ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಗಾಡಿಯ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್

|
Google Oneindia Kannada News

ಬೆಂಗಳೂರು, ಮೇ 2: ನಿಮ್ಮ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ (ಎಫ್‌ಸಿ) ಅಥವಾ ಕ್ಷಮತಾ ಪ್ರಮಾಣಪತ್ರವನ್ನು ಮಾಡಿಸದಿದ್ದರೆ ಹತ್ತು ಸಾವಿರ ರೂ ವರೆಗೆ ದಂಡ ಕಟ್ಟಬೇಕಾದೀತು. ಅದರಲ್ಲೂ ಹಳೆಯ ವಾಹನಗಳಿಗಂತೂ ಎಫ್‌ಸಿ ಕಡ್ಡಾಯ. ಸುಸ್ಥಿತಿಯಲ್ಲಿಲ್ಲದ ವಾಹನಗಳಿಂದ ಪರಿಸರ ಮಾಲಿನ್ಯ ಹೆಚ್ಚಾಗುವುದನ್ನು ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸಾರಿಗೆ ಇಲಾಖೆ ಫಿಟ್ನೆಸ್ ವ್ಯವಸ್ಥೆ ಜಾರಿಗೊಳಿಸಿದೆ.

ಮೋಟಾರು ವಾಹನ ಕಾಯ್ದೆಯಲ್ಲಿರುವ ನಿಯಮಗಳ ಪ್ರಕಾರ ಒಂದು ವಾಹನಕ್ಕೆ ಫಿಟ್ನೆಸ್ ಪ್ರಮಾಣಪತ್ರ ಇದ್ದರೆ ಮಾತ್ರ ಆ ವಾಹನದ ನೊಂದಣಿಯು ಸಿಂಧುವೆನಿಸುತ್ತದೆ. ಇಲ್ಲದಿದ್ದರೆ ಕಾನೂನು ಪ್ರಕಾರ ದಂಡ ಕಟ್ಟಬೇಕಾಗುತ್ತದೆ. ಈ ಕ್ಷಮತಾ ಪ್ರಮಾಣಪತ್ರವನ್ನು ಮಾಡಿಸುವುದು ಹೇಗೆಂಬ ವಿವರ ಈ ಲೇಖನದಲ್ಲಿದೆ.

ದೆಹಲಿ: ಫಿಟ್ನೆಸ್ ಪ್ರಮಾಣಪತ್ರವಿಲ್ಲದ ವಾಹನ ಓಡಿಸಿದರೆ 10,000 ರೂ.ವರೆಗೆ ದಂಡ, ಜೈಲುದೆಹಲಿ: ಫಿಟ್ನೆಸ್ ಪ್ರಮಾಣಪತ್ರವಿಲ್ಲದ ವಾಹನ ಓಡಿಸಿದರೆ 10,000 ರೂ.ವರೆಗೆ ದಂಡ, ಜೈಲು

ಹೊಸದಾಗಿ ಎಫ್‌ಸಿ ಮಾಡಿಸಲು ಬೇಕಾದ ದಾಖಲೆಗಳು:
* ಫಾರ್ಮ್ 20
* ಇನ್ಷೂರೆನ್ಸ್ ಸರ್ಟಿಫಿಕೇಟ್
* ಮಾಲಿನ್ಯ ಪ್ರಮಾಣಪತ್ರ
* ವಾಣಿಜ್ಯ ವಾಹನಗಳಿಗೆ ಎಸ್‌ಟಿಎಯಿಂದ ಉದ್ದೇಶಿತ ಪತ್ರ (LOI- Letter of Intent)
* ತಾತ್ಕಾಲಿಕ ನೊಂದಣಿ (ಯಾವುದಾದರೂ ಇದ್ದರೆ)
* ಫಾರ್ಮ್ 22 (ವಾಹನ ತಯಾರಕರಿಂದ Roadworthy Certificate)
* ಶುಲ್ಕ ಹಣ

How to do Fitness Certificate for vehicle in Karnataka

ಆನ್‌ಲೈನ್‌ನಲ್ಲಿ ಎಫ್‌ಸಿಗೆ ಅರ್ಜಿ ಸಲ್ಲಿಸುವುದು ಹೀಗೆ:
* ಪರಿವಾಹನ್ ವೆಬ್‌ಸೈಟ್‌ಗೆ ಹೋಗಿ (ಲಿಂಕ್ ಇಲ್ಲಿದೆ)
* ಎಫ್‌ಸಿ ಮಾಡಿಸಬೇಕೆಂದಿರುವ ವಾಹನದ ನೊಂದಣಿ ಸಂಖ್ಯೆ ನಮೂದಿಸಿ.
* Proceed ಕ್ಲಿಕ್ ಮಾಡಿ
* Online Services ಕ್ಲಿಕ್ ಮಾಡಿ
* 'Application for Fitness Certificate' ಆಯ್ಕೆ ಮಾಡಿ
* ಚಾಸಿಸ್ ನಂಬರ್ ಮತ್ತು ನೊಂದಾಯಿತ ಮೊಬೈಲ್ ನಂಬರ್ ನಮೂದಿಸಿ.
* ಜನರೇಟ್ ಓಟಿಪಿ ಕ್ಲಿಕ್ ಮಾಡಿ.
* ಶೋ ಡೀಟೇಲ್ಸ್ ಬಟನ್ ಮೇಲೆ ಕ್ಲಿಕ್ ಮಾಡಿ
* ಈಗ ಇಲ್ಲಿ ಎಲ್ಲಾ ಅಗತ್ಯ ವಿವರಗಳು, ಇನ್ಷೂರೆನ್ಸ್ ವಿವರಗಳನ್ನ ತುಂಬಿಸಿ.
* ಎಲ್ಲಾ ಭರ್ತಿ ಆದ ಬಳಿಕ ಶುಲ್ಕ ಪಾವಿಸಲು ಪೇಮೆಂಟ್ ಬಟನ್ ಮೇಲೆ ಕ್ಲಿಕ್ ಮಾಡಿ.

ಬೆಂಗಳೂರಿನ ಆರ್ ಟಿಒ ಕಚೇರಿಯಿಂದ ವಾಯುಮಾಲಿನ್ಯ ಜಾಗೃತಿ ಸಪ್ತಾಹಬೆಂಗಳೂರಿನ ಆರ್ ಟಿಒ ಕಚೇರಿಯಿಂದ ವಾಯುಮಾಲಿನ್ಯ ಜಾಗೃತಿ ಸಪ್ತಾಹ

ಒಮ್ಮೆ ಎಫ್‌ಸಿ ಮಾಡಿಸಿದರೆ ಎಷ್ಟು ದಿನ ಸಿಂಧುವಾಗಿರುತ್ತದೆ:
ರಾಜ್ಯದಲ್ಲಿ ಖಾಸಗಿ ಮತ್ತು ವಾಣಿಜ್ಯ ವಾಹನಗಳಿಗೆ ಎಫ್‌ಸಿ ಅವಧಿಯಲ್ಲಿ ವ್ಯತ್ಯಾಸ ಇರುತ್ತದೆ. ಖಾಸಗಿ ವಾಹನವಾದರೆ ಕ್ಷಮತಾ ಪ್ರಮಾಣಪತ್ರ 15 ವರ್ಷಗಳವರೆಗೆ ವ್ಯಾಲಿಡ್ ಇರುತ್ತದೆ. ಅದಾದ ಬಳಿಕ ಪ್ರತೀ ಐದು ವರ್ಷಗಳಿಗೊಮ್ಮೆ ಎಫ್‌ಸಿ ನವೀಕರಣ (Renewal) ಮಾಡಿಸಬೇಕು. ವಾಣಿಜ್ಯ ವಾಹನವಾದರೆ ಎಫ್‌ಸಿ ಎರಡು ವರ್ಷ ಮಾತ್ರ ವ್ಯಾಲಿಡಿಟಿ ಹೊಂದಿರುತ್ತದೆ. ಆ ಬಳಿಕ ಪ್ರತೀ ವರ್ಷವೂ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸಬೇಕು.

ಫಿಟ್ನೆಸ್ ಸರ್ಟಿಫಿಕೇಟ್ ರಿನಿವಲ್ ಮಾಡಿಸುವುದು ಹೀಗೆ:
ಬೇಕಾದ ದಾಖಲೆಗಳು:
* ಫಾರ್ಮ್ 25
* ನೊಂದಣಿ ಪ್ರಮಾಣಪತ್ರ
* ರೋಡ್ ಟ್ಯಾಕ್ಸ್ ಕ್ಲಿಯರೆನ್ಸ್ ಪ್ರೂಫ್
* ಶುಲ್ಕ (25 ರೂ)

ಡೂಪ್ಲಿಕೇಟ್ ಫಿಟ್ನೆಸ್ ಸರ್ಟಿಫಿಕೇಟ್ ಮಾಡಿಸುವುದು ಹೀಗೆ:
ಒಂದು ವೇಳೆ ನಿಮ್ಮ ಫಿಟ್ನೆಸ್ ಸರ್ಟಿಫಿಕೇಟ್ ಕಳೆದುಹೋದಲ್ಲಿ, ಅಥವಾ ಹಾಳಾದಲ್ಲಿ ನಕಲಿ ಎಫ್‌ಸಿ ಮಾಡಿಸಲು ಅವಕಾಶ ಇದೆ. ಅದಕ್ಕೆ ಬೇಕಾದ ದಾಖಲೆಗಳು ಈ ಕೆಳಕಂಡಂತೆ ಇವೆ:
* ಖಾಲಿ ಬಿಳಿ ಹಾಳೆಯಲ್ಲಿ ಅರ್ಜಿ ಬರೆಯಬೇಕು. ಎಫ್‌ಸಿ ಯಾವಾಗ ನೀಡಲಾಗಿತ್ತು ಎಂಬುದನ್ನು ಇದರಲ್ಲಿ ಪ್ರಸ್ತಾಪಿಸಬೇಕು.
* ಅಕೌಂಟ್ ವಿಭಾಗದಿಂದ ಟ್ಯಾಕ್ಸ್ ಕ್ಲಿಯರೆನ್ಸ್ ರಿಪೋರ್ಟ್
* ಪೊಲೀಸ್ ರಿಪೋರ್ಟ್ (ಎನ್‌ಸಿಆರ್)
* ಟ್ರಾಫಿಕ್ ಪೊಲೀಸ್ ಮತ್ತು ಸಾರಿಗೆ ಇಲಾಖೆಯಿಂದ ಚಲನ್ ಕ್ಲಿಯರೆನ್ಸ್
* ಶುಲ್ಕ (120 ರೂ)
* ಕಳೆದಹೋದ ನಿಮ್ಮ ಫಿಟ್ನೆಸ್ ಸರ್ಟಿಫಿಕೇಟ್‌ನ ಫೋಟೋಕಾಪಿ ಇದ್ದರೆ ಲಗತ್ತಿಸಬಹುದು.

(ಒನ್ಇಂಡಿಯಾ ಸುದ್ದಿ)

English summary
Vehicles that are active should have fitness certificate. Here is some process to get fc in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X