ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾರು ಮೊದಲು ಲಸಿಕೆ ಪಡೆಯುತ್ತಾರೆ? ನೋಂದಣಿ ಹೇಗೆ? ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

|
Google Oneindia Kannada News

ನವದೆಹಲಿ, ಜನವರಿ 11: ಭಾರತದಲ್ಲಿ ಕೊರೊನಾ ಲಸಿಕೆಗಳನ್ನು ನೀಡುವ ಕಾರ್ಯಕ್ರಮ ಜನವರಿ 16ರಿಂದ ಆರಂಭಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಕಳೆದ ಭಾನುವಾರ ಔಷಧ ನಿಯಂತ್ರಣ ಸಂಸ್ಥೆಯು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೋವಿಶೋಲ್ಡ್ ಮತ್ತು ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿದೆ.

ಇದರಿಂದ ಮುಂದಿನ ಕೆಲವು ದಿನಗಳಲ್ಲಿ ಈ ಎರಡು ಲಸಿಕೆಗಳ ಬಳಕೆ ಹಂತ ಹಂತವಾಗಿ ಆರಂಭವಾಗಲಿದೆ. ಭವಿಷ್ಯದಲ್ಲಿ ಇನ್ನಷ್ಟು ಲಸಿಕೆಗಳು ಭಾರತದಲ್ಲಿ ಬಳಕೆಗೆ ಬರುವ ನಿರೀಕ್ಷೆಯಿದೆ. ಕೊರೊನಾ ಲಸಿಕೆಗಳ ಕುರಿತು ನಿಮ್ಮಲ್ಲಿ ಕೆಲವು ಪ್ರಶ್ನೆಗಳಿರಬಹುದು. ಅವುಗಳಿಗೆ ಉತ್ತರ ಇಲ್ಲಿದೆ.

ಲಸಿಕೆ ಸುರಕ್ಷತೆ, ಪ್ರಯೋಜನ

ಲಸಿಕೆ ಸುರಕ್ಷತೆ, ಪ್ರಯೋಜನ

ಕೋವಿಡ್ ಲಸಿಕೆ ಪಡೆಯುವುದರ ಪ್ರಯೋಜನವೇನು?

ಕೋವಿಡ್ ಲಸಿಕೆಯು ನಿಮ್ಮ ದೇಹದೊಳಗೆ ಆಂಟಿಬಾಡಿ ಪ್ರತಿಕ್ರಿಯೆಗಳನ್ನು ಸೃಷ್ಟಿಸುವುದರಿಂದ ಕೋವಿಡ್ ವೈರಸ್‌ಗಳಿಂದ ರಕ್ಷಿಸಬಲ್ಲದು.

ಲಸಿಕೆಗಳು ಎಷ್ಟು ಸುರಕ್ಷಿತ?

ಲಸಿಕೆಗಳನ್ನು ಆರೋಗ್ಯವಂತ ಜನರ ಮೇಲೆ ಪ್ರಯೋಗಿಸಲಾಗಿದೆ. ಪ್ರಯೋಗಕ್ಕೆ ಒಳಗಾದ ಸ್ವಯಂಸೇವಕರ ಗುಂಪಿನವರ ಆರೋಗ್ಯ ಕುರಿತು ಹೆಚ್ಚಿನ ಮಾಹಿತಿಗಳನ್ನು ಪಡೆಯಲಾಗುತ್ತಿದೆ.

ವೆಚ್ಚ, ಸಮಯ, ಫಲಾನುಭವಿಗಳು

ವೆಚ್ಚ, ಸಮಯ, ಫಲಾನುಭವಿಗಳು

ಭಾರತದಲ್ಲಿ ಕೋವಿಡ್ ಲಸಿಕೆಯ ವೆಚ್ಚವೆಷ್ಟು?

ಸೆರಮ್ ಸಂಸ್ಥೆಯು ತನ್ನ ಲಸಿಕೆಯ ದರವು ಸರ್ಕಾರಕ್ಕೆ 440 ರೂ (ಸುಮಾರು 3 ಡಾಲರ್) ಮತ್ತು ಖಾಸಗಿ ಮಾರುಕಟ್ಟೆಗೆ 700-800 ರೂ ಎಂದು ತಿಳಿಸಿದೆ. ಭಾರತ್ ಬಯೋಟೆಕ್‌ನ ಲಸಿಕೆ 350 ರೂ ಎಂದು ನಿಗದಿ ಮಾಡಲಾಗಿದೆ.

ಕೋವಿಡ್ ಲಸಿಕೆ ನೀಡುವಿಕೆ ಶೀಘ್ರದಲ್ಲಿಯೇ ನಡೆಯಬಹುದೇ?

ಹೌದು. ಶೀಘ್ರದಲ್ಲಿಯೇ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮವನ್ನು ಆರಂಭಿಸುವುದಾಗಿ ಸರ್ಕಾರ ತಿಳಿಸಿದೆ. ಮಾಹಿತಿ ಹಾಗೂ ವಿವರಗಳಿಗಾಗಿ ಆರೋಗ್ಯ ಸಚಿವಾಲಯದ ವೆಬ್‌ಸೈಟ್ ವೀಕ್ಷಿಸಬಹುದು.

ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ?

ಲಸಿಕೆಗಳ ಲಭ್ಯತೆಯ ಪ್ರಮಾಣದ ಆಧಾರದಲ್ಲಿ ಸರ್ಕಾರವು ಆದ್ಯತೆಯ ಗುಂಪುಗಳನ್ನು ಆಯ್ಕೆ ಮಾಡಿದ್ದು, ಅವರಿಗೆ ಮೊದಲು ಲಸಿಕೆ ನೀಡಲಾಗುತ್ತದೆ. ಅಧಿಕ ಅಪಾಯವಿರುವ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಮೊದಲ ಗುಂಪಿನಲ್ಲಿದ್ದಾರೆ. 50 ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ 50 ವರ್ಷ ವಯಸ್ಸಿನ ಒಳಗಿನವರು ಎರಡನೆಯ ಗುಂಪಿನಲ್ಲಿದ್ದಾರೆ.

ಯಾರಿಗೆ ಲಸಿಕೆ ಅತಿ ಅಗತ್ಯ?

ಯಾರಿಗೆ ಲಸಿಕೆ ಅತಿ ಅಗತ್ಯ?

ಲಸಿಕೆ ಪಡೆಯುವುದು ಕಡ್ಡಾಯವೇ?

ಲಸಿಕೆ ಪಡೆಯುವುದು ಜನರ ಇಚ್ಚೆಗೆ ಬಿಟ್ಟಿದ್ದು. ಆದರೆ ಕಾಯಿಲೆಯಿಂದ ರಕ್ಷಿಸಿಕೊಳ್ಳಲು ಮತ್ತು ಸಮೀಪದ ಸಂಪರ್ಕದಲ್ಲಿರುವ ಜನರಿಗೆ ವೈರಸ್ ಹರಡದಂತೆ ತಡೆಯಲು ಲಸಿಕೆ ಪಡೆಯುವಂತೆ ಸಲಹೆ ನೀಡಲಾಗಿದೆ.

ಲಸಿಕೆಯು ಪರೀಕ್ಷೆಯಲ್ಲಿ ಹೇಳಿರುವಂತೆ ಸುರಕ್ಷಿತ ಮತ್ತು ಕಡಿಮೆ ಅವಧಿಯಲ್ಲಿ ಬಿಡುಗಡೆ ಮಾಡಲಾಗುತ್ತಿದೆಯೇ?

ಔಷಧ ನಿಯಂತ್ರಣ ಸಂಸ್ಥೆಗಳು ಸುರಕ್ಷತೆ ಮತ್ತು ದಕ್ಷತೆಯ ಆಧಾರದಲ್ಲಿ ಮಾತ್ರವೇ ದೇಶದಲ್ಲಿ ಅವುಗಳ ಬಳಕೆಗೆ ಅನುಮತಿ ನೀಡಿರುತ್ತವೆ.

ಪ್ರಸ್ತುತ ಕೋವಿಡ್-19 (ಖಚಿತ ಅಥವಾ ಅನುಮಾನ) ಸೋಂಕು ಹೊಂದಿರುವವರು ಲಸಿಕೆ ಪಡೆಯುತ್ತಾರೆಯೇ?

ಕೋವಿಡ್ 19 ಸೋಂಕು ಖಚಿತವಾಗಿರುವ ಅಥವಾ ಶಂಕಿತ ಸೋಂಕಿತರು ಲಸಿಕೆ ನೀಡುವ ಸ್ಥಳದಲ್ಲಿ ಸೋಂಕು ಹರಡಿಸುವ ಅಪಾಯವಿದೆ. ಈ ಕಾರಣದಿಂದ ಸೋಂಕಿತ ವ್ಯಕ್ತಿಗಳಿಗೆ ಅವರ ಲಕ್ಷಣಗಳು ಕಡಿಮೆಯಾದ 14 ದಿನಗಳ ಬಳಿಕ ಲಸಿಕೆ ನೀಡಲಾಗುತ್ತದೆ.

ಕೋವಿಡ್‌ನಿಂದ ಚೇತರಿಕೆ ಕಂಡ ವ್ಯಕ್ತಿ ಲಸಿಕೆ ಪಡೆಯುವುದು ಅಗತ್ಯವೇ?

ಹೌದು. ಕೋವಿಡ್ 19 ಸೋಂಕಿನ ಇತಿಹಾಸದಾಚೆ ಕೋವಿಡ್ ಲಸಿಕೆಯ ಸಂಪೂರ್ಣ ಡೋಸ್‌ಗಳನ್ನು ಪಡೆಯುವಂತೆ ಸಲಹೆ ನೀಡಲಾಗಿದೆ. ಇದು ರೋಗದ ವಿರುದ್ಧ ಪ್ರತಿರಕ್ಷಣೆಯನ್ನು ಬಲಪಡಿಸುತ್ತದೆ.

ಲಸಿಕೆಗಳ ಆಯ್ಕೆ

ಲಸಿಕೆಗಳ ಆಯ್ಕೆ

ಹಲವು ಲಸಿಕೆಗಳಲ್ಲಿ ಆಡಳಿತವು ಒಂದೆರಡು ಲಸಿಕೆಗಳನ್ನು ಹೇಗೆ ಆಯ್ಕೆ ಮಾಡುತ್ತದೆ?

ಲಸಿಕೆಗಳಿಗೆ ಪರವಾನಗಿ ನೀಡುವ ಮುನ್ನ ಔಷಧ ನಿಯಂತ್ರಕರು ಲಸಿಕೆ ಪ್ರಯೋಗಗಳಲ್ಲಿನ ಸುರಕ್ಷತೆ ಮತ್ತು ದಕ್ಷತೆ ದತ್ತಾಂಶಗಳನ್ನು ಪರಿಶೀಲಿಸುತ್ತಾರೆ. ಹೀಗಾಗಿ ನಿರ್ದಿಷ್ಟ ಮಟ್ಟ ತಲುಪಿದ ಲಸಿಕೆಗಳು ಮಾತ್ರ ಪರವಾನಗಿ ಪಡೆಯುತ್ತವೆ. ಆದರೆ ಕೋವಿಡ್ ಲಸಿಕೆಗಳನ್ನು ಒಂದರೊಳಗೆ ಒಂದನ್ನು ಬದಲಿಸಲು ಸಾಧ್ಯವಿಲ್ಲದ ಕಾರಣ ಲಸಿಕೆ ನೀಡುವ ಸಂಪೂರ್ಣ ಕಾರ್ಯಕ್ರಮವು ಒಂದೇ ಮಾದರಿಯ ಲಸಿಕೆಯನ್ನು ಹೊಂದಿರಲಿದೆ.

ಇತರೆ ದೇಶಗಳಲ್ಲಿನ ಲಸಿಕೆಗಳಷ್ಟೇ ಭಾರತದ ಲಸಿಕೆಯೂ ಪರಿಣಾಮಕಾರಿಯೇ?

ಹೌದು. ಇತರೆ ದೇಶಗಳಲ್ಲಿ ಪರಿಚಯಿಸಿರುವ ಲಸಿಕೆಗಳಂತೆಯೇ ಭಾರತದಲ್ಲಿನ ಲಸಿಕೆಗಳೂ ಪರಿಣಾಮಕಾರಿಯಾಗಿವೆ. ಅವುಗಳ ಸುರಕ್ಷತೆ ಮತ್ತು ದಕ್ಷತೆ ಪರಿಶೀಲನೆಗೆ ವಿವಿಧ ಹಂತಗಳ ಪ್ರಯೋಗ ನಡೆದಿದೆ.

ಲಸಿಕೆಗೆ ನೋಂದಣಿ ಅಗತ್ಯ

ಲಸಿಕೆಗೆ ನೋಂದಣಿ ಅಗತ್ಯ

ಲಸಿಕೆ ಪಡೆಯಲು ನಾನು ಹೇಗೆ ಅರ್ಹತೆ ಪಡೆಯುತ್ತೇನೆ?

ಆರಂಭದ ಹಂತಗಳಲ್ಲಿ ಲಸಿಕೆಯನ್ನು ಆದ್ಯತೆಯ ಗುಂಪುಗಳಲ್ಲಿನ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ನೀಡಲಾಗುತ್ತದೆ. ಲಸಿಕೆ ಲಭ್ಯತೆ ಆಧಾರದಲ್ಲಿ 50 ವರ್ಷ ಮೇಲಿನವರನ್ನು ಸಹ ಪರಿಗಣಿಸಲಾಗುತ್ತದೆ. ಅರ್ಹ ಫಲಾನುಭವಿಗಳಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆ ಮೂಲಕ ಆರೋಗ್ಯ ಸವಲತ್ತು ಮತ್ತು ಲಸಿಕೆಯ ದಿನಾಂಕ ಹಾಗೂ ಸಮಯದ ಮಾಹಿತಿ ನೀಡಲಾಗುತ್ತದೆ.

ಆರೋಗ್ಯ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದೆ ಲಸಿಕೆ ಪಡೆಯಬಹುದೇ?

ಇಲ್ಲ. ಕೋವಿಡ್ 19 ಲಸಿಕೆ ಪಡೆಯಲು ನೋಂದಣಿ ಕಡ್ಡಾಯವಾಗಿದೆ. ನೋಂದಣಿ ಬಳಿಕವೇ ಲಸಿಕೆ ನೀಡುವ ಸ್ಥಳ, ಸಮಯದ ಅವಧಿಗಳನ್ನು ತಿಳಿಸಲಾಗುತ್ತದೆ.

ನೋಂದಣಿ ಮಾಡುವ ಬಗೆ

ನೋಂದಣಿ ಮಾಡುವ ಬಗೆ

ನೋಂದಣಿ ಮಾಡಿಕೊಳ್ಳುವುದು ಹೇಗೆ?

* ನಿಮ್ಮ ಸ್ಮಾರ್ಟ್‌ಫೋನ್‌ನಿಂದ ಕೋವಿನ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ

* ಸರ್ಕಾರದ ಫೋಟೊ ಸಹಿತ ಗುರುತಿನ ಚೀಟಿ ಅಥವಾ ಆಧಾರ್ ಅಥೆಂಟಿಕೇಷನ್ ಮಾಡಿ.

* ಈ ಅಧಿಕೃತತೆಯು ಬಯೋಮೆಟ್ರಿಕ್, ಒಟಿಪಿ ಅಥವಾ ಜನಸಂಖ್ಯೆಗೆ ಅನುಗುಣವಾಗಿ ನಡೆಯುತ್ತದೆ. ನೋಂದಣಿಯಾದ ಬಳಿಕ ಲಸಿಕೆಯ ದಿನಾಂಕ ಮತ್ತು ಸಮಯ ಹಂಚಿಕೆ ಮಾಡಲಾಗುತ್ತದೆ.

* ಸ್ಥಳದಲ್ಲಿಯೇ ನೋಂದಣಿ ಮಾಡುವ ಅವಕಾಶವಿಲ್ಲ. ಮುಂಚೆಯೇ ನೋಂದಣಿ ಮಾಡಿಕೊಂಡ ಫಲಾನುಭವಿಗಳು ಮಾತ್ರವೇ ಲಸಿಕೆ ಪಡೆಯಲು ಅವಕಾಶ ನೀಡಲಾಗುತ್ತದೆ.

* ಕೋವಿನ್ ವ್ಯವಸ್ಥೆಯಲ್ಲಿನ ಅವಧಿ ನಿರ್ವಹಣೆಯು ಜಿಲ್ಲಾಡಳಿತ ಜವಾಬ್ದಾರಿಯಾಗಿರುತ್ತದೆ.

* ಜಿಲ್ಲಾಡಳಿತವೇ ಫಲಾನುಭವಿಗಳ ಅವಧಿ ಮತ್ತು ಸ್ಥಳದ ಹಂಚಿಕೆ ಮಾಡುತ್ತದೆ.

ಲಸಿಕೆ ಪಡೆಯಲು ಬೇಕಾದ ದಾಖಲೆಗಳು

ಲಸಿಕೆ ಪಡೆಯಲು ಬೇಕಾದ ದಾಖಲೆಗಳು

ಲಸಿಕೆ ಪಡೆಯುವ ಅರ್ಹತೆಗೆ ಬೇಕಿರುವ ದಾಖಲೆಗಳೇನು?

ಈ ಕಳೆಗೆ ನಮೂದಿಸಿರುವ ಯಾವುದಾದರೂ ಒಂದು ಫೋಟೊ ಸಹಿತ ಗುರುತಿನ ಚೀಟಿಯನ್ನು ನೋಂದಣಿ ಸಮಯದಲ್ಲಿ ಹೊಂದಿದ್ದರೂ ಸಾಕು.

* ಚಾಲನಾ ಪರವಾನಗಿ

* ಮತದಾರರ ಗುರುತಿನ ಚೀಟಿ

* ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್ (ಕಾರ್ಮಿಕ ಸಚಿವಾಲಯದ ಯೋಜನೆಯಲ್ಲಿ ವಿತರಿಸಿದ್ದು)

* ಎಂನರೇಗಾ ಉದ್ಯೋಗ ಖಾತ್ರಿ ಯೋಜನೆಯ ಉದ್ಯೋಗ ಚೀಟಿ

* ಸಂಸದ/ಶಾಸಕ/ಎಂಎಲ್‌ಸಿಗಳಿಗೆ ನೀಡಿದ ಅಧಿಕೃತ ಗುರುತಿನ ಚೀಟಿ

* ಪ್ಯಾನ್ ಕಾರ್ಡ್

* ಬ್ಯಾಂಕ್/ಪೋಸ್ಟ್ ಆಫೀಸ್ ವಿತರಿಸಿದ ಪಾಸ್‌ಬುಕ್‌ಗಳು

* ಪಾಸ್‌ಪೋರ್ಟ್

* ಪಿಂಚಣಿ ದಾಖಲೆ

* ಕೇಂದ್ರ/ರಾಜ್ಯ/ಸಾರ್ವಜನಿಕ ನಿಯಮಿತದ ಕಂಪೆನಿಗಳು ಉದ್ಯೋಗಿಗಳಿಗೆ ನೀಡಿದ ಸೇವಾ ಗುರುತಿನ ಚೀಟಿ.

ನೋಂದಣಿ ವೇಳೆ ಬಳಸಿದ ಫೋಟೊ ಗುರುತಿನ ಚೀಟಿಯನ್ನೇ ಲಸಿಕೆ ಪಡೆಯುವ ಸಂದರ್ಭದಲ್ಲಿಯೂ ಹಾಜರುಪಡಿಸಬೇಕು.

ಮಾಹಿತಿ ಸಿಗುವ ಬಗೆ

ಮಾಹಿತಿ ಸಿಗುವ ಬಗೆ

ಲಸಿಕೆ ಸ್ಥಳದಲ್ಲಿ ಫೋಟೊ ಐಡಿ ಹಾಜರುಪಡಿಸಲು ವ್ಯಕ್ತಿಗೆ ಸಾಧ್ಯವಾಗದೆ ಇದ್ದರೆ ಅವರಿಗೆ ಲಸಿಕೆ ನೀಡುವುದಿಲ್ಲವೇ?

ನೋಂದಣಿ ಹಾಗೂ ಲಸಿಕೆ ಸ್ಥಳದಲ್ಲಿ ಫಲಾನುಭವಿಯ ಪರಿಶೀಲನೆ ಎರಡಕ್ಕೂ ಫೋಟೊ ಐಡಿ ಕಡ್ಡಾಯ. ಲಸಿಕೆ ಪಡೆಯಲು ಬಯಸಿರುವ ವ್ಯಕ್ತಿ ಅವರೇ ಎಂದು ಖಾತರಿಪಡಿಸಿಕೊಳ್ಳಬೇಕಿರುತ್ತದೆ. ಹೀಗಾಗಿ ಐಟಿ ಇಲ್ಲದಿದ್ದರೆ ಲಸಿಕೆ ಸಿಗಲಾರದು.

ಲಸಿಕೆ ನೀಡುವ ದಿನಾಂಕದ ಮಾಹಿತಿ ಫಲಾನುಭವಿಗೆ ಹೇಗೆ ಸಿಗುತ್ತದೆ?

ಆನ್‌ಲೈನ್ ನೋಂದಣಿಯ ಬಳಿಕ ಫಲಾನುಭವಿಗೆ ಅವರ ನೋಂದಾಯಿತ ಸಂಖ್ಯೆಗೆ ಎಸ್‌ಎಂಎಸ್ ಬರುತ್ತದೆ. ಲಸಿಕೆ ನೀಡುವ ಸ್ಥಳ, ದಿನಾಂಕ ಮತ್ತು ಸಮಯದ ವಿವರ ಅದರಲ್ಲಿ ಇರಲಿದೆ.

ಲಸಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಫಲಾನುಭವಿಗೆ ಅದರ ವಿವರಗಳು ಬರುತ್ತದೆಯೇ?

ಹೌದು. ಕೋವಿಡ್ ಲಸಿಕೆಯ ಎರಡು ಡೋಸ್‌ಗಳನ್ನು ಪಡೆದ ಬಳಿಕ ಫಲಾನುಭವಿಗೆ ಅವರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಬರುತ್ತದೆ. ಎಲ್ಲ ಡೋಸ್‌ಗಳನ್ನೂ ನೀಡಿದ ಬಳಿಕ ಅವರ ನೋಂದಾಯಿತ ಸಂಖ್ಯೆಗೆ ಕ್ಯೂಆರ್ ಕೋಡ್ ಆಧಾರಿತ ಪ್ರಮಾಣಪತ್ರ ಬರಲಿದೆ.

ಸುರಕ್ಷತಾ ಕ್ರಮಗಳು

ಸುರಕ್ಷತಾ ಕ್ರಮಗಳು

ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಔಷಧ ಪಡೆಯುತ್ತಿರುವವರು ಕೋವಿಡ್ ಲಸಿಕೆ ಪಡೆಯಬಹುದೇ?

ಹೌದು. ಒಂದು ಅಥವಾ ಅದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಜನರನ್ನು ಅಧಿಕ ತೊಂದರೆಯ ವರ್ಗದಲ್ಲಿ ಗುರುತಿಸಲಾಗುತ್ತದೆ. ಅವರು ಕೋವಿಡ್ ಲಸಿಕೆ ಪಡೆಯುವುದು ಅಗತ್ಯ.

ಲಸಿಕೆ ನೀಡುವ ಸ್ಥಳದಲ್ಲಿ ಜನರು ಏನಾದರೂ ಸುರಕ್ಷತೆ ಮತ್ತು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕೇ?

ಲಸಿಕೆ ಪಡೆದುಕೊಂಡ ಬಳಿಕ ಕನಿಷ್ಠ ಅರ್ಧ ಗಂಟೆ ಅಲ್ಲಿಗೆ ತಲುಪುವುದು ಒಳಿತು. ಲಸಿಕೆ ಪಡೆದುಕೊಂಡ ನಂತರ ಆಯಾಸ ಮತ್ತಿತರ ಸಮಸ್ಯೆ ಉಂಟಾದರೆ ಕೂಡಲೇ ಅಲ್ಲಿರುವ ಆರೋಗ್ಯಾಧಿಕಾರಿಗಳು, ಸಹಾಯಕರಿಗೆ ತಿಳಿಸಬೇಕು.

ಲಸಿಕೆ ಪಡೆಯಲು ಹೋಗುವಾಗ ಮಾಸ್ಕ್ ಧರಿಸುವುದು, ಸ್ಯಾನಿಟೈಸ್ ಮಾಡಿಕೊಳ್ಳುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದನ್ನು ಮರೆಯದಿರಿ.

ಲಸಿಕೆ ಬಳಿಕ ಬದಲಾವಣೆ

ಲಸಿಕೆ ಬಳಿಕ ಬದಲಾವಣೆ

ಕೋವಿಡ್ ಲಸಿಕೆಯ ಅಡ್ಡಪರಿಣಾಮಗಳು ಏನಿರಬಹುದು?

ಸುರಕ್ಷತೆ ಸಾಬೀತಾದ ಬಳಿಕವಷ್ಟೇ ಲಸಿಕೆ ನೀಡಲಾಗುತ್ತದೆ. ಇದು ಇದರ ಲಸಿಕೆಗಳಲ್ಲಿ ಉಂಟಾದಂತೆಯೇ ಕೆಲವರಲ್ಲಿ ಸಣ್ಣ ಜ್ವರ, ನೋವು ಮುಂತಾದ ಸಮಸ್ಯೆಗಳನ್ನು ಉಂಟುಮಾಡಬಹುದು. ಅಡ್ಡಪರಿಣಾಮಗಳಂತಹ ಘಟನೆಗಳನ್ನು ಎದುರಿಸಲು ಸೂಕ್ತ ಸಿದ್ಧತೆ ನಡೆಸಲು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.

ನಾನು ಲಸಿಕೆಯ ಎಷ್ಟು ಡೋಸ್‌ಗಳನ್ನು ಪಡೆದುಕೊಳ್ಳಬಹುದು ಮತ್ತು ಎಷ್ಟು ಅವಧಿಯಲ್ಲಿ?

ಎರಡು ಡೋಸ್‌ಗಳಷ್ಟು ಲಸಿಕೆಯನ್ನು 28 ದಿನಗಳ ಅಂತರದಲ್ಲಿ ನೀಡಲಾಗುತ್ತದೆ. ಲಸಿಕೆ ಕಾರ್ಯಕ್ರಮದಲ್ಲಿ ಪೂರ್ಣವಾಗಿ ಭಾಗವಹಿಸಲು ಇದನ್ನು ಅನುಸರಿಸಬೇಕು.

ಲಸಿಕೆಯ ಡೋಸ್ ತೆಗೆದುಕೊಂಡ ನಂತರ ಯಾವಾಗ ಆಂಟಿಬಾಡಿಗಳು ಅಭಿವೃದ್ಧಿಯಾಗುತ್ತವೆ?

ಸಾಮಾನ್ಯವಾಗಿ ಎರಡನೆಯ ಲಸಿಕೆ ಪಡೆದುಕೊಂಡ ಎರಡು ವಾರಗಳ ನಂತರ ದೇಹದಲ್ಲಿ ಆಂಟಿಬಾಡಿ ಶಕ್ತಿಗಳು ಅಭಿವೃದ್ಧಿಯಾಗುತ್ತವೆ. ಹೀಗಾಗಿ ಎರಡೂ ಡೋಸ್‌ಗಳನ್ನು ಪಡೆದುಕೊಂಡು ಎರಡು ವಾರಗಳವರೆಗೂ ಲಸಿಕೆ ತೆಗೆದುಕೊಂಡಿದ್ದೇನೆ ಎಂದು ಮೈಮರೆಯುವಂತಿಲ್ಲ.

English summary
India to roll out Covid-19 vaccination soon. Here we answered for the FAQs on how to register for vaccine, who will get dose first etc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X