• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

FASTag ಪಡೆಯೋದು ಹೇಗೆ? App ಬಳಸುವುದು ಹೇಗೆ?

|

'ಒಂದು ದೇಶ ಒಂದು ಟೋಲ್' ಎಂಬ ವ್ಯವಸ್ಥೆ ಜಾರಿಗೆ ಬರಬಹುದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಕಟ್ಟದೇ ಮುಂದೆ ಜೂಮ್ ಅಂಥ ಸಾಗಬಹುದು ಎಂಬೆಲ್ಲ ಕನಸು ಕಂಡವರಿಗೆ ಸದ್ಯಕ್ಕೆ 'ಒಂದು ದೇಶ ಒಂದು ಟೋಲ್' ಎಂಬ ವ್ಯವಸ್ಥೆಗೆ ಹೊಂದಿಕೊಳ್ಳುವುದು ಅನಿವಾರ್ಯವಾಗಿದೆ.

"ಟೋಲ್ ವ್ಯವಸ್ಥೆಗೆ ಕೊನೆ ಎಂಬುದಿಲ್ಲ, ಕಾಲದಿಂದ ಕಾಲಕ್ಕೆ ಬದಲಾಗಬಹುದು, ಟೋಲ್ ವ್ಯವಸ್ಥೆ ನನ್ನ ಕಲ್ಪನೆಯ ಕೂಸು, ನಿಮಗೆ ಉತ್ತಮ ಸೇವೆ, ಸೌಕರ್ಯ ಬೇಕಾದರೆ, ಹಣ ಪಾವತಿ ಪಡೆದುಕೊಳ್ಳಿ, ಸರ್ಕಾರದ ಬಳಿ ಹಣವಿಲ್ಲ, ಮೂಲಸೌಕರ್ಯ ಅಭಿವೃದ್ಧಿಗಾಗಿ ಸಾಕಷ್ಟು ಹಣ ವ್ಯಯಿಸಲಾಗಿದೆ" ಎಂದು ರಸ್ತೆ, ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಲೋಕಸಭೆಯಲ್ಲಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

FASTag ಅಂದ್ರೇನು? ಡಿ.1 ರಿಂದ ಅದು ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ?

ಡಿಸೆಂಬರ್ 01ರಿಂದ ದೇಶದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಟೋಲ್ ಸಂಗ್ರಹ ಕೇಂದ್ರ ದಾಟಬೇಕಾದರೆ ಫಾಸ್‌ಟ್ಯಾಗ್ (FASTag) ಹೊಂದುವುದು ಕಡ್ಡಾಯವಾಗಲಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ನಿರ್ವಹಿಸುತ್ತಿದೆ. ಫಾಸ್‌ಟ್ಯಾಗ್ ಒಂದು ರೀತಿ ವಾಹನಗಳ 'ಆಧಾರ್ ಕಾರ್ಡ್‌'ನಂತೆ ಕಾರ್ಯ ನಿರ್ವಹಿಸುತ್ತದೆ.

'ಸುಂಕದ ಕಟ್ಟೆ'ಗಳಲ್ಲಿ ಫಾಸ್‌ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ?

ರೇಡಿಯೋ ತರಂಗಾಂತರ ಗುರುತು (ಆರ್‌ಎಫ್‌ಐಡಿ) ಅಥವಾ ಆರ್‌ಎಫ್‌ಐಡಿ ತಂತ್ರಜ್ಞಾನವು ವಾಹನ ಟೋಲ್ ಫ್ಲಾಜಾದ ಮೂಲಕ ಸಾಗುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಫಾಸ್‌ಟ್ಯಾಗ್‌ನಲ್ಲಿರುವ ಹಣ ಕಡಿತಗೊಳ್ಳುವಂತೆ ಮಾಡುತ್ತದೆ. ಹೀಗಾಗಿ ಕಾಯುವಿಕೆಗೆ ಅಂತ್ಯ ಹಾಡಬಹುದು. ಆದರೆ ಈ ಫಾಸ್ಟ್ ಟ್ಯಾಗ್ ಪಡೆಯುವುದು ಹೇಗೆ? ಏನೆಲ್ಲ ದಾಖಲೆಗಳನ್ನು ಹೊಂದಿರಬೇಕು? ಎಂಬೆಲ್ಲ ಪ್ರಶ್ನೆಗಳಿಗೆ ಉತ್ತರ ಮುಂದಿದೆ...

ಫಾಸ್ಟ್ ಟ್ಯಾಗ್ ಸಂಕ್ಷಿಪ್ತ ವಿವರ

ಫಾಸ್ಟ್ ಟ್ಯಾಗ್ ಸಂಕ್ಷಿಪ್ತ ವಿವರ

ಫಾಸ್‌ಟ್ಯಾಗ್ ಬ್ರ್ಯಾಂಡ್ ಹೆಸರು ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪೆನಿ ನಿಯಮಿತದ (ಐಎಚ್‌ಎಂಸಿಎಲ್) ಸ್ವಾಮ್ಯಕ್ಕೆ ಒಳಪಟ್ಟಿದೆ. 2014ರಲ್ಲಿ ಪ್ರಾಯೋಗಿಕವಾಗಿ ಜಾರಿಗೊಂಡಿದ್ದು, ದೇಶದ ರಾಷ್ಟ್ರೀಯ ಹೆದ್ದಾರಿಗಳ 370 ಟೋಲ್ ಪ್ಲಾಜಾಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ರಾಷ್ಟ್ರೀಯ ವಿದ್ಯುನ್ಮಾನ ಸುಂಕ ಸಂಗ್ರಹ(ಎನ್ ಇಟಿಸಿ) ವ್ಯವಸ್ಥೆಯಡಿಯಲ್ಲಿ ಎಲ್ಲಾ ಟೋಲ್ ಪ್ಲಾಜಾಗಳಲ್ಲೂ ಫಾಸ್ಟ್ ಟ್ಯಾಗ್ ಬಳಸಬಹುದಾಗಿದೆ.

ಬ್ಯಾಂಕ್ , ಟೋಲ್ ಪ್ಲಾಜಾಗಳಲ್ಲಿ ಲಭ್ಯ

ಬ್ಯಾಂಕ್ , ಟೋಲ್ ಪ್ಲಾಜಾಗಳಲ್ಲಿ ಲಭ್ಯ

ಎಚ್ ಡಿ ಎಫ್ ಸಿ, ಐಸಿಐಸಿಐ, ಸಿಂಡಿಕೇಟ್, ಐಡಿ ಎಫ್ ಸಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಆಕ್ಸಿಸ್ ಬ್ಯಾಂಕಿನಿಂದ ಫ್ಯಾಸ್ಟ್ ಟ್ಯಾಗ್ ಪಡೆದುಕೊಳ್ಳಬಹುದು. ನಂತರ ಫ್ಯಾಸ್ಟ್ ಟ್ಯಾಗ್ ಸ್ಟೀಕರ್ ನಿಮ್ಮ ವಾಹನದ ಮುಂಭಾಗದ ವಿಂಡ್ ಸ್ಕ್ರೀನ್ ಗೆ ಹಾಕಬೇಕು.

ಬೇಕಾದ ದಾಖಲೆಗಳು:

1. ವಾಹನ ನೋಂದಣಿ ಪ್ರಮಾಣ ಪತ್ರ, RC book

2. ವಾಹನ ಮಾಲೀಕರ ಪಾಸ್ ಪೋರ್ಟ್ ಸೈಜಿನ ಭಾವ ಚಿತ್ರ

3. ಗುರುತಿನ ಚೀಟಿ(ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಪಾಸ್ ಪೋರ್ಟ್, ಮತದಾರರ ಗುರುತಿನ ಚೀಟಿ ಅಥವಾ ಆಧಾರ್)

FASTag ಆಕ್ಟೀಷನ್ ಹೇಗೆ?

FASTag ಆಕ್ಟೀಷನ್ ಹೇಗೆ?

FASTag ಪಡೆದ ಬಳಿಕ ಅದನ್ನು ಆಕ್ಟಿವೇಟ್ ಮಾಡಿಕೊಳ್ಳಬೇಕು.My FASTag ಆಪ್ ಬಳಸಿ ವಾಹನ ಸಂಖ್ಯೆ ನೀಡಿ activate ಮಾಡಬಹುದು.

NHAI ಪ್ರೀಪೇಯ್ಡ್ ವ್ಯಾಲೆಟ್ ಸೌಲಭ್ಯ ಹೊಂದಿದ್ದು, My FASTag ಆಪ್ ನಲ್ಲಿ ಮುಂಚಿತವಾಗಿ ಹಣ ತುಂಬಿದ್ದರೆ, ಟೋಲ್ ಫೀ ವ್ಯಾಲೆಟ್ ನಿಂದ ಕಡಿತಗೊಳ್ಳಲಿದೆ.

ಅಥವಾ ನಿಮ್ಮ ಸಮೀಪದ ಪ್ರಮಾಣೀಕೃತ ಬ್ಯಾಂಕಿಗೆ ತೆರಳಿ ಫಾಸ್ಟ್ ಟ್ಯಾಗ್ ಜೊತೆಗೆ ನಿಮ್ಮ ಬ್ಯಾಂಕ್ ಖಾತೆ ಲಿಂಕ್ ಮಾಡಿಸಿ ಆಕ್ಟಿವೇಟ್ ಮಾಡಿಸಿಕೊಳ್ಳಬಹುದು.

FASTag APP ಡೌನ್ಲೋಡ್, ರೀಚಾರ್ಜ್

FASTag APP ಡೌನ್ಲೋಡ್, ರೀಚಾರ್ಜ್

ಗೂಗಲ್ ಸರ್ಚ್ ಇಂಜಿನ್ ನಲ್ಲಿ FASTag APP ಎಂದು ಹುಡುಕಿದರೆ, My FASTag ಎಂಬ ಆಪ್ ಸಿಗುತ್ತದೆ, ಇದನ್ನು ಡೌನ್ ಲೋಡ್ ಮಾಡಿಕೊಳ್ಳಿ.

Indian Highways Management Company Ltd.Productivity ಒಡೆತನದ ಈ ಆಪ್ ಬಳಸಿ ತ್ವರಿತವಾಗಿ ಯುಪಿಐ ಮೂಲಕ ರೀಚಾರ್ಜ್ ಮಾಡಿಕೊಳ್ಳಬಹುದು.

My FASTag ಆಪ್ ಹಾಗೂ ಯುಪಿಐ ಪೇಮೆಂಟ್ ವ್ಯವಸ್ಥೆ ಬಳಸುವ ಮೂಲಕ ಯುಪಿಐ ಐಡಿ ಹೊಂದಿರಬೇಕು. ಅಥವಾ BHIM UPI ಬಳಸಿ ಹಣ ಕಟ್ಟಬಹುದು. ಇದಕ್ಕೂ ಮುನ್ನLink IHMCL FASTag ಬಳಸಿ ಆಪ್ ಹಾಗೂ ಬ್ಯಾಂಕ್ ಖಾತೆ ಜೊತೆ ಲಿಂಕ್ ಮಾಡಿಕೊಂಡಿರಬೇಕು.

ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ?

ರೀಚಾರ್ಜ್ ಮಾಡಿಕೊಳ್ಳುವುದು ಹೇಗೆ?

ರೀಚಾರ್ಜ್ ಮಾಡಲು ಕ್ರೆಡಿಟ್/ ಡೆಬಿಟ್/ ಎನ್ ಇಎಫ್ ಟಿ/ ಆರ್ ಟಿಜಿಎಸ್ ಅಥವಾ ನೆಟ್ ಬ್ಯಾಂಕಿಂಗ್ ಬಳಸಬಹುದು. 100 ರು ನಿಂದ 1 ಲಕ್ಷ ರು ತನಕ ಮಾತ್ರ ರೀಚಾರ್ಜ್ ಮಾಡಬಹುದು.

FASTag ಪ್ರೀಪೇಯ್ಡ್ ವ್ಯಾಲೆಟ್ ನಲ್ಲಿ 20,000 ರು ತನಕ ಮಾತ್ರ ಹೊಂದಬಹುದು. ಪ್ರತಿ ತಿಂಗಳ ಮಿತಿ ಇದಾಗಿದೆ. ಪೂರ್ತಿ ಕೆವೈಸಿ ಫಾಸ್ಟ್ ಟ್ಯಾಗ್ ಖಾತೆ ದಾರರಿಗೆ ಮಾತ್ರ 1 ಲಕ್ಷ ರು ತನಕ ಪ್ರೀ ಪೇಯ್ಡ್ ವ್ಯಾಲೆಟ್ ಹೊಂದಲು ಅವಕಾಶವಿದೆ. ಹಾಗೂ ರೀಚಾರ್ಜ್ ಕೂಡಾ ಮಾಡಿಸಿಕೊಳ್ಳಬಹುದು.

ಪ್ರತಿ ಫಾಸ್ಟ್ ಟ್ಯಾಗ್ ಪ್ರತಿ ವಾಹನಕ್ಕೆ ವಿಶಿಷ್ಟವಾಗಿದ್ದು, ಎರಡು ವಾಹನಕ್ಕೆ ಒಂದೇ ಫಾಸ್ಟ್ ಟ್ಯಾಗ್ ಹೊಂದಲು ಅವಕಾಶವಿಲ್ಲ.

English summary
How to buy FASTags? How to use FastTag app and recharge it. Apart from toll plazas, FASTags are available in banks which the authorities have signed up with.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more