ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದುವೆ/ವಿಚ್ಛೇದನ ಬಳಿಕ ಪಾಸ್‌ಪೋರ್ಟ್ ಬದಲಾವಣೆ ಹೇಗೆ?

|
Google Oneindia Kannada News

ಕೇಂದ್ರ ಸರ್ಕಾರ, ವಿದೇಶಾಂಗ ಸಚಿವಾಲಯ ನಿರ್ವಹಣೆಯ ಅಧಿಕೃತ ವೆಬ್ ತಾಣದ ಮೂಲಕ ಸರಳ ವಿಧಾನದ ಮೂಲಕ ಹೊಸ ಪಾಸ್ ಪೋರ್ಟ್‌ಗೆ ಅರ್ಜಿ ಹಾಕಬಹುದು ಹಾಗೂ ಪಾಸ್‌ಪೋರ್ಟ್ ನವೀಕರಣ ಕೂಡಾ ಸಾಧ್ಯವಿದೆ. ಭಾರತದಲ್ಲಿ ಬಹುತೇಕ ಎಲ್ಲಾ ಮಹಿಳೆಯರು ಮದುವೆ ಬಳಿಕ ತಮ್ಮ ಸರ್ ನೇಮ್ ಬದಲಾಯಿಸಿಕೊಳ್ಳುವುದು ವಾಡಿಕೆ.

ಒಂದು ವೇಳೆ ಅಧಿಕೃತ ಹೆಸರನ್ನು ಬಳಸುವುದನ್ನೇ ಮುಂದುವರೆಸಿದರೆ ಪಾಸ್ ಪೋರ್ಟ್ ನಲ್ಲೂ ಬದಲಾವಣೆ ಅಗತ್ಯವಿರುವುದಿಲ್ಲ ಆದರೆ, ವಿಳಾಸ ದೃಢೀಕರಣ, ಐಡೆಂಟೆಟಿ ಗುರುತಿಗೆ ಆಧಾರವಾಗಿ ಪರಿಗಣಿಸುವ ಪಾಸ್‌ಪೋರ್ಟ್ ನಲ್ಲಿ ಈ ಹಿಂದೆ ನೀಡಿದ ಹೆಸರಿಗೆ ಬದಲು ಹೊಸ ಸರ್ ನೇಮ್ ಬಳಸುತ್ತಿದ್ದರೆ, ಹೊಸದಾಗಿ ಪಾಸ್‌ಪೋರ್ಟ್ ಪಡೆದುಕೊಳ್ಳಬೇಕಾಗುತ್ತದೆ.

ಪಾಸ್‌ಪೋರ್ಟ್ ಸೇವಾ ವೆಬ್ ತಾಣದಲ್ಲಿರುವ ಸೂಚನೆ, ನಿಬಂಧನೆಗಳನ್ನು ಓದಿಕೊಂಡು (http://www.passportindia.gov.in/AppOnlineProject/pdf/ApplicationformInstructionBooklet-V3.0.pdf) ನಂತರ ಹೆಸರು ಬದಲಾವಣೆಗಾಗಿ ಅರ್ಜಿ ಹಾಕಬಹುದು. ಅಲ್ಪ ಸ್ವಲ್ಪ ಬದಲಾವಣೆ, ಸರ್ ನೇಮ್ ಬದಲಾವಣೆ ಏನೇ ಇದ್ದರೂ ಅರ್ಜಿ ಸಲ್ಲಿಸುವುದು ಒಳ್ಳೆಯದು.

ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ನಂತರ ಹೊಸ ಲಾಗ್ ಇನ್ ಐಡಿ ಹಾಗೂ ಪಾಸ್‌ವರ್ಡ್ ಮೂಲಕ ಲಾಗಿನ್ ಆಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಸುದ್ದಿ ಕೊಸರು: 2020ರ ವೇಳೆ ಭಾರತವು ಸೂಚ್ಯಂಕದಲ್ಲಿ ತನ್ನ ಎರಡು ಸ್ಥಾನವನ್ನು ಕಳೆದುಕೊಂಡಿದೆ. ಮೌರಿಟಾನಿಯಾ ಮತ್ತು ತಜಕಿಸ್ತಾನ ದೇಶಗಳು ಕೂಡ ಭಾರತದೊಂದಿಗೆ 84ನೇ ಶ್ರೇಯಾಂಕವನ್ನು ಹಂಚಿಕೊಂಡಿದೆ.ಭಾರತಕ್ಕಿಂದಲೂ ಚೀನಾ ಪ್ರಭಾವಶಾಲಿ ಪಾಸ್‌ಪೋರ್ಟ್ ಹೊಂದಿದೆ. ಚೀನಾ ಈ ಪಟ್ಟಿಯಲ್ಲಿ 71ನೇ ಸ್ಥಾನದಲ್ಲಿದೆ.

ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌

ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌

* ಪಾಸ್‌ಪೋರ್ಟ್ ಸೇವಾ ಆನ್‌ಲೈನ್ ಪೋರ್ಟಲ್‌ನ ಈ ಲಿಂಕ್ ಕ್ಲಿಕ್ ಮಾಡಿ

* ನೋಂದಣಿ ಅರ್ಜಿಯನ್ನು ತುಂಬಿ, ನಿಮ್ಮ ಪಾಸ್ ಪೋರ್ಟ್ ಕಚೇರಿ ಆಯ್ಕೆ ಮಾಡಿಕೊಳ್ಳಿ (ಉದಾ: ಬೆಂಗಳೂರು ಅಥವಾ ನಿಮ್ಮೂರಿನ ಸಮೀಪದ ಸೇವಾ ಕೇಂದ್ರ)
* ನಿಮ್ಮ ಪೂರ್ಣ ಹೆಸರು ನಮೂದಿಸಿ (ಮೊದಲ ಹೆಸರು+ ಕೊನೆ ಹೆಸರು; ಉದಾ: ಸ್ನೇಹಾ ಭೀಮಪ್ಪ)

[ಸೂಚನೆ ಹೆಸರಿನ ಮುಂದೆ Dr, Col, ಇತ್ಯಾದಿ ಬಳಸಬೇಡಿ]

* ಸರ್ ನೇಮ್ ನಮೂದಿಸಿ [ಉದಾ: ಸಣ್ಣಮನಿ]
* ಹುಟ್ಟಿದ ದಿನಾಂಕ, ತಿಂಗಳು, ವರ್ಷ ಆಯ್ಕೆ ಮಾಡಿಕೊಳ್ಳಿ
* ನಿಮ್ಮ ಚಾಲ್ತಿಯಲ್ಲಿರುವ ಇಮೇಲ್ ಐಡಿ ನೀಡಿ
* ಮೇಲ್ಕಂಡ ಇಮೇಲ್ ಐಡಿಗೆ ಲಾಗಿನ್ ವಿವರ ಕಳಿಸಲಾಗುತ್ತದೆ. ಬೇರೆ ಇಮೇಲ್ ಐಡಿ ನೀಡಲು ಕೂಡಾ ಆಯ್ಕೆ ನೀಡಲಾಗಿದೆ.
* ನಿಮ್ಮ ಇಮೇಲ್ ಗೆ ಬಂದಿರುವ ಲಾಗಿನ್ ವಿವರಗಳನ್ನು ಪಡೆದುಕೊಂಡು ಪುನಃ ಇದೇ ಪುಟಕ್ಕೆ ಬನ್ನಿ
* ಲಾಗ್ ಐಡಿ, ಪಾಸ್ ವರ್ಡ್ ಹಾಕಿ, ಸುಳಿವು ಪ್ರಶ್ನೆ, ಉತ್ತರ ಆಯ್ಕೆ ಮಾಡಿ, captcha ಹಾಕಿ ನೋಂದಣಿ ಮಾಡಿಕೊಳ್ಳಿ.

Re-issue of Passport ಆಯ್ಕೆ ಮಾಡಿಕೊಳ್ಳಿ

Re-issue of Passport ಆಯ್ಕೆ ಮಾಡಿಕೊಳ್ಳಿ

* ನೋಂದಣಿಯಾದ ಮೇಲೆ ಪಾಸ್ ಪೋರ್ಟ್ ಸೇವಾ ಆನ್ ಲೈನ್ ಪೋರ್ಟಲ್ ಗೆ ಬಂದು ನೋಂದಾಯಿಸಿದ ಲಾಗಿನ್ ಐಡಿ ಬಳಸಿ, ಲಾಗಿನ್ ಆಗಿ.

* Apply for Re-issue of Passport ಆಯ್ಕೆ ಮಾಡಿಕೊಳ್ಳಿ.

* ವಿವರಗಳನ್ನು ತುಂಬಿ, ಸಾಮಾನ್ಯ ಅರ್ಜಿ ಅಥವಾ ತತ್ಕಾಲ್ ಆಯ್ಕೆ ಮಾಡಿಕೊಳ್ಳಿ.

* ಅರ್ಜಿದಾರರು ವಯಸ್ಕರೇ ಅಥವಾ ಅಪ್ರಾಪ್ತರೇ ತಿಳಿಸಿ
* ಉದ್ಯೋಗ: ಸರ್ಕಾರಿ, ನಿವೃತ್ತ ಹಾಗೂ ಇತರೆ ಯಾವುದಾದರೂ ಆಯ್ಕೆ ಮಾಡಿಕೊಂಡ ಮೇಲೆ ಕೆಳಗೆ ನೀಡಿರುವ ದಾಖಲೆ ಪಟ್ಟಿಯನ್ನು ಪರಿಶೀಲಿಸಿ

* ನಿಮ್ಮ ವಿಳಾಸ(ಪಾಸ್ ಪೋರ್ಟ್ ನಲ್ಲಿ ನಮೂದಿಸಿರುವ) ಬದಲಾಗಿದ್ದರೆ ತಿಳಿಸಿ

* Pay and Schedule Appointment ಕ್ಲಿಕ್ ಮಾಡಿ ಸಂದರ್ಶನದ ಸಮಯ ನಿಗದಿ ಮಾಡಿಕೊಳ್ಳಿ.

ಡೌನ್ ಲೋಡ್ ಇ ಫಾರ್ಮ್ ಕ್ಲಿಕ್

ಡೌನ್ ಲೋಡ್ ಇ ಫಾರ್ಮ್ ಕ್ಲಿಕ್

* ಪಾಸ್ ಪೋರ್ಟ್ ಸೇವಾ ಆನ್ ಲೈನ್ ಪೋರ್ಟಲ್ ಮುಖ್ಯಪುಟದಲ್ಲಿ ಡೌನ್ ಲೋಡ್ ಇ ಫಾರ್ಮ್ ಕ್ಲಿಕ್ ಮಾಡಿ
* ಇ ಅರ್ಜಿ ಭರ್ತಿ ಮಾಡಿ ಸೇವ್ ಮಾಡಿಕೊಳ್ಳಿ, XML ಫೈಲ್ ಸಿಗಲಿದೆ.

* ನೋಂದಣಿಯಾದ ಮೇಲೆ ಪಾಸ್ ಪೋರ್ಟ್ ಸೇವಾ ಆನ್ ಲೈನ್ ಪೋರ್ಟಲ್ ಗೆ ಬಂದು ನೋಂದಾಯಿಸಿದ ಲಾಗಿನ್ ಐಡಿ ಬಳಸಿ, ಲಾಗಿನ್ ಆಗಿ.
* XML ಫೈಲ್ ಅಪ್ಲೋಡ್ ಮಾಡಿ

ಸಂದರ್ಶನಕ್ಕೆ ತೆರಳುವ ಮುನ್ನ ಯಾವ ಯಾವ ದಾಖಲೆಗಳು ಬೇಕಾಗುತ್ತದೆ ಎಂಬುದನ್ನು ನೋಟ್ ಮಾಡಿಕೊಳ್ಳಿ.. ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ

* ಅರ್ಜಿ ರಿಫರೆನ್ಸ್ ಸಂಖ್ಯೆ(ARN) ಗುರುತು ಹಾಕಿಕೊಳ್ಳಿ, ನಿಮ್ಮ ಸಂದರ್ಶನ ವಿವರ ಬಗ್ಗೆ ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೂ ಸಂದೇಶ ಬರಲಿದೆ.

ಶುಲ್ಕ ಪಾವತಿ, ಅಗತ್ಯ ದಾಖಲೆ

ಶುಲ್ಕ ಪಾವತಿ, ಅಗತ್ಯ ದಾಖಲೆ

* ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್(ಮಾಸ್ಟರ್ ಕಾರ್ಡ್ ಹಾಗೂ ವೀಸಾ)
* ಇಂಟರ್ನೆಟ್ ಬ್ಯಾಂಕಿಂಗ್ (ಎಸ್ ಬಿಐ ಹಾಗೂ ಸಂಬಂಧಿಸಿದ ಬ್ಯಾಂಕ್)
* ಎಸ್ ಬಿಐ ಬ್ಯಾಂಕ್ ಚಲನ್ ಮೂಲಕ ಮಾಡಬಹುದು.
* Print Application Receipt ಕ್ಲಿಕ್ ಮಾಡಿ ಅರ್ಜಿಯ ಗುರುತು ಸಂಖ್ಯೆ/ಸಂದರ್ಶನ ಸಂಖ್ಯೆಯನ್ನು ಪಡೆದುಕೊಳ್ಳಿ
* ನಿಗದಿತ ದಿನದಂದು ಸಂದರ್ಶನಕ್ಕೆ ಹಾಜರಾಗಿ ಸೂಕ್ತ ದಾಖಲೆ ಒದಗಿಸಿ ಪಾಸ್ ಪೋರ್ಟ್ ಪಡೆದುಕೊಳ್ಳಿ.

ಅಗತ್ಯ ದಾಖಲೆ:
* ಹಳೆ ಪಾಸ್ ಪೋರ್ಟ್ ಮೂಲ ಪ್ರತಿ ಹಾಗೂ ಸಹಿ ಹಾಕಿದ ಪ್ರತಿಗಳು,(ಮೊದಲ 2 ಪುಟ, ಕೊನೆಯ 2 ಪುಟ), ಹಾಲಿ ವಿಳಾಸ ದೃಢೀಕರಣ, ಮದುವೆ ಪ್ರಮಾಣ ಪತ್ರ ಮೂಲ ಪ್ರತಿ, ಪತಿಯ ಪಾಸ್ ಪೋರ್ಟ್ ಸ್ವಸಹಿ ಹಾಕಿದ ಪ್ರತಿಗಳು

ಗಮನಿಸಿ: ಹೆಸರು ಬದಲಾವಣೆ ಅಥವಾ ವಿವಾಹ ವಿಚ್ಛೇದನ ಪಡೆದಿದ್ದರೆ ಅಂಥಾ ಮಹಿಳೆಯರು ಅಫಿಡವಿಟ್ ಹಾಗೂ ಕೋರ್ಟ್ ಪ್ರಮಾಣೀಕೃತ ಡಿಗ್ರಿ ಸ್ವಸಹಿ ಹಾಕಿದ ಪ್ರತಿಯನ್ನು ಅಧಿಕಾರಿಗಳಿಗೆ ನೀಡಬೇಕಾಗುತ್ತದೆ.

English summary
How to change name on Indian passport after marriage or divorce? How to apply for reissue of passport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X