ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋ ವಿನ್ ಆ್ಯಪ್‌ ಮೂಲಕ ಕೊರೊನಾ ಲಸಿಕೆ ನೋಂದಣಿ ಹೇಗೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 15: ಕೊರೊನಾ ಲಸಿಕೆಗಾಗಿ ತಮ್ಮ ಹೆಸರನ್ನು ನೋಂದಾಯಿಸಲು ಕೇಂದ್ರ ಆರೋಗ್ಯ ಸಚಿವಾಲಯವು ಮೊಬೈಲ್ ಅಪ್ಲಿಕೇಷನ್ ವೇದಿಕೆಯನ್ನು ಅಭಿವೃದ್ಧಿಪಡಿಸಿದೆ.

ಈ ಕುರಿತು ಈಗಾಗಲೇ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದು, ಕೋ ವಿನ್ ಎಂಬ ಅಪ್ಲಿಕೇಷನ್ ಮೂಲಕ ನೀವು ಕೊರೊನಾ ಲಸಿಕೆಗೆ ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದರು. ಕೋ ವಿನ್ ಡಿಜಿಟಲ್ ವೇದಿಕೆ ಲಸಿಕೆ ಡಾಟಾವನ್ನು ದಾಖಲು ಮಾಡಲು ಸಹಾಯ ಮಾಡಬಲ್ಲ ಮೊಬೈಲ್ ಅಪ್ಲಿಕೇಷನ್ ಹೊಂದಿದೆ.

ಕೊರೊನಾ ಲಸಿಕಾ ಕಾರ್ಯಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟಕೊರೊನಾ ಲಸಿಕಾ ಕಾರ್ಯಾಚರಣೆಗೆ ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಈ ಲಸಿಕೆಯನ್ನು ಪಡೆಯಬೇಕು ಎಂದು ಬಯಸಿದವರು ಇಲ್ಲಿ ತಮ್ಮನ್ನ ತಾವು ನೋಂದಾಯಿಸಿಕೊಳ್ಳಬಹುದು. ಕೋ ವಿನ್ ಅಪ್ಲಿಕೇಷನ್‌ನಲ್ಲಿ ಐದು ಬಗೆಗಳಿವೆ. ನಿರ್ವಾಹಕ ಮಾಡ್ಯೂಲ್, ವ್ಯಾಕ್ಸಿನೇಷನ್ ಮಾಡ್ಯೂಲ್, ಫಲಾನುಭವಿ ಸ್ವೀಕೃತಿ ಮಾಡ್ಯೂಲ್, ನೋಂದಣಿ ಮಾಡ್ಯೂಲ್ ಹಾಗೂ ವರದಿ ಮಾಡ್ಯೂಲ್ ಹೀಗೆ 5 ಬಗೆಗಳಿವೆ.

ಲಸಿಕೆಯನ್ನು ಮೊದಲು ಆರೋಗ್ಯ ಕಾರ್ಯಕರ್ತರು ಹಾಗೂ 50 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತದೆ. ಹಾಗೂ ಅವರ ಪರಿಸ್ಥಿತಿಯನ್ನು ಗಮನಿಸಿ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆ ನೀಡುವ ಅವಧಿ ಮುಗಿದ ನಂತರ ಐಸ್ ಪ್ಯಾಕ್ ಗಳು ಮತ್ತು ತೆರೆಯದ ಲಸಿಕೆ ಬಾಟಲಿಗಳನ್ನು ಕೋಲ್ಡ್ ಚೈನ್ ಪಾಯಿಂಟ್ ಗಳಿಗೆ ಕಳುಹಿಸುವಂತೆ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಕೆಲವು ಸವಾಲುಗಳನ್ನು ಸಮಯಕ್ಕೆ ಸರಿಯಾಗಿ ಎದುರಿಸುವ ಅಗತ್ಯವಿದ್ದರೂ ಸಹ, ದೇಶವು ಕೋವಿಡ್ -19 ಲಸಿಕೆ ಒದಗಿಸುವ ಹಾದಿಯಲ್ಲಿ ನಿಂತಿದೆ ಎಂದು ಕೇಂದ್ರ ಹೇಳಿದೆ.

ಕೊರೊನಾ ಲಸಿಕೆ ನೋಂದಣಿ ಹೇಗೆ?

ಕೊರೊನಾ ಲಸಿಕೆ ನೋಂದಣಿ ಹೇಗೆ?

  • ಕೋ ವಿನ್ ವೆಬ್‌ಸೈಟ್‌ನಲ್ಲಿ ಅಥವಾ ಅಪ್ಲಿಕೇಷನ್‌ನಲ್ಲಿ ಸ್ವಯಂ ನೋಂದಣಿಗೆ ಚುನಾವಣಾ ಐಡಿ, ಆಧಾರ್ ಕಾರ್ಡ್, ಚಾಲನಾ ಪರವಾನಗಿ, ಪಾಸ್‌ಪೋರ್ಟ್ ಮತ್ತು ಪಿಂಚಣಿ ದಾಖಲೆ ಸೇರಿದಂತೆ 12 ಫೋಟೊ ಗುರುತಿನ ದಾಖಲೆಗಳನ್ನು ಒದಗಿಸಬೇಕು.
  • ನಿಮ್ಮ ಮೊಬೈಲ್ ಫೋನ್‌ಗಳಲ್ಲಿ ಕೋ ವಿನ್ ಅಪ್ಲಿಕೇಷನ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿ ಅಥವಾ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಲಸಿಕೆಯನ್ನು ಪಡೆಯುವ ದಿನಾಂಕವನ್ನು ಪಡೆಯಲು ಸಗತ್ಯವಿವರಗಳೊಂದಿಗೆ ನಿಮ್ಮನ್ನು ನೋಂದಾಯಿಸಿ
  • ದಾಖಲೆಗಳನ್ನು ಸಬ್‌ಮಿಟ್ ಮಾಡಿ
  • ನಿಮ್ಮ ಲಸಿಕೆ ಪಡೆಯಲು ನಿಮಗೆ ದಿನಾಂಕ ಮತ್ತು ಸಮಯ ಲಭ್ಯವಾಗುತ್ತದೆ
  • ಲಸಿಕೆ ನೀಡಿ 30 ನಿಮಿಷಗಳ ಕಾಲ ರೋಗಿಗಳ ಮೇಲೆ ತೀವ್ರ ನಿಗಾ ಇಡಲಾಗುತ್ತದೆ.
  • *ಒಂದು ಲಸಿಕೆ ತಂಡದಲ್ಲಿ ಐವರು ಇರುತ್ತಾರೆನಿಸುತ್ತದೆ
  • ಪ್ರತಿನಿತ್ಯ 100 ಮಂದಿಗೆ ಲಸಿಕೆ ನೀಡಲಾಗುತ್ತದೆ
  • ಗುಂಪಿನ ನಿರ್ವಹಣೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಮೂರು ಪ್ರತ್ಯೇಕ ಕೊಠಡಿಗಳೋಇರುತ್ತದೆ.
  • ಲಸಿಕೆ ವಾಹಕ, ಲಸಿಕೆ ಬಾಟಲಿ ಅಥವಾ ಐಸ್ ಪ್ಯಾಕ್‌ಗಳನ್ನು ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಕಠಿಣ ಕ್ರಮ ತೆಗೆದುಕೊಳ್ಳಬೇಕು.
  • ಫಲಾನುಭವಿ ಕೇಂದ್ರಕ್ಕೆ ಬರುವವರೆಗೂ ಲಸಿಕೆಯ ಮುಚ್ಚುಳವನ್ನು ತೆಗೆಯಬಾರದು.
ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಕೇಂದ್ರದಿಂದ ಮಾರ್ಗಸೂಚಿ ಪ್ರಕಟ

ಕೋವಿಡ್-19 ಲಸಿಕೆ ವಿತರಣೆ ಕಾರ್ಯಕ್ಕಾಗಿ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಹೊರಡಿಸಿದೆ.ಪ್ರತಿದಿನ ಒಂದು ಅವಧಿಯಲ್ಲಿ 100ರಿಂದ 200 ಜನರಿಗೆ ಲಸಿಕೆ ಹಾಕಬೇಕು, ಲಸಿಕೆ ಹಾಕಿದ ನಂತರ ಯಾವುದೇ ಅಡ್ಡ ಪರಿಣಾಮ ಉಂಟಾಗಲಿದೆಯೇ ಎಂಬುದನ್ನು ತಿಳಿಯಲು ಲಸಿಕೆ ನೀಡಿದ ನಂತರ 30 ನಿಮಿಷ ನಿಗಾವಣೆ ವಹಿಸಬೇಕು, ಒಂದು ಸಮಯದಲ್ಲಿ ಕೇವಲ ಒಬ್ಬರನ್ನು ಮಾತ್ರ ಲಸಿಕೆ ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಮಾರ್ಗಸೂಚಿಯಲ್ಲಿ ಹೇಳಲಾಗಿದೆ.

ಕೊರೊನಾ ಲಸಿಕೆ ವಿತರಣೆಗೆ ಕೋ ವಿನ್ ಅಪ್ಲಿಕೇಷನ್

ಕೊರೊನಾ ಲಸಿಕೆ ವಿತರಣೆಗೆ ಕೋ ವಿನ್ ಅಪ್ಲಿಕೇಷನ್

ಇತ್ತೀಚಿಗೆ ರಾಜ್ಯಗಳಲ್ಲಿ ಹೊರಡಿಸಿರುವ ಮಾರ್ಗಸೂಚಿಗಳ ಪ್ರಕಾರ, ಲಸಿಕೆ ಮತ್ತು ಕೊರೊನಾವೈರಸ್ ವಿರೋಧಿ ಲಸಿಕೆಗಳಿಗಾಗಿ ನೈಜ-ಸಮಯದ ಆಧಾರದ ಮೇಲೆ ಸೇರ್ಪಡೆಗೊಂಡ ಫಲಾನುಭವಿಗಳನ್ನು ಪತ್ತೆಹಚ್ಚಲು ಕೋವಿಡ್ ಲಸಿಕೆ ಗುಪ್ತಚರ ಜಾಲ( ಕೋ-ವಿನ್ ) ವ್ಯವಸ್ಥೆಯನ್ನು ಬಳಸಲಾಗುತ್ತದೆ.

ಪೂರ್ವ ನೋಂದಾಯಿತ ಫಲಾನುಭವಿಗಳಿಗೆ ಮಾತ್ರ ಅವಕಾಶ

ಪೂರ್ವ ನೋಂದಾಯಿತ ಫಲಾನುಭವಿಗಳಿಗೆ ಮಾತ್ರ ಅವಕಾಶ

ಲಸಿಕೆ ನೀಡುವ ಸ್ಥಳದಲ್ಲಿ ಪೂರ್ವ-ನೋಂದಾಯಿತ ಫಲಾನುಭವಿಗಳಿಗೆ ಮಾತ್ರ ಆದ್ಯತೆಗೆ ಅನುಗುಣವಾಗಿ ಲಸಿಕೆ ನೀಡಲಾಗುವುದು, ಮತ್ತು ಸ್ಥಳದಲ್ಲೇ ನೋಂದಣಿಗೆ ಯಾವುದೇ ಅವಕಾಶವಿರುವುದಿಲ್ಲ.ವಿವಿಧ ಕೋವಿಡ್-19 ಲಸಿಕೆಗಳ ಮಿಶ್ರಣ ತಪ್ಪಿಸಲು ಒಂದು ಜಿಲ್ಲೆಗೆ ಒಬ್ಬರು ಉತ್ಪಾದಕರು ಮಾತ್ರ ಲಸಿಕೆ ಪೂರೈಸಲು ಅವಕಾಶ ಮಾಡಿಕೊಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.

ಲಸಿಕೆ ವಾಹಕ, ಬಾಟಲಿಗಳು

ಲಸಿಕೆ ವಾಹಕ, ಬಾಟಲಿಗಳು

ಲಸಿಕೆ ವಾಹಕ, ಲಸಿಕೆ ಬಾಟಲುಗಳು ಅಥವಾ ಐಸ್ ಪ್ಯಾಕ್‌ಗಳನ್ನು ನೇರವಾಗಿ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. ಫಲಾನುಭವಿಗಳು ಲಸಿಕೆ ಕೇಂದ್ರಕ್ಕೆ ಬರುವವರೆಗೂ ಲಸಿಕೆ ಕ್ಯಾರಿಯರ್ ಮುಚ್ಚಿರುವಂತೆ ನೋಡಿಕೊಳ್ಳುವಂತೆ ಹೇಳಲಾಗಿದೆ.

English summary
The Health Ministry has introduced CoWIN, a digital platform for real-time monitoring of COVID-19 vaccine delivery which includes a mobile application where users will be able to self-register to get vaccinated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X