ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾಟ್ಸಪ್ ಮೂಲಕ ಹೊಸ ಸಿಲಿಂಡರ್ ಬುಕ್ ಮಾಡುವುದು ಹೇಗೆ?

|
Google Oneindia Kannada News

ಬೆಂಗಳೂರು, ಡಿಸೆಂಬರ್ 02: ಈಗ ದಿನಕ್ಕೊಂದು ಹೊಸ ತಂತ್ರಜ್ಞಾನ ಬರುತ್ತಿದೆ. ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ವಾಟ್ಸಪ್ ಮೂಲಕವೇ ಸಿಲಿಂಡರ್ ಬುಕ್ ಮಾಡಲು ಅವಕಾಶವನ್ನು ನೀಡಲಾಗಿದೆ.

ಇಂಡೇನ್ ಸಿಲಿಂಡರ್ ಗ್ರಾಹಕರು ಈಗ ವಾಟ್ಸಪ್ ಸಂದೇಶ ಕಳಿಸುವ ಮೂಲಕ ಸಿಲಿಂಡರ್ ಬುಕ್ ಮಾಡಬಹುದಾಗಿದೆ. ಈ ವ್ಯವಸ್ಥೆ ದೇಶದ 100 ಸ್ಮಾರ್ಟ್ ನಗರದಲ್ಲಿ ಈಗ ಆರಂಭವಾಗುತ್ತಿದೆ.

 ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ: ಪ್ರಮುಖ ನಗರಗಳ ದರ ಇಲ್ಲಿದೆ ಡಿಸೆಂಬರ್‌ನಲ್ಲಿ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಬದಲಾವಣೆ ಇಲ್ಲ: ಪ್ರಮುಖ ನಗರಗಳ ದರ ಇಲ್ಲಿದೆ

ಹೊಸ ಸಿಲಿಂಡರ್‌ಗೆ ಬೇಡಿಕೆ ಸಲ್ಲಿಸುವುದನ್ನು ಮತ್ತಷ್ಟು ಗ್ರಾಹಕ ಸ್ನೇಹಿಯಾಗಿಸಲು ಇಂಡೇನ್ ವಾಟ್ಸಪ್ ಮೂಲಕ ಬುಕ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸಿದೆ. ಒಂದು ಮೆಸೇಜ್ ಕಳಿಸುವ ಮೂಲಕ ನೀವು ಸಿಲಿಂಡರ್ ಬುಕ್ ಮಾಡಬಹುದಾಗಿದೆ.

 ದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂ ದೇಶದಲ್ಲೇ ಅತಿದೊಡ್ಡ LPG ಸಿಲಿಂಡರ್ ಬುಕ್ಕಿಂಗ್ ವೇದಿಕೆಯಾದ ಪೇಟಿಎಂ

ಇಂಡೇನ್ ಗ್ರಾಹಕರು ವಾಟ್ಸಪ್ ಮೂಲಕ ಸಿಲಿಂಡರ್ ಬುಕ್ ಮಾಡಲು ಒಟ್ಟು ನಾಲ್ಕು ಹಂತಗಳಿವೆ. ಬುಕ್ಕಿಂಗ್ ಸಮಯದಲ್ಲಿ ತಪ್ಪು ಮಾಹಿತಿಯನ್ನು ನೀಡಿದರೆ ಸಿಲಿಂಡರ್ ಪೂರೈಕೆ ನಿಂತು ಹೋಗಲಿದೆ.

ವಾಣಿಜ್ಯ ಉದ್ದೇಶಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ ವಾಣಿಜ್ಯ ಉದ್ದೇಶಿತ ಅಡುಗೆ ಅನಿಲ ಸಿಲಿಂಡರ್ ಬೆಲೆ ಏರಿಕೆ

ಮೊದಲ ಹಂತ ಸಂದೇಶ ಕಳಿಸಿ

ಮೊದಲ ಹಂತ ಸಂದೇಶ ಕಳಿಸಿ

ಇಂಡೇನ್ ಗ್ರಾಹಕರು ಸಂಪರ್ಕ ಪಡೆಯುವಾಗ ನೋಂದಣಿ ಮಾಡಿಸಿದ ಸಂಖ್ಯೆಯಿಂದ 7588888824 ಸಂಖ್ಯೆಗೆ ರಿಫೀಲ್ ಎಂದು ಇಂಗ್ಲಿಶ್‌ನ ಕ್ಯಾಪಿಟಲ್ ಲೆಟರ್‌ನಲ್ಲಿ ವಾಟ್ಸಪ್ ಸಂದೇಶ ಕಳಿಸಬೇಕು.

ಸಂಕೇತ ರವಾನೆಯಾಗಲಿದೆ

ಸಂಕೇತ ರವಾನೆಯಾಗಲಿದೆ

ನೀವು ಸಂದೇಶ ಕಳಿಸಿದ ತಕ್ಷಣ ಅಧಿಕೃತ ದೃಢೀಕರಣ ಸಂಕೇತ ನಿಮಗೆ ಬರಲಿದೆ. ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಬಾರಿಯ ಪಾಸ್ ವರ್ಡ್‌ ಸಹ ಬರಲಿದೆ. ಇದನ್ನು ನೀವು ಕಾಯ್ದಿಟ್ಟುಕೊಳ್ಳಬೇಕು. ಯಾವುದೇ ಕಾರಣಕ್ಕೂ ಡಿಲೀಟ್ ಮಾಡಬಾರದು.

ಮನೆ ಬಾಗಿಲಿಗೆ ಸಿಲಿಂಡರ್

ಮನೆ ಬಾಗಿಲಿಗೆ ಸಿಲಿಂಡರ್

ಸಿಲಿಂಡರ್ ಪೂರೈಕೆ ಮಾಡುವ ವ್ಯಕ್ತಿ ಮನೆಗೆ ಬಂದಾಗ ನೀವು ಒಂದು ಬಾರಿಯ ಪಾಸ್ ವರ್ಡ್ ನೀಡಬೇಕು. ಒಟಿಪಿಯನ್ನು ನೀಡದಿದ್ದರೆ ಸಿಲಿಂಡರ್ ಅನ್ನು ನೀಡುವುದಿಲ್ಲ. ತಪ್ಪು ಮಾಹಿತಿ ಕೊಟ್ಟರೆ ಪೂರೈಕೆ ಸ್ಥಗಿತವಾಗಲಿದೆ.

ಮೊಬೈಲ್ ಸಂಖ್ಯೆ ಬದಲಾಯಿಸಿ

ಮೊಬೈಲ್ ಸಂಖ್ಯೆ ಬದಲಾಯಿಸಿ

ಒಂದು ವೇಳೆ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಿದ್ದರೆ ಸಿಲಿಂಡರ್ ಪೂರೈಕೆ ಮಾಡಲು ಬರುವ ವ್ಯಕ್ತಿಯ ಬಳಿ ಹೊಸ ನಂಬರ್ ನೀಡಿ ಬದಲಾವಣೆ ಮಾಡಿಸಬಹುದು. ಅವರ ಬಳಿ ಇರುವ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಹೊಸ ಸಂಖ್ಯೆ ನಮೂದಿಸಿ, ಒಟಿಪಿ ಹೇಳಿದರೆ ಎಲ್ಲಾ ದಾಖಲೆಗಳಲ್ಲಿ ನಂಬರ್ ಬದಲಾವಣೆಯಾಗಲಿದೆ.

English summary
Indane customer can now book LPG cylinder by sending message on Whats App. How to book cylinder, here are the steps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X