ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಗ್ನಲ್ App ಸ್ಮಾರ್ಟ್‌ಫೋನ್‌ನಲ್ಲಿ ಡೌನ್ಲೋಡ್, ಬಳಕೆ ಹೇಗೆ?

|
Google Oneindia Kannada News

ಅತ್ಯಂತ ಜನಪ್ರಿಯ ಮೆಸೆಜಿಂಗ್ ಅಪ್ಲಿಕೇಷನ್ ವಾಟ್ಸಾಪ್ ತನ್ನ ಬಳಕೆದಾರರಿಗೆ ಇತ್ತೀಚೆಗೆ ಹಲವು ಹೊಸ ಸೌಲಭ್ಯಗಳು, ಕಠಿಣ ಭದ್ರತಾ ನಿಯಮಗಳನ್ನು ಹೊರ ತಂದಿದೆ. ಆದರೆ, ಹೊಸ ಅಪ್ಡೇಟ್ ನಿಯಮಗಳಿಗೆ ಒಪ್ಪಿಕೊಂಡರೆ ನಿಮ್ಮ ಚಾಟ್ ಕಿಟಕಿಯಲ್ಲಿ ವಾಟ್ಸಾಪ್ ಸಂಸ್ಥೆ ಇಣುಕಿ ನೋಡಬಹುದು ಎಂಬ ಸುದ್ದಿ ಹಬ್ಬಿದೆ. ಹೀಗಾಗಿ, ವಾಟ್ಸಾಪ್ ತೊರೆದು ಟೆಲಿಗ್ರಾಮ್, ಸಿಗ್ನಲ್ ಆಪ್ ಗಳತ್ತ ಜಂಪ್ ಮಾಡುವವರ ಸಂಖ್ಯೆ ಒಮ್ಮೆಗೆ ಏರಿಕೆಯಾಗತೊಡಗಿದೆ.

'ವಾಟ್ಸಾಪ್‌ನಂತಹ ಮಾಧ್ಯಮವನ್ನು ನಿರಂತರವಾಗಿ ಪ್ರಚೋದನಾಕಾರಿ ವಿಚಾರಗಳನ್ನು ಹರಿಬಿಡಲು ದುರ್ಬಳಕೆ ಮಾಡಲಾಗುತ್ತಿದೆ' ಎಂದು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಈ ಹಿಂದೆ ಹೇಳಿದ್ದನ್ನು ಸ್ಮರಿಸಬಹುದು. ಆದರೆ, ವಾಟ್ಸಾಪ್ ಈಗ ಬಳಕೆದಾರರ ಗೌಪ್ಯ ಮಾಹಿತಿ, ಚಾಟ್ ಹಿಸ್ಟರಿಯನ್ನು ಮೂಲ ಸಂಸ್ಥೆ ಫೇಸ್ಬುಕ್ ಜೊತೆಗೆ ಹಂಚಿಕೊಳ್ಳಲು ಮುಂದಾಗಿದೆ. ಇದರಿಂದ ತಪ್ಪಿಸಿಕೊಳ್ಳಲು ಬಳಕೆದಾರರಿಗೆ ಬೇರೆ ಮಾರ್ಗವಿಲ್ಲದ ಕಾರಣ, ವಾಟ್ಸಾಪ್ ತೊರೆಯುವವರ ಸಂಖ್ಯೆ ಅಧಿಕವಾಗಿದೆ.

 ವಾಟ್ಸಾಪ್ ಬದಲಿ 'ಸಿಗ್ನಲ್ ಆ್ಯಪ್‌'ಗೆ ಹೆಚ್ಚಿದ ಡಿಮ್ಯಾಂಡ್: ಅತಿ ಹೆಚ್ಚು ಡೌನ್‌ಲೋಡ್‌ ವಾಟ್ಸಾಪ್ ಬದಲಿ 'ಸಿಗ್ನಲ್ ಆ್ಯಪ್‌'ಗೆ ಹೆಚ್ಚಿದ ಡಿಮ್ಯಾಂಡ್: ಅತಿ ಹೆಚ್ಚು ಡೌನ್‌ಲೋಡ್‌

ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ''ಸಿಗ್ನಲ್''

ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ''ಸಿಗ್ನಲ್''

ವರ್ಷಗಳ ಹಿಂದೆ ಜನಪ್ರಿಯ ಸಾಮಾಜಿಕ ಜಾಲ ತಾಣ ಫೇಸ್ಬುಕ್ ಡಿಲೀಟ್ ಮಾಡುವಂತೆ ವಾಟ್ಸಾಪ್ ಸಹ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಟ್ವೀಟ್ ಮಾಡಿದ್ದು ಭಾರಿ ಸಂಚಲನ ಮೂಡಿಸಿತ್ತು. ಹಣದಾಸೆಯಾಗಿ ವಾಟ್ಸಾಪ್ ನಲ್ಲಿ ಜಾಹೀರಾತು ತರುವುದನ್ನು ವಿರೋಧಿಸಿ ಮಾರ್ಕ್ ಝುಕರ್ಬರ್ಗ್ ಜೊತೆ ಕಿತ್ತಾಡಿಕೊಂಡು ಸಂಸ್ಥೆ ತೊರೆದ ಆಕ್ಟನ್ ಅವರೇ ಸಿಗ್ನಲ್ ಆಪ್ ರೂಪಿಸಿದವರು.

2009ರಲ್ಲಿ ಯಾಹೂ ಮಾಜಿ ಉದ್ಯೋಗಿ ಜಾನ್ ಕೌಮ್ ಅವರೊಡನೆ ವಾಟ್ಸಾಪ್‌ ಪ್ರಾರಂಭಿಸಿದರು. 2014ರಲ್ಲಿ 19 ಶತಕೋಟಿ ಡಾಲರ್ ನಗದು ಮತ್ತು ಸ್ಟಾಕ್ ಗಳ ಮೂಲಕ ವಾಟ್ಸಾಪ್‌ನ್ನು ಫೇಸ್‌ಬುಕ್‌ ತನ್ನ ಸ್ವಾದೀನಪಡಿಸಿಕೊಂಡಿತ್ತು. ನಂತರ ಆಕ್ಟನ್ ಅವರು ಹುದ್ದೆ ತೊರೆದು, ಸಿಗ್ನಲ್ ಫೌಂಡೇಶನ್ ಎಂಬ ಕಂಪನಿ ಆರಂಭಿಸಿದರು.

ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?ವಾಟ್ಸಪ್ ಮೆಸೇಜ್ ಹ್ಯಾಕ್ ಹೇಗೆ? ಸೇಫ್ ಮಾಡೋದು ಹೇಗೆ?

ಸೈಬರ್ ಸೆಕ್ಯುರಿಟಿ ಸಂಸ್ಥೆಗಳಿಂದ ಉತ್ತಮ ರೇಟಿಂಗ್

ಸೈಬರ್ ಸೆಕ್ಯುರಿಟಿ ಸಂಸ್ಥೆಗಳಿಂದ ಉತ್ತಮ ರೇಟಿಂಗ್

ವಿಶ್ವದೆಲ್ಲೆಡೆ ಪತ್ರಕರ್ತರು, ಸೈಬರ್ ಸೆಕ್ಯುರಿಟಿ ಸಂಸ್ಥೆಗಳಿಂದ ಉತ್ತಮ ರೇಟಿಂಗ್ ಪಡೆದುಕೊಂಡಿರುವ ಸಿಗ್ನಲ್ ಈಗ ಟ್ರೆಂಡಿಂಗ್ ಆಪ್ ಆಗಿದೆ. ಸಿಗ್ನಲ್ ಆಪ್ ವಿಂಡೋಸ್ ಹಾಗೂ ಐಒಎಸ್ ಎರಡರಲ್ಲೂ ಲಭ್ಯ. ವಾಟ್ಸಾಪ್ ಇನ್ನೂ ಐಪ್ಯಾಡ್ ನಲ್ಲಿ ಸ್ಥಾಪಿಸುವುದು ಕಷ್ಟ. ವಿಂಡೋಸ್, ಲಿನಾಕ್ಸ್, ಮ್ಯಾಕ್ ಡೆಸ್ಕ್ ಟಾಪ್, ವಿವಿಧ ಒಎಸ್ ಹೊಂದಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಲ್ಲಿ ಸಿಗ್ನಲ್ ಸುಲಭವಾಗಿ ಇನ್ಸ್ಟಾಲ್ ಮಾಡಬಹುದು. ಹಾಗೂ ಡೆಸ್ಕ್ ಟಾಪ್ ಹಾಗೂ ಸ್ಮಾರ್ಟ್ ಫೋನ್ ಲಿಂಕ್ ಮಾಡಬಹುದು.

ಸ್ಮಾರ್ಟ್ ಫೋನಿನಲ್ಲಿ ಸ್ಥಾಪಿಸುವುದು ಹೇಗೆ?

ಸ್ಮಾರ್ಟ್ ಫೋನಿನಲ್ಲಿ ಸ್ಥಾಪಿಸುವುದು ಹೇಗೆ?

ಗೂಗಲ್ ಪ್ಲೇಸ್ಟೋರಿನಲ್ಲಿ signal ಎಂದು ಸರ್ಚ್ ಮಾಡಿದರೆ ನೀಲಿ ಬಣ್ಣದ ಲೋಗೋ ಇರುವ ಆಪ್ ಕಾಣಬಹುದು. ಇದೇ ರೀತಿ ಆಪಲ್ ಆಪ್ ಸ್ಟೋರಿನಲ್ಲೂ install ಮಾಡಿಕೊಳ್ಳಿ.

ಸ್ಮಾರ್ಟ್ ಫೋನಿನಲ್ಲಿ ಸೆಟ್ ಅಪ್ ಮಾಡುವ ವಿಧಾನ: ಸಿಗ್ನಲ್ ಆಪ್ ಓಪನ್ ಮಾಡುತ್ತಿದ್ದಂತೆ ಎರಡು ಆಯ್ಕೆ ಸಿಗುತ್ತದೆ. ಹೊಸದಾಗಿ ಆಪ್ ಬಳಸುತ್ತಿದ್ದರೆ Continue ಬಟನ್ ಒತ್ತಿ, ಈ ಮೊದಲೇ ಬಳಸುತ್ತಿದ್ದರೆ ಹಳೆ ಬ್ಯಾಕಪ್ ಪುನಃ ಸ್ಥಾಪಿಸಲು Restore Backup ಆಯ್ಕೆ ಮಾಡಿ, ಈ ಸಂದರ್ಭದಲ್ಲಿ ಕೇಳುವ ಅನುಮತಿ ನೀಡಿ

ಫೋನ್ ನಂಬರ್ ಹಾಕಿ ವೇರಿಫೈ ಮಾಡಿ

ಫೋನ್ ನಂಬರ್ ಹಾಕಿ ವೇರಿಫೈ ಮಾಡಿ

ನಿಮ್ಮ ಫೋನ್ ನಂಬರ್ ಹಾಕಿ Next ಬಟನ್ ಒತ್ತುತ್ತಿದ್ದಂತೆ ನಿಮ್ಮ ಫೋನಿಗೆ ಒಟಿಪಿ ಸಂದೇಶ ಬರುತ್ತದೆ. ಇದನ್ನು ನಮೂದಿಸಿ, ನಂತರ ನಿಮ್ಮ ಫ್ರೊಫೈಲ್ ಫೋಟೋ, ಹೆಸರು ದಾಖಲಿಸಿ.

ನಂತರ ನಿಮ್ಮ ಕಾಂಟ್ಯಾಕ್ಟ್ ನಲ್ಲಿರುವವರಿಗೆ ಸಂದೇಶ ಕಳಿಸಬಹುದು, ಫೋಟೋ, ವಿಡಿಯೋ ಕಳಿಸಬಹುದು, ಆಡಿಯೋ, ವಿಡಿಯೋ ಕಾಲ್ ಮಾಡಬಹುದು. ಡಿಫಾಲ್ಟ್ ಎಸ್ಎಂಎಸ್ ಆಗಿ ಸಿಗ್ನಲ್ ಬಳಸಲು ಅನುಮತಿ ಕೋರಲಾಗುತ್ತದೆ.

ವಾಟ್ಸಪ್: ಬ್ಲಾಕ್ ಮಾಡಿದ್ರೆ UnBlock ಮಾಡ್ಕೊಳ್ಳೊದು ಹೇಗೆ?ವಾಟ್ಸಪ್: ಬ್ಲಾಕ್ ಮಾಡಿದ್ರೆ UnBlock ಮಾಡ್ಕೊಳ್ಳೊದು ಹೇಗೆ?

ಡೆವಲಪರ್ ಆಗಿದ್ದರೆ ನೀವು ಕೈಜೋಡಿಸಿ

ಡೆವಲಪರ್ ಆಗಿದ್ದರೆ ನೀವು ಕೈಜೋಡಿಸಿ

ಸಿಗ್ನಲ್ ಆಪ್ ವಿನ್ಯಾಸ, ಅಭಿವೃದ್ಧಿ ಎಲ್ಲವೂ ಕ್ರೌಡ್ ಫಂಡಿಂಗ್ ಮೂಲಕ ಆಗಿದ್ದು, ಈ ಆಪ್ ಸೋರ್ಸ್ ಕೋಡ್ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಡೆವಲಪರ್ ಗಳು ಸಿಗ್ನಲ್ ಸಂಸ್ಥೆ ಜೊತೆ ಕೈಜೋಡಿಸಿ ಇನ್ನಷ್ಟು ಅಭಿವೃದ್ಧಿ ಕಾರ್ಯದಲ್ಲಿ ತೊಡಗಿಕೊಳ್ಳಬಹುದು. ಪಾರದರ್ಶಕತೆ, ಸುರಕ್ಷತೆಯೇ ಆದ್ಯತೆ ಎಂದು ಬ್ರಿಯಾನ್ ಹೇಳಿದ್ದಾರೆ. ಡಿಸೆಂಬರ್ 17, 2020ರಂದು ಗೂಗಲ್ ಪ್ಲೇಸ್ಟೋರಿನಲ್ಲಿ ಕಾಣಿಸಿಕೊಂಡ ಸಿಗ್ನಲ್ ಇಲ್ಲಿ ತನಕ 10,000,000+ ಡೌನ್ಲೋಡ್ ಕಂಡಿದೆ. ಆಂಡ್ರಾಯ್ಡ್ 4.4 ಪ್ಲಸ್ ಒಎಸ್ ಇರುವ ಸ್ಮಾರ್ಟ್ ಫೋನ್ ಗಳಲ್ಲಿ ಬಳಸಬಹುದು. ಇತ್ತೀಚೆಗೆ ಗ್ರೂಪ್ ಚಾಟಿಂಗ್, ವಿಡಿಯೋ ಕಾಲಿಂಗ್ ಸೌಲಭ್ಯವನ್ನು ಸೇರಿಸಲಾಗಿದೆ.

English summary
Here are steps How to download, install using Signal App which is most popular instant messaging platforms now.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X