ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಸುಲಭ ಉಪಾಯದಿಂದ ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಇದೆ ಎಂದು ತಿಳಿದುಕೊಳ್ಳಿ

|
Google Oneindia Kannada News

ನಮ್ಮ ಮನೆಗಳಲ್ಲಿ ಸಿಲಿಂಡರ್ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ನಿರ್ದಿಷ್ಟ ಸಂದರ್ಭದಲ್ಲಿ ಸಿಲಿಂಡರ್ ಖಾಲಿಯಾದರೆ, ನಾವು ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ರಾತ್ರಿ ಊಟ ತಯಾರಿಸುವ ಮಧ್ಯೆ ಸಿಲಿಂಡರ್ ನಲ್ಲಿ ಗ್ಯಾಸ್ ಖಾಲಿಯಾದರೆ ಆ ದಿನ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಕೊಂಡು ರಾತ್ರಿ ಕಳೆಯಬೇಕು.

ಸಿಂಗಲ್ ಗ್ಯಾಸ್ ಸಿಲಿಂಡರ್ ಇರುವ ಮನೆಗಳಲ್ಲಿ ಏಕಾಏಕಿ ಗ್ಯಾಸ್ ಖಾಲಿಯಾಗುವುದರಿಂದ ಆಗುವ ತೊಂದರೆಗಳು ಸಾಕಷ್ಟು. ಹೀಗಾಗಿ ಮನೆಯಲ್ಲಿ ಮಹಿಳೆಯರು ಸಿಲಿಂಡರ್‌ನಲ್ಲಿ ಗ್ಯಾಸ್ ಎಷ್ಟು ಇದೆ ಎಂದು ಮುಂಚಿತವಾಗಿ ತಿಳಿದುಕೊಳ್ಳಲು ಸಿಲಿಂಡರ್ ಅನ್ನು ಎತ್ತುವ ಮೂಲಕ ಅಥವಾ ಗ್ಯಾಸ್ ಜ್ವಾಲೆಯನ್ನು ನೋಡುವ ಮೂಲಕ ಕಂಡುಹಿಡಿಯುವ ಪ್ರಯತ್ನಗಳನ್ನು ಮಾಡುತ್ತಾರೆ. ಈ ಮೂಲಕ ಸಿಲಿಂಡರ್ ಅವಧಿ ಮುಗಿಯಲಿದೆ ಎಂದು ಅಂದಾಜಿಸಲಾಗುತ್ತದೆ. ಆದರೆ ಇಂದು ನಾವು ಈ ಸಮಸ್ಯೆಗಳಿಗೆ ಸರಳ ಪರಿಹಾರವನ್ನು ತಂದಿದ್ದೇವೆ. ಈ ಅಳತೆಯ ಮೂಲಕ, ಸಿಲಿಂಡರ್‌ನಲ್ಲಿ ಎಷ್ಟು ಗ್ಯಾಸ್ ಉಳಿದಿದೆ ಎಂಬುದನ್ನು ನೀವು ಕಂಡುಹಿಡಿಯಬಹುದು ಮತ್ತು ಅದರ ಪ್ರಕಾರ ಸಿಲಿಂಡರ್ ಅನ್ನು ಮುಂಚಿತವಾಗಿ ಬುಕ್ ಮಾಡಬಹುದು.

Breaking; ಗೃಹ ಬಳಕೆ ಸಿಲಿಂಡರ್‌ಗಳ ದರ ಏರಿಕೆBreaking; ಗೃಹ ಬಳಕೆ ಸಿಲಿಂಡರ್‌ಗಳ ದರ ಏರಿಕೆ

ಒದ್ದೆಯಾದ ಟವೆಲ್ ಅಥವಾ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಅದನ್ನು ಸಿಲಿಂಡರ್ ಸುತ್ತಲೂ ಕಟ್ಟಿ. ಸ್ವಲ್ಪ ಸಮಯದ ನಂತರ ಸಿಲಿಂಡರ್ ಹೊರಗಿನಿಂದ ಒದ್ದೆಯಾದಾಗ, ಆ ಬಟ್ಟೆಯನ್ನು ತೆಗೆದುಹಾಕಿ. ಕೆಲವು ಸೆಕೆಂಡುಗಳ ನಂತರ ಸಿಲಿಂಡರ್ನ ಕೆಲವು ಭಾಗವು ಬೇಗನೆ ಒಣಗಲು ಪ್ರಾರಂಭಿಸಿದೆ ಎಂದು ನೀವು ಗಮನಿಸಬಹುದು. ಸ್ವಲ್ಪ ಒಣಗಿದ ಭಾಗದವರೆಗಿನ ಅನಿಲವು ಖಾಲಿಯಾಗುತ್ತದೆ ಮತ್ತು ಅನಿಲವು ತೇವದ ಭಾಗದಲ್ಲಿ ಮಾತ್ರ ಉಳಿಯುತ್ತದೆ.

How much gas in remain in lpg cylinder tips and tricks

ಸಿಲಿಂಡರ್‌ನ ಖಾಲಿ ಭಾಗವು ಬಿಸಿಯಾಗಿರುವುದರಿಂದ ಇದು ಸಂಭವಿಸುತ್ತದೆ. ಆದ್ದರಿಂದ ಅದು ಹೊರಗಿನಿಂದಲೂ ಒಣಗಲು ಪ್ರಾರಂಭಿಸುತ್ತದೆ. ಅದೇ ಸಮಯದಲ್ಲಿ, ದ್ರವ ಅನಿಲವನ್ನು ತುಂಬಿದ ಭಾಗವು ತುಲನಾತ್ಮಕವಾಗಿ ಕಡಿಮೆ ಬಿಸಿಯಾಗಿರುತ್ತದೆ. ಈ ಕಾರಣದಿಂದಾಗಿ ಅದು ಹೊರಗಿನಿಂದ ತೇವವಾಗಿ ಕಾಣುತ್ತದೆ. ಈ ರೀತಿಯಾಗಿ ಸಿಲಿಂಡರ್‌ನ ಯಾವ ಭಾಗದವರೆಗೆ ಅನಿಲ ಉಳಿದಿದೆ ಎಂಬುದನ್ನು ಕಂಡುಹಿಡಿಯಬಹುದು.

How much gas in remain in lpg cylinder tips and tricks

Recommended Video

Pollard ಹೊಡೆತ ತಿಂದ ಅಂಪೈರ್ ಸುಸ್ತ್,ರೋಹಿತ್ ಶರ್ಮಾ‌ ಶಾಕ್!! | Oneindia Kannada

ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಪ್ರಯತ್ನಿಸುವ ಮುನ್ನ ಮೊದಲು ಸಂಬಂಧಿತ ತಜ್ಞರೊಂದಿಗೆ ಸಮಾಲೋಚಿಸಿ.

English summary
know how much gas is in the cylinder with this easy trick before booking.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X