ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲ್ ಅಪ್ಲಿಕೇಷನ್ ಮೂಲಕ ಎನ್‌ಪಿಆರ್ ನೋಂದಣಿ ಹೇಗೆ?

|
Google Oneindia Kannada News

ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್‌ಪಿಆರ್‌) 2020ರ ಏಪ್ರಿಲ್‌ನಿಂದ ಆರಂಭವಾಗಲಿದೆ.

ಜನಸಂಖ್ಯಾ ನೋಂದಣಿಯನ್ನು ಮೊಬೈಲ್ ಅಪ್ಲಿಕೇಷನ್ ಮೂಲಕವೂ ಮಾಡಬಹುದಾಗಿದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

- ಮೊದಲು ಪ್ಲೇ ಸ್ಟೋರ್‌ನಲ್ಲಿ 'ಎನ್‌ಪಿಆರ್ 2021' ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಆಂಡ್ರಾಯ್ಡ್ ಮತ್ತು ಐಒಎಸ್‌ ಆಪರೇಟಿಂಗ್ ಸಿಸ್ಟಂಗಳಲ್ಲಿ ಲಭ್ಯವಿದೆ.
- 'ಯೂಸರ್‌ ಐಡಿ' 'ಪಾಸ್‌ವರ್ಡ್' ಕ್ರಿಯೇಟ್ ಮಾಡಿ ಲಾಗ್‌ಇನ್ ಆಗಬೇಕು.
-'EB' ಅಲೋಟೆಡ್ ಡೌನ್‌ಲೋಡ್: ಡೌನ್‌ಲೋಡ್ ಮಾಡುವ ಮುನ್ನ 'EB' ಕೆಂಪು ಬಣ್ಣದಲ್ಲಿರುತ್ತದೆ. ಡೌನ್‌ಲೋಡ್ ಮಾಡಿದ ಬಳಿಕ ಹಸಿರು ಬಣ್ಣಕ್ಕೆ ತಿರುಗುತ್ತದೆ. ಡೌನ್‌ಲೋಡ್ ಆಗಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ.
-ಲೊಕೇಷನ್ ಪರ್ಟಿಕ್ಯುಲರ್ಸ್: ಇದರಲ್ಲಿ ರಾಜ್ಯ, ಜಿಲ್ಲೆ, ಉಪ ಜಿಲ್ಲೆ, ನಗರ, ವಾರ್ಡ್, ಬ್ಲಾಕ್, ಪಿನ್‌ಕೋಡ್‌ ದಾಖಲಿಸಬೇಕು.
-ಪ್ರೊಗ್ರೆಸ್: ಈ ಸ್ಕ್ರೀನ್‌ನಲ್ಲಿ 'ಹೌಸ್‌ಹೋಲ್ಡ್' ಮತ್ತು 'ಮೆಂಬರ್ ರೆಕಾರ್ಡ್' ಕಾಣಬಹುದಾಗಿದೆ. ಜೊತೆಗೆ ಹಿಂದಿನ ಸ್ಕ್ರೀನ್‌ಗೆ ಹೋಗಬೇಕಿದ್ದರೆ ಬ್ಯಾಕ್ ಬಟನ್ ಪ್ರೆಸ್ ಮಾಡಬೇಕು.
-ಅಪ್‌ಲೋಡ್ ಡಾಟಾ: ಡಾಟಾ ಕಂಪ್ಲೀಟ್ ಆದ ಬಳಿಕ ಅಪ್‌ಲೋಡ್ ಇಮೇಜ್‌ ಕ್ಲಿಕ್ ಮಾಡಬೇಕು.
-ಇನ್‌ಕಂಪ್ಲೀಟ್ ಹೌಸ್‌ಹೋಲ್ಡ್‌: ಒಂದೊಮ್ಮೆ ಹೌಸ್‌ಹೋಲ್ಡ್ (ಮನೆ, ವಿಳಾಸ) ಬಗ್ಗೆ ಮಾಹಿತಿ ಅಪೂರ್ಣವಿದ್ದರೆ, ಅಪ್ಲಿಕೇಷನ್‌ ಸ್ಕ್ರೀನ್‌ ಅಲ್ಲಿ ಹೌಸ್‌ಹೋಲ್ಡ್ ಅಪ್‌ಡೇಟ್ ಪೆಂಡಿಂಗ್ ಎಂದು ಕಾಣಿಸುತ್ತದೆ.
- ಹೋಮ್‌ಸ್ಕ್ರೀನ್‌: ಲೊಕೇಷನ್ ಪರ್ಟಿಕಲ್ಯುಲರ್ ಮತ್ತು ಇನ್‌ ಕಂಪ್ಲೀಟ್ ಹೌಸ್‌ಹೋಲ್ಡ್ ಎಂದು ಎರಡು ಆಯ್ಕೆಗಳು ನಿಮಗೆ ಕಾಣಿಸುತ್ತದೆ. ಅದರ ಕೆಳಗೆ ಹೆಸರು, ಮೊಬೈಲ್, ಹುಟ್ಟಿದ ದಿನಾಂಕ, ಹೆಡ್(ಮನೆಯ ಮುಖ್ಯಸ್ಥ), ಆಧಾರ್ ಎನ್ನುವ ನಾಲ್ಕು ಆಯ್ಕೆಗಳಿರುತ್ತದೆ. ಒಂದಾದ ಮೇಲೊಂದು ಆಯ್ಕೆಯನ್ನು ಭರ್ತಿ ಮಾಡಬೇಕು.
- ಕೆಂಪು, ಹಳದಿ, ಹಸಿರು ಬಣ್ಣ ಏನನ್ನು ಸೂಚಿಸುತ್ತದೆ: ಒಂದೊಮ್ಮೆ ಹೌಸ್‌ಹೋಲ್ಡ್ ಆಯ್ಕೆ ಡೌನ್‌ಲೋಡ್ ಕಂಪ್ಲೀಟ್‌ ಆಗಿರದಿದ್ದರೆ ಕೆಂಪು ಬಣ್ಣ, ಹೌಸ್‌ಹೋಲ್ಡ್ ಪ್ರಕ್ರಿಯೆ ಆರಂಭವಾಗಿದ್ದು ಮುಕ್ತಾಯವಾಗಿರದಿದ್ದರೆ ಹಳದಿ ಬಣ್ಣ, ಹೌಸ್‌ಹೋಲ್ಡ್/ಮೆಂಬರ್ ಪೂರ್ಣಗೊಂಡಿದ್ದರೆ ಹಸಿರು ಬಣ್ಣದಲ್ಲಿರುತ್ತದೆ.

How To Enrol Your Name In NPR Through Mobile Application

-ಸರ್ಚ್ ಆಪರೇಷನ್: ಹೆಸರನ್ನು ಸರ್ಚ್ ಮಾಡಬಹುದು.

-ಸರ್ಚ್ ಆಪರೇಷನ್: ಬಳಕೆದಾರರು ತಮ್ಮ ಹೆಸರನ್ನು ಸರ್ಚ್ ಮಾಡಬಹುದು.
-ಸ್ಕಿಪ್ ಹೌಸ್‌ಹೋಲ್ಡ್ ಆಪರೇಷನ್: ಹೌಸ್‌ ಹೋಲ್ಡ್ ಆಪರೇಷನ್ ಆಯ್ಕೆ ಬೇಡವೆಂದರೆ ಅದನ್ನು ಸ್ಕಿಪ್ ಮಾಡಬಹುದು. ಆದರೆ ಸ್ಕಿಪ್ ಮಾಡಲು ಕಾರಣಗಳನ್ನು ನೀಡಬೇಕಾಗುತ್ತದೆ. ಕಾರಣಗಳಲ್ಲಿ ಲಾಕ್ಡ್‌ ಹೌಸ್‌, ಹೌಸ್‌ಹೋಲ್ಡ್ ಮೈಗ್ರೇಟೆಡ್(ವಲಸೆ), ನಾಟ್ ಅವೈಲೇಬಲ್(ವಿಳಾಸ ಬದಲಾವಣೆ) ಮೂರು ಆಯ್ಕೆಗಳಿರುತ್ತದೆ. ಅದರಲ್ಲಿ ಒಂದನ್ನು ಕ್ಲಿಕ್ ಮಾಡಬೇಕಾಗುತ್ತದೆ.
-ವ್ಯೂ ಮೆಂಬರ್: ಇದರಲ್ಲಿ ಮನೆಯಲ್ಲಿರುವ ಸದಸ್ಯರ ಬಗ್ಗೆ ಮಾಹಿತಿಯನ್ನು ಅಪ್‌ಲೋಡ್‌ ಮಾಡಬೇಕು.
-ಅಪ್‌ಡೇಟ್ ಮೆಂಬರ್ ಇನ್‌ಫರ್ಮೇಷನ್: ಮನೆಯ ಸದಸ್ಯರ ಕುರಿತು ಮಾಹಿತಿಯನ್ನು ಅದರಲ್ಲಿ ಭರ್ತಿ ಮಾಡಬೇಕು. ಅದರಲ್ಲಿ ಅವರ ಹೆಸರು, ಹುಟ್ಟಿದ ದಿನಾಂಕ, ಲಿಂಗ, ರಾಜ್ಯ ಸೇರಿದಂತೆ ಹಲವು ಮಾಹಿತಿಯನ್ನು ಭರ್ತಿ ಮಾಡಬೇಕು.
-ಆಡ್ ನ್ಯೂ ಹೌಸ್‌ಹೋಲ್ಡ್: ನಿಮ್ಮ ಹೊಸ ಮನೆಯ ಸಂಖ್ಯೆ ಮತ್ತು ವಿಳಾಸವನ್ನು ಇಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ.
-ವ್ಯೂ-ಎಡಿಟ್ ಆಪರೇಷನ್: ಒಂದೊಮ್ಮೆ ನೀವು ನೀಡಿದ ಮಾಹಿತಿಯನ್ನು ತಿದ್ದಬೇಕೆನಿಸಿದರೆ ಎಡಿಟ್ ಆಪ್ಷನ್ ಕ್ಲಿಕ್ ಮಾಡಿ, ಮಾಹಿತಿಯನ್ನು ತಿದ್ದಿ ಬಳಿಕ ಅಪ್‌ಲೋಡ್ ಮಾಡಬಹುದಾಗಿದೆ.
-ಸಿಗ್ನೇಚರ್ ಆಫ್ ರೆಸ್ಪಾಂಡೆಂಟ್: ಮನೆಯ ಮೊದಲ ಸದಸ್ಯರ ಬಗ್ಗೆ ಮಾಹಿತಿ ನೀಡುತ್ತಿದ್ದರೆ, ಒಂದೊಮ್ಮೆ ಅವರು ಆ ಮನೆಯನ್ನು ಬಿಟ್ಟು ಬೇರೆಡೆಗೆ ನೆಲೆಸಿದ್ದರೂ ಕೂಡ ಅವರ ಇ-ಹಸ್ತಾಕ್ಷರ ಬೇಕಾಗುತ್ತದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ ವೇಳೆ ನಿಮ್ಮ ಮನೆಗೆ ಬರುವ ಸರ್ಕಾರಿ ಅಧಿಕಾರಿಗಳು ನಿಮ್ಮ ಮನೆಯಲ್ಲಿ ಇರುವ ನಿವಾಸಿಗಳ ಬಗ್ಗೆ ಒಂದಿಷ್ಟು ಪ್ರಾಥಮಿಕ ಮಾಹಿತಿ ಕಲೆ ಹಾಕುತ್ತಾರೆ. ಈ ಕೆಳಕಂಡ ಮಾಹಿತಿಗಳನ್ನು ನೀವು ಕೊಡಬೇಕಿದೆ.
ವ್ಯಕ್ತಿಯ ಹೆಸರು
ಮನೆಯ ಮುಖ್ಯಸ್ಥನೊಂದಿಗಿನ ಸಂಬಂಧ
ತಂದೆಯ ಹೆಸರು
ತಾಯಿಯ ಹೆಸರು
ಪತಿ/ಪತ್ನಿಯ ಹೆಸರು (ಮದುವೆಯಾಗಿದ್ದರೆ ಮಾತ್ರ)
ಲಿಂಗ
ಹುಟ್ಟಿದ ದಿನಾಂಕ
ವೈವಾಹಿಕ ಸ್ಥಿತಿಗತಿ
ಹುಟ್ಟೂರು
ರಾಷ್ಟ್ರೀಯತೆ
ಇದೀಗ ನೀವು ನೆಲೆಸಿರುವ ಸ್ಥಳದ ವಿಳಾಸ
ಈ ವಿಳಾಸದಲ್ಲಿ ನೀವು ನೆಲೆಸಿರುವ ಅವಧಿ
ಖಾಯಂ ವಿಳಾಸ
ವೃತ್ತಿ
ಶಿಕ್ಷಣ
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಬಗ್ಗೆ ನೀವು ತಿಳಿಯಲೇಬೇಕಾದ ಅತಿಮುಖ್ಯ ಸಂಗತಿಗಳು
-ಎನ್‌ಪಿಆರ್‌ ಮಾಹಿತಿ ಸಂಗ್ರಹ ಕಾರ್ಯ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಡೆಯುತ್ತದೆ
-ಎನ್‌ಪಿಆರ್ ಅಡಿ ಮನೆಮನೆಯಲ್ಲೂ ಜನಗಣತಿ ನಡೆಯುತ್ತೆ
-ಪೌರತ್ವ ಕಾಯ್ದೆ 1955 ಹಾಗೂ ಪೌರತ್ವ ನೋಂದಣಿ ನಿಯಮ 2003ರ ಅನುಸಾರ ಈ ಕಾರ್ಯ ನಡೆಯುತ್ತೆ
-1 ಏಪ್ರಿಲ್ 2020ರಿಂದ 30 ಸೆಪ್ಟೆಂಬರ್ 2020ರವರೆಗೂ ಈ ಜನಗಣತಿ ಕಾರ್ಯ ನಡೆಯುತ್ತೆ
- ದೇಶದಲ್ಲಿರುವ ಪ್ರತಿಯೊಬ್ಬ 'ಸಾಮಾನ್ಯ ನಿವಾಸಿ'ಯ ಮಾಹಿತಿ ಸಂಗ್ರಹಿಸೋದು ಎನ್‌ಪಿಆರ್‌ ಉದ್ದೇಶ
-ದೇಶದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಭೌಗೋಳಿಕ ನೆಲೆಸುವಿಕೆ ಜೊತೆಯಲ್ಲೇ ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸುವುದು ಇದರ ಉದ್ದೇಶ
-2010ರಲ್ಲಿ ಮನಮೋಹನ್ ಸಿಂಗ್ ಸರ್ಕಾರ ಜಾರಿಗೆ ತಂದಿದ್ದ ಯೋಜನೆ
-ಯಾವುದೇ ವ್ಯಕ್ತಿ, ಯಾವುದೇ ಸ್ಥಳದಲ್ಲಿ ಕಳೆದ 6 ತಿಂಗಳಿನಿಂದ ಇದ್ದರೆ ಅಥವಾ ಅದೇ ಸ್ಥಳದಲ್ಲಿ ಮುಂದಿನ 6 ತಿಂಗಳ ಕಾಲ ಇರುವ ನಿರ್ಧಾರ ಮಾಡಿದ್ದರೆ ಅವರೆಲ್ಲರೂ ಎನ್‌ಪಿಆರ್‌ನಲ್ಲಿ ಭಾಗವಹಿಸಬೇಕು
- ಕಳೆದ ಆಗಸ್ಟ್‌ನಲ್ಲೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ
-ದೇಶದ ಎಲ್ಲ ರಾಜ್ಯಗಳೂ, ಕೇಂದ್ರಾಡಳಿತ ಪ್ರದೇಶಗಳಲ್ಲೂ ಜನಗಣತಿ ನಡೆಯಲಿದೆ. ಆದ್ರೆ, ಅಸ್ಸಾಂ ರಾಜ್ಯವನ್ನು ಹೊರತುಪಡಿಸಲಾಗಿದೆ.

English summary
Central Government is cleared the path for National Population Register( NPR). This time people can registered their name through mobile Application Also.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X