• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

How to; ಅಂಚೆ ಕಚೇರಿ ಮೂಲಕ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕುವುದು ಹೇಗೆ?

|
Google Oneindia Kannada News

ಪಾಸ್‌ಪೋರ್ಟ್ ದೇಶದ ನಾಗರೀಕರಿಗೆ ವಿದೇಶಾಂಗ ಇಲಾಖೆ ನೀಡುವ ಪ್ರಮುಖ ದಾಖಲೆಯಾಗಿದೆ. ದೇಶದ ಗಡಿಯನ್ನು ದಾಟಿ ಪ್ರವಾಸ ಮಾಡುವ ಸಂದರ್ಭದಲ್ಲಿ ಕಡ್ಡಾಯವಾಗಿ ಪಾಸ್‌ಪೋರ್ಟ್ ಹೊಂದಿರಬೇಕು. ಇದನ್ನು ಗುರುತಿನ ಚೀಟಿಯಾಗಿ ಸಹ ಬಳಕೆ ಮಾಡಲಾಗುತ್ತದೆ.

ಭಾರತದ ವಿದೇಶಾಂಗ ಇಲಾಖೆ ಕಾಲಕ್ಕೆ ತಕ್ಕಂತೆ ಪಾಸ್‌ಪೋರ್ಟ್ ನೀಡುವ ಪ್ರಕ್ರಿಯೆಗಳನ್ನು ಸಹ ಸರಳಗೊಳಿಸಿದೆ. ಆನ್‌ಲೈನ್ ಮೂಲಕ ಪಾಸ್‌ಪೋರ್ಟ್‌ಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡಲು ಸಹ ವ್ಯವಸ್ಥೆಯನ್ನು ಮಾಡಲಾಗಿದೆ.

ಭಾರತೀಯ ಅಂಚೆ ಇಲಾಖೆ ದೇಶದ ಜನರಿಗೆ ನೆರವಾಗಲು ಪಾಸ್‌ಪೋರ್ಟ್‌ಗಾಗಿ ಅಂಚೆ ಕಚೇರಿಯಲ್ಲಿಯೂ ಅರ್ಜಿ ಸಲ್ಲಿಸಲು ಅವಕಾಶ ನೀಡಿದೆ. ದೇಶಾದ್ಯಂತ 424 ಅಂಚೆ ಕಚೇರಿಗಳಲ್ಲಿ ಇದಕ್ಕಾಗಿ Passport Seva Kendras (POPSKs) ಸ್ಥಾಪನೆ ಮಾಡಲಾಗಿದೆ ಎಂದು ಭಾರತೀಯ ಅಂಚೆ ಇಲಾಖೆ ಟ್ವೀಟ್ ಮೂಲಕ ಹೇಳಿದೆ.

ಸೇವಾ ಸಿಂಧು ಮೂಲಕ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?ಸೇವಾ ಸಿಂಧು ಮೂಲಕ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಈಗ ಪಾಸ್‌ಪೋರ್ಸ್‌ಗಾಗಿ ನೋಂದಣಿ ಮಾಡುವುದು ಮತ್ತು ಅರ್ಜಿಗಳನ್ನು ಸಲ್ಲಿಸುವುದು ಸುಲಭವಾಗಿದೆ. ನಿಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ನೀಡಿ ಎಂದು ಭಾರತೀಯ ಅಂಚೆ ಇಲಾಖೆ ಟ್ವೀಟರ್ ಮೂಲಕ ಮನವಿಯನ್ನು ಮಾಡಿದೆ.

ಅಂಚೆ ಕಚೇರಿಯಲ್ಲಿ ಅರ್ಜಿ ಸಲ್ಲಿಕೆ ಮಾಡುವ ಮೊದಲು ಆನ್‌ಲೈನ್ ಮೂಲಕ ಜನರು ನೋಂದಣಿ ಮಾಡಿಕೊಳ್ಳಬೇಕು. ಅರ್ಜಿಯನ್ನು ಭರ್ತಿ ಮಾಡಿ, ರಶೀದಿ, ಅಗತ್ಯ ದಾಖಲೆಗಳ ಜೊತೆ ಹತ್ತಿರದ ಅಂಚೆ ಕಚೇರಿಗೆ ಮುಂದಿನ ಪ್ರಕ್ರಿಯೆಗಾಗಿ ತೆರಳಬೇಕಿದೆ ಎಂದು ಅಂಚೆ ಇಲಾಖೆ ಸ್ಪಷ್ಟಪಡಿಸಿದೆ.

ಸೇವಾ ಸಿಂಧು ಮೂಲಕ ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ? ಸೇವಾ ಸಿಂಧು ಮೂಲಕ ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಅಗತ್ಯ ದಾಖಲೆಗಳು; ವ್ಯಕ್ತಿಯೊಬ್ಬರು ಪಾಸ್‌ಪೋರ್ಟ್‌ಗಾಗಿ ಅರ್ಜಿಗಳನ್ನು ಸಲ್ಲಿಕೆ ಮಾಡುವ ಮೊದಲು ಅಗತ್ಯ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು. ಆ ದಾಖಲೆಗಳ ಪಟ್ಟಿ ಇಲ್ಲಿದೆ.

* ಗುರುತಿನ ಚೀಟಿ ಆಧಾರ್, ಚುನಾವಣಾ ಗುರುತಿನ ಚೀಟಿ ಅಥವ ಫೋಟೋ ಇರುವ ಇತರ ಯಾವುದೇ ಮಾನ್ಯತೆ ಪಡೆದ ಗುರುತಿನ ಚೀಟಿ

* ವಯೋಮಿತಿ ದೃಢೀಕರಣಕ್ಕಾಗಿ ಜನನ ಪ್ರಮಾಣ ಪತ್ರ ಇತ್ಯಾದಿ

* ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಆಧಾರ್ ಕಾರ್ಡ್

* ವಿಳಾಸ ದೃಢೀಕರಣಕ್ಕಾಗಿ ವಿದ್ಯುತ್ ಬಿಲ್, ನೀರಿನ ಬಿಲ್, ಗ್ಯಾಸ್ ಬಿಲ್, ಪೋನ್ ಬಿಲ್

* ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಪಾಸ್ ಬುಕ್ ಪ್ರಿಂಟ್ ಪ್ರತಿ

* ಮನೆ ಬಾಡಿಗೆ ಕರಾರು ಪತ್ರ (ಅಗತ್ಯವಿದ್ದರೆ)

5 ಹಂತಗಳಲ್ಲಿ ಅರ್ಜಿ ಸಲ್ಲಿಕೆ; ಒಟ್ಟು 5 ಹಂತಗಳಲ್ಲಿ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಪಡೆಯಲು ಅರ್ಜಿಗಳನ್ನು ಸಲ್ಲಿಸಬೇಕು.

ಮೊದಲ ಹಂತದಲ್ಲಿ ಪಾಸ್‌ಪೋರ್ಟ್ ಪಡೆಯಲು ಬಯಸುವ ಜನರು passportindia.gov.in. ವೆಬ್‌ಸೈಟ್‌ಗೆ ಲಾಗಿನ್ ಆಗಬೇಕು. ಆನ್‌ಲೈನ್‌ನಲ್ಲಿಯೇ ಎಲ್ಲಾ ವಿವರಗಳನ್ನು ಭರ್ತಿ ಮಾಡಿ ಸಬ್ ಮಿಟ್ ಮಾಡಬೇಕು.

How to series; ಬೆಂಗಳೂರಲ್ಲಿ ಶವ ಸಂಸ್ಕಾರಕ್ಕೆ ಸ್ಲಾಟ್‌ ಬುಕ್ ಮಾಡುವುದು ಹೇಗೆ? How to series; ಬೆಂಗಳೂರಲ್ಲಿ ಶವ ಸಂಸ್ಕಾರಕ್ಕೆ ಸ್ಲಾಟ್‌ ಬುಕ್ ಮಾಡುವುದು ಹೇಗೆ?

ನಿಮ್ಮ ಹತ್ತಿರದ ಅಂಚೆ ಕಚೇರಿಯ Passport Seva Kendras (POPSKs)ಕ್ಕೆ ಭೇಟಿ ನೀಡಲು ಸಮಯ ಮತ್ತು ದಿನಾಂಕ ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ನೀವು ಭರ್ತಿ ಮಾಡಿ ಅರ್ಜಿಯ ಪ್ರಿಂಟ್ ತೆಗೆದುಕೊಳ್ಳಿ, ಅಗತ್ಯವಿರುವ ದಾಖಲೆಗಳು (ಓರಿಜಿನಲ್) ಸಹ ಹಿಡಿದುಕೊಂಡು ನಿಗದಿ ಮಾಡಿಕೊಂಡ ದಿನದಂದು ಅಂಚೆ ಕಚೇರಿಗೆ ಭೇಟಿ ನೀಡಿ.

ಅಂಚೆ ಕಚೇರಿಯ ಪಾಸ್‌ಪೋರ್ಟ್‌ ಕೇಂದ್ರದಲ್ಲಿ ನಿಮ್ಮ ದಾಖಲೆಗಳ ಪರಿಶೀಲನೆ ನಡೆಯಲಿದೆ. ನಿಮ್ಮ ಬೆರಳಚ್ಚು, ಕಣ್ಣಿನ ರೆಟಿನಾ ಸ್ಕ್ಯಾನ್‌ ಮಾಡಲಾಗುತ್ತದೆ. ಅಗತ್ಯ ಪರಿಶೀಲನೆಗಳು ಪೂರ್ಣಗೊಂಡ ಬಳಿ 7 ರಿಂದ 14 ದಿನದಲ್ಲಿ ನಿಮ್ಮ ವಿಳಾಸಕ್ಕೆ ಪಾಸ್‌ಪೋರ್ಟ್‌ ಬರಲಿದೆ.

ಒಂದು ಅಂಶವನ್ನು ನೆನಪಿನಲ್ಲಿಟ್ಟುಕೊಳ್ಳಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಂಡು ಅಂಚೆ ಕಚೇರಿ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ತೆರಳಬೇಕು. ಎಲ್ಲಾ ದಾಖಲೆಗಳನ್ನು ಹಿಡಿದುಕೊಂಡು ಹೋದರೆ ತಕ್ಷಣ ಅಲ್ಲಿ ಪರಿಶೀಲನೆಗಳನ್ನು ಮಾಡುವುದಿಲ್ಲ.

ಪ್ರತಿ ಜಿಲ್ಲೆಯಲ್ಲಿಯೂ 1 ಅಥವ 2 ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆಯಲಾಗಿದೆ. ನಿಮ್ಮ ಹತ್ತಿದ ಅಂಚೆ ಕಚೇರಿಯಲ್ಲಿ ಅಥವ ಭಾರತೀಯ ಅಂಚೆ ಇಲಾಖೆ ವೆಬ್‌ಸೈಟ್‌ನಲ್ಲಿ ಪಾಸ್‌ಪೋರ್ಟ್ ಸೇವಾ ಕೇಂದ್ರಗಳು ಎಲ್ಲಿವೆ ಎಂಬ ಮಾಹಿತಿಯನ್ನು ಆಸಕ್ತರು ಪಡೆಯಬಹುದಾಗಿದೆ.

English summary
Now people can register and submit applications for passport in post office. Indian post set up Passport Seva Kendras (POPSKs) across the country. How to apply for passport in post office here are the guide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X