ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್: ಯಾವ ವಯಸ್ಸಿನವರಿಗೆ ಎಷ್ಟು ಅಪಾಯ? ಇಲ್ಲಿದೆ ವಿವರ

|
Google Oneindia Kannada News

ನವದೆಹಲಿ, ಮಾರ್ಚ್.21: ಕೊರೊನಾ ವೈರಸ್ ಎಂದರೆ ಎಲ್ಲರ ಎದೆಯಲ್ಲೂ ನಡುಕ. ಮಾರಕ ಸೋಂಕು ಯಾವಾಗ ಯಾರಿಗೆ ಅಂಟಿಕೊಳ್ಳುತ್ತೋ ಎಂಬ ಭೀತಿ. ಎಲ್ಲಿ ಏನಾಗುತ್ತೋ ಏನೋ ಎಂಬ ಆತಂಕ. ಇದಕ್ಕೆಲ್ಲ ಉತ್ತರ ಸಿಗುವ ಕಾಲ ಸನ್ನಿಹಿತವಾಗಿದೆ.

ಜಾಗತಿಕ ಮಟ್ಟದಲ್ಲಿ ಹೆಮ್ಮಾರಿಯಂತೆ ಕಾಡುತ್ತಿರುವ ಕೊರೊನಾ ವೈರಸ್ ಯಾರ ಪಾಲಿಗೆ ಅತಿಹೆಚ್ಚು ಅಪಾಯಕಾರಿ ಎಂಬುದು ಇದೀಗ ವರದಿಗಳ ಮೂಲಕ ಹೊರ ಬಿದ್ದಿದೆ. ಮೊದಲು ಸೋಂಕು ಕಾಣಿಸಿಕೊಂಡ ಚೀನಾದಲ್ಲಿನ ಅಂಕಿ-ಅಂಶಗಳ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ.

ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರಿಗೆ ಕೊರೊನಾ ವೈರಸ್ ತಗಲಿದರೆ ಹೆಚ್ಚು ಅಪಾಯ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ಹಿರಿಯ ನಾಗರಿಕರನ್ನು ಸೋಂಕು ತಗಲದಂತೆ ಹೇಗೆ ಎಚ್ಚರಿಕೆ ವಹಿಸಬೇಕು ಎಂದು ಕೆಲವು ಮಾರ್ಗಸೂಚಿಗಳನ್ನು ನೀಡಲಾಗಿದೆ. ಈ ಕುರಿತು ಒಂದು ವಿಶೇಷ ವರದಿ ನಮ್ಮ ಓದುಗರಿಗಾಗಿ.

ಕೊರೊನಾ ವೈರಸ್ ಸೋಂಕಿತ ಬಗ್ಗೆ ನೂರಾರು ಪ್ರಶ್ನೆಗಳು

ಕೊರೊನಾ ವೈರಸ್ ಸೋಂಕಿತ ಬಗ್ಗೆ ನೂರಾರು ಪ್ರಶ್ನೆಗಳು

ಮಾರಕ ಕೊರೊನಾ ವೈರಸ್ ಸೋಂಕು ಈ ವಯೋಮಾನದ ಜನರಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇಷ್ಟು ವಯೋಮಾನದವರಲ್ಲೇ ಹೆಚ್ಚು ಜನರು ಮೃತಪಡುತ್ತಾರೆ ಎಂದು ನಿರ್ದಿಷ್ಟವಾಗಿ ಹೇಳುವುದಕ್ಕೆ ಇದುವರೆಗೂ ಸಾಧ್ಯವಾಗಿಲ್ಲ. ಇದುವರೆಗಿನ ಅಂಕಿ-ಅಂಶಗಳನ್ನು ಗಮನಿಸಿದಾಗ ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರು ಕೊರೊನಾ ವೈರಸ್ ನಿಂದ ಹೆಚ್ಚು ಅಪಾಯಕ್ಕೆ ಸಿಲುಕಿದ್ದಾರೆ. ಅವರಲ್ಲಿನ ರೋಗನಿರೋಧಕ ಶಕ್ತಿಯ ಲೋಪವೋ ಏನೋ ಎಂಬುದಕ್ಕೆ ಕಾರಣ ಮಾತ್ರ ಇಂದಿಗೂ ಪತ್ತೆಯಾಗಿಲ್ಲ. ಇದರ ನಡುವೆ ನಮ್ಮ ಮನೆ, ನಮ್ಮ ಏರಿಯಾ, ನಮ್ಮ ಊರು, ನಮ್ಮ ರಾಜ್ಯ ಮತ್ತು ನಮ್ಮ ದೇಶದ ಪ್ರಜೆಗಳ ಮೇಲೆ ನಾವು ಎಚ್ಚರಿಕೆ ವಹಿಸಬೇಕಾದ ಅಗತ್ಯತೆ ಎದುರಾಗಿದೆ.

ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ತಾಣದಲ್ಲಿ ಮಾರ್ಗಸೂಚಿ

ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ ತಾಣದಲ್ಲಿ ಮಾರ್ಗಸೂಚಿ

ಕೊವಿಡ್-19 ನಿಂದಾಗಿ ಅತಿಹೆಚ್ಚು ಅಪಾಯವನ್ನು ಎದುರಿಸುತ್ತಿರುವವರ ಬಗ್ಗೆ ಯುನೈಟೆಡ್ ಸ್ಟೇಟ್ಸ್ ನಲ್ಲಿ ಇರುವ ಸಾಂಕ್ರಾಮಿಕ ರೋಗ ನಿಯಂತ್ರಣ ಕೇಂದ್ರವು ಸಿದ್ಧಪಡಿಸಿರುವ ಮಾರ್ಗಸೂಚಿಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆಯು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಇದು ಸೋಂಕು ಹರಡುವುದನ್ನು ತಡೆಯಲು ರಚನೆಯಾಗಿರುವ ಟಾಸ್ಕ್ ಫೋರ್ಸ್ ಗೆ ಸಹಾಯಕವಾಗಲಿದೆ.

ಅನಾರೋಗ್ಯಪೀಡಿತರು ಮತ್ತು ಹಿರಿಯರ ಆರೈಕೆಗೆ ಮಾರ್ಗಸೂಚಿ

ಅನಾರೋಗ್ಯಪೀಡಿತರು ಮತ್ತು ಹಿರಿಯರ ಆರೈಕೆಗೆ ಮಾರ್ಗಸೂಚಿ

ಇನ್ನು, ಕೊರೊನಾ ವೈರಸ್ ನಿಂದಾಗಿ ಅನಾರೋಗ್ಯ ಪೀಡಿತರು ಮತ್ತು ಹಿರಿಯ ನಾಗರಿಕರಿಗೆ ಹೆಚ್ಚು ಅಪಾಯ ಎಂದು ತಿಳಿಯುತ್ತಿದ್ದಂತೆ ಇವರ ಆರೈಕೆಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಈ ಮಾರ್ಗಸೂಚಿಗಳು ಏನು ಹೇಳುತ್ತವೆ ಎಂಬುದನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಅನಾರೋಗ್ಯಪೀಡಿತರ ಆರೈಕೆ ಮಾರ್ಗಸೂಚಿ

ಅನಾರೋಗ್ಯಪೀಡಿತರ ಆರೈಕೆ ಮಾರ್ಗಸೂಚಿ

01. ಅಮೆರಿಕಾದಲ್ಲಿ ಹಲವು ವಾರಗಳಲ್ಲಿಯೇ ಮನೆಯಲ್ಲಿ ದಿಗ್ಬಂಧನಕ್ಕೆ ಒಳಪಡುವ ಅನಿವಾರ್ಯ ಎದುರಾಗಲಿದ್ದು, ಅಷ್ಟುದಿನಗಳಿಗೆ ತಕ್ಕಂತೆ ಹಿರಿಯ ನಾಗರಿಕರು ಮತ್ತು ಅನಾರೋಗ್ಯ ಪೀಡಿತರು ಅಗತ್ಯವಾದ ಔಷಧಿಗಳನ್ನು ಶೇಖರಿಸಿ ಇಡುವಂತೆ ಸೂಚನೆಯನ್ನು ನೀಡಲಾಗಿದೆ.

02. ಕನಿಷ್ಠ 20 ಸೆಕೆಂಡ್ ಗಳ ಕಾಲ ಕೈಗೆ ಸೋಪ್ ಹಚ್ಚಿಕೊಂಡು ಶುಭ್ರವಾಗಿ ತೊಳೆದುಕೊಳ್ಳಬೇಕು ಎಂದು ಶಿಫಾರಸ್ಸು ಮಾಡಲಾಗಿದೆ. ಒಂದು ವೇಳೆ ಅದು ಸಾಧ್ಯವಾಗದಿದ್ದಲ್ಲಿ ಸ್ಯಾನಿಟೈಸರ್ ಗಳನ್ನು ಹತ್ತಿರದಲ್ಲಿ ಇಟ್ಟುಕೊಳ್ಳಬೇಕು. ಕೈಗಳಿಗೆ ಸ್ಯಾನಿಟೈಸರ್ ಹಚ್ಚಿಕೊಳ್ಳುವುದರಿಂದ ಪದೇ ಪದೆ ಕೈಗಳನ್ನು ತೊಳೆದುಕೊಳ್ಳುವ ಅಗತ್ಯ ಇರುವುದಿಲ್ಲ ಎಂದು ಮಾರ್ಗಸೂಚಿಯಲ್ಲಿ ಸಲಹೆ ನೀಡಲಾಗಿದೆ.

03. ಹಲವು ಅಭಿರುಚಿಯನ್ನು ಹೊಂದಿರುವ ಹಲವು ಜನರು ಒಂದೇ ಸೂರಿದಡಿ ಇರುವಾಗ ಸೋಂಕು ಹರಡುವ ಅಪಾಯ ಹೆಚ್ಚಾಗಿ ಇರುತ್ತದೆ. ಅನಾರೋಗ್ಯ ಪೀಡಿತರನ್ನು ಕುಟುಂಬದ ಎಲ್ಲರೊಂದಿಗೆ ಬೆರೆಯುವುದಕ್ಕಿಂತ ಪ್ರತ್ಯೇಕ ಕೊಠಡಿಯಲ್ಲಿ ಇರಿಸುವುದು ಇಂಥ ಸಂದರ್ಭದಲ್ಲಿ ಅನಿವಾರ್ಯವಾಗಿದೆ.

04. ಒಂದು ಕುಟುಂಬದಲ್ಲಿ ಹಿರಿಯ ನಾಗರಿಕರು ಆರೈಕೆ ಮಾಡುವವರು ಆಗಿರುತ್ತಾರೆ, ಇಲ್ಲವೇ ಆರೈಕೆ ಮಾಡಿಸಿಕೊಳ್ಳುವಂತಾ ಪರಿಸ್ಥಿತಿಯಲ್ಲಿ ಇರುತ್ತಾರೆ. ಹೀಗೆ ಆರೈಕೆ ಮಾಡುವ ಅಥವಾ ಆರೈಕೆ ಮಾಡಿಸಿಕೊಳ್ಳುವ ವ್ಯಕ್ತಿಗಳು ಪರಸ್ಪರ ನೇರವಾಗಿ ಸಂಪರ್ಕ ಹೊಂದಕೂಡದು. ಅಂಥವರ ಜೊತೆಗೆ ನೇರ ಸಂಪರ್ಕದ ಬದಲು ಪರೋಕ್ಷವಾಗಿ ಸಂಪರ್ಕ ಹೊಂದಲು ಪ್ರಯತ್ನಿಸಬೇಕು. ಇಲ್ಲದಿದ್ದಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗಿ ಇರುತ್ತದೆ.

05. ಒಂದು ವೇಳೆ ಅನಾರೋಗ್ಯಕ್ಕೆ ತುತ್ತಾಗಿದ್ದಲ್ಲಿ ನೀವು ಅಕ್ಕಪಕ್ಕದ ಮನೆ ಮತ್ತು ಸಂಬಂಧಿಕರ ಬಳಿ ತೆರಳಿದರೆ ನಿಮ್ಮ ಸುತ್ತಮುತ್ತಲಿನ ಜನರಿಗೂ ಸೋಂಕು ಹರಡುವ ಅಪಾಯವಿರುತ್ತದೆ. ಅದರ ಬದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಆಯಾ ದೇಶಗಳಲ್ಲಿ ಇರುವ ಆರೋಗ್ಯ ಸಚಿವಾಯಲದ ಅಧಿಕಾರಿಗಳ ನೆರವು ಕೋರಬೇಕು. ಇದರಿಂದ ಮುನ್ನಚ್ಚರಿಕೆ ಕ್ರಮಗಳನ್ನು ವಹಿಸಿಕೊಂಡು ಆರೋಗ್ಯ ಸಿಬ್ಬಂದಿ ನಿಮ್ಮ ನೆರವಿಗೆ ಧಾವಿಸುತ್ತಾರೆ. ಸೋಂಕು ತೀವ್ರಗೊಳ್ಳುವ ಮೊದಲೇ ವೈದ್ಯಕೀಯ ತಪಾಸಣೆಗೆ ಒಳಪಡಿಸುತ್ತಾರೆ ಎಂದು ಶಿಫಾರಸ್ಸು ಮಾಡಲಾಗಿದೆ.


English summary
Coronavirus: Care For Senior Citizens And People With Medical Issues. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X