ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಾಪ್ ಡೆಸ್ಕ್‌ಟಾಪ್ ಬಳಸಿ ವಾಯ್ಸ್/ವಿಡಿಯೋ ಕರೆ ಹೇಗೆ?

|
Google Oneindia Kannada News

ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರನ್ನು ದಿನದಿಂದ ದಿನಕ್ಕೆ ಕಳೆದುಕೊಳ್ಳುವ ಭೀತಿ ನಡುವೆ ಸೌಲಭ್ಯಗಳನ್ನು ಹೆಚ್ಚಿಸುತ್ತಿದೆ.

ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳ ಹೊಸ ಅಪ್ಡೇಟ್ ಕುರಿತಂತೆ ಹೈಕೋರ್ಟಿನಲ್ಲಿ ವಿಚಾರಣೆಯನ್ನು ವಾಟ್ಸಾಪ್ ಎದುರಿಸುತ್ತಿದೆ. ಟೆಲಿಗ್ರಾಮ್ ಹಾಗೂ ಸಿಗ್ನಲ್ ತ್ವರಿತ ಮೆಸೇಜಿಂಗ್ ಅಪ್ಲಿಕೇಷನ್ ಗಳಿಗೆ ಪರಿಸ್ಥಿತಿಯ ಲಾಭ ದೊಡ್ಡ ಮಟ್ಟದಲ್ಲೇ ಆಗುತ್ತಿದೆ.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ವಾಟ್ಸಾಪ್ ಈಗ ಬಳಕೆದಾರರ ಗೌಪ್ಯ ಮಾಹಿತಿ, ಚಾಟ್ ಹಿಸ್ಟರಿಯನ್ನು ಮೂಲ ಸಂಸ್ಥೆ ಫೇಸ್ಬುಕ್ ಜೊತೆಗೆ ಹಂಚಿಕೊಳ್ಳಲು ಮುಂದಾಗಿದೆ. ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಇತ್ತೀಚೆಗೆ ಹಲವು ಹೊಸ ಸೌಲಭ್ಯಗಳು, ಕಠಿಣ ಭದ್ರತಾ ನಿಯಮಗಳನ್ನು ಹೊರ ತಂದಿದೆ. ವಾಟ್ಸಾಪ್ ಡೆಸ್ಕ್‌ಟಾಪ್ ಬಳಸಿ ವಾಯ್ಸ್/ವಿಡಿಯೋ ಕರೆ ಸೌಲಭ್ಯ ಭಾರತದಲ್ಲೂ ಲಭ್ಯವಿದ್ದು, ಒಬ್ಬರಿಂದ ಒಬ್ಬರಿಗೆ ಮಾತ್ರ ಸೌಲಭ್ಯ ಬಳಸಬಹುದು, ಗ್ರೂಪ್ ಕಾಲ್ ಇನ್ನೂ ಎನೇಬಲ್ ಆಗಿಲ್ಲ. ಲಭ್ಯವಿರುವ ಸೌಲಭ್ಯ ಬಳಸುವುದು ಹೇಗೆ ಎಂಬ ವಿವರಣೆ ಮುಂದಿದೆ ಓದಿ...

ಗ್ರೂಪ್ ವಾಯ್ಸ್ /ವಿಡಿಯೋ ಕಾಲಿಂಗ್ ಸೌಲಭ್ಯ

ಗ್ರೂಪ್ ವಾಯ್ಸ್ /ವಿಡಿಯೋ ಕಾಲಿಂಗ್ ಸೌಲಭ್ಯ

ಗ್ರೂಪ್ ವಾಯ್ಸ್ /ವಿಡಿಯೋ ಕಾಲಿಂಗ್ ಸೌಲಭ್ಯಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ ಎಂದು ವಾಟ್ಸಾಪ್ ಹೇಳಿದೆ. 2016ರಲ್ಲೇ ಒಬ್ಬರಿಂದ ಒಬ್ಬರಿಗೆ ವಿಡಿಯೋ ಕಾಲ್ ಮಾಡುವ ಸೌಲಭ್ಯ ನೀಡಲಾಗಿತ್ತು. ಆದರೆ, ಗ್ರೂಪ್ ವಿಡಿಯೋ ಕಾಲಿಂಗ್ ಸೌಲಭ್ಯ 2018ರ ವೇಳೆ ಮೊಬೈಲ್ ಆಪ್‌ನಲ್ಲಿ ಲಭ್ಯವಾಗಿದೆ. ಆದರೆ, ಕೊರೊನಾ ಸಂಕಷ್ಟ ಕಾಲದಲ್ಲಿ ವಾಟ್ಸಾಪ್ ಡೆಸ್ಕ್‌ಟಾಪ್ ಹೆಚ್ಚಾಗಿದ್ದು, ಇದನ್ನು ಬಳಸಿ ವಾಯ್ಸ್, ವಿಡಿಯೋ ಕಾಲ್ ಮಾಡುವ ಬಗ್ಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ.

ಡೆಸ್ಕ್‌ಟಾಪ್ ಆಪ್ ಬಳಸಿ ವಾಯ್ಸ್/ವಿಡಿಯೋ ಕರೆ

ಡೆಸ್ಕ್‌ಟಾಪ್ ಆಪ್ ಬಳಸಿ ವಾಯ್ಸ್/ವಿಡಿಯೋ ಕರೆ

ಮೊಬೈಲ್ ಬದಲಿಗೆ ಡೆಸ್ಕ್‌ಟಾಪ್ ಮೂಲಕ ವಾಟ್ಸಾಪ್ ಬಳಸುವವರು ಬ್ರೌಸರ್‌ನಲ್ಲಿ ವಾಟ್ಸಾಪ್ ವೆಬ್ ಬಳಸುವುದನ್ನು ಕಲಿತಿರುತ್ತಾರೆ. ಇದಲ್ಲದೆ ಇನ್ನೊಂದು ವಿಧಾನದಲ್ಲೂ ಡೆಸ್ಕ್‌ಟಾಪ್ ಮೂಲಕ ವಾಟ್ಸಾಪ್ ಬಳಸಬಹುದು.

ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?ವಾಟ್ಸಾಪ್ ಗ್ರೂಪಿನಿಂದ ಸಿಗ್ನಲ್ APP ಗ್ರೂಪಿಗೆ ಜಂಪ್ ಹೇಗೆ?

ಭಾರತದಲ್ಲಿ ಸದ್ಯ ವಾಟ್ಸಾಪ್ ಡೆಸ್ಕ್‌ಟಾಪ್ ಆವೃತ್ತಿ ಕಳೆದ ಮೂರು ತಿಂಗಳಿನಿಂದ ಲಭ್ಯವಿದ್ದು, ಕಾಲ ಕಾಲಕ್ಕೆ ಅಪ್ಡೇಟ್ ಅಗುತ್ತಿದೆ. ನಿಮ್ಮ ಸಿಸ್ಟಮ್ ನಲ್ಲಿ ವಾಟ್ಸಾಪ್ ಡೆಸ್ಕ್‌ಟಾಪ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ(https://www.whatsapp.com/download). ವಿಂಡೋಸ್ 32 ಬಿಟ್, 64 ಬಿಟ್ ಅಲ್ಲದೆ ಮ್ಯಾಕ್ಒಎಸ್ ನಲ್ಲೂ ಇದು ಲಭ್ಯವಿದೆ.

ಈ ವಾಯ್ಸ್/ ವಿಡಿಯೋ ಕರೆ ಸೌಲಭ್ಯ ವರ್ಕ್ ಆಗಬೇಕಾದರೆ ವಿಂಡೋಸ್ 10 64 ಬಿಟ್ ಆವೃತ್ತಿ 1903 ಅಥವಾ ಅದಕ್ಕಿಂತ ಸುಧಾರಿತ ಆವೃತ್ತಿಯನ್ನು ಹೊಂದಿರಬೇಕು. ಮ್ಯಾಕ್ ಒಎಸ್ 10.13 ಇರಬೇಕು.

ನಿಮ್ಮ ಕಂಪ್ಯೂಟರಲ್ಲಿ ಏನೇನಿರಬೇಕು?

ನಿಮ್ಮ ಕಂಪ್ಯೂಟರಲ್ಲಿ ಏನೇನಿರಬೇಕು?

ವಾಟ್ಸಾಪ್ ವಾಯ್ಸ್/ ವಿಡಿಯೋ ಕರೆ ಸೌಲಭ್ಯ ಬಳಸಲು
* ಆಡಿಯೋ ಔಟ್ ಪುಟ್ ಸಾಧನ, ಮೈಕ್ರೋಫೋನ್, ವೆಬ್ ಕಾಮ್ ಅಥವಾ ಪ್ರತ್ಯೇಕವಾಗಿ ಸೇರಿಸಿದ ಕ್ಯಾಮೆರಾ ಬೇಕಾಗುತ್ತದೆ.
* ನಿಮ್ಮ ಮೊಬೈಲ್ ಫೋನ್ ಹಾಗೂ ಡೆಸ್ಕ್ ಟಾಪ್ ಸಂಪರ್ಕಿಸಲು ಹಾಗೂ ಈ ಸೌಲಭ್ಯ ಬಳಸಲು ಇಂಟರ್ನೆಟ್ ಕನೆಕ್ಷನ್.
* ನಿಮ್ಮ ಕಂಪ್ಯೂಟರ್ ಮೈಕ್ರೋಫೋನ್ ಹಾಗೂ ಕ್ಯಾಮೆರಾ ಬಳಸಲು ವಾಟ್ಸಾಪ್‌ಗೆ ಅನುಮತಿ.
ಇಷ್ಟಿದ್ದರೆ ವಾಟ್ಸಾಪ್ ವಾಯ್ಸ್/ ವಿಡಿಯೋ ಕರೆ ಮಾಡಲು ವೇದಿಕೆ ಸಿದ್ಧವಾದಂತೆ.

ವಾಟ್ಸಾಪ್ ಡೆಸ್ಕ್‌ಟಾಪ್ ಕರೆ ಚಾಲನೆ ವಿಧಾನ

ವಾಟ್ಸಾಪ್ ಡೆಸ್ಕ್‌ಟಾಪ್ ಕರೆ ಚಾಲನೆ ವಿಧಾನ

* ವಾಟ್ಸಾಪ್ ಡೆಸ್ಕ್‌ಟಾಪ್ ಅಪ್ಲಿಕೇಷನ್ ಕ್ಲಿಕ್ ಮಾಡಿ ರನ್ ಮಾಡಿ.
* ನಿಮ್ಮ ಫೋನ್ ಬಳಸಿ QR ಕೋಡ್ ಸ್ಕ್ಯಾನ್ ಮಾಡಿ, ಅನುಮತಿ ನೀಡಿ
* ನಿಮ್ಮ ವಾಟ್ಸಾಪ್ ಅಕೌಂಟ್ ಓಪನ್ ಆಗುತ್ತದೆ. ಬಳಿಕ ಕರೆ ಮಾಡಬೇಕಾದ ಖಾತೆ ಆಯ್ಕೆ ಮಾಡಿಕೊಳ್ಳಿ
* ಚಾಟ್ ಬಾಕ್ಸಿನ ಮೇಲ್ಭಾಗದಲ್ಲಿ ಕಾಣುವ ವಾಯ್ಸ್ ಕಾಲ್ ಐಕಾನ್ ಅಥವಾ ವಿಡಿಯೋ ಐಕಾನ್ ಕ್ಲಿಕ್ ಮಾಡಿ
* ಮೊಬೈಲ್ ನೆರವಿಲ್ಲದೆ ಡೆಸ್ಕ್‌ಟಾಪ್ ಆಪ್ ಕರೆ ಸಂಪರ್ಕ ಸಾಧ್ಯವಾಗಲಿದೆ.

ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?ದನಿಯನ್ನು ಅಕ್ಷರ ರೂಪಕ್ಕಿಳಿಸುವ ವಾಯ್ಸ್ ನೋಟ್ App ಬಳಕೆ ಹೇಗೆ?

ಡೆಸ್ಕ್‌ಟಾಪ್ ಕರೆ ಸೌಲಭ್ಯಗಳು

ಡೆಸ್ಕ್‌ಟಾಪ್ ಕರೆ ಸೌಲಭ್ಯಗಳು

ವಾಯ್ಸ್, ವಿಡಿಯೋ ಕರೆ, ವಾಯ್ಸ್ ಮ್ಯೂಟ್ ಮಾಡುವುದು, ಕ್ಯಾಮೆರಾ ಆಫ್ ಮಾಡುವುದು, ವಾಯ್ಸ್ ಕರೆಯಿಂದ ವಿಡಿಯೋ ಕರೆಗೆ ಜಂಪ್ ಆಗುವುದು, ಒಳಬರುವ ಕರೆ ಸ್ವೀಕರಿಸುವುದು ಅಥವಾ ನಿರಾಕರಿಸುವುದು, ಯಾವುದೇ ಸಮಯದಲ್ಲಿ ಕರೆ ಬಂದ್ ಮಾಡುವುದು ಎಲ್ಲವೂ ಸದ್ಯಕ್ಕೆ ಲಭ್ಯವಿದೆ. ಆದರೆ, ಗ್ರೂಪ್ ಕರೆ, ಕರೆ ವರ್ಗಾವಣೆ, ಕರೆ ರೆಕಾರ್ಡಿಂಗ್ ಹಾಗೂ ಹಂಚಿಕೆ ಸಾಧ್ಯವಿಲ್ಲ, ಈ ಎಲ್ಲಾ ಸೌಲಭ್ಯಗಳನ್ನು ಶೀಘ್ರದಲ್ಲೇ ನೀಡುವ ಭರವಸೆಯನ್ನು ವಾಟ್ಸಾಪ್ ನೀಡಿದೆ.

English summary
How to make a voice/video call using WhatsApp desktop on Windows OS system. Currently the feature is only available for one-to-one calls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X