ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?

|
Google Oneindia Kannada News

ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುತ್ತಿದೆ. ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳ ಹೊಸ ಅಪ್ಡೇಟ್ ಕುರಿತಂತೆ ದೆಹಲಿ ಹೈಕೋರ್ಟಿನಲ್ಲಿ ವಿಚಾರಣೆಯನ್ನು ವಾಟ್ಸಾಪ್ ಎದುರಿಸುತ್ತಿದೆ. ಟೆಲಿಗ್ರಾಮ್ ಹಾಗೂ ಸಿಗ್ನಲ್ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ಗಳಿಗೆ ಪರಿಸ್ಥಿತಿಯ ಲಾಭ ದೊಡ್ಡ ಮಟ್ಟದಲ್ಲೇ ಆಗುತ್ತಿದೆ.

ವಾಟ್ಸಾಪ್ ಈಗ ಬಳಕೆದಾರರ ಗೌಪ್ಯ ಮಾಹಿತಿ, ಚಾಟ್ ಹಿಸ್ಟರಿಯನ್ನು ಮೂಲ ಸಂಸ್ಥೆ ಫೇಸ್ಬುಕ್ ಜೊತೆಗೆ ಹಂಚಿಕೊಳ್ಳಲು ಮುಂದಾಗಿದೆ. ಇದು ಬಳಕೆದಾರರ ಆಯ್ಕೆಗೆ ಬಿಟ್ಟಿದ್ದು ಎಂದರು ಪ್ರಕಟಣೆ ಹೊರಡಿಸಿದರೂ ಖ್ಯಾತನಾಮರ ಚಾಟ್ ಹಿಸ್ಟರಿಯೇ ಸೋರಿಕೆಯಾಗಿ ನಗೆಪಾಟಲಿಗೆ ವಾಟ್ಸಾಪ್ ಈಡಾಗಿದೆ.

ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ?ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ?

ಅಪ್ಡೇಟ್ ಗೊಂದಲದಿಂದ ತಪ್ಪಿಸಿಕೊಳ್ಳಲು ಬಳಕೆದಾರರಿಗೆ ಬೇರೆ ಮಾರ್ಗವಿಲ್ಲದ ಕಾರಣ, ವಾಟ್ಸಾಪ್ ತೊರೆಯುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಮಂದಿ ಸಿಗ್ನಲ್ ಸೇರಿದ್ದಾರೆ. ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಅವರೇ ಸಿಗ್ನಲ್ ಆಪ್ ರೂಪಿಸಿದ್ದು ಎಂಬುದು ವಿಶೇಷ. ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ? ಎಂಬುದನ್ನು ಈಗಾಗಲೇ ಓದಿರುತ್ತೀರಿ, ಈಗ ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪ್ ಪುನರ್ ರಚಿಸುವುದು ಹೇಗೆ ಎಂಬುದನ್ನು ಇಲ್ಲಿ ಓದಿ....

ಮೊದಲಿಗೆ ಸಿಗ್ನಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಮೊದಲಿಗೆ ಸಿಗ್ನಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ

ಗೂಗಲ್ ಪ್ಲೇಸ್ಟೋರಿನಲ್ಲಿ signal ಎಂದು ಸರ್ಚ್ ಮಾಡಿದರೆ ನೀಲಿ ಬಣ್ಣದ ಲೋಗೋ ಇರುವ ಆಪ್ ಕಾಣಬಹುದು. ಇದೇ ರೀತಿ ಆಪಲ್ ಆಪ್ ಸ್ಟೋರಿನಲ್ಲೂ install ಮಾಡಿಕೊಳ್ಳಿ.

ಸಿಗ್ನಲ್ ಆಪ್ ಓಪನ್ ಮಾಡುತ್ತಿದ್ದಂತೆ ಎರಡು ಆಯ್ಕೆ ಸಿಗುತ್ತದೆ. ಹೊಸದಾಗಿ ಆಪ್ ಬಳಸುತ್ತಿದ್ದರೆ Continue ಬಟನ್ ಒತ್ತಿ, ಈ ಮೊದಲೇ ಬಳಸುತ್ತಿದ್ದರೆ ಹಳೆ ಬ್ಯಾಕಪ್ ಪುನಃ ಸ್ಥಾಪಿಸಲು Restore Backup ಆಯ್ಕೆ ಮಾಡಿ, ಈ ಸಂದರ್ಭದಲ್ಲಿ ಕೇಳುವ ಅನುಮತಿ ನೀಡಿ, ನಿಮ್ಮ ಫೋನ್ ನಂಬರ್ ಹಾಕಿ Next ಬಟನ್ ಒತ್ತುತ್ತಿದ್ದಂತೆ ನಿಮ್ಮ ಫೋನಿಗೆ ಒಟಿಪಿ ಸಂದೇಶ ಬರುತ್ತದೆ. ಇದನ್ನು ನಮೂದಿಸಿ, ನಂತರ ನಿಮ್ಮ ಫ್ರೊಫೈಲ್ ಫೋಟೋ, ಹೆಸರು ದಾಖಲಿಸಿ.

ಸಿಗ್ನಲ್ APPನಲ್ಲಿ ಗ್ರೂಪ್ ರಚಿಸುವುದು ಹೇಗೆ?

ಸಿಗ್ನಲ್ APPನಲ್ಲಿ ಗ್ರೂಪ್ ರಚಿಸುವುದು ಹೇಗೆ?

ನಿಮ್ಮ ಸಿಗ್ನಲ್ ಆಪ್ ಮೇಲ್ತುದಿಯಲ್ಲಿರುವ ಮಾರ್ಕ್ ಒತ್ತಿದರೆ new group ಆಯ್ಕೆ ಮಾಡಿ, ನಂತರ ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವ ಯಾರಾದರೂ ಒಬ್ಬರನ್ನು ಗುಂಪಿಗೆ ಸೇರಿಸಿ. ಗ್ರೂಪಿಗೆ ಹೆಸರು ನೀಡಿ, ಗ್ರೂಪ್ ಚಿತ್ರ ಬದಲಾಯಿಸಿ, ಗ್ರೂಪ್ ರಚನೆಯಾಗುತ್ತಿದ್ದಂತೆ ಗುಂಪಿಗೆ ಹೊಸ ಸದಸ್ಯರನ್ನು ಸೇರಿಸಲು ಲಿಂಕ್ ಸಿಗುತ್ತದೆ. ಅಡ್ಮಿನ್ ಒಪ್ಪಿದರೆ ಮಾತ್ರ ಹೊಸ ಸದಸ್ಯರನ್ನು ಸೇರಿಸಬಹುದಾಗಿರುತ್ತದೆ.

ವಾಟ್ಸಾಪ್ ಬದಲಿ 'ಸಿಗ್ನಲ್ ಆ್ಯಪ್‌'ಗೆ ಹೆಚ್ಚಿದ ಡಿಮ್ಯಾಂಡ್: ಅತಿ ಹೆಚ್ಚು ಡೌನ್‌ಲೋಡ್‌ವಾಟ್ಸಾಪ್ ಬದಲಿ 'ಸಿಗ್ನಲ್ ಆ್ಯಪ್‌'ಗೆ ಹೆಚ್ಚಿದ ಡಿಮ್ಯಾಂಡ್: ಅತಿ ಹೆಚ್ಚು ಡೌನ್‌ಲೋಡ್‌

ಹೊಸ ಸದಸ್ಯರನ್ನು ಗ್ರೂಪಿಗೆ ಸೇರಿಸುವುದು ಹೇಗೆ?

ಹೊಸ ಸದಸ್ಯರನ್ನು ಗ್ರೂಪಿಗೆ ಸೇರಿಸುವುದು ಹೇಗೆ?

ಹೊಸ ಗುಂಪಿಗೆ ಹೊಸ ಸದಸ್ಯರನ್ನು ಸೇರಿಸುವುದು ಸುಲಭ. ಗ್ರೂಪ್ ಸೆಟ್ಟಿಂಗ್ಸ್ ಗೆ ಹೋಗಿ ಗ್ರೂಪ್ ಲಿಂಕ್ ಪಡೆದು ಷೇರು ಬಟನ್ ಒತ್ತಬೇಕು. ಈ ಆಹ್ವಾನ ಲಿಂಕ್ ಸಿಗ್ನಲ್ ನ ಇತರೆ ಸದಸ್ಯರಿಗೆ ಕಳಿಸಬಹುದು ಕ್ಯೂಆರ್ ಕೋಡ್ ಮೂಲಕ ತಿಳಿಸಬಹುದು. ಅಥವಾ ಕಾಪಿ ಮಾಡಿಕೊಂಡ ಲಿಂಕ್ ವಾಟ್ಸಾಪ್, ಸೇರಿದಂತೆ ಇತರೆ ಆಪ್ ಗಳಿಗೆ ಕಳಿಸಿ ಗ್ರೂಪಿಗೆ ಸೇರುವಂತೆ ಕೇಳಿಕೊಳ್ಳಬಹುದು. ಈ ಮೂಲಕ ಒಮ್ಮೆಗೆ ಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳಬಹುದು. ಅಡ್ಮಿನ್ ಆದವರು ಒಬ್ಬೊಬ್ಬರನ್ನೇ ಆಯ್ಕೆ ಮಾಡಿ ಗುಂಪಿಗೆ ಸೇರಿಸಿಕೊಳ್ಳುವ ಪ್ರಕ್ರಿಯೆ ಅಗತ್ಯವಿಲ್ಲ.

ಕ್ರೌಡ್ ಫಂಡಿಂಗ್ ಮೂಲಕ ಅಭಿವೃದ್ಧಿಯಾದ ಸಿಗ್ನಲ್

ಕ್ರೌಡ್ ಫಂಡಿಂಗ್ ಮೂಲಕ ಅಭಿವೃದ್ಧಿಯಾದ ಸಿಗ್ನಲ್

ಸಿಗ್ನಲ್ ಆಪ್ ವಿನ್ಯಾಸ, ಅಭಿವೃದ್ಧಿ ಎಲ್ಲವೂ ಕ್ರೌಡ್ ಫಂಡಿಂಗ್ ಮೂಲಕ ಆಗಿದ್ದು, ಈ ಆಪ್ ಸೋರ್ಸ್ ಕೋಡ್ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಡೆವಲಪರ್ ಗಳು ಸಿಗ್ನಲ್ ಸಂಸ್ಥೆ ಜೊತೆ ಕೈಜೋಡಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ಪಾರದರ್ಶಕತೆ, ಸುರಕ್ಷತೆಯೇ ಆದ್ಯತೆ ಎಂದು ಬ್ರಿಯಾನ್ ಹೇಳಿದ್ದಾರೆ. ಡಿಸೆಂಬರ್ 17, 2020ರಂದು ಗೂಗಲ್ ಪ್ಲೇಸ್ಟೋರಿನಲ್ಲಿ ಕಾಣಿಸಿಕೊಂಡ ಸಿಗ್ನಲ್ ಇಲ್ಲಿ ತನಕ 10,000,000+ ಡೌನ್ಲೋಡ್ ಕಂಡಿದೆ. ಆಂಡ್ರಾಯ್ಡ್ 4.4 ಪ್ಲಸ್ ಒಎಸ್ ಇರುವ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು. ಇತ್ತೀಚೆಗೆ ಗ್ರೂಪ್ ಚಾಟಿಂಗ್, ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಸೇರಿಸಲಾಗಿದೆ.

ಹೊಸ ನೀತಿ ಬಗ್ಗೆ ವಾಟ್ಸಾಪ್ ಒತ್ತಡ ಹೇರುವಂತಿಲ್ಲ: ಹೈಕೋರ್ಟ್ಹೊಸ ನೀತಿ ಬಗ್ಗೆ ವಾಟ್ಸಾಪ್ ಒತ್ತಡ ಹೇರುವಂತಿಲ್ಲ: ಹೈಕೋರ್ಟ್

English summary
Here are the steps How to recreate your WhatsApp groups on Signal easily.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X