ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

How to series; ಬೆಂಗಳೂರಲ್ಲಿ ಶವ ಸಂಸ್ಕಾರಕ್ಕೆ ಸ್ಲಾಟ್‌ ಬುಕ್ ಮಾಡುವುದು ಹೇಗೆ?

|
Google Oneindia Kannada News

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಶವಗಳನ್ನು ಸುಡಲು ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡುವ ವ್ಯವಸ್ಥೆ ಇದೆ. ಬಿಬಿಎಂಪಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಜನರು ಸ್ಲಾಟ್ ಬುಕ್ ಮಾಡಬಹುದು.

ಬೆಂಗಳೂರು ನಗರದಲ್ಲಿ ವಿದ್ಯುತ್ ಮತ್ತು ಕಟ್ಟಿಗೆಯಲ್ಲಿ ಶವಗಳನ್ನು ಸುಡುವ ಚಿತಾಗಾರಗಳಿವೆ. ಅಂತ್ಯಸಂಸ್ಕಾರಕ್ಕೆ ಮೊದಲೇ ಸ್ಲಾಟ್‌ಗಳನ್ನು ಬುಕ್ ಮಾಡಬಹುದು. ಬುಕ್ಕಿಂಗ್ ಪ್ರಕ್ರಿಯೆಗಳು ಸಹ ಸರಳವಾಗಿವೆ.

ಶವಗಳನ್ನು ಸುಡಲು ಎರಡು ಬರ್ನರ್ ಮೆಶಿನ್‌ಗಳಿವೆ. ಒಂದು ಯಂತ್ರದಲ್ಲಿ ಒಂದು ಶವದ ಸಂಸ್ಕಾರ ಮುಗಿಯಲು 1 ಗಂಟೆಯ ಕಾಲಾವಕಾಶ ಬೇಕಾಗುತ್ತದೆ. ಎರಡು ಬರ್ನರ್ ಸೇರಿಸಿ ದಿನಕ್ಕೆ 16 ಶವಗಳನ್ನು ಸುಡಬಹುದು.

 How To Book Slot In BBMP Crematorium Bengaluru

ಸಮಯದ ವಿವರ; ಬಿಬಿಎಂಪಿ ವ್ಯಾಪ್ತಿಯ ಶವಸಂಸ್ಕಾರ ಕೇಂದ್ರಗಳು ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಕಾರ್ಯ ನಿರ್ವಹಣೆ ಮಾಡುತ್ತದೆ. ಶವಗಳನ್ನು ಸುಟ್ಟ ಮರುದಿನ ಜನರು ಹೋಗಿ ಬೂದಿಯನ್ನು ಪಡೆಯಬೇಕಾಗುತ್ತದೆ.

ಸ್ಲಾಟ್ ಬುಕ್ ಮಾಡುವುದು ಹೇಗೆ?; ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ 8 ವಲಯಗಳಿವೆ. ಜನರು ಯಾವ ವಲಯದಲ್ಲಿ ಸ್ಲಾಟ್ ಬುಕ್ ಮಾಡಬೇಕು ಎಂಬುದನ್ನು ಮೊದಲು ತಿಳಿದಿರಬೇಕು. ಬುಕ್ಕಿಂಗ್ ಸಂದರ್ಭದಲ್ಲಿ ಮೃತಪಟ್ಟ ವ್ಯಕ್ತಿಯ ವಿವರಗಳನ್ನು ಸಹ ಭರ್ತಿ ಮಾಡಬೇಕಾಗುತ್ತದೆ.

ಒಂದು ವೇಳೆ ಆಸ್ಪತ್ರೆಯಲ್ಲಿ ವ್ಯಕ್ತಿ ಮೃತಪಟ್ಟರೆ ಆಸ್ಪತ್ರೆಯವರು ಮೃತದೇಹ ನೀಡುವ ಸಮಯ, ಅಗತ್ಯ ದಾಖಲೆಗಳನ್ನು ಪಡೆದು ಅಂತ್ಯ ಸಂಸ್ಕಾರದತ್ತ ಗಮನಹರಿಸಬೇಕಾಗುತ್ತದೆ.

ಬುಕ್ಕಿಂಗ್ ಪ್ರಕ್ರಿಯೆ; ಶವಗಳನ್ನು ಸುಡಲು ಸ್ಲಾಟ್ ಬುಕ್ ಮಾಡಲು ಒಟ್ಟು 8 ಹಂತಗಳಿವೆ. ಕೊನೆಯ ಹಂತದಲ್ಲಿ ನೀವು ಹಣ ನೀಡಿದ ರಶೀದಿ ಸಂಗ್ರಹ ಮಾಡಿಕೊಳ್ಳುವುದು ಇರುತ್ತದೆ. ಈ ಪ್ರಕ್ರಿಯೆಗಾಗಿ ನೀವು ಮೊದಲು ಬಿಬಿಎಂಪಿ ವೆಬ್‌ಸೈಟ್‌ಗೆ ಭೇಟಿ ಕೊಡಬೇಕು.

ಮೊದಲ ಹಂತದಲ್ಲಿ ಜನರು ವೆಬ್‌ಸೈಟ್‌ಗೆ ಭೇಟಿ ನೀಡಬೇಕು. Citizen Service ಕ್ಲಿಕ್ ಮಾಡಿದ ಬಳಿಕ Electric Crematorium ಪುಟದಲ್ಲಿ ಪ್ರತಿ ಹಂತದ ಮಾಹಿತಿಯನ್ನು ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯ ಯಾವ ವಲಯದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಅವಕಾಶವಿದೆ ಎಂಬ ಮಾಹಿತಿಯೂ ಇಲ್ಲಿದೆ.

ಲಾಗಿನ್ ಆದ ಬಳಿಕ ಜನರು ವಲಯ (ಝೋನ್) ಸೆಲೆಕ್ಟ್ ಮಾಡಬೇಕು. ಅಂತ್ಯ ಸಂಸ್ಕಾರದ ಸ್ಥಳ, ದಿನಾಂಕವನ್ನು ನಮೂದಿಸಬೇಕು. ಬಳಿಕ ಸಮಯವನ್ನು ನಿಗದಿ ಮಾಡಬೇಕು. ಬಳಿಕ ಮೃತಪಟ್ಟ ವ್ಯಕ್ತಿಯ ವಿವರಗಳನ್ನು ಭರ್ತಿ ಮಾಡಬೇಕು. ಬಳಿಕ ಅದನ್ನು ಖಚಿತಪಡಿಸಬೇಕು. ಮೊಬೈಲ್‌ ನಂಬರ್‌ಗೆ ಬರುವ ಓಟಿಪಿ ನಮೂದು ಮಾಡಬೇಕು.

6ನೇ ಹಂತದಲ್ಲಿ ನಮೂದು ಮಾಡಿದ ಮೊಬೈಲ್ ನಂಬರ್‌ಗೆ ಬುಕ್ಕಿಂಗ್ ಆಗಿರುವ ಮಾಹಿತಿ ಬರುತ್ತದೆ. ಅದನ್ನು ವೆಬ್ ಸೈಟ್‌ ಮೂಲಕ ಸಹ ಡೌನ್ ಲೋಡ್ ಮಾಡಿಕೊಳ್ಳಬಹುದು. 7ನೇ ಹಂತದಲ್ಲಿ ನಿದಗಿ ಮಾಡಿದ ಸಮಯಕ್ಕೆ ಶವ ಸಂಸ್ಕಾರ ನಡೆಯುತ್ತದೆ. 8ನೇ ಹಂತದಲ್ಲಿ ಬಿಬಿಎಂಪಿ ನಿಗದಿಪಡಿಸಿದ ಹಣವನ್ನು ಪಾವತಿ ಮಾಡಿ ರಸೀದಿ ಪಡೆಯಬಹುದಾಗಿದೆ.

Recommended Video

ಇಂಗ್ಲೆಂಡಿನ ಕೋಟ್ಯಧಿಪತಿ ಉದ್ಯಮಿ ರಿಚರ್ಡ್ ಬ್ರಾನ್ಸನ್ ತಮ್ಮ ಕನಸನ್ನ ನನಸು ಮಾಡಿಕೊಂಡಿದ್ದು ಹೀಗೆ! | Oneindia

ಚಿತಾಗಾರಗಳಲ್ಲಿ ಇರುವ ಬರ್ನರ್ ಮೆಶಿನ್‌ಗಳ ಆಧಾರದ ಮೇಲೆ ಸ್ಲಾಟ್ ಲಭ್ಯವಾಗುತ್ತದೆ. ಜನರು ಇಂದು ಅಂತ್ಯಸಂಸ್ಕಾರ ನಡೆಸಿದರೆ ಮರುದಿನ ಬೂದಿಯನ್ನು ಪಡೆಯಬೇಕಾಗುತ್ತದೆ.

English summary
In Bruhat Bangalore Mahanagara Palike (BBMP) limits people can book slot for crematorium. Here are the steps explained who can people book slot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X