ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

BMTC Bus Pass; ಮೊಬೈಲ್ ಮೂಲಕ ಪಾಸು ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರು, ಏಪ್ರಿಲ್ 08; ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಮೊಬೈಲ್ ಮೂಲಕ ಬಸ್ ಪಾಸುಗಳನ್ನು ಪಡೆಯುವ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿದೆ. ಇದರಿಂದಾಗಿ ಟಿಟಿಎಂಸಿ, ಬಸ್ ನಿಲ್ದಾಣದಲ್ಲಿ ಕಾದು ನಿಂತು ಪಾಸು ಪಡೆಯುವುದು ತಪ್ಪಲಿದೆ.

ಬಿಎಂಟಿಸಿ 'ಟುಮೋಕ್' ಜೊತೆ ಒಪ್ಪಂದ ಮಾಡಿಕೊಂಡಿದೆ. ಟುಮೋಕ್ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಅದರ ಮೂಲಕ ಎಲ್ಲಾ ಮಾದರಿ ಬಸ್‌ಗಳ ದಿನದ, ಮಾಸಿಕ ಪಾಸುಗಳನ್ನು ಪಡೆಯಬಹುದಾಗಿದೆ.

ಮೊಬೈಲ್ ಮೂಲಕವೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್ ಮೊಬೈಲ್ ಮೂಲಕವೇ ಸಿಗಲಿದೆ ಬಿಎಂಟಿಸಿ ಬಸ್ ಪಾಸ್

ಬೆಂಗಳೂರು ನಗರದ ಜೀವನಾಡಿ ಬಿಎಂಟಿಸಿ ಬಸ್. ಟಿಟಿಎಂಸಿ ನಿಲ್ದಾಣ, ಬಸ್ ನಿಲ್ದಾಣದಲ್ಲಿ ಕಾದು ನಿಂತು ಕಾಗದ ರೂಪ ಪಾಸುಗಳನ್ನು ಪಡೆಯಬೇಕಿತ್ತು. ಬಿಎಂಟಿಸಿ ಬಸ್‌ನಲ್ಲಿಯೇ ದಿನದ ಪಾಸುಗಳನ್ನು ನಿರ್ವಾಹಕರಿಂದ ಪಡೆಯಬಹುದದಾಗಿತ್ತು.

BMTC : ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಸಾಲ: ಕಟ್ಟಡವನ್ನೇ ಅಡಮಾನವಿಟ್ಟ ಬಿಎಂಟಿಸಿ BMTC : ಬ್ಯಾಂಕ್‌ಗಳಲ್ಲಿ ಕೋಟ್ಯಂತರ ರೂ. ಸಾಲ: ಕಟ್ಟಡವನ್ನೇ ಅಡಮಾನವಿಟ್ಟ ಬಿಎಂಟಿಸಿ

ಇನ್ನು ಮುಂದೆ ಬಿಎಂಟಿಸಿ ಬಸ್ ಪ್ರಯಾಣಿಕರು ಟುಮೋಕ್ ಮೊಬೈಲ್ ಅಪ್ಲಿಕೇಶನ್‌ ಮೂಲಕ ವೈಯಕ್ತಿಕ ಮಾಹಿತಿ ಮತ್ತು ಕೆವೈಸಿ ಅಪ್‌ಡೇಟ್ ಮಾಡಿ ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡಿ ಪಾಸು ಪಡೆಯಬಹುದಾಗಿದೆ. ಈ ಮೂಲಕ ಕ್ಯಾಶ್‌ ಲೆಸ್ ವಹಿವಾಟಿಗೆ ಸಹ ಉತ್ತೇಜನ ಸಿಗುತ್ತಿದೆ.

ಎರಡು ಬಿಎಂಟಿಸಿ ಬಸ್‌ಗಳಿಗೆ ಬೆಂಕಿ; ತನಿಖೆಗೆ ಸಮಿತಿ ರಚನೆಎರಡು ಬಿಎಂಟಿಸಿ ಬಸ್‌ಗಳಿಗೆ ಬೆಂಕಿ; ತನಿಖೆಗೆ ಸಮಿತಿ ರಚನೆ

ಡಿಜಿಟಲ್ ಬಸ್ ಪಾಸು ವ್ಯವಸ್ಥೆಯಿಂದಾಗಿ ನಿರ್ವಾಹಕರಿಗೆ ಕೆಲಸಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ. ಸದ್ಯ ಬಿಎಂಟಿಸಿಯ 6,500 ಬಸ್‌ಗಳು ಸಂಚಾರ ನಡೆಸುತ್ತಿವೆ. ನಿರ್ವಾಹಕರ ಕೆಲಸಕ್ಕೆ ತೊಂದರೆ ಉಂಟಾಗದಂತೆ ಡಿಜಿಟಲ್ ಪಾಸ್ ಸೌಲಭ್ಯವನ್ನು ಪರಿಚಯಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

3 ತಿಂಗಳು ಪ್ರಾಯೋಗಿಕ ಜಾರಿ

3 ತಿಂಗಳು ಪ್ರಾಯೋಗಿಕ ಜಾರಿ

ಬಿಎಂಟಿಸಿ 'ಟುಮೋಕ್' ಜೊತೆ ಮೊಬೈಲ್ ಮೂಲಕ ಪಾಸು ಪಡೆಯಲು ಒಪ್ಪಂದ ಮಾಡಿಕೊಂಡಿದೆ. ಇದರ ಅನ್ವಯ ಮೂರು ತಿಂಗಳು ಪ್ರಾಯೋಗಿಕವಾಗಿ ಈ ಯೋಜನೆ ಜಾರಿಯಲ್ಲಿರುತ್ತದೆ. ವೋಲ್ವೋ ಮತ್ತು 200 ಸಾಮಾನ್ಯ ಬಸ್‌ಗಳಲ್ಲಿ ಮೊದಲ ಹಂತದಲ್ಲಿ ಡಿಜಿಟಲ್ ಪಾಸು ಪರಿಚಯಿಸಲಾಗುತ್ತಿದೆ. ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ ಎಲ್ಲಾ ಬಸ್‌ಗಳಿಗೂ ಇದನ್ನು ವಿಸ್ತರಣೆ ಮಾಡಲಾಗುತ್ತದೆ ಎಂದು ಬಿಎಂಟಿಸಿ ಹೇಳಿದೆ.

ರಿಯಾಯಿತಿ ನೀಡುವುದಿಲ್ಲ

ರಿಯಾಯಿತಿ ನೀಡುವುದಿಲ್ಲ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವಿವಿಧ ಮಾದರಿ ಬಸ್‌ಪಾಸುಗಳನ್ನು ಪರಿಚಯಿಸಿದೆ. ಇವುಗಳಲ್ಲಿ ಹಲವು ಪಾಸುಗಳಿಗೆ ರಿಯಾಯಿತಿ ಇದೆ. ಆದರೆ ಡಿಜಿಟಲ್ ಪಾಸುಗಳನ್ನು ನೀಡುವಾಗ ಯಾವುದೇ ರಿಯಾಯಿತಿ ಸಿಗುವುದಿಲ್ಲ. ಯೋಜನೆ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ರಿಯಾಯಿತಿ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುತ್ತದೆ.

ಪಾಸುಗಳ ವ್ಯಾಲಿಡಿಟಿ ಮಾಹಿತಿ

ಪಾಸುಗಳ ವ್ಯಾಲಿಡಿಟಿ ಮಾಹಿತಿ

ಬಿಎಂಟಿಸಿ ಕಾಗದದ ಮಾಸಿಕ ಪಾಸು 1 ರಿಂದ 31ರ ತನಕ ವ್ಯಾಲಿಡಿಟಿ ಹೊಂದಿರುತ್ತದೆ. ಆದರೆ ಡಿಜಿಟಲ್ ಪಾಸುಗಳು ಪಾಸು ಖರೀದಿ ಮಾಡಿದ ದಿನದಿಂದ 30 ದಿನಗಳ ತನಕ ವ್ಯಾಲಿಡಿಟಿ ಹೊಂದಿರುತ್ತದೆ. ಇದರಿಂದಾಗಿ ತಿಂಗಳ ಮಧ್ಯದಲ್ಲಿ ಪಾಸು ಖರೀದಿ ಮಾಡಿದರೆ ಅವರಿಗೆ ಒಂದು ತಿಂಗಳ ವ್ಯಾಲಿಡಿಟಿ ದೊರೆಯಲಿದೆ.

ಡಿಜಿಟಲ್‌ ಪಾಸು ಮೂಲಕ ನಗದು ರಹಿತ ಸಂಚಾರ ವ್ಯವಸ್ಥೆ, ಚಿಲ್ಲರೆ ಸಮಸ್ಯೆಗೆ ಸಹ ಮುಕ್ತಿ ಸಿಗಲಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ. ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾಗುವ ನಿರೀಕ್ಷೆಯಲ್ಲಿ ಅಧಿಕಾರಿಗಳಿದ್ದಾರೆ.

Recommended Video

Ravindra Jadeja ಹಂಚಿಕೊಂಡ ವಿಶೇಷ ವಿಡಿಯೋ ಫುಲ್ ವೈರಲ್ | Oneindia Kannada
ಪಾಸು ಪಡೆಯುವುದು ಹೇಗೆ?

ಪಾಸು ಪಡೆಯುವುದು ಹೇಗೆ?

ಡಿಜಿಟಲ್ ಪಾಸು ಪಡೆಯುವವರು ಮೊಬೈಲ್‌ಗೆ Tummoc ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಮೊಬೈಲ್ ಸಂಖ್ಯೆ, ಹೆಸರು, ವಯಸ್ಸು ನಮೂದು ಮಾಡಬೇಕು. ಸರ್ಕಾರಿ ಗುರುತಿನ ಚೀಟಿ ಸಂಖ್ಯೆ ಸೇರಿಸಬೇಕು. ಇತ್ತೀಚಿನ ಫೋಟೋ ಸೇರಿಸಬೇಕು. ಬಳಿಕ ಪಾಸ್ ಮೊತ್ತವನ್ನು ಆಯ್ಕೆ ಮಾಡಿಕೊಂಡು ಫೋನ್ ಪೇ, ಗೂಗಲ್ ಪೇ, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ ಮೂಲಕ ಹಣ ಪಾವತಿ ಮಾಡಬಹುದಾಗಿದೆ.

ಮೊಬೈಲ್ ಮೂಲಕ ಡಿಜಿಟಲ್ ಪಾಸು ಪಡೆದವರು ಬಸ್ ಹತ್ತುವಾಗ ನಿರ್ವಾಹಕರಿಗೆ ನೀಡಲಾದ ಕ್ಯೂ ಆರ್ ಕೋಡ್‌ಗೆ ಸ್ಕ್ಯಾನ್ ಮಾಡಬೇಕು. ಇದಕ್ಕಾಗಿ Tummoc ನಿರ್ವಾಹಕರಿಗೆ ಬಾಡಿಗೆ ಆಧಾರದಲ್ಲಿ ಯಂತ್ರಗಳನ್ನು ನೀಡಲಿದೆ.

English summary
Now people can get Bangalore Metropolitan Transport Corporation (BMTC) daily, weekly and monthly pass via mobile application. BMTC announced a partnership with Tummoc. How to get pass here are the steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X