ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಾಫಿಕ್ ಉಲ್ಲಂಘನೆ ದಂಡ ಆನ್ಲೈನ್ ನಲ್ಲಿ ಕಟ್ಟುವುದು ಹೇಗೆ?

|
Google Oneindia Kannada News

ಸಂಚಾರಿ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸುವ ಮೋಟಾರು ವಾಹನ ತಿದ್ದುಪಡಿ ಕಾಯ್ದೆ 2019 ದೇಶಾದ್ಯಂತ ಜಾರಿಗೆ ಬಂದಿದೆ. ಆಗಸ್ಟ್ 9ರಂದು ಕೇಂದ್ರ ಸರ್ಕಾರ ಕಾಯ್ದೆಯನ್ನು ಜಾರಿಗೆ ತಂದು ಅಧಿಸೂಚನೆ ಹೊರಡಿಸಿತ್ತು. ಸೆ.01ರಿಂದ ಎಲ್ಲೆಡೆ ಜಾರಿಗೆ ಬಂದಿದೆ. ಸದ್ಯಕ್ಕಂತೂ ದಂಡ ಕಟ್ಟದೇ ವಿಧಿಯಿಲ್ಲ.

ಬೆಂಗಳೂರು ನಗರದಲ್ಲಿ ನಿಯಮ ಜಾರಿ ಬಂದ ಬಳಿಕ ಒಂದೇ ದಿನ 30 ಲಕ್ಷ ದಂಡವನ್ನು ಸಂಚಾರಿ ಪೊಲೀಸರು ಸಂಗ್ರಹ ಮಾಡಿದ್ದಾರೆ. ದಂಡದ ಹೆಸರಿನಲ್ಲಿ ಚಾಲಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂಬ ಆರೋಪಗಳು ಇವೆ. ಪೊಲೀಸರು ದಂಡ ಹಾಕಿದಾಗ, ದಂಡ ಕಟ್ಟಿ ರಸೀತಿ ಪಡೆಯಬಹುದು. ಆದರೆ, ಆನ್ ಲೈನ್ ಮೂಲಕ ದಂಡ ಕಟ್ಟುವುದು ಹೇಗೆ? ಇಲ್ಲಿದೆ ಮಾಹಿತಿ...

ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?ಸಂಚಾರಿ ನಿಯಮ ಉಲ್ಲಂಘನೆ ದಂಡ ಪರಿಷ್ಕರಣೆ: ಯಾವ ತಪ್ಪಿಗೆ ಎಷ್ಟು ದಂಡ?

ಅತಿಯಾದ ವೇಗವಾಗಿ ಗಾಡಿ ಚಲಾಯಿಸಿದರೆ 1000 ರೂಪಾಯಿ ದಂಡ ಬೀಳಲಿದೆ. ವೇಗವಾಗಿ ಗಾಡಿ ಚಲಾಯಿಸುವಂತೆ ಸೂಚಿಸಿದರೆ ಅದಕ್ಕೆ 500 ರೂಪಾಯಿ ದಂಡ ಬೀಳಲಿದೆ. ವಿಮೆ (ಇನ್ಶೂರೆನ್ಸ್‌) ಇಲ್ಲದ ಗಾಡಿಯನ್ನು ಚಲಾಯಿಸಿದಲ್ಲಿ 1000 ರೂಪಾಯಿ ದಂಡ ತೆರಬೇಕಾಗುತ್ತದೆ. ನೊಂದಣಿ ರಹಿತ ವಾಹನವನ್ನು ಓಡಿಸಿದಲ್ಲಿ ಬರೋಬ್ಬರಿ 5000 ದಂಡ ತೆರಬೇಕಾಗುತ್ತದೆ. ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ನಿಲ್ಲಿಸುವುದು, ಅಪಾಯಕಾರಿಯಾಗಿ ವಾಹನ ನಿಲ್ಲಿಸುವುದು, ಇವುಗಳಿಗೆ 1000 ರೂಪಾಯಿ ದಂಡ ತೆರಬೇಕಾಗುತ್ತದೆ.

ಪೇಟಿಯಂ ಮೂಲಕ ಆನ್ ಲೈನ್ ಫೈನ್ ಕಟ್ಟುವುದು

ಪೇಟಿಯಂ ಮೂಲಕ ಆನ್ ಲೈನ್ ಫೈನ್ ಕಟ್ಟುವುದು

ನಗದು ರಹಿತ ವಹಿವಾಟು ಹೆಚ್ಚಳವಾದಂತೆ ಬಳಕೆಯಲ್ಲಿರುವ ಡಿಜಿಟಲ್ ಪೇಮೆಂಟ್ ಅಪ್ಲಿಕೇಷನ್ ಮೂಲಕ ದಂಡ ಕಟ್ಟಬಹುದು. ಇದರಲ್ಲಿ ಪೇಟಿಯಂ ಪೇಗೆ ಮಾನ್ಯತೆಯಿದೆ.
* ಪೇಟಿಯಂ ಖಾತೆಗೆ ಲಾಗಿನ್ ಆಗಿ
* ನಿಮ್ಮ ನಗರವನ್ನು ಆಯ್ಕೆ ಮಾಡಿಕೊಳ್ಳಿ
* ವಾಹನ ಸಂಖ್ಯೆ/ಚಲನ್ ನಮೂದಿಸಿ
* ಪೇಮೆಂಟ್ ವಿಧಾನ ಆಯ್ಕೆ ಮಾಡಿಕೊಳ್ಳಿ.. ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್, ಪೇಟಿಯಂ ವ್ಯಾಲೆಟ್ ಅಥವಾ ನೆಟ್ ಬ್ಯಾಂಕಿಂಗ್.

ಈ ವಿಧಾನ ದಿನದ 24 ಗಂಟೆಗಳ ಕಾಲ ಲಭ್ಯವಿರಲಿದೆ. ಪೇಮೆಂಟ್ ಆದ ಬಳಿಕ ರಸೀತಿ ನಿಮ್ಮ ನೋಂದಾಯಿತ ಫೋನ್ ಬಂಬರ್ ಹಾಗೂ ಇಮೇಲ್ ಐಡಿಗೆ ಬರಲಿದೆ.

ಕರ್ನಾಟಕ ಒನ್ ವೆಬ್ ಸೈಟ್ ಮೂಲಕ ಪೇಮೆಂಟ್

ಕರ್ನಾಟಕ ಒನ್ ವೆಬ್ ಸೈಟ್ ಮೂಲಕ ಪೇಮೆಂಟ್

ಕರ್ನಾಟಕ ಒನ್ ವೆಬ್ ಸೈಟ್ ಮೂಲಕ ದಂಡದ ಮೊತ್ತವನ್ನು ಪೇಮೆಂಟ್ ಮಾಡಬಹುದು. ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ವಿಧಿಸಲಾದ ಮೊತ್ತವನ್ನು ಆನ್ ಲೈನ್ ಮೂಲಕ ಕಟ್ಟಲು ವ್ಯವಸ್ಥೆಯಿದೆ. ಕರ್ನಾಟಕ ಒನ್ ವೆಬ್ ಸೈಟ್ ನಲ್ಲಿ ಲಾಗಿನ್ ಆಗಿ ನೋಂದಣಿ ಸಂಖ್ಯೆ ನಮೂದಿಸಿದರೆ ನಿಮ್ಮ ಉಲ್ಲಂಘನೆ ಹಾಗೂ ದಂಡದ ಮೊತ್ತ ತಿಳಿಯಲಿದೆ. ದಂಡವನ್ನು ಪಾವತಿಸಿ, ರಸೀತಿ ಪಡೆಯಬಹುದು.

Infographics: ಸೆ.01ರಿಂದ ತೆರಿಗೆ, ಟಿಕೆಟ್ ಬುಕ್ಕಿಂಗ್ ಸೇರಿ ಏನೆಲ್ಲ ಬದಲಾವಣೆ?Infographics: ಸೆ.01ರಿಂದ ತೆರಿಗೆ, ಟಿಕೆಟ್ ಬುಕ್ಕಿಂಗ್ ಸೇರಿ ಏನೆಲ್ಲ ಬದಲಾವಣೆ?

ಟ್ರಾಫಿಕ್ ಪೊಲೀಸ್ ವೆಬ್ ಸೈಟ್

ಟ್ರಾಫಿಕ್ ಪೊಲೀಸ್ ವೆಬ್ ಸೈಟ್

ಬೆಂಗಳೂರು ಟ್ರಾಫಿಕ್ ಪೊಲೀಸ್ ವೆಬ್ ಸೈಟ್ ನಲ್ಲಿ ಆನ್ ಲೈನ್ ಮೂಲಕ ವಿವಿಧ ದಂಡ ಪಾವತಿ ವ್ಯವಸ್ಥೆಯಿದೆ. ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್, ಪೇಟಿಯಂ, ಅಮೆಕ್ಸ್ ಕಾರ್ಡ್ ಅಥವಾ ಯುಪಿಐ, ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು. Captcha ಹಾಕಿ, ಸಬ್ಮಿಟ್ ಮಾಡಿದರೆ ಪೇಮೆಂಟ್ ಆಗುತ್ತದೆ.

ಬ್ರೇಕಿಂಗ್ ನ್ಯೂಸ್: ಸಂಚಾರಿ ನಿಯಮ ಉಲ್ಲಂಘನೆ ದಂಡ ಮೊತ್ತ ಕಡಿತಬ್ರೇಕಿಂಗ್ ನ್ಯೂಸ್: ಸಂಚಾರಿ ನಿಯಮ ಉಲ್ಲಂಘನೆ ದಂಡ ಮೊತ್ತ ಕಡಿತ

ಡಿಜಿ ಲಾಕರ್ ಬಳಕೆ

ಡಿಜಿ ಲಾಕರ್ ಬಳಕೆ

ವಾಹನ, ವಿಮೆ ಸಂಬಂಧಿಸಿದ ಲೈಸನ್ಸ್ ,ಆರ್ ಸಿ ಬುಕ್, ವಿಮೆ ಪ್ರೀಮಿಯಂ, ಮಾಲಿನ್ಯ ತಪಾಸಣೆ ಹೀಗೆ ಸಾಮಾನ್ಯವಾಗಿ ಪೊಲೀಸರು ಕೇಳುವ ವಿವಿಧ ದಾಖಲೆಗಳನ್ನು ತೋರಿಸಲು ಮುದ್ರಿತ ಕಾರ್ಡ್ ಬದಲಿಗೆ ಡಿಜಿಟಲ್ ಲಾಕರ್ ಬಳಸಬಹುದು. ನಿಮ್ಮ ಒರಿಜಿನಲ್ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಆನಲೈನ್ ನಲ್ಲಿ ಸೇವ್ ಮಾಡಿಕೊಳ್ಳಬಹುದು. ಪೊಲೀಸರು ಕೇಳಿದಾಗ ನಿಮ್ಮ ಮೊಬೈಲ್ ನಲ್ಲಿ ಎಲ್ಲಾ ದಾಖಲೆಗಳನ್ನು ತೋರಿಸಬಹುದು.

English summary
How to Pay Traffic Fines Online in Bengaluru. Online payments can be made in three different ways via Paytm, Karnataka One and Bengaluru traffic police website.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X