ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೇವಾ ಸಿಂಧು ಮೂಲಕ ಮರಣ ಪ್ರಮಾಣ ಪತ್ರ ಪಡೆಯುವುದು ಹೇಗೆ?

|
Google Oneindia Kannada News

ಕರ್ನಾಟಕ ಸರ್ಕಾರ ಜನರು ಮರಣ ಪ್ರಮಾಣ ಪತ್ರ ಪಡೆಯುವ ಪ್ರಕ್ರಿಯೆ ಸರಳಗೊಳಿಸಿದೆ. ಜನರು ಸೇವಾ ಸಿಂಧು ಪೋರ್ಟಲ್ ಮೂಲಕವೂ ಮರಣ ಪ್ರಮಾಣ ಪತ್ರ ಪಡೆಯಲು ಅರ್ಜಿಯನ್ನು ಸಲ್ಲಿಸಬಹುದು.

ಸೇವ ಸಿಂಧು ಪೋರ್ಟಲ್‌ ಮೂಲಕ ಮರಣ ಪ್ರಮಾಣ ಪತ್ರವನ್ನು ನಿಗದಿತ ಶುಲ್ಕವನ್ನು ಪಾವತಿಸಿ ಪಡೆಯಬಹುದಾಗಿದೆ. ಕರ್ನಾಟಕ ಸರ್ಕಾರದ ಹಲವಾರು ಇಲಾಖೆಗಳ ವಿವಿಧ ಸೇವೆಗಳು ಸೇವಾ ಸಿಂಧುವಿನಲ್ಲಿವೆ.

ಸೇವಾ ಸಿಂಧು ಮೂಲಕ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?ಸೇವಾ ಸಿಂಧು ಮೂಲಕ ಜನನ ಪ್ರಮಾಣ ಪತ್ರ ಪಡೆಯುವುದು ಹೇಗೆ?

ಮರಣ ಪ್ರಮಾಣ ಪತ್ರಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ? ಎಂಬುದನ್ನು ವಿವರಿಸಲಾಗಿದೆ. ಸೇವಾ ಸಿಂಧು ಪೋರ್ಟಲ್‌ಗೆ ಲಾಗಿನ್ ಆಗಿ ಅಲ್ಲಿ Departments & Services ಮೇಲೆ ಕ್ಲಿಕ್ ಮಾಡಬೇಕು. ಪೋರ್ಟಲ್‌ನಲ್ಲಿ ಕನ್ನಡ ಮತ್ತು ಇಂಗ್ಲೀಶ್ ಭಾಷೆಯಲ್ಲಿ ಮಾಹಿತಿಗಳಿವೆ.

How to series; ಬೆಂಗಳೂರಲ್ಲಿ ಶವ ಸಂಸ್ಕಾರಕ್ಕೆ ಸ್ಲಾಟ್‌ ಬುಕ್ ಮಾಡುವುದು ಹೇಗೆ? How to series; ಬೆಂಗಳೂರಲ್ಲಿ ಶವ ಸಂಸ್ಕಾರಕ್ಕೆ ಸ್ಲಾಟ್‌ ಬುಕ್ ಮಾಡುವುದು ಹೇಗೆ?

How To Apply For Death Certificate In Seva Sindhu

ಹೇಗೆ ಅರ್ಜಿ ಸಲ್ಲಿಸಬೇಕು?; ಸೇವಾಸಿಂಧು ಪೋರ್ಟಲ್‌ನಲ್ಲಿ ಇಲಾಖೆ & ಸೇವೆಗಳಲ್ಲಿ Planning Programme Monitoring & Statistics Department ಆಯ್ಕೆ ಮಾಡಬೇಕು. ಬಳಿಕ ಮೊಬೈಲ್ ನಂಬರ್ ಮತ್ತು ಒಟಿಪಿ ಮೂಲಕ ಲಾಗಿನ್ ಆಗಬೇಕು.

'ಕೋವಿಡ್‌ ಮರಣ ಪ್ರಮಾಣೀಕರಣ ಪ್ರಕ್ರಿಯೆ ಸರಳಗೊಳಿಸಿ' : ಕೇಂದ್ರಕ್ಕೆ ಸುಪ್ರೀಂ ಸೂಚನೆ 'ಕೋವಿಡ್‌ ಮರಣ ಪ್ರಮಾಣೀಕರಣ ಪ್ರಕ್ರಿಯೆ ಸರಳಗೊಳಿಸಿ' : ಕೇಂದ್ರಕ್ಕೆ ಸುಪ್ರೀಂ ಸೂಚನೆ

ಈ ಹಿಂದೆ ನೀವು ನೋಂದಣಿ ಮಾಡಿಸದಿದ್ದರೆ No ಕ್ಲಿಕ್ ಮಾಡಿ. ಮರಣ ಹೊಂದಿದ ವ್ಯಕ್ತಿಯ ಹೆಸರು, ತಂದೆಯ ಹೆಸರು, ತಾಯಿಯ ಹೆಸರು ಭರ್ತಿ ಮಾಡಿ ಸರ್ಚ್ ಕ್ಲಿಕ್ ಮಾಡಿದರೆ ವಿವರಗಳು ಕಾಣಿಸುತ್ತದೆ.

ಎಲ್ಲಾ ವಿವರಗಳನ್ನು ಮತ್ತೊಮ್ಮೆ ಪರಿಶೀಲನೆ ನಡೆಸಿ yes ಕ್ಲಿಕ್ ಮಾಡಿ ಎಷ್ಟು ಕಾಪಿಬೇಕು ಎಂದು ನಂಬರ್ ನಮೂದಿಸಿ, ಕ್ಯಾಪ್ಚಾ ಭರ್ತಿ ಮಾಡಿ ಸಬ್ ಮಿಟ್ ಮಾಡಿ. ಮೇಕ್ ಎ ಪೇಮೆಂಟ್ ಎಂಬ ಆಯ್ಕೆ ಸಿಗುತ್ತದೆ. ಪೇಮೆಂಟ್ ಮೋಡ್‌ ಮೂಲಕ ಶುಲ್ಕವನ್ನು ಪಾವತಿ ಮಾಡಿ. ಶುಲ್ಕ ಪಾವತಿ ಬಳಿಕ ರಶೀದಿ ಸಿಗುತ್ತದೆ. ಇದರಲ್ಲಿ ನೀವು ಭರ್ತಿ ಮಾಡಿದ ಎಲ್ಲಾ ವಿವರಗಳ ಮಾಹಿತಿ ಇರುತ್ತದೆ.

ಬಳಿಕ ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್ ನಮೂದು ಮಾಡಿ. ಯೂಸರ್ ನೇಮ್, ಪಾಸ್ ವರ್ಡ್‌ ಕೊಟ್ಟು ಮುಂದೆ ಸಾಗಿರಿ. ವೀವ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಅರ್ಜಿಯ ಸ್ಥಿತಿ ತಿಳಿಯುತ್ತದೆ. ನಿಮ್ಮ ಬಳಿ ಇರುವ ರೆಫರೆನ್ಸ್ ನಂಬರ್ ಮೂಲಕ ನೀವು ಅರ್ಜಿ ಸ್ಥಿತಿಗತಿ ತಿಳಿಯಬಹುದು.

ಸ್ಥಿತಿಗತಿಯಲ್ಲಿ Delivered ಎಂದು ಇದ್ದರೆ ಅದನ್ನು ಕ್ಲಿಕ್ ಮಾಡಿ. ಇಶ್ಯು ಡಾಕ್ಯುಂಮೆಂಟ್ಸ್‌ ಸೆಕ್ಷನ್‌ನಲ್ಲಿ Output certificate ಮೇಲೆ ಕ್ಲಿಕ್ ಮಾಡಿ. ಆಗ ನೀವು ಮರಣ ಪ್ರಮಾಣ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಸೇವಾ ಸಿಂಧು ಪೋರ್ಟಲ್‌ನಲ್ಲಿ ಮರಣ ಪ್ರಮಾಣ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಎಂಬ ವಿಡಿಯೋ ಮತ್ತು ಬರಹ ರೂಪದ ಮಾರ್ಗದರ್ಶಿಗಳು ಸಹ ಜನರಿಗಾಗಿ ಲಭ್ಯವಿದೆ.

English summary
People of Karnataka can now apply for death certificate through Seva Sindhu portal. Here are the steps how to apply.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X