ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದ ಓಮಿಕ್ರಾನ್ ರೂಪಾಂತರಿಯಿಂದ ರಕ್ಷಣೆ ಬೇಕಾದರೆ 3ನೇ ಡೋಸ್ ತೆಗೆದುಕೊಳ್ಳಿ!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 2: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಹೊಸ ಅಲೆಗೆ ಕಾರಣವಾಗಿದ್ದ ಓಮಿಕ್ರಾನ್ ರೂಪಾಂತರ ತಳಿಯನ್ನು ಸಮರ್ಥವಾಗಿ ಎದುರಿಸುವುದಕ್ಕೆ ಮೊದಲ ಎರಡು ಡೋಸ್ ಲಸಿಕೆಗಿಂತ ಮೂರನೇ ಡೋಸ್ ಲಸಿಕೆಯೇ ಬೆಸ್ಟ್ ಎಂದು ವರದಿಯೊಂದು ತಿಳಿಸಿದೆ.

ಕೋವಿಡ್-19 ಲಸಿಕೆಯ ಮೂರನೇ ಡೋಸ್ ಲಸಿಕೆಯನ್ನು ಪಡೆದುಕೊಳ್ಳುವುದರ ಮೂಲಕ ಓಮಿಕ್ರಾನ್ ಸೋಂಕಿನಿಂದ ರಕ್ಷಣೆ ಪಡೆದುಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಭಾರತದಲ್ಲಿ ಸಾಮಾನ್ಯ ಶೀತ, ನೆಗಡಿ ರೂಪಕ್ಕೆ ತಿರುಗಿತಾ ಕೊರೊನಾ ವೈರಸ್!?ಭಾರತದಲ್ಲಿ ಸಾಮಾನ್ಯ ಶೀತ, ನೆಗಡಿ ರೂಪಕ್ಕೆ ತಿರುಗಿತಾ ಕೊರೊನಾ ವೈರಸ್!?

ಹೊಸ ಡ್ಯಾನಿಶ್ ಅಧ್ಯಯನದ ಪ್ರಕಾರ, ಕೋವಿಡ್-19 ಲಸಿಕೆಯ ಮೂರು ಡೋಸ್‌ಗಳು ಮೊದಲ ಎರಡು ಡೋಸ್ ಲಸಿಕೆಗಿಂತ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. ಅಲ್ಲದೇ ಓಮಿಕ್ರಾನ್ ರೂಪಾಂತರ ತಳಿಯಿಂದ ಹೆಚ್ಚು ರಕ್ಷಣೆಯನ್ನು ಒದಗಿಸುತ್ತದೆ. ಹಾಗಿದ್ದರೆ ಯಾವ ಲಸಿಕೆಗಳು ಓಮಿಕ್ರಾನ್ ಸೋಂಕಿನಿಂದ ರಕ್ಷಣೆ ನೀಡಬಲ್ಲವು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಮೊದಲ ಡೋಸ್ ಲಸಿಕೆಯು ಓಮಿಕ್ರಾನ್ ವಿರುದ್ಧ ಕೆಲಸ ಮಾಡಲ್ಲ

ಮೊದಲ ಡೋಸ್ ಲಸಿಕೆಯು ಓಮಿಕ್ರಾನ್ ವಿರುದ್ಧ ಕೆಲಸ ಮಾಡಲ್ಲ

PLOS ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, "ಪ್ರಾಥಮಿಕ ಸರಣಿ ಕೋವಿಡ್ ಲಸಿಕೆಗಳು ಓಮಿಕ್ರಾನ್ ಸೋಂಕಿನ ವಿರುದ್ಧ ದುರ್ಬಲ ರಕ್ಷಣೆಯನ್ನು ಒದಗಿಸುತ್ತವೆ. 12 ರಿಂದ 59 ವರ್ಷ ವಯಸ್ಸಿನವರಲ್ಲಿ ಲಸಿಕೆ ನೀಡಿದ 14 ರಿಂದ 30 ದಿನಗಳವರೆಗೂ ಶೇ.40ರಷ್ಟು ಪರಿಣಾಮಕಾರಿ ಆಗಿ ಕೆಲಸ ಮಾಡುತ್ತದೆ. ಅದೇ ರೀತಿ ನಾಲ್ಕು ತಿಂಗಳ ನಂತರದಲ್ಲಿ ಲಸಿಕೆಯು ಶೇ.12.60ರಷ್ಟು ಪ್ರಭಾವವನ್ನು ಹೊಂದಿರುತ್ತದೆ.

ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುವುದು ಹೇಗೆ ಮೂರನೇ ಡೋಸ್

ಓಮಿಕ್ರಾನ್ ವಿರುದ್ಧ ರಕ್ಷಣೆ ನೀಡುವುದು ಹೇಗೆ ಮೂರನೇ ಡೋಸ್

ಫೈಜರ್-ಬಯೋಎನ್‌ಟೆಕ್ ಅಥವಾ ಮಾಡರ್ನಾ ಲಸಿಕೆ ಡೋಸ್‌ಗಳ ಮೂರನೇ ಡೋಸ್ ಹೆಚ್ಚು ಪರಿಣಾಮಕಾರಿ ಆಗಿರುತ್ತದೆ. 18 ರಿಂದ 59 ವಯಸ್ಸಿನ ಜನರಿಗೆ ಮೂರು ಡೋಸ್ ಲಸಿಕೆಯು ಶೇ.55.10ರಷ್ಟು ರಕ್ಷಣೆಯನ್ನು ನೀಡುತ್ತದೆ. ನಾಲ್ಕು ತಿಂಗಳ ನಂತರದಲ್ಲಿ ಈ ಸುರಕ್ಷತೆ ಪ್ರಭಾವವು ಶೇ.52.3ರಷ್ಟಟು ಇರುತ್ತದೆ. 60 ವರ್ಷ ಮೇಲ್ಪಟ್ಟವರಲ್ಲೂ ಇಷ್ಟು ರೋಗ ನಿರೋಧಕ ಶಕ್ತಿ ಇರುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

18 ರಿಂದ 59 ವರ್ಷ ವಯಸ್ಸಿನವರಲ್ಲಿ ಎರಡು ಡೋಸ್‌ಗಳ ನಂತರ ನಾಲ್ಕು ತಿಂಗಳ ನಂತರ ಶೇ.77.6ರಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿಲ್ಲ. ಅದೇ ರೀತಿ ಮೂರು ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ಶೇ.83.30ರಷ್ಟು ಮಂದಿ ನಾಲ್ಕು ತಿಂಗಳ ನಂತರದಲ್ಲೂ ಆಸ್ಪತ್ರೆಗೆ ದಾಖಲಾಗಿಲ್ಲ. 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಎರಡು ಡೋಸ್ ಅನ್ನು ಮಾತ್ರ ತೆಗೆದುಕೊಂಡಿಲ್ಲ, ಬದಲಿಗೆ ಬಹುತೇಕರು ಓಮಿಕ್ರಾನ್ ಅಲೆಯ ವಿರುದ್ಧ ರಕ್ಷಣೆ ಪಡೆಯುವುದಕ್ಕೆ ಮೂರನೇ ಡೋಸ್ ಅನ್ನು ಪಡೆದುಕೊಳ್ಳುತ್ತಿದ್ದಾರೆ.

ಮೂರನೇ ಡೋಸ್ ಪಡೆದುಕೊಂಡರೆ ಓಮಿಕ್ರಾನ್ ಸೋಂಕಿನಿಂದ ರಕ್ಷಣೆ

ಮೂರನೇ ಡೋಸ್ ಪಡೆದುಕೊಂಡರೆ ಓಮಿಕ್ರಾನ್ ಸೋಂಕಿನಿಂದ ರಕ್ಷಣೆ

ಕೊರೊನಾವೈರಸ್ ಸೋಂಕಿನ ವಿರುದ್ಧ ದೀರ್ಘಕಾಲದವರೆಗೆ ರಕ್ಷಣೆ ಪಡೆದುಕೊಳ್ಳಬೇಕು. ಹೊಸ ಓಮಿಕ್ರಾನ್ ರೂಪಾಂತರವು ಹೆಚ್ಚುತ್ತಿರುವುದರ ಮಧ್ಯೆ ಆಸ್ಪತ್ರೆಗೆ ದಾಖಲಾಗುವ ಜನರನ್ನು ರಕ್ಷಿಸುವುದಕ್ಕೆ ಮೂರನೇ ಡೋಸ್ ತೀರಾ ಅತ್ಯಗತ್ಯವಾಗಿದೆ. ಮೂರನೇ ಡೋಸ್ ಲಸಿಕೆ ಪಡೆದುಕೊಂಡವರಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗಿರುತ್ತದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಬೂಸ್ಟರ್ ಡೋಸ್ ಲಸಿಕೆಗೆ ಓಮಿಕ್ರಾನ್ ಉಪ-ತಳಿಗಳೇ ಟಾರ್ಗೆಟ್

ಬೂಸ್ಟರ್ ಡೋಸ್ ಲಸಿಕೆಗೆ ಓಮಿಕ್ರಾನ್ ಉಪ-ತಳಿಗಳೇ ಟಾರ್ಗೆಟ್

ಕೊರೊನಾವೈರಸ್ ಸೋಂಕಿನ ಓಮಿಕ್ರಾನ್ ತಳಿಯಲ್ಲೇ BA.4 ಮತ್ತು BA.5 ಉಪ ತಳಿಗಳನ್ನು ಗುರಿಯಾಗಿಸಿಕೊಂಡು ಬೂಸ್ಟರ್ ಡೋಸ್ ಲಸಿಕೆಯನ್ನು ಹೊರತರಬಹುದು ಎಂದು ಯುಎಸ್ ಅಧ್ಯಕ್ಷ ಜೋ ಬೈಡನ್ ಆಡಳಿತ ಮಂಡಳಿಯು ತಿಳಿಸಿದೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಅನುಮೋದನೆಯ ನಂತರ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ ಈ ವಾರ ಫೈಜರ್ ಮತ್ತು ಮಾಡರ್ನಾದ ಲಸಿಕೆಗಳನ್ನು ಅಧಿಕೃತಗೊಳಿಸಿದೆ.

ಅಮೆರಿಕಾದಲ್ಲಿ ಓಮಿಕ್ರಾನ್ ರೂಪಾಂತರದ ಆತಂಕ

ಅಮೆರಿಕಾದಲ್ಲಿ ಓಮಿಕ್ರಾನ್ ರೂಪಾಂತರದ ಆತಂಕ

ಈ ಹಿಂದೆ ನಡೆಸಿದ ಅಧ್ಯಯನಗಳಿಂದ ಕೋವಿಡ್-19 ಲಸಿಕೆಯ ಮೊದಲ ಎರಡು ಡೋಸ್ ಅಷ್ಟಾಗಿ ಲಸಿಕೆ ನೀಡುವುದಕ್ಕೆ ಸಾಧ್ಯವಿಲ್ಲ ಎಂಬುದನ್ನು ಸಾಬೀತುಪಡಿಸಿತ್ತು. ಆದರೆ ಓಮಿಕ್ರಾನ್ ಸೋಂಕು ಯುಎಸ್ ನೆಲದಲ್ಲಿ ಆತಂಕವನ್ನು ಸೃಷ್ಟಿಸಿತು. 2021ರ ನವೆಂಬರ್ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಸೋಂಕು ಪತ್ತೆಯಾಗಿತ್ತು. ಅಲ್ಲಿಂದ ಮುಂದೆ ಚಳಿಗಾಲದಲ್ಲಿ ಅಮೆರಿಕಾದಲ್ಲಿ ಹೊಸ ಅಲೆ ಸೃಷ್ಟಿಗೆ ಓಮಿಕ್ರಾನ್ ರೂಪಾಂತರವು ಕಾರಣವಾಯಿತು. ಆಸ್ಪತ್ರೆಗೆ ದಾಖಲಾಗುವವರು ಹಾಗೂ ಐಸಿಯು ಸೇರುವ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂತು. ಒಂದು ಹಂತದಲ್ಲಿ ಸಾವಿನ ಪ್ರಕರಣಗಳು ಹೆಚ್ಚಳವಾಯಿತು.

ಓಮಿಕ್ರಾನ್ ರೂಪಾಂತರ ಮತ್ತು BA.4 ಮತ್ತು BA.5 ಉಪ ತಳಿಗಳು ಮನುಷ್ಯನ ದೇಹದಲ್ಲಿ ಮೊದಲ ಎರಡು ಡೋಸ್ ಲಸಿಕೆಯಿಂದ ಹುಟ್ಟಿಕೊಂಡಿದ್ದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವ ಕೆಲಸವನ್ನು ಮಾಡಿದವು. ಜನರ ದೇಹದಲ್ಲಿ ಇರುವ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮವನ್ನು ಬೀರಿದವು.

English summary
Third doses of Coronavirus vaccine provide protection against the highly omicron variant than first two doses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X