ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಲವೇ ನಿಮಿಷಗಳಲ್ಲಿ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

|
Google Oneindia Kannada News

ನವದೆಹಲಿ, ನವೆಂಬರ್ 05: ಬ್ಯಾಂಕಿಂಗ್ ಸಂಬಂಧಿತ ವಿವಿಧ ಸೇವೆ, ಸೌಲಭ್ಯಗಳನ್ನು ಪಡೆಯಲು ಅಗತ್ಯವಾಗಿ ಬೇಕಿರುವ Permanent Account Number(PAN) ಕಾರ್ಡ್ ಪಡೆಯುವುದು ಈಗ ಸುಲಭವಾಗಲಿದೆ.

ಆದಾಯ ತೆರಿಗೆ ಇಲಾಖೆಯು ಪ್ರಧಾನಿ ಮೋದಿ ಅವರ ಡಿಜಿಟಲ್ ಇಂಡಿಯಾ ಕಲ್ಪನೆಯನ್ನು ಹೆಚ್ಚೆಚ್ಚು ಅನುಷ್ಠಾನಗೊಳಿಸಲು ಡಿಜಿಟಲೀಕರಣಕ್ಕೆ ಒತ್ತು ನೀಡುತ್ತಿದೆ. ಹೀಗಾಗಿ, ಇನ್ಮುಂದೆ ಕೆಲವೇ ನಿಮಿಷಗಳಲ್ಲಿ ಪ್ಯಾನ್ ಕಾರ್ಡ್ ಗಳನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ. ಉಚಿತವಾಗಿ ಇ-ಪ್ಯಾನ್ ಕಾರ್ಡ್ ನೀಡುವ ಯೋಜನೆ ಮುಂದಿನ ಕೆಲವು ವಾರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಮೂಲಗಳು ಹೇಳಿವೆ.

ಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿಪ್ಯಾನ್ ಕಾರ್ಡ್ ಸರಿಯಾಗಿದೆಯೇ ಚೆಕ್ ಮಾಡಲು ಹೀಗೆ ಮಾಡಿ

ಈ ಸೌಲಭ್ಯದಲ್ಲಿ ಅರ್ಜಿ ಸಲ್ಲಿಸಲಿರುವ ವ್ಯಕ್ತಿಯ ವಿವರಗಳನ್ನು ಆಧಾರ್ ಮೂಲಕ ತೆಗೆದುಕೊಳ್ಳಲಾಗುವುದು. ಇದರಿಂದ ಪ್ಯಾನ್ ಕಾರ್ಡ್ ದಾರರ ವಿವರಗಳನ್ನು ಪರಿಶೀಲಿಸಲು ಸುಲಭವಾಗುತ್ತದೆ.

How to get Free e-PAN card instantly from Income Tax Department

ಇ-ಪ್ಯಾನ್ ಕಾರ್ಡ್ ಸೌಲಭ್ಯ ಸಂಪೂರ್ಣವಾಗಿ ಉಚಿತವಾಗಿದೆ. ಪ್ಯಾನ್ ಕಾರ್ಡ್ ಕಳೆದುಕೊಂಡವರು ಕೂಡಾ ಸುಲಭವಾಗಿ ಕೆಲ ನಿಮಿಷಗಳಲ್ಲಿ ಬದಲಿ ಪ್ಯಾನ್ ಕಾರ್ಡ್ ಪಡೆದುಕೊಳ್ಳಬಹುದು. ಹಾಲಿ ಪ್ಯಾನ್ ಕಾರ್ಡ್ ಹೊಂದಿರುವವರು ಹಾಗೂ ಹೊಸ ಪ್ಯಾನ್ ಕಾರ್ಡ್ ದಾರರು ಇ ಪ್ಯಾನ್ ಪಡೆದುಕೊಳ್ಳಬಹುದು

***
ಇ ಪ್ಯಾನ್ ಕಾರ್ಡ್ ವಿಶೇಷ ಹೇಗೆ?
* ಇ ಪ್ಯಾನ್ ಅರ್ಜಿಯಲ್ಲಿ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯ.
* ಆಧಾರ್ ಸಂಖ್ಯೆಗೆ ಜೋಡಿಸಿರುವ ಅಧಿಕೃತ ಫೋನ್ ನಂಬರ್ ಪರಿಶೀಲಿಸಲಾಗುವುದು
* ನಿಮ್ಮ ಅಧಿಕೃತ ಫೋನ್ ನಂಬರ್ ಗೆ ಒನ್ ಟೈಮ್ ಪಾಸ್ವರ್ಡ್ (ಒಟಿಪಿ) ಬರಲಿದೆ.
* ಯಾವುದೇ ಬೇರೆ ದಾಖಲೆ ಒದಗಿಸುವ ಅಗತ್ಯವಿಲ್ಲ.
* ಹೊಸ PAN ಸೃಷ್ಟಿಯಾಗುತ್ತಿದ್ದಂತೆ, ಡಿಜಿಟಲ್ ಸಹಿಯುಳ್ಳ ಇ-ಪ್ಯಾನ್ ವಿತರಿಸಲಾಗುವುದು
* ಇದು ಕ್ಯೂಆರ್ ಕೋಡ್ ಅನ್ನು ಹೊಂದಿರುತ್ತದೆ. ಇದರಲ್ಲಿ ಭೌಗೋಳಿಕ ಮಾಹಿತಿ, ಅರ್ಜಿದಾರರನ ಭಾವಚಿತ್ರ ಇರಲಿದೆ. ಎಲ್ಲಾ ಮಾಹಿತಿಯೂ encrypt ಆಗಿರುವುದರಿಂದ ಮಾಹಿತಿ ಸುರಕ್ಷವಾಗಿರಲಿದೆ.

ನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿನಿಮ್ಮ ಪ್ಯಾನ್, ಆಧಾರ್ ಲಿಂಕ್ ಆಗಿದೆಯೇ? ಪರೀಕ್ಷಿಸಲು ಹೀಗೆ ಮಾಡಿ

ಇ ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?
UTI-ITSL ಮೂಲಕ ಹೊಸ ಪ್ಯಾನ್ ಪಡೆಯಲು ಬಯಸುವವರು ಹಾಗೂ ಪ್ಯಾನ್ ಕಾರ್ಡಿನಲ್ಲಿ ಬದಲಾವಣೆ ಬಯಸುವವರು ಆನ್ ಲೈನ್ ನಲ್ಲಿ ಇ-ಪ್ಯಾನ್ ಕಾರ್ಡ್

* NSDL ಹಾಗೂ UTIITSL ಅಧಿಕೃತ ವೆಬ್ ತಾಣಕ್ಕೆ ಭೇಟಿ ನೀಡಿ
* ಡೌನ್ ಲೋಡ್ ಇ ಪ್ಯಾನ್ ಕಾರ್ಡ್ ಕ್ಲಿಕ್ ಮಾಡಿ
* ಚಾಲ್ತಿ ಪ್ಯಾನ್ ಬದಲಾವಣೆ ಬಯಸುವವರು PAN, ಆಧಾರ್, ಹುಟ್ಟಿದ ದಿನಾಂಕ. ಇತ್ಯಾದಿ ಪ್ರಮುಖ ಮಾಹಿತಿ ನೀಡಿ.
* ನಿಗದಿತ ಶುಲ್ಕವನ್ನು ಡೆಬಿಟ್/ ಕ್ರೆಡಿಟ್, ಡಿಡಿ ಅಥವಾ ನೆಟ್ ಬ್ಯಾಕಿಂಗ್ ಮೂಲಕ ಪಾವತಿಸಿ.
* 15 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಕಳಿಸಲಾಗುತ್ತದೆ.
* ಪರಿಶೀಲನೆ ನಂತರ ನಿಮ್ಮ ಪ್ಯಾನ್ ಕಾರ್ಡ್ ನಿಮ್ಮ ಅಧಿಕೃತ ವಿಳಾಸವನ್ನು ತಲುಪಲಿದೆ.

English summary
The Income Tax (I-T) department will soon be launching a facility to issue permanent account number (PAN) online, several reports have said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X