ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣರು EWS Certificate ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ನವೆಂಬರ್ 18 : ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸಮುದಾಯದ ಜನರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಸದುಪಯೋಗ ಪಡೆಯುವುದು ಹೇಗೆ? ಎಂದು ಮಾಹಿತಿ ನೀಡಿದೆ.

ಮಂಡಳಿ ಜಾರಿಗೆ ತಂದಿರುವ ಯೋಜನೆಗಳ ಲಾಭ ಪಡೆಯಲು Economically Weaker Section Certificate ನೀಡಬೇಕು ಮತ್ತು ಅಗತ್ಯ ದಾಖಲೆಗಳನ್ನು ನೀಡಬೇಕಿದೆ.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳ ವಿವರಗಳು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿವಿಧ ಯೋಜನೆಗಳ ವಿವರಗಳು

ವಾರ್ಷಿಕ 8 ಲಕ್ಷ ರೂ. ರೂಪಾಯಿ ಒಳಗೆ ವಾರ್ಷಿಕ ಆದಾಯ ಇರುವ ಕುಟುಂಬದವರು EWS Certificate ಪಡೆಯಲು ಈ ಕೆಳಕಂಡ ದಾಖಲೆಗಳನ್ನು ಸಲ್ಲಿಸಬೇಕು. ಬಳಿಕ ವಿವಿಧ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ.

ಕೊಳೆಗೇರಿ ಮಕ್ಕಳ ಸೇವೆಯಲ್ಲಿ ಉಡುಪಿಯ ಬ್ರಾಹ್ಮಣ ಕುಟುಂಬ...ಕೊಳೆಗೇರಿ ಮಕ್ಕಳ ಸೇವೆಯಲ್ಲಿ ಉಡುಪಿಯ ಬ್ರಾಹ್ಮಣ ಕುಟುಂಬ...

How To Get Economically Weaker Section Certificate

ದಾಖಲೆಗಳು; ಆಧಾರ್ ಕಾರ್ಡ್‌ ಜೆರಾಕ್ಸ್, ರೇಷನ್ ಕಾರ್ಡ್ ಜೆರಾಕ್ಸ್, ಜಾತಿಯ ಬಗ್ಗೆ ಶಾಲಾ ವ್ಯಾಸಂಗ ದೃಢೀಕರಣ ಅಥವ ಟಿ. ಸಿ. ಪ್ರತಿ, ಅರ್ಜಿದಾರರ ಭಾವಚಿತ್ರ, ಪಾನ್ ಕಾರ್ಡ್ ಜೆರಾಕ್ಸ್, ಆದಾಯ ತೆರಿಗೆ ಪಾವತಿ ಮಾಡುತ್ತಿದ್ದಲ್ಲಿ ಫಾರಂ 16, ಆದಾಯ ತೆರಿಗೆ ಪಾವತಿ ಮಾಡಿದ ವಿವರ ದಾಖಲೆಗಳು ಇದ್ದಲ್ಲಿ ನೋಟರಿಯಿಂದ ದೃಢೀಕರಿಸಿದ ಪ್ರಮಾಣ ಪತ್ರವನ್ನು ಎ. ಜೆ. ಎಸ್‌. ಕೆ/ ನಾಡ ಕಚೇರಿಗೆ ಸಲ್ಲಿಸಿ EWS Certificate ಪಡೆಯಬಹುದಾಗಿದೆ.

ಮತ್ತೆ ಬ್ರಾಹ್ಮಣ ಮತಗಳನ್ನು ಸೆಳೆಯಲು ಮುಂದಾದ ಬಿಎಸ್ಪಿ ಮತ್ತೆ ಬ್ರಾಹ್ಮಣ ಮತಗಳನ್ನು ಸೆಳೆಯಲು ಮುಂದಾದ ಬಿಎಸ್ಪಿ

ಮಾನದಂಡಗಳು; 5 ಎಕರೆಗಳ ಸಾಗುವಳಿ ಜಮೀನು ಮತ್ತು ಅದಕ್ಕೂ ಮೇಲ್ಪಟ್ಟು ಹೊಂದಿರಬಾರದು. 1000 ಚದರ ಅಡಿಗಳು ಹಾಗೂ ಅದಕ್ಕೂ ಮೇಲ್ಪಟ್ಟ ವಾಸದ ಫ್ಲಾಟ್ ಹೊಂದಿರಬಾರದು.

ಅಧಿಸೂಚಿಸಿದ ಪುರಸಭೆ ಮುನ್ಸಿಪಾಲಿಟಿಗಳಲ್ಲಿ 100 ಚರದರ ಯಾರ್ಡ್ ಮತ್ತು ಅದಕ್ಕಿಂತ ಹೆಚ್ಚಿನ ನಿವಾಸದ ನಿವೇಶನ ಹೊಂದಿರಬಾರದು. ಅಧಿಸೂಚಿತ ಪುರಸಭೆ ಮುನ್ಸಿಪಾಲಿಟಿಗಳನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ 200 ಚದರ ಯಾರ್ಡ್ ಮತ್ತು ಅದಕ್ಕಿಂತ ಹೆಚ್ಚಿನ ವಾಸದ ನಿವೇಶನ ಹೊಂದಿರಬಾರದು.

English summary
Karnataka State Brahmin Development Board come up with various scheme to help community people. People should get economically weaker section income certificate to get help. How to get EWS certificate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X