ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್‌ ಮೂಲಕ ಕೋವಿಡ್ ಪ್ರಮಾಣ ಪತ್ರ ಪಡೆಯುವುದು ಹೇಗೆ?

|
Google Oneindia Kannada News

ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ಎಲ್ಲರೂ ಲಸಿಕೆ ಪಡೆಯಿರಿ ಎಂದು ಸರ್ಕಾರ ಪ್ರಚಾರವನ್ನು ನಡೆಸುತ್ತಿದೆ. ಮೊದಲ ಮತ್ತು ಎರಡನೇ ಡೋಸ್ ಲಸಿಕೆಯನ್ನು ಪಡೆದವರು ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು. ಪ್ರವಾಸ ಮತ್ತು ಇತರ ಸಂದರ್ಭದಲ್ಲಿ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರವನ್ನು ತೋರಿಸಬೇಕು. ಅಂತರ ರಾಜ್ಯಗಳ ಗಡಿಯಲ್ಲಿ ವ್ಯಾಕ್ಸಿನ್ ಪಡೆದ ಪ್ರಮಾಣಪತ್ರವನ್ನು ತೋರಿಬೇಕು.

ಆರೋಗ್ಯ ಸೇತು, ಕೋವಿನ್ ಸೇರಿದಂತೆ ವಿವಿಧ ವೆಬ್‌ಸೈಟ್‌ಗಳ ಮೂಲಕ ಕೋವಿಡ್ ಲಸಿಕೆ ಪಡೆಯಲು ಸ್ಲಾಟ್ ಬುಕ್ ಮಾಡಬಹುದು. ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರವನ್ನು ಸಹ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕರ್ನಾಟಕದಲ್ಲಿ ಇನ್ನೂ 4.2 ಕೋಟಿ ವಯಸ್ಕರಿಗೆ ಸಂಪೂರ್ಣ ಲಸಿಕೆ ನೀಡಬೇಕಿದೆಕರ್ನಾಟಕದಲ್ಲಿ ಇನ್ನೂ 4.2 ಕೋಟಿ ವಯಸ್ಕರಿಗೆ ಸಂಪೂರ್ಣ ಲಸಿಕೆ ನೀಡಬೇಕಿದೆ

ಕೋವಿಡ್ ಪರಿಸ್ಥಿತಿಯನ್ನು ನೋಡಿದರೆ ಮುಂದಿನ ದಿನಗಳಲ್ಲಿ ಆಧಾರ್ ಕಾರ್ಡ್‌ನಷ್ಟೇ ಮಹತ್ವವನ್ನು ಕೋವಿಡ್ ವ್ಯಾಕ್ಸಿನ್ ಪಡೆದ ಪ್ರಮಾಣ ಪತ್ರ ಹೊಂದಿರುತ್ತದೆ. ಸುಲಭವಾಗಿ ಲಸಿಕೆ ಪ್ರಮಾಣ ಪತ್ರವನ್ನು ಜನರು ಡೌನ್‌ಲೋಡ್‌ ಮಾಡಿಕೊಂಡು ಮೊಬೈಲ್‌ನಲ್ಲಿ ಇಟ್ಟುಕೊಳ್ಳಬಹುದು. ಅಗತ್ಯವಿದ್ದಾಗ ಅದನ್ನು ತೋರಿಸಬೇಕು.

ಕೋವಿಡ್‌ನಿಂದ ಸಾವು; 1 ಲಕ್ಷ ರೂ. ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಹೇಗೆ? ಕೋವಿಡ್‌ನಿಂದ ಸಾವು; 1 ಲಕ್ಷ ರೂ. ಪರಿಹಾರಕ್ಕೆ ಅರ್ಜಿ ಸಲ್ಲಿಕೆ ಹೇಗೆ?

How To Download Covid Vaccine Certificate On Whatsapp

ಕೇಂದ್ರ ಸರ್ಕಾರ ಕೋವಿಡ್ ವ್ಯಾಕ್ಸಿನ್ ಪ್ರಮಾಣ ಪತ್ರವನ್ನು ಪಡೆಯುವ ಪ್ರಕ್ರಿಯೆಗಳನ್ನು ಮತ್ತಷ್ಟು ಸರಳಗೊಳಿಸಿದೆ. ಈಗ ಜನರು ವಾಟ್ಸಪ್ ಮೂಲಕವೂ ಸುಲಭವಾಗಿ ವಾಕ್ಸಿನ್ ಪ್ರಮಾಣ ಪತ್ರವನ್ನು ಪಡೆಯಬೇಕಿದೆ. ಇದರಿಂದಾಗಿ ಅಂಗೈನಲ್ಲಿಯೇ ಪ್ರಮಾಣ ಪತ್ರ ಸಿಗಲಿದೆ.

How to; ಅಂಚೆ ಕಚೇರಿ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವುದು ಹೇಗೆ?How to; ಅಂಚೆ ಕಚೇರಿ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವುದು ಹೇಗೆ?

MyGovIndia ಕೋವಿಡ್ ಹೆಲ್ಪ್‌ ಡೆಸ್ಕ್‌ ವಾಟ್ಸಪ್ ಚಾಟ್‌ ಬಾಕ್ಸ್‌ ಅನ್ನು ಆರಂಭಿಸಿದೆ. ಈ ಕುರಿತು ಆರೋಗ್ಯ ಸಚಿವಾಲಯ ಸಹ ಟ್ವೀಟ್ ಮಾಡಿದೆ. ಒಂದೇ ಸಂಖ್ಯೆಯಲ್ಲಿ ಅನೇಕ ಬಳಕೆದಾರರು ಕೋವಿಡ್ ವ್ಯಾಕ್ಸಿನ್ ಪಡೆಯಲು ನೋಂದಣಿ ಮಾಡಿಸಿದ್ದರೆ ವಾಟ್ಸಪ್ ಆ ಪಟ್ಟಿಯನ್ನು ನೀಡಲಿದೆ. ಅದರಲ್ಲಿ ಬೇಕಾದ ಹೆಸರನ್ನು ಆಯ್ಕೆ ಮಾಡಿಕೊಂಡು ಅವರ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಕೋವಿಡ್ ಪ್ರಮಾಣ ಪತ್ರವನ್ನು ಹೇಗೆ ವಾಟ್ಸಪ್ ಮೂಲಕ ಪಡೆಯಬಹುದು? ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಜನರು ಸುಲಭವಾದ 10 ಹಂತಗಳನ್ನು ಅನುಸರಿಸುವ ಮೂಲಕ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಯಾವ ನಂಬರ್‌?; ವಾಟ್ಸಪ್ ಮೂಲಕ ಜನರು ಕೋವಿಡ್ ಲಸಿಕೆ ಪ್ರಮಾಣ ಪತ್ರವನ್ನು ಪಡೆಯಲು +91 9013151515 ನಂಬರ್‌ ಸೇವ್ ಮಾಡಿಕೊಳ್ಳಬೇಕು. ನಂತರ ಚಾಟ್ ವಿಂಡೋವನ್ನು ಓಪನ್ ಮಾಡಿ. ಮೇಸೇಜ್ ಕಳಿಸುವಲ್ಲಿ ಡೌನ್‌ಲೋಡ್ ಪ್ರಮಾಣ ಪತ್ರ ಎಂದು ಟೈಪ್ ಮಾಡಿ. ಸಂದೇಶ ಕಳಿಸಿದಾಗ ನಿಮ್ಮ ಮೊಬೈಲ್‌ಗೆ ಓಟಿಪಿ ಬರುತ್ತದೆ. ವಾಟ್ಸಪ್‌ ಚಾಟ್‌ನಲ್ಲಿ ಓಪಿಟಿಯನ್ನು ಭರ್ತಿ ಮಾಡಿ.

ಒಂದಕ್ಕಿಂತ ಹೆಚ್ಚು ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಸಹ ಅವಕಾಶವಿದೆ. ಆಗ ನೀವು ಯಾರ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳುತ್ತೀರಿ ಎಂಬುದನ್ನು ಸಹ ಆಯ್ಕೆ ಮಾಡಲು ಅವಕಾಶವಿದೆ.

ನೀವು ಯಾರ ಪ್ರಮಾಣ ಪತ್ರ ಅಗತ್ಯವಿದೆ ಎಂಬುದನ್ನು ಆಯ್ಕೆ ಮಾಡಿ ಟೈಪ್ ಮಾಡಿ. ಆಗ ನಿಮ್ಮ ಚಾಟ್‌ಬಾಕ್ಸ್‌ಗೆ ಕೋವಿಡ್ ಪ್ರಮಾಣ ಪತ್ರ ಬರುತ್ತದೆ. ಅದನ್ನು ನೀವು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬಹುದು ಅಥವ ಮೊಬೈಲ್‌ನಲ್ಲಿಯೇ ಸೇವ್ ಮಾಡಿಕೊಳ್ಳಬಹುದು.

ಕೋವಿಡ್ ಪ್ರಮಾಣ ಪತ್ರಗಳು ನಿಮ್ಮ ಆಧಾರ್ ಕಾರ್ಡ್‌ ನಂಬರ್, ವಯಸ್ಸು, ಮೊಬೈನ್ ನಂಬರ್ ಮುಂತಾದ ಸೂಕ್ಷ್ಮ ಮಾಹಿತಿಗಳನ್ನು ಒಳಗೊಂಡಿರುತ್ತದೆ. ಆದ್ದರಿಂದ ಕೋವಿಡ್ ಪ್ರಮಾಣ ಅಪರಿಚಿತ ವ್ಯಕ್ತಿಗಳ ಜೊತೆ ಹಂಚಿಕೊಳ್ಳಬೇಡಿ.

ವಾಟ್ಸಪ್ ಹೊರತುಪಡಿಸಿ ಕೋವಿನ್ ವೆಬ್‌ಸೈಟ್, ಮೊಬೈಲ್ ಅಪ್ಲಿಕೇಶನ್‌ ಮತ್ತು ಆರೋಗ್ಯ ಸೇತು ವೆಬ್‌ಸೈಟ್, ಅಪ್ಲಿಕೇಶನ್ ಮೂಲಕ ಪಡೆದುಕೊಳ್ಳಬಹುದಾಗಿದೆ. ನೀವು ಮೊದಲ ಡೋಸ್ ವ್ಯಾಕ್ಸಿನ್ ಪಡೆದಿದ್ದರೆ ಮುಂದಿನ ವ್ಯಾಕ್ಸಿನ್ ಯಾವಾಗ ಪಡೆಯಬೇಕು? ಎಂಬುದನ್ನು ಸಹ ಪ್ರಮಾಣ ಪತ್ರ ಒಳಗೊಂಡಿರುತ್ತದೆ.

English summary
Now you can download Covid vaccine certificate on whatsapp. How to download, here are the steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X