೆಯಿಂದ ಹುಡುಕುವುದು (search status of application through your mobile number).

ಮತದಾರರೇ, ಮತದಾನಕ್ಕೂ ಮುನ್ನ EVM, VVPAT ಬಗ್ಗೆ ತಿಳಿದುಕೊಳ್ಳಿ ಮತದಾರರೇ, ಮತದಾನಕ್ಕೂ ಮುನ್ನ EVM, VVPAT ಬಗ್ಗೆ ತಿಳಿದುಕೊಳ್ಳಿ

ಗುರುತಿನ ಚೀಟಿ ಸಂಖ್ಯೆಯಿಂದ ಹುಡುಕುವಿರಾದರೆ ಮೊದಲು ಜಿಲ್ಲೆಯ ಹೆಸರು ಆಯ್ಕೆ ಮಾಡಿಕೊಳ್ಳಬೇಕು, ನೆನಪಿರಲಿ ಬಹಳಷ್ಟು ಮತದಾರರ ಲೋಕಸಭಾ ಕ್ಷೇತ್ರ ಬೇರೆ ಇರುತ್ತದೆ, ಜಿಲ್ಲೆ ಬೇರೆಯಾಗಿರುತ್ತದೆ. ಇಲ್ಲಿ ನೀವು ಆಯ್ಕೆ ಮಾಡಬೇಕಿರುವುದು ನಿಮ್ಮ ಜಿಲ್ಲೆಯ ಹೆಸರನ್ನು. ಜಿಲ್ಲೆ ಹೆಸರು ಆಯ್ಕೆ ಮಾಡಿದ ನಂತರ ನಿಮ್ಮ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಿ ಸರ್ಚ್‌ ಬಟನ್ ಕ್ಲಿಕ್ ಮಾಡಿದರೆ ನಿಮ್ಮ ಹೆಸರು, ಮತಗಟ್ಟೆ ವಿಳಾಸ ಇನ್ನಿತರೆ ಮಾಹಿತಿ ಸಿಗುತ್ತದೆ.

How to search name in voters list

ಹೆಸರು ಮತ್ತು ಇತರ ವಿವರಗಳ ಮೂಲಕ ಹುಡುಕಬೇಕಾದರೆ, ಜಿಲ್ಲೆ ಆಯ್ಕೆ ಮಾಡಿ, ಹೆಸರನ್ನು ನಮೂದಿಸಿ, ತಂದೆಯ ಹೆಸರು ಅಥವಾ ಪತಿಯ ಹೆಸರು ನಮೂದಿಸಿ, ವಿಧಾನಸಭಾ ಕ್ಷೇತ್ರ ಆಯ್ಕೆ ಮಾಡಿದರೆ ಮತದಾರರ ಪಟ್ಟಿಯಲ್ಲಿನ ನಿಮ್ಮ ಮಾಹಿತಿ ಗೋಚರವಾಗುತ್ತದೆ.

ಮತದಾರರ ಗುರುತಿನ ಚೀಟಿ ಕಳೆದು ಹೋದ್ರೇ ಏನ್ಮಾಡ್ಬೇಕು?ಮತದಾರರ ಗುರುತಿನ ಚೀಟಿ ಕಳೆದು ಹೋದ್ರೇ ಏನ್ಮಾಡ್ಬೇಕು?

ಹೊಸದಾಗಿ ಮತದಾರರ ಪಟ್ಟಿಗೆ ಸೇರಿದವರು ಮಾತ್ರ ಮೊಬೈಲ್ ಸಂಖ್ಯೆ ಮೂಲಕ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕಲು ಸಾಧ್ಯ. ಮೊಬೈಲ್ ಮೂಲಕ ಹೆಸರು ಹುಡುಕುವ ಆಯ್ಕೆ ಕ್ಲಿಕ್ ಮಾಡಿ, ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಂಡು, ಮೊಬೈಲ್ ಸಂಖ್ಯೆಯನ್ನು ನಮೂದಿಸಿದರೆ ವಿವರಗಳು ಲಭ್ಯವಾಗುತ್ತದೆ. ಮತದಾರರ ಗುರುತಿನ ಚೀಟಿಗೆ ಅರ್ಜಿ ಹಾಕಿದ್ದರೆ ಅದರ ಮಾಹಿತಿಯೂ ಲಭ್ಯವಾಗುತ್ತದೆ.

English summary
Here is the easy way to search your name in voters list through online. search your name in the voters list before you go to elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X