ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಕೇಂದ್ರದಿಂದ ವೇತನ!

|
Google Oneindia Kannada News

ನವದೆಹಲಿ, ಅಕ್ಟೋಬರ್.17: ಕೊರೊನಾವೈರಸ್ ಸೋಂಕಿನಿಂದ ಪ್ರಾಣ ಬಿಟ್ಟವರ ಸಂಖ್ಯೆ ಲಕ್ಷದ ಗಡಿ ದಾಟಿದೆ. ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕ ಪಿಡುಗಿನಿಂದ ಕೋಟ್ಯಂತರ ಕಾರ್ಮಿಕರ ಬದುಕು ಬೀದಿಗೆ ಬಂದಿದೆ. ಕೇಂದ್ರ ಸರ್ಕಾರದ ಹೊಸ ಯೋಜನೆ ಇಂಥವರಲ್ಲಿ ಆಶಾಕಿರಣವನ್ನು ಮೂಡಿಸಿದೆ.
ಭಾರತ ಲಾಕ್ ಡೌನ್ ಅವಧಿಯಲ್ಲಿ ಲಕ್ಷ ಲಕ್ಷ ಕಾರ್ಮಿಕರು, ಉದ್ಯೋಗಿಗಳು, ವ್ಯಾಪಾರಿಗಳು ಆದಾಯವಿಲ್ಲದೇ ಕಂಗೆಟ್ಟು ಹೋಗಿದ್ದಾರೆ. ಲಕ್ಷಾಂತರ ಕಾರ್ಮಿಕರು ಉದ್ಯೋಗವನ್ನು ಕಳೆದುಕೊಂಡು ಪರಿತಪಿಸುವಂತಾ ಸ್ಥಿತಿಯಲ್ಲಿದ್ದಾರೆ. ಉದ್ಯೋಗವಿಲ್ಲದೇ, ಆದಾಯವಿಲ್ಲದೇ ಸೋತು ಹೋಗಿರುವ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರವು ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಿದೆ.

ಎಲ್ಲಿಗೆ ಹೋಯ್ತು 20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಹಣ?
ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆ ಎಂದರೇನು. ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ. ಯಾವೆಲ್ಲ ದಾಖಲೆಗಳನ್ನು ಅರ್ಜಿಯ ಜೊತೆಗೆ ಲಗತ್ತಿಸಬೇಕು. ಈ ಯೋಜನೆಯ ಫಲಾನುಭವಿಗಳು ಯಾರಾಗುತ್ತಾರೆ. ಎಂಥವರಿಗಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎನ್ನುವುದರ ಕುರಿತು ವಿಶೇಷ ವರದಿ ಇಲ್ಲಿದೆ ನೋಡಿ.

ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆ ಎಂದರೇನು?

ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆ ಎಂದರೇನು?

ಭಾರತ ಲಾಕ್ ಡೌನ್ ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗಾಗಿ ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಕಳೆದ ಮಾರ್ಚ್.24ರಿಂದ ಡಿಸೆಂಬರ್ ನಡುವೆ ಉದ್ಯೋಗ ಕಳೆದುಕೊಂಡ ನೌಕರರು ಈ ಯೋಜನೆ ಪಡೆದುಕೊಳ್ಳಬಹುದು. ರಾಜ್ಯ ನೌಕರರ ವಿಮಾ ನಿಗಮದ ನೋಂದಾಯಿತ ಕಾರ್ಮಿಕರು ಮೂರು ತಿಂಗಳವರೆಗೂ ತಮ್ಮ ವೇತನದ ಶೇ. 50ರಷ್ಟು ಹಣವನ್ನು ಪಡೆಯಬಹುದು.

ಮಾರ್ಚ್ ನಲ್ಲಿ ಭಾರತ ಲಾಕ್ ಡೌನ್ ಘೋಷಿಸಿದ ಪ್ರಧಾನಿ

ಮಾರ್ಚ್ ನಲ್ಲಿ ಭಾರತ ಲಾಕ್ ಡೌನ್ ಘೋಷಿಸಿದ ಪ್ರಧಾನಿ

ಕೊರೊನಾವೈರಸ್ ಸೋಂಕಿನ ಅಟ್ಟಹಾಸ ಹೆಚ್ಚಾದ ಹಿನ್ನೆಲೆ ಮಾರ್ಚ್.24ರಂದು ಮೊದಲ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತ ಲಾಕ್ ಡೌನ್ ಘೋಷಿಸಿದರು. ಮೊದಲ ಹಂತದಲ್ಲಿ 21 ದಿನಗಳವರೆಗೂ ಲಾಕ್ ಡೌನ್ ಘೋಷಿಸಿದ್ದು, ಏಪ್ರಿಲ್ ತಿಂಗಳಾಂತ್ಯದವರೆಗೂ ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ತದನಂತರದಲ್ಲಿ ದೇಶದ ಆರ್ಥಿಕತೆಗೆ ಬೀಳುವ ಹೊಡೆತ ತಪ್ಪಿಸುವ ನಿಟ್ಟಿನಲ್ಲಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆಗೊಳಿಸಲಾಯಿತು.

ಕೇಂದ್ರದ ಯೋಜನೆಯಿಂದ ವಲಸೆ ಕಾರ್ಮಿಕರಿಗೆ ನೆರವು

ಕೇಂದ್ರದ ಯೋಜನೆಯಿಂದ ವಲಸೆ ಕಾರ್ಮಿಕರಿಗೆ ನೆರವು

ಭಾರತ ಲಾಕ್‌ಡೌನ್‌ನಿಂದ ಆದಾಯದ ಮೂಲವನ್ನೇ ಕಳೆದುಕೊಂಡು ಕಂಗಾಲಾಗಿರುವ ಜನರ ಬದುಕನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮವನ್ನು ತೆಗೆದುಕೊಳ್ಳಲು ಮುಂದಾಗಿದೆ. ಇಎಸ್ಐಸಿ ಅಭಿಯಾನಕ್ಕೆ ಸಂಬಂಧಿಸಿದಂತೆ ಔಪಚಾರಿಕ ಅಧಿಸೂಚನೆಯನ್ನು ಹೊರಡಿಸಲಿದ್ದು, ಯೋಜನೆಯಿಂದ ಬೊಕ್ಕಸಕ್ಕೆ 44000 ಕೋಟಿ ಖರ್ಚಾಗಲಿದೆ. ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ದುಃಸ್ಥಿತಿಯನ್ನು ನಿಭಾಯಿಸುವ ದೃಷ್ಟಿಯಿಂದ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಉದ್ಯೋಗ ಕಳೆದುಕೊಂಡವರಿಗೆ ಯೋಜನೆಯ ಲಾಭ

ಉದ್ಯೋಗ ಕಳೆದುಕೊಂಡವರಿಗೆ ಯೋಜನೆಯ ಲಾಭ

ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆ ಲಾಭವನ್ನು ಪಡೆಯಲು ಬಯಸುವವರು ಆಧಾರ್ ‌ಗೆ ಸಂಪರ್ಕ ಹೊಂದಿಲ್ಲದಿದ್ದರೆ ತಮ್ಮ ಭೌತಿಕ ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಕಳೆದ ಮಾರ್ಚ್ ಅಷ್ಟೇ ಅಲ್ಲದೇ ಡಿಸೆಂಬರ್‌ನಲ್ಲಿ ಉದ್ಯೋಗ ಕಳೆದುಕೊಳ್ಳುವ ಇಎಸ್ಐಸಿ ಸದಸ್ಯರು ಕೂಡಾ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ವಿಮಾ ನಿಗಮ ಮಂಡಳಿಯಿಂದ ನಿರುದ್ಯೋಗ ಭತ್ಯೆ ಹೆಚ್ಚಳ

ವಿಮಾ ನಿಗಮ ಮಂಡಳಿಯಿಂದ ನಿರುದ್ಯೋಗ ಭತ್ಯೆ ಹೆಚ್ಚಳ

ನೌಕರರ ರಾಜ್ಯ ವಿಮಾ ನಿಗಮ ಮಂಡಳಿ ಇತ್ತೀಚೆಗೆ ಈ ಯೋಜನೆಯಡಿ ನಿರುದ್ಯೋಗ ಭತ್ಯೆಯನ್ನು ಹೆಚ್ಚಿಸಿತ್ತು. ಮೊದಲು ಶೇಕಡಾ.25ರಷ್ಟಿದ್ದ ಭತ್ಯೆಯ ಮೊತ್ತವನ್ನು ಶೇಕಡಾ.50ಕ್ಕೆ ಹೆಚ್ಚಿಸಲಾಗಿದೆ. ಹೀಗಾಗಿ ಕೈಗಾರಿಕಾ ವಲಯದಲ್ಲಿ ಕೆಲಸ ಮಾಡುವ 40 ಲಕ್ಷಕ್ಕೂ ಅಧಿಕ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಅಲ್ಲದೆ, ಯೋಜನೆಯ ಅರ್ಹತಾ ಮಾನದಂಡಗಳ ಅಡಿಯಲ್ಲಿ ಪರಿಹಾರ ನೀಡಲಾಗಿದೆ. ಇತ್ತೀಚೆಗಷ್ಟೇ ಇಎಸ್ಐಸಿಯು ಯೋಜನೆಯನ್ನು 20.ಜೂನ್ 2021 ವರೆಗೆ ವಿಸ್ತರಿಸಲು ನಿರ್ಧರಿಸಿದೆ. ಇದರ ಜೊತೆಗೆ ಉದ್ಯೋಗವನ್ನು ತೊರೆದ 90 ದಿನಗಳ ನಂತರ ಪಾವತಿಸಬಹುದಾದ ಪರಿಹಾರವನ್ನು ಇದೀಗ ಕೆಲಸ ಕಳೆದುಕೊಂಡ 30 ದಿನಗಳಲ್ಲೇ ಪಾವತಿಸುವುದಾಗಿ ತಿಳಿಸಿತ್ತು.

Recommended Video

MS Dhoni ಪರದೆ ಮೇಲೆ AB DE Villiers ಆಟ ನೋಡಿದರು | Oneindia Kannada
ನೇರವಾಗಿ ಫಲಾನುಭವಿಗಳ ಖಾತೆಗೆ ಸಹಾಯ ಧನ

ನೇರವಾಗಿ ಫಲಾನುಭವಿಗಳ ಖಾತೆಗೆ ಸಹಾಯ ಧನ

ಇಎಸ್ಐಸಿ ಪ್ರಕಾರ, ಅಟಲ್ ಭೀಮಿತಿ ವ್ಯಕ್ತಿ ಕಲ್ಯಾಣ ಯೋಜನೆಯಡಿ ನಾಮಿನಿಗಳು ನೇರವಾಗಿ ತಮ್ಮ ಹಕ್ಕನ್ನು ಸಂಸ್ಥೆಯ ಶಾಖಾ ಕಚೇರಿಗೆ ಸಲ್ಲಿಸಬಹುದು. ಹೊಸ ನಿಯಮಗಳ ಪ್ರಕಾರ, ಹಳೆಯ ಉದ್ಯೋಗದಾತರಿಗೆ ಹಕ್ಕನ್ನು ಕಳುಹಿಸುವ ಬದಲು, ಪರಿಹಾರ ಮೊತ್ತವನ್ನು ನೇರವಾಗಿ ವಿಮಾದಾರರ ಬ್ಯಾಂಕ್ ಖಾತೆಗೆ ಪಾವತಿಸಲಾಗುವುದು. ಇದರಿಂದ ಫಲಾನುಭವಿಗೆ ತಕ್ಷಣದ ಪರಿಹಾರವು ಸಿಕ್ಕಂತೆ ಆಗುತ್ತದೆ.

English summary
Atal Bimit Vyakti Kalyan Yojana: Lost Job During Lockdown? Avail This Esic Scheme To Get 50% Of Your Salary For 3 Months. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X