ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಯಲ್ 112; ತುರ್ತು ಸಹಾಯವಾಣಿ ಹೇಗೆ ಕೆಲಸ ಮಾಡುತ್ತೆ?

|
Google Oneindia Kannada News

ಬೆಂಗಳೂರು, ನವೆಂಬರ್ 01 : 'ಒಂದು ಭಾರತ, ಒಂದು ತುರ್ತು ಕರೆ ಸಂಖ್ಯೆ' ಪರಿಕಲ್ಪನೆಯಡಿ ಕರ್ನಾಟಕದಲ್ಲಿ 112 ಸಹಾಯವಾಣಿಯನ್ನು ಆರಂಭಿಸಲಾಗಿದೆ. ಒಂದೇ ದೂರವಾಣಿ ಸಂಖ್ಯೆಗೆ ಕರೆ ಮಾಡುವ ಮೂಲಕ ಜನರು ಅಗತ್ಯ ಸೇವೆಗಳನ್ನು ಪಡೆಯಬಹುದು.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಏಕೀಕೃತ ತುರ್ತು ಸ್ಪಂದನಾ ವ್ಯವಸ್ಥೆಗೆ ಚಾಲನೆ ನೀಡಿದ್ದಾರೆ. 112 ಸಹಾಯವಾಣಿಗೆ ಕರೆ ಮಾಡಿದರೆ ನೇರವಾಗಿ ಜಿಲ್ಲಾ ಸಮನ್ವಯ ಕೇಂದ್ರದೊಂದಿಗೆ ಸಂಪರ್ಕಿಸಲಾಗುತ್ತದೆ. ಆ ಮೂಲಕ ಅಗತ್ಯ ನೆರವು ನೀಡಲಾಗುತ್ತದೆ.

ಪ್ರವಾಹ ಪೀಡಿತ ಜಿಲ್ಲೆ ಜನರಿಗಾಗಿ ತುರ್ತು ಸಹಾಯವಾಣಿಪ್ರವಾಹ ಪೀಡಿತ ಜಿಲ್ಲೆ ಜನರಿಗಾಗಿ ತುರ್ತು ಸಹಾಯವಾಣಿ

ಈ ಸಂಖ್ಯೆಗೆ ಕರೆ ಮಾಡುವ ಮೂಲಕ ಪೊಲೀಸ್, ಅಗ್ನಿ ಶಾಮಕ ದಳ, ಆರೋಗ್ಯ ಮುಂತಾದ ತುರ್ತು ಸೇವೆಗಳನ್ನು ಪಡೆಯಬಹುದು. Emergency Response Support System (ERSS) ವೆಬ್ ಸೈಟ್‌ಗೆ ಭೇಟಿ ನೀಡಿ, ಇ-ಮೇಲ್ ಮೂಲಕ ದೂರು ಸಲ್ಲಿಸಲು ಸಹ ಅವಕಾಶವನ್ನು ನೀಡಲಾಗಿದೆ.

 ಮಕ್ಕಳ ಸಹಾಯವಾಣಿ ಮಾಹಿತಿ ನೀಡಲು ಹೆಪ್ಸಿಬಾ ಸೂಚನೆ ಮಕ್ಕಳ ಸಹಾಯವಾಣಿ ಮಾಹಿತಿ ನೀಡಲು ಹೆಪ್ಸಿಬಾ ಸೂಚನೆ

ದಿನದ 24 ಗಂಟೆಯೂ ಈ ಸಹಾಯವಾಣಿ ಕಾರ್ಯ ನಿರ್ವಹಣೆ ಮಾಡಲಿದೆ. ಡಿಜಿಟಲ್ ತಂತ್ರಜ್ಞಾನದ ಮೂಲಕ ಕರೆ ಮಾಡಿದವರು ಇರುವ ಸ್ಥಳದ ವಿವರಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನೂ ಸಹಾಯವಾಣಿ ಕೇಂದ್ರದಲ್ಲಿ ಮಾಡಲಾಗಿದೆ.

ಕರ್ನಾಟಕ ಪೊಲೀಸರ ವೇತನ ಹೆಚ್ಚಳ; ಇಲಾಖೆಯವರು ಏನಂತಾರೆ? ಕರ್ನಾಟಕ ಪೊಲೀಸರ ವೇತನ ಹೆಚ್ಚಳ; ಇಲಾಖೆಯವರು ಏನಂತಾರೆ?

ತುರ್ತು ಸಹಾಯಕ್ಕೆ ಒಂದೇ ನಂಬರ್

ತುರ್ತು ಸಹಾಯಕ್ಕೆ ಒಂದೇ ನಂಬರ್

ಇದುವರೆಗೂ ಪೊಲೀಸ್ 100, ಅಗ್ನಿ ಶಾಮಕ 101, ಆರೋಗ್ಯ 108 ಹೀಗೆ ತುರ್ತು ಸಹಾಯಕ್ಕೆ ವಿವಿಧ ಸಹಾಯವಾಣಿ ಇತ್ತು. 'ಒಂದು ಭಾರತ, ಒಂದು ತುರ್ತು ಕರೆ ಸಂಖ್ಯೆ' ಪರಿಕಲ್ಪನೆಯಡಿ 112 ಸಹಾಯವಾಣಿ ಆರಂಭಿಸಲಾಗಿದೆ. ಒಂದೇ ನಂಬರ್‌ಗೆ ಕರೆ ಮಾಡುವ ಮೂಲಕ ತುರ್ತಾಗಿ ಸಹಾಯವನ್ನು ಪಡೆಯಬಹುದಾಗಿದೆ.

ಕರೆ ಮಾಡುವುದು ಹೇಗೆ?

ಕರೆ ಮಾಡುವುದು ಹೇಗೆ?

ಸಾಮಾನ್ಯ ಫೋನ್‌ಗಳಲ್ಲಿ 112 ಡಯಲ್ ಮಾಡಬೇಕು. ಸಾಮಾನ್ಯ ಫೋನ್‌ನಲ್ಲಿ 5 ಅಥವ 9 ಬಟನ್‌ನನ್ನು ಧೀರ್ಘವಾಗಿ ಒತ್ತಿದರೆ ಕರೆ ಸಕ್ರಿಯವಾಗುತ್ತದೆ. ಸ್ಮಾರ್ಟ್‌ ಫೋನ್‌ಲ್ಲಿ 112 ಸಂಖ್ಯೆಗೆ ಕರೆ ಮಾಡಬಹುದು ಅಥವ ಪವರ್ ಬಟನ್ ಮೂರು ಬಾರಿ ಒತ್ತಿದರೆ ತಕ್ಷಣ Emergency Response Support System (ERSS) ಕರೆ ಸಕ್ರಿಯವಾಗಲಿದೆ.

ಡಿಜಿಟಲ್ ವ್ಯವಸ್ಥೆಗಳು

ಡಿಜಿಟಲ್ ವ್ಯವಸ್ಥೆಗಳು

112 ಎನ್ನುವುದು ದೇಶದ್ಯಾಂತ ಒಂದೇ ತುರ್ತು ಕರೆ ಸಂಖ್ಯೆ. ರಾಜ್ಯ ತುರ್ತು ಪ್ರತಿಕ್ರಿಯೆ ಕೇಂದ್ರದಿಂದ ಸೇವಾ ಸಮನ್ವಯ, ನಾಗರಿಕರಿಗೆ 24*7 ಕಾಲ ತುರ್ತು ಪ್ರತಿಕ್ರಿಯೆ ಬೆಂಬಲ ಸೇವೆಗಳು, ಸೇವಾ ವಿನಂತಿದಾರರ ಸ್ವಯಂಚಾಲಿತ ಸ್ಥಳ ಗುರುತಿಸುವಿಕೆ, ಡಿಜಿಟಲ್ ನಕ್ಷೆಯಲ್ಲಿ ಸೇವಾ ವಿನಂತಿಗಳು ಮತ್ತು ತುರ್ತು ಸ್ಪಂದನ ವಾಹನಗಳ ನೇರ ಪತ್ತೆಯು ವ್ಯಸವ್ಥೆಯ ಅನುಕೂಲತೆಗಳು.

ಪೊಲೀಸರಿಗೆ ಸಹಾಯವಾಗಲಿದೆ

ಪೊಲೀಸರಿಗೆ ಸಹಾಯವಾಗಲಿದೆ

112 ತುರ್ತು ಸ್ಪಂದನ ಸಹಾಯ ವ್ಯವಸ್ಥೆಯು ಅಪರಾಧಗಳನ್ನು ಕಡಿಮೆ ಮಾಡಲು, ಅಪರಾಧ ವಿಶ್ಲೇಷಣೆ ಮತ್ತು ಮುನ್ಸೂಚನೆ ಬೆಂಬಲಕ್ಕೆ ಸಹಾಯವಾಗಲಿದೆ. ದಿನದ 24 ಗಂಟೆಯೂ ಈ ಸಹಾಯವಾಣಿ ಕೆಲಸ ಮಾಡಲಿದೆ.

English summary
Emergency Response Support System (ERSS) launched in Karnataka. People can call 112 number in the time of emergency. How 112 will work here are the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X