• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರವಾಸಕ್ಕೆ ಹೊರಟ್ರಾ? ನಿಲ್ಲಿ, ಈ ಲೇಖನವನ್ನು ಓದುತ್ತಾ ಮುಂದೆ ಸಾಗಿ

By ಸೌಮ್ಯ ಬೀನಾ, ಸಾಗರ
|

ಎಲ್ಲಿಯಾದರೂ ಟ್ರಿಪ್ ಪ್ಲಾನ್ ಮಾಡಿದ್ದೀರಾ? ಸ್ಥಳದ ಬಗ್ಗೆ ಮಾಹಿತಿ, ವಾಹನದ ವ್ಯವಸ್ಥೆ, ಹೋಟೆಲ್ಲು, ಹೋಂಸ್ಟೇ ಗಳ ಬುಕ್ಕಿಂಗ್, ಟ್ರಿಪ್ ನ ವೇಳೆ ಹೊಟ್ಟೆ-ಬಟ್ಟೆಗಾಗಿ ಒಂದಷ್ಟು ಶಾಪಿಂಗ್, ಆಟ-ಮೋಜು-ಮಸ್ತಿಗಾಗಿ ಬೇಕಾಗುವ ವಸ್ತುಗಳು, ಓಡಾಡಿದ ಸ್ಥಳವನ್ನು ತೋರಿಸಲಾಗಿ/ನೆನಪಿಗಾಗಿ ಚಿತ್ರ ಕ್ಲಿಕ್ಕಿಸಿಕೊಳ್ಳಲು ಮೊಬೈಲ್, ಕ್ಯಾಮೆರಾ ಹೀಗೆ ನಡೆದಿರುತ್ತದೆ 'ಪ್ರವಾಸದ ಉತ್ಸಾಹ'.

ಪ್ರವಾಸ ಕೈಗೊಂಡು ಓಡಾಡಿ, ಆಟವಾಡಿ, ತಿಂದು-ಕುಡಿದು,ಸಂತೋಷಪಟ್ಟು. "ಭಾರೀ ಲಾಯ್ಕ್ ಇತ್ತು ನಮ್ಮ ಟ್ರಿಪ್" ಎಂದು ಇತರರೊಡನೆ ಹೇಳಿ, ಫೋಟೋ ತೋರಿ ಬೀಗಿದರೆ ನಮಗೆ ಸಮಾಧಾನ! ಇದು ನಮ್ಮ 'ಪ್ರವಾಸವೊಂದು ಯಶಸ್ವಿಯಾಗಿತ್ತು' ಎಂಬುದರ ಮಾನದಂಡ.

12 ವರ್ಷಗಳ ನಂತರ ಕುಮಾರಪರ್ವತಕ್ಕೆ ಮರಳಿ ಬಂದಳು ನೀಲಿಕುರುಂಜಿ

ನಾವು ಭೇಟಿ ನೀಡಿ ಬಂದ ಊರಿನ ಸ್ಥಳೀಯ ಸಂಸ್ಕೃತಿ, ನುಡಿ, ಆಚಾರ ವಿಚಾರಗಳಿಗೆ ಧಕ್ಕೆ ಬರದಂತೆ ಮತ್ತು ನೈಸರ್ಗಿಕತೆಯನ್ನು ಯಥಾವತ್ತಾಗಿ ಕಾಯ್ದಿರಿಸಿ ಬರುವು ನಮ್ಮಲ್ಲಿರಬೇಕಾದ ಕರ್ತವ್ಯ ಪ್ರಜ್ಞೆ ಮತ್ತು ಜವಾಬ್ದಾರಿ.

ಪ್ರವಾಸ ಎಂಬುದು ಕೇವಲ ನಮ್ಮ ಕಥೆಯಲ್ಲ. ಪ್ರವಾಸದ ಸಮಯದ ಆಗುಹೋಗುಗಳು, ಹಾದಿಯುದ್ದಕ್ಕೂ ಸಿಗುವ ಜನರ ಕಥೆಗಳು, ಸನ್ನಿವೇಶಗಳು ಒಂದೊಂದು ಕಥೆಯನ್ನು ಅದರ ಜೊತೆಗೆ ಅನೇಕಾನೇಕ ಅನುಭವದ ಪಾಠಗಳನ್ನು ಕಲಿಸಿ ಹೋಗುತ್ತದೆ. ಪ್ರವಾಸದಿಂದ ಒಳ್ಳೊಳ್ಳೆಯ ನೆನಪುಗಳ ಬುತ್ತಿ ನಮ್ಮದಾಗುತ್ತದೆ.

ಕುಮಾರಸ್ವಾಮಿ ಬಜೆಟ್ ನಲ್ಲಿ ಪ್ರವಾಸೋದ್ಯಮಕ್ಕೆ ಸಿಕ್ಕಿದ್ದೇನು?

ಒಂದು ಉತ್ತಮ ಪ್ರವಾಸದ ನಿಲುವು ಮತ್ತು ಗೆಲುವು ಕೇವಲ ಪ್ರವಾಸೋದ್ಯಮ ಇಲಾಖೆ, ಸರ್ಕಾರ ಅಥವಾ ಇನ್ಯಾವುದೋ ಸಂಘ ಸಮೂಹದವರ ಜವಾಬ್ದಾರಿ ಮಾತ್ರವಲ್ಲ. ಪ್ರವಾಸಿಗರಲ್ಲೂ ಹೆಮ್ಮೆ, ಪ್ರೀತಿ, ಕಾಳಜಿಯ ಅವಶ್ಯಕ. ಪ್ರವಾಸಿಗರ ಕರ್ತವ್ಯಕ್ಕೆ ಬದ್ಧರಾಗಿ ನಮ್ಮ ಪ್ರವಾಸವನ್ನು ಸುಖಿಸೋಣ.

ಪ್ರವಾಸ ಏಕೆ ಬೇಕು?

ಪ್ರವಾಸ ಏಕೆ ಬೇಕು?

ಬೆಟ್ಟ ಗುಡ್ಡ ಹತ್ತುವ ಸಾಹಸ, ಮನಸ್ಸು ತೋಚಿದೆಡೆಗೆ ಬೈಕ್ ರೈಡ್, ಮಕ್ಕಳಿಗಾಗಿ ಜೂ, ಸಮುದ್ರ ಇತರ ಸ್ಥಳಗಳ ಫ್ಯಾಮಿಲಿ ಟ್ರಿಪ್, ಗೆಟ್ ಟುಗೆದರ್ ಎಂದು ಪಟ್ಟಾಂಗ ಹೊಡೆಯುವ ಪ್ರವಾಸ, ತೀರ್ಥಕ್ಷೇತ್ರಗಳಿಗೆ ಭೇಟಿ, ಒಂದು ದಿನದ ಔಟಿಂಗ್ ಇಲ್ಲವೇ ತಿಂಗಳುಗಟ್ಟಲೆ ಜ್ಞಾನಾರ್ಜನೆಯ ಉನ್ಮಾದಕತೆ ಹೀಗೆ ಪ್ರವಾಸಕ್ಕೆ ನಾನಾ ನೆಪಗಳು.

ಜೀವನದ ದಿನನಿತ್ಯದ ಜಂಜಾಟ, ಕೆಲಸ, ವಿದ್ಯಾಭ್ಯಾಸ, ಹೀಗೆ ಬಿಡುವಿಲ್ಲದ ಬದುಕು, ಒಂದೇ ಬಗೆಯ ದಿನಚರಿಯಿಂದ ಬೇಸತ್ತು ಮನಸ್ಸು ಒತ್ತಡಗೊಂಡಾಗ, ವಿರಾಮವೊಂದನ್ನು, ಬದಲಾವಣೆಯನ್ನು ಬಯಸುವುದು ಸಹಜ. ಇಂತಹ ಬದಲಾವಣೆಗಳಲ್ಲಿ ಪ್ರವಾಸ ಕೈಗೊಂಡು ಕುಟುಂಬ, ಸ್ನೇಹಿತರು ಮತ್ತು ಆಪ್ತರೊಡನೆ ಸಮಯ ಕಳೆಯುವುದು ಕೂಡ ಹಲವರ ಅಚ್ಚುಮೆಚ್ಚಿನ ಹವ್ಯಾಸಗಳಲ್ಲಿ ಒಂದು.

ಕೆಲವರಿಗೆ ಪ್ರವಾಸ ಒಂದು ಹವ್ಯಾಸವಾಗಿರುತ್ತದೆ. 'ಕೋಶ ಓದಿ ನೋಡು; ದೇಶ ಸುತ್ತಿ ನೋಡು" ಎನ್ನುವ ಮಾತಿನಂತೆ, ಪ್ರವಾಸಗಳು, ಅನುಭವಗಳು ನಮಗೆ ಪ್ರತಿ ಗಳಿಗೆಯೂ ಹೊಸತೊಂದು ಜೀವನ ಮೌಲ್ಯವನ್ನು, ಪಾಠವನ್ನು, ಜೀವಿಸುವ ಸಂಭ್ರಮವನ್ನು ನೀಡುತ್ತದೆ.

ಪ್ರವಾಸ ಮಾಡುವುದೆಂದರೆ ನಮ್ಮಂತಸ್ತಿನ ಹಿರಿಮೆಯ ತೋರ್ಪಡಿಕೆಯಲ್ಲ - ಅದೊಂದು ಅವಿರತ ಕಲಿಕೆಯ ಅನಾವರಣ!

ಯಶಸ್ವಿ ಪ್ರವಾಸದ ತಯಾರಿ ಮತ್ತು ಪ್ರವಾಸಿಗರ ಕರ್ತವ್ಯಗಳು

ಯಶಸ್ವಿ ಪ್ರವಾಸದ ತಯಾರಿ ಮತ್ತು ಪ್ರವಾಸಿಗರ ಕರ್ತವ್ಯಗಳು

ಯಾವುದೇ ಆಕರ್ಷಣೀಯ ಸ್ಥಳವೂ, ಜನರು ಭೇಟಿ ನೀಡಲು ಯೋಗ್ಯವಾಗಿದ್ದು, ಮನರಂಜನೆ, ವಿರಾಮ ಅಥವಾ ವ್ಯಾಪಾರದ ಉದ್ದೇಶದಿಂದ ಕೂಡಿದ್ದು, ಆ ಪ್ರದೇಶದ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವಂತಿದ್ದರೆ ಅದು 'ಪ್ರವಾಸೀ ಸ್ಥಳ'ವೆನಿಸಿಕೊಳ್ಳುತ್ತದೆ.

ಪ್ರವಾಸದ ಉದ್ದೇಶ ನಮ್ಮ ವೈಯುಕ್ತಿಕ ಕಾರಣಗಳಿಂದ ಯೋಜನೆಗೊಂಡಿದ್ದರೂ, ಅದು ಕೇವಲ ನಮ್ಮ ಹಿತವೊಂದಕ್ಕೆ ಮಾತ್ರ ಸೀಮಿತವಾಗಿರಬಾರದು. ನಾವು ಭೇಟಿ ನೀಡುತ್ತಿರುವ ಸ್ಥಳಕ್ಕೆ ಅಥವಾ ಪ್ರವಾಸದುದ್ದಕ್ಕೂ ನಮ್ಮಿಂದ ಇತರರಿಗೆ ಮತ್ತು ಪ್ರವಾಸೀ ತಾಣದ ಸುತ್ತಲಿನ ಪರಿಸರಕ್ಕೆ ಹಾನಿಯುಂಟಾಗದಂತೆ ಕಾಳಜಿ ವಹಿಸುವ ಜವಾಬ್ಧಾರಿ ಕೂಡ ನಮ್ಮದಾಗಿರುತ್ತದೆ.

* ಪ್ರವಾಸಿ ಸ್ಥಳದ ಕುರಿತು ಕನಿಷ್ಠ ಮಾಹಿತಿ ಸಂಗ್ರಹ - ವೈಯುಕ್ತಿಕವಾಗಿ ಅಥವಾ ಟೂರ್ಸ್ ಅಂಡ್ ಟ್ರಾವೆಲ್ಸ್ ಮೂಲಕ ನಮ್ಮ ಪ್ರವಾಸ ಯೋಜಿಸಿದರೂ ಕೂಡ ಪ್ರವಾಸವೆಂದರೆ ಒಂದಷ್ಟು ಸಮಯೋಜಿತ, ಪೂರ್ವಾಪರ ವಿಷಯಗಳ ಅರಿವು ಕೂಡ ಅಗತ್ಯ. ಪ್ರವಾಸೀ ತಾಣದ ಕುರಿತಾಗಿ ಪುಸ್ತಕ, ಟಿ.ವಿ ಡಾಕ್ಯುಮೆಂಟರಿ, ಇಂಟರ್ನೆಟ್ ಆಧಾರಿತ ವಿಷಯಗಳು, ಬ್ಲಾಗರ್ಸ್ ಗಳ ಪ್ರವಾಸಾನುಭವ ಇತ್ಯಾದಿ ಬಲ್ಲ ಮೂಲಗಳಿಂದ ಸಾಧ್ಯವಾದಷ್ಟರ ಮಟ್ಟಿಗೆ ತಿಳಿದಿಟ್ಟುಕೊಳ್ಳಿ.

ಮಾಹಿತಿ ಪಡೆಯಿರಿ, ಪುಟ್ಟ ಡೈರಿ ಇಟ್ಟುಕೊಳ್ಳಿ

ಮಾಹಿತಿ ಪಡೆಯಿರಿ, ಪುಟ್ಟ ಡೈರಿ ಇಟ್ಟುಕೊಳ್ಳಿ

* ನಿಮ್ಮ ಪ್ರವಾಸ ಖಾಸಗೀಯಾಗಿದ್ದರೂ ಕೂಡ, ಮುಖ್ಯವಾದ ವಿಷಯಗಳು, ಅತ್ಯಂತ ವಿಶೇಷ ಅನುಭವಗಳು,ಹಿತ-ಅಹಿತಕರ, ವ್ಯವಸ್ಥೆ-ಅವ್ಯವಸ್ಥೆಗಳ ಕುರಿತಾಗಿ ನೀವು ಗಮನಿಸಿದನ್ನೆಲ್ಲ ಒಂದು ಪುಟ್ಟ ಹ್ಯಾಂಡ್ ಡೈರಿಯಲ್ಲಿ ಬರೆದಿಟ್ಟುಕೊಂಡು ಅಥವಾ ಚಿತ್ರ ಶೇಖರಿಸಿ, ಅಗತ್ಯವಿದ್ದವರೊಡನೆ ಹಂಚಿಕೊಳ್ಳಿ. ಪ್ರವಾಸಸ್ಥಳದ ಆರೋಗ್ಯವನ್ನು ಕಾಪಾಡಲು ನೀವು ಕೈಗೊಂಡ ವ್ಯವಸ್ಥೆಗಳು, ಅನುಸರಿಸಿದ ಮಾರ್ಗ ಇತ್ಯಾದಿ ವಿವರಣೆ, ಇತರರಿಗೂ ಪ್ರೇರಣೆಯಾಗುತ್ತದೆ.

* ಪ್ರವಾಸ ಸ್ಥಳದ ಭಾಷೆ ಭಿನ್ನವಾಗಿದ್ದರೆ, ಪ್ರಮುಖವಾದ ಶಬ್ದಗಳನ್ನುತಿಳಿದುಕೊಂಡರೆ, ಇತರರೊಡನೆ ಸಂಭಾಷಣೆ ನಡೆಸುವ ಅಗತ್ಯತೆ ಸುಲಭವೆನಿಸುತ್ತದೆ. ಪರದೇಶಕ್ಕೆ ಪ್ರವಾಸ ಕೈಗೊಳ್ಳುವುದಾದರೆ ಅಲ್ಲಿನ ಕಾನೂನು ವ್ಯವಸ್ಥೆಯ ಕುರಿತು ಮಾಹಿತಿ ಸಂಗ್ರಹಿಸುವುದು ಅತ್ಯವಶ್ಯಕ. ಅಲ್ಲಿನ ಚಲಾವಣೆಯಲ್ಲಿರುವ ಹಣಕಾಸಿನ ವ್ಯವಸ್ಥೆಗಳು, ಸಂಸ್ಕೃತಿ, ಸಾಮಾಜಿಕ ವರ್ತನೆ, ಆಹಾರ ಪದ್ದತಿಯ ಕುರಿತಾಗಿ ತುಸು ವಿಷಯಗಳನ್ನು ಕಲೆ ಹಾಕಿಕೊಂಡರೆ, ನಮಗತ್ಯವಾದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬಹುದು, ಮಾಹಿತಿಯಿಲ್ಲದೆ ಪೇಚಾಟಕ್ಕೀಡಾಗುವ ಪ್ರಸಂಗ ಬರುವುದಿಲ್ಲ.

ಪರಿಸರ ರಕ್ಷಣೆಗೆ ಆದ್ಯತೆ ನೀಡಿ

ಪರಿಸರ ರಕ್ಷಣೆಗೆ ಆದ್ಯತೆ ನೀಡಿ

ಪ್ರವಾಸದ ನೈಸರ್ಗಿಕ ಪರಿಸರ ನಮ್ಮ ಜವಾಬ್ಧಾರಿ ಕೂಡ - ಸರ್ಕಾರದ ವ್ಯವಸ್ಥೆಗಳ ಜೊತೆಗೆ ಪ್ರವಾಸೋದ್ಯಮ ಯಶಸ್ವಿಯಾಗಲು ಜನರ ಸಹಕಾರ ಅತೀ ಮುಖ್ಯ.

ಅನೇಕ ಕಡೆ ಕಸದ ಬುಟ್ಟಿ ಇದ್ದರೂ ಜನರು ಕಂಡಕಂಡಲ್ಲೆ ಕಸ ಹಾಕುವುದು, ಪ್ರಯಾಣದ ಮಧ್ಯೆ ನೀರಿನ ಒರತೆಯ ಸಮೀಪದಲ್ಲಿ ಊಟ ತಿಂಡಿಗೆಂದು ಬಿಡುವು ತೆಗೆದುಕೊಂಡು ಅಲ್ಲಿಯೇ ತಿಂಡಿಯ ಕಸವನ್ನು ನೀರಿಗೆ, ಮರದ ಬುಡಕ್ಕೆ ಎಸೆದು ಬರುವುದು ಬೇಡ - ಬದಲಿಗೆ, ಕಸವನ್ನು ಒಟ್ಟು ಮಾಡಿಕೊಂಡು ಇನ್ನೊಂದು ಸ್ಪೇರ್ ಕವರಿಗೆ ತುಂಬಿಟ್ಟು ನಂತರಕ್ಕೆಲ್ಲಾದರೂ ಕಸದ ಬುಟ್ಟಿ ಕಂಡಾಗ ಅಲ್ಲಿ ವಿಲೇ ಮಾಡುವಷ್ಟು ಸಣ್ಣ ಪ್ರಮಾಣದ ಕೆಲಸ ನಮ್ಮಿಂದ ಸಾಧ್ಯವಿದೆ.

ಕಾಡು-ಮೇಡು, ನೀರಿರುವಂಥ ನೈಸರ್ಗಿಕ ಸ್ಥಳಗಳಲ್ಲಿ ಪ್ಲಾಸ್ಟಿಕ್ ಕಸ, ಮದ್ಯಪಾನ ಮಾಡಿ, ಇತರ ಪ್ರವಾಸಿಗರಿಗೆ ಮುಜುಗರಕ್ಕೀಡುತ್ತಾ , ಬಾಟಲಿಗಳನ್ನು ಎಸೆಯುವಂತಹ ನೀಚ ಕೃತ್ಯ ಸಲ್ಲದು. ಫಯರ್ ಕ್ಯಾಂಪ್ ಎಂದು ಬೆಂಕಿ ಹಾಕಿ ಸುತ್ತಲೂ ನರ್ತಿಸುವ ಮುನ್ನ ಸುತ್ತಮುತ್ತಲಿನ ಹಸಿರಿಗೆ, ಅರಣ್ಯಕ್ಕೆ ತೊಂದರೆಯಾಗದಂತೆ ಒಮ್ಮೆ ಕಾಳಜಿ ವಹಿಸುವುದು ಒಳಿತು.

ಹೋಟೆಲ್ ಗಳಿಗಿಂತ ಹೋಂ ಸ್ಟೇ ಹಿತವೆನಿಸುತ್ತದೆ

ಹೋಟೆಲ್ ಗಳಿಗಿಂತ ಹೋಂ ಸ್ಟೇ ಹಿತವೆನಿಸುತ್ತದೆ

ಪ್ರವಾಸದ ಯೋಜನೆ ನಿಮ್ಮದೇ ಹತೋಟಿಯಲ್ಲಿದ್ದರೆ ಒಮ್ಮೊಮ್ಮೆ ಹೋಟೆಲ್ಗಳನ್ನು ಬಿಟ್ಟು ಹೋಂಸ್ಟೇ ಗಳನ್ನು ತಂಗಲು ಪ್ರಯತ್ನಿಸಿ. ಏಕೆಂದರೆ ಯಾವುದೇ ಸ್ಥಳದ ಕುರಿತಾಗಿ ಪ್ರವಾಸದ ಪಟ್ಟಿ, ಭೂಪಟದಲ್ಲಿ ಇರುವುದಕ್ಕಿಂತಲೂ,

ಅಲ್ಲಿನ ಸ್ಥಳೀಯರಿಗೆ ಹೆಚ್ಚಿನ ಸ್ಥಳಗಳ ಮಾಹಿತಿ, ಆಗುಹೋಗುಗಳ ಅರಿವಿರುತ್ತದೆ. ಹೋಂಸ್ಟೇ ನಡೆಸುವವರು ಪ್ರವಾಸಿಗರನನ್ನು ಆಕರ್ಷಿಸಲೆಂದೇ ಅಲ್ಲಿನ ಸಾಂಪ್ರದಾಯಿಕ ಅಡುಗೆ ಪದಾರ್ಥಗಳನ್ನು ತಯಾರಿಸುತ್ತಾರೆ. ಚಾರಣ, ಪ್ರಕೃತಿ ವೀಕ್ಷಣೆ, ಸಾಂಪ್ರದಾಯಿಕ ಆಟಗಳು ಇನ್ನಿತರ ಹಳ್ಳಿಯ ಘಮಲು ದೊರೆಯುವಂತಹ ಚಟುವಟಿಕೆಗಳನ್ನು ಆಯೋಜಿಸಿರುತ್ತಾರೆ.

* ಸಮಯದ ಅಭಾವ ಅಥವಾ ಇನ್ಯಾವುದೇ ಬದ್ಧತೆಯಿರದಿದ್ದಲ್ಲಿ, ಟ್ಯಾಕ್ಸಿ, ಆಟೋ ಬಳಸುವ ಕಡೆ ಬಸ್ ನ ವ್ಯವಸ್ಥೆಯಿದ್ದರೆ, ಆದಷ್ಟು ಸಾರ್ವಜನಿಕ ಸಾರಿಗೆ ಮಾಧ್ಯಮವನ್ನೇ ಬಳಸಿ ಅಥವಾ ಕೆಲವು ಹತ್ತಿರದ ಸ್ಥಳಗಳಿಗೆ ಕಾಲ್ನಡಿಗೆಯಲ್ಲೇ ಹೋಗಿ. ಹೆಚ್ಚಿನ ಸಾರ್ವಜನಿಕ ತಿರುಗಾಟ, ನಮಗೆ ಆ ಸ್ಥಳದ ಮತ್ತು ಜನಜೀವನದ ಕುರಿತಾಗಿ ತುಸು ಹೆಚ್ಚು ನೋಡಲು, ತಿಳಿಯಲು ಅನುಕೂಲವಾಗುತ್ತದೆ.

ಪ್ರಕೃತಿಯ ಅಂದವನ್ನು ಹಾಳುಗೆಡವಬೇಡಿ

ಪ್ರಕೃತಿಯ ಅಂದವನ್ನು ಹಾಳುಗೆಡವಬೇಡಿ

ಐತಿಹಾಸಿಕ ವಸ್ತುಗಳನ್ನು ನೋಡಿ ಸಂತೋಷಿಸಬೇಕು ವಿನಃ ಅವುಗಳನ್ನು ಯಾವುದೊ ಮತೀಯ ಭಾವನಾತ್ಮಕ ವಿಚಾರಗಳ ಹಿನ್ನಲೆಯಲ್ಲಿ ಹಾಳುಗೆಡುವುದು ತಪ್ಪು. ಪ್ರಸಿದ್ಧ ಸ್ಥಳಗಳ ಕಲ್ಲಿನ ಮೇಲೆ, ಮರದ ಮೇಲೆ ತಮ್ಮ ಹೆಸರುಗಳನ್ನು ಕೆತ್ತಿ ಬರೆದು ಆ ಪ್ರಕೃತಿಯ ಅಂದವನ್ನು ಹಾಳು ಮಾಡುವಂತಿರಬಾರದು.

ಹೊರಗಡೆ ಹೋದಾಗ ದೊರಕುವ ಉಚಿತ ಸಂಪನ್ಮೂಲ ಎಂದು ನೀರನ್ನು ಹೆಚ್ಚು ಪೋಲು ಮಾಡದೆ ಇದ್ದರೆ ಅದೇ ಒಂದು ನಿಸರ್ಗಕ್ಕೆ ನಮ್ಮ ವಂತಿಕೆ. ಅಭಯಾರಣ್ಯಗಳಿಗೆ ಭೇಟಿನೀಡುತ್ತಿದ್ದೇವೆಂದರೆ, ಪ್ರಾಣಿ ಪಕ್ಷಿಗಳ, ಜೀವ-ಸಂಕುಲಗಳ ಮನೆಗೆ ಅತಿಥಿಯಾಗಿ ನಾವು ಹೋಗುತ್ತಿದ್ದೇವೆಂದರ್ಥ. ಬೇಕಾಬಿಟ್ಟಿ ಗಲಾಟೆ, ಮಾಲಿನ್ಯಗಳಿಂದ, ಪ್ರಾಣಿಪಕ್ಷಿಗಳಿಗೆ ಹಿಂಸೆ ನೀಡಿ ಬರುವಂತಹ ಕಾರ್ಯಗಳು ನಮ್ಮದಾಗುವುದು ಬೇಡ.

English summary
When you plan a vacation, what are the aspects do you consider during the planning ? Vacation not only with wonderful memories, but also with that feeling you get when an experience is particularly special or precious to you writes Soumya Beena
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X