ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಧಾರ್ ಜೊತೆ ಭವಿಷ್ಯ ನಿಧಿ ಖಾತೆ ಲಿಂಕ್ ಮಾಡೋದು ಹೇಗೆ?

|
Google Oneindia Kannada News

ಪ್ರಾವಿಡೆಂಟ್ ಫಂಡ್ (ಪಿಎಫ್) ಖಾತೆಯನ್ನು ಹೊಂದಿರುವ ಚಂದಾದಾರರು ತಮ್ಮ ಖಾತೆಯ ಸಂಖ್ಯೆ(UAN) ಜೊತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಗಸ್ಟ್ 30 ರೊಳಗೆ ಈ ಜೋಡಣೆ ಮಾಡಬೇಕಾಗುತ್ತದೆ. ಇಲ್ಲದಿದ್ದರೆ, ಇಪಿಎಫ್‌ಒ ಸೌಲಭ್ಯಗಳಿಂದ ವಂಚಿತರಾಗಬೇಕಾಗುತ್ತದೆ. ಇಪಿಎಫ್‌ಒ ತನ್ನ ಚಂದಾದಾರರಿಗಾಗಿ ಪರಿಚಯಿಸಿರುವ ಆನ್‌ಲೈನ್ ಸೌಲಭ್ಯವನ್ನು ಬಳಸಿಕೊಂಡು ಅನೇಕ ಸೌಲಭ್ಯ ಪಡೆದುಕೊಳ್ಳಬಹುದು.

ಪಿಎಫ್ ಖಾತೆದಾರರು ತಮ್ಮ ಪಿಎಫ್‌ಗೆ ಸಂಬಂಧಿಸಿದ ನವೀಕರಣಗಳ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಪಡೆಯಬಹುದು. ಹೀಗಾಗಿ, ಪಿಎಫ್ ಅನ್ನು ಆಧಾರ್‌ಗೆ ಲಿಂಕ್ ಮಾಡುವುದು ಅಗತ್ಯವಾಗಿದೆ.

ಆಧಾರ್ ಜೊತೆ ಭವಿಷ್ಯ ನಿಧಿ ಖಾತೆ ಲಿಂಕ್ ಮಾಡುವುದರಿಂದ ಸಿಬ್ಬಂದಿ ಕಮ್ ರಿಟರ್ನ್(ಇಸಿಆರ್) ಚಲನ್ಸ್ ಹಾಗೂ ಇಪಿಎಫ್ ಖಾತೆಗೆ ಜಮೆ ಮಾಡುವ ಸೌಲಭ್ಯಗಳು ಲಭ್ಯವಾಗಲಿದೆ. ನಿಗದಿತ ಅವಧಿಯಲ್ಲಿ ಜೋಡಣೆಯಾಗದಿದ್ದರೆ ಈ ಸೌಲಭ್ಯಗಳು ಲಭ್ಯವಾಗುವುದಿಲ್ಲ. 2020ರ ಸಾಮಾಜಿಕ ಭದ್ರತಾ ನಿಯಾಮಾವಳಿ ಸೆಕ್ಷನ್ 142 ಅನ್ವಯ ಆಧಾರ್-ಯುಎಎನ್ ಜೋಡಣೆ ಅಗತ್ಯವಾಗಿದೆ.
ಸುಲಭ ಮಾರ್ಗದಿಂದ ಆಧಾರ್ ಜೊತೆ ಭವಿಷ್ಯ ನಿಧಿ ಖಾತೆ ಲಿಂಕ್ ಮಾಡುವ ವಿಧಾನ ಇಲ್ಲಿದೆ..

ಪಿಎಫ್ ಅನ್ನು ಆಧಾರ್‌ಗೆ ಲಿಂಕ್ ಮಾಡಲು ಇಲ್ಲಿದೆ ಸುಲಭ ಮಾರ್ಗಗಳು
* ಮೊದಲನೆಯದಾಗಿ, ಭವಿಷ್ಯನಿಧಿ ಚಂದಾದಾರರ ಸೇವಾ ಪೋರ್ಟಲ್ ಇಪಿಎಫ್‌ಒ ವೆಬ್‌ಸೈಟ್ www.epfindia.gov.in ಗೆ ಲಾಗ್ ಇನ್ ಆಗಬೇಕು.
* ಇದರ ನಂತರ ನೀವು ಆನ್‌ಲೈನ್ ಸೇವೆಗಳು >> ಇ-ಕೆವೈಸಿ ಪೋರ್ಟಲ್ >> ಲಿಂಕ್ ಯುಎಎನ್ ಆಧಾರದ ಮೇಲೆ ಕ್ಲಿಕ್ ಮಾಡಬೇಕು.
* ಇಲ್ಲಿಗೆ ಹೋಗುವ ಮೂಲಕ, ನಿಮ್ಮ ಯುಎಎನ್ ಸಂಖ್ಯೆ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಯುಎಎನ್ ಖಾತೆಯಿಂದ ಅಪ್‌ಲೋಡ್ ಮಾಡಬೇಕು.
* ಈಗ ನಿಮ್ಮ ಮೊಬೈಲ್ ಸಂಖ್ಯೆಯಲ್ಲಿ ನೀವು ಒಟಿಪಿ ಸಂಖ್ಯೆಯನ್ನು ಪಡೆಯುತ್ತೀರಿ. ಈಗ ಇಲ್ಲಿ ಒಟಿಪಿ ಸಂಖ್ಯೆಯನ್ನು ಭರ್ತಿ ಮಾಡಿದ ನಂತರ, ಕೆಳಗಿನ ಆಧಾರ್ ಪೆಟ್ಟಿಗೆಯಲ್ಲಿ ನಿಮ್ಮ 12 ಅಂಕೆ ಆಧಾರ್ ಸಂಖ್ಯೆಯನ್ನು ಭರ್ತಿ ಮಾಡಿ, ನಂತರ ಆ ಫಾರ್ಮ್ ಅನ್ನು ಸಲ್ಲಿಸಿ.
* ಈಗ ನೀವು ಪ್ರಸ್ತಾಪಿತ ಒಟಿಪಿ ಪರಿಶೀಲನೆ ಆಯ್ಕೆಯನ್ನು ಹೊಂದಿರುತ್ತೀರಿ. ದಯವಿಟ್ಟು ಅದರ ಮೇಲೆ ಕ್ಲಿಕ್ ಮಾಡಿ. ಈಗ ಮತ್ತೊಮ್ಮೆ, ನಿಮ್ಮ ಆಧಾರ್ ವಿವರಗಳನ್ನು ಪರಿಶೀಲಿಸಲು ನಿಮ್ಮ ಆಧಾರ್ ಲಿಂಕ್ ಮಾಡಿದ ಮೊಬೈಲ್ ಸಂಖ್ಯೆ ಅಥವಾ ಮೇಲ್‌ನಲ್ಲಿ ಒಟಿಪಿ ರಚಿಸಬೇಕು. ಪರಿಶೀಲನೆಯ ನಂತರ ನಿಮ್ಮ ಆಧಾರ್ ಅನ್ನು ಪಿಎಫ್‌ ಖಾತೆಗೆ ಲಿಂಕ್ ಮಾಡಲಾಗುತ್ತದೆ.

ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ

ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ

EPFO ಸದಸ್ಯರಿಗೆ ಎಂಬ ವಿಭಾಗಕ್ಕೆ ತೆರಳಿ ಯುಎಎನ್ ಆಧಾರ್ ಲಿಂಕ್ ಆಯ್ಕೆ ಮಾಡಿ.
ನೋಂದಾಯಿತ ಮೊಬೈಲ್ ಫೋನ್‌ಗೆ ಒಟಿಪಿ ಬರಲಿದ್ದು, ವೆರಿಫೈ ಮಾಡಬೇಕು.
ಒಮ್ಮೆ ದೃಢೀಕರಣವಾದ ಬಳಿಕ ನಿಮ್ಮ ಆಧಾರ್ ವಿವರಗಳನ್ನು ದಾಖಲಿಸಿ ಹಾಗೂ ವೆರಿಫಿಕೇಷನ್ ಕೋಡ್ ಆಯ್ಕೆ ಮಾಡಿಕೊಳ್ಳಿ, ಇಮೇಲ್ ಅಥವಾ ಮೊಬೈಲ್ ಒಟಿಪಿ ಮಾದರಿ ಆಯ್ಕೆ ಮಾಡಿಕೊಳ್ಳಬಹುದು.
ಯಾವುದಾದರೂ ಒಂದು ವಿಧಾನದ ಮೂಲಕ ಜೋಡಣೆಯನ್ನು ವೆರಿಫೈ ಮಾಡಬಹುದು.

ಆನ್‌ಲೈನ್‌ನಲ್ಲೇ ವರ್ಗಾವಣೆ ಸಾಧ್ಯ

ಆನ್‌ಲೈನ್‌ನಲ್ಲೇ ವರ್ಗಾವಣೆ ಸಾಧ್ಯ

ಉದ್ಯೋಗ ಬದಲಾಯಿಸುವವರೂ ಕೂಡಾ ಪಿಎಫ್ ನಂಬರ್ ಬದಲಾವಣೆಯಾದರೆ ಯುಎಎನ್ ನಂಬರ್ ಮೂಲಕ ಇಪಿಎಫ್ ವರ್ಗಾವಣೆ ಆನ್ ಲೈನ್ ನಲ್ಲೇ ಮಾಡಿಕೊಳ್ಳಬಹುದು. ಅದರೆ, ಇಪಿಎಫ್ ವರ್ಗಾವಣೆ ಹಾಗೂ ವಿಥ್ ಡ್ರಾ ಮಾಡಲು ಕೆಲ ಸಮಯ ಹಿಡಿಯುತ್ತದೆ. UAN ಸಂಖ್ಯೆ ಜತೆ EPFO ಚಂದಾದಾರರು ಒಟ್ಟು 10 ಖಾತೆಗಳನ್ನು ವಿಲೀನ ಮಾಡಲು ಅವಕಾಶ ನೀಡಲಾಗಿದೆ. 120ಕ್ಕೂ ಹೆಚ್ಚು EPFO ಕಚೇರಿಗಳಿಗೆ ಅತಿ ಶೀಘ್ರದಲ್ಲಿ ಈ ಸೌಲಭ್ಯ ಅಳವಡಿಸುವಂತೆ ನಿರ್ದೇಶನವನ್ನೂ ನೀಡಲಾಗಿದೆ.

ಆನ್ ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

ಆನ್ ಲೈನ್ ಮೂಲಕ ಚೆಕ್ ಮಾಡುವುದು ಹೇಗೆ?

* ಮೊದಲಿಗೆ http://uanmembers.epfoservices.in/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ.
* ವೆಬ್ ಪುಟದ ಬಲ ಬದಿಯಲ್ಲಿರುವ ಲಾಗ್ ಇನ್ ಕ್ಲಿಕ್ ಮಾಡಿ
* ನಿಮ್ಮ ಯುನಿವರ್ಸಲ್ ಅಕೌಂಟ್ ನಂಬರ್(ಯುಎಎನ್) ಸಲ್ಲಿಸಿ.
* ಮೊಬೈಲ್ ಸಂಖ್ಯೆ ದಾಖಲಿಸಿ.
* ರಾಜ್ಯ ಮತ್ತು ನಿಮ್ಮ ಕಚೇರಿ ಪ್ರದೇಶವನ್ನು ಸೂಚಿಸಿ.
* captcha ನಮೂದಿಸಿದ ಬಳಿಕ ನಿಮ್ಮ ನೋಂದಾಯಿತ ಮೊಬೈಲ್ ಫೋನಿಗೆ ಪಿನ್ ನಂಬರ್ ಬರಲಿದೆ.
* ಒಟಿಪಿ ದಾಖಲಿಸಿ ಪೂರ್ಣ ವಿವರ ಪಡೆಯಬಹುದು.

ವಿಡಿಯೋ ಮೂಲಕ ಮಾರ್ಗದರ್ಶಿ

ಮೊಬೈಲ್ ಮೂಲಕ ಚೆಕ್ ಮಾಡುವ ವಿಧಾನ ಇಪಿಎಫ್ ಒ ಈಗ ಎಸ್ಎಂಎಸ್ ಬ್ಯಾಲೆನ್ಸ್ ಚೆಕ್ಕಿಂಗ್ ವ್ಯವಸ್ಥೆ ನೀಡುತ್ತಿದೆ. ಯುಎಎನ್ ಹಾಗೂ ನೋಂದಾಯಿತ ಮೊಬೈಲ್ ಸಂಖ್ಯೆ ಇದ್ದರೆ ಬ್ಯಾಲೆನ್ಸ್ ವಿವರ ಪಡೆದುಕೊಳ್ಳಬಹುದು. ನೋಂದಾಯಿತ ಮೊಬೈಲ್ ಫೋನಿನಿಂದ ಹೀಗೆ ಟೈಪ್ ಮಾಡಿ EPFOHO UAN ENG ಈ ಸಂದೇಶವನ್ನು 7738299899 ಸಂಖ್ಯೆಗೆ ಎಸ್ಎಂಎಸ್ ಕಳಿಸಿ

ಗಮನಿಸಿ: ನಿಮ್ಮ ಉದ್ಯೋಗ ಸಂಸ್ಥೆಯಿಂದ ಆಧಾರ್, ಪ್ಯಾನ್ ಅಥವಾ ಬ್ಯಾಂಕ್ ಅಕೌಂಟ್ ಮಾಹಿತಿ ಡಿಜಿಟಲಿ ಅನುಮೋದನೆಯಾಗಿದ್ದರೆ ಮಾತ್ರ ಮಾಹಿತಿ ಸಿಗಲಿದೆ. ಹೆಚ್ಚಿನ ಮಾಹಿತಿಗೆ 1800118005 ಸಹಾಯವಾಣಿಗೆ ಕರೆ ಮಾಡಿ.

English summary
Here’s How to link Aadhaar Card with Provident Fund online Before August 30: Follow Step-by-step Guide Here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X