ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಾವ ಜಾತಿಯ ಮತ ಯಾವ ಪಕ್ಷದ ಪರ? ಇಲ್ಲಿದೆ ಕರ್ನಾಟಕದ ಲೆಕ್ಕಾಚಾರ

By ವಿಕಾಸ್ ನಂಜಪ್ಪ
|
Google Oneindia Kannada News

ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಿಂದ ಲಿಂಗಾಯತರ ಮತಗಳು ಬಿಜೆಪಿಗೆ ದೊಡ್ಡ ಪ್ರಮಾಣದಲ್ಲಿ ಕೈ ತಪ್ಪುತ್ತವೆ ಎಂಬ ಲೆಕ್ಕಾಚಾರ ಈ ಬಾರಿಯ ವಿಧಾನಸಭೆ ಚುನಾವಣೆಯ ವೇಳೆ ಏನಿತ್ತು, ಅದು ಸುಳ್ಳಾಗಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತುಂಬ ಸ್ಪಷ್ಟವಾಗಿ ಕಾಣುವಂತೆ ಲಿಂಗಾಯತ ಸಮುದಾಯ ಬಿಜೆಪಿಯ ಬೆನ್ನಿಗೆ ನಿಂತಿದೆ.

ನೂರಾನಾಲ್ಕು ಸ್ಥಾನಗಳನ್ನು ಗಳಿಸಿದ ಬಿಜೆಪಿ, ಬಹುಮತ ಪಡೆಯಲು ವಿಫಲ ಆಗಿದ್ದು ಹೌದಾದರೂ ಆ ಪಕ್ಷದ ಪ್ರಬಲ ವೋಟ್ ಬ್ಯಾಂಕ್ ಆದ ಲಿಂಗಾಯತ ಸಮುದಾಯ ಕೈ ಹಿಡಿದಿರುವುದು ಸ್ಪಷ್ಟವಾಗುತ್ತದೆ. ಅಂದ ಹಾಗೆ ಈ ಸಲ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಸಿಕ್ಕ ಮತ ಪ್ರಮಾಣ ಎಷ್ಟು ಮತ್ತು ಇತರ ಅಂಕಿ-ಅಂಶಗಳ ಮಾಹಿತಿ ಇಲ್ಲಿದೆ.

ವಿಧಾನಸೌಧದಲ್ಲಿ ಯಾವ ಜಾತಿಯ ಶಾಸಕರ ಬಲ ಎಷ್ಟು? ಇಲ್ಲಿದೆ ಮಾಹಿತಿವಿಧಾನಸೌಧದಲ್ಲಿ ಯಾವ ಜಾತಿಯ ಶಾಸಕರ ಬಲ ಎಷ್ಟು? ಇಲ್ಲಿದೆ ಮಾಹಿತಿ

ಕಾಂಗ್ರೆಸ್ ಪಡೆದ ಮತಗಳ ಪ್ರಮಾಣ ಶೇ 38, ಬಿಜೆಪಿ ಪಡೆದದ್ದು ಶೇ 36.2, ಇನ್ನು ಜೆಡಿಎಸ್ ಬುಟ್ಟಿಗೆ ಬಿದ್ದಿದ್ದು ಶೇ 18.3ರಷ್ಟು ಮತ ಪ್ರಮಾಣ. ಅಲ್ಲಿಗೆ 2013ಕ್ಕೆ ಹೋಲಿಸಿದರೆ ಕಾಂಗ್ರೆಸ್ ಪಡೆದ ಮತ ಪ್ರಮಾಣದಲ್ಲಿ ಹೆಚ್ಚು ಕಡಿಮೆ ಯಾವುದೇ ವ್ಯತ್ಯಾಸ ಆಗಿಲ್ಲ. ಅಂದರೆ ಆಡಳಿತವಿರೋಧಿ ಅಲೆ ಅಂತೇನೂ ಕಾಣಿಸುವುದಿಲ್ಲ.

ಕರಾವಳಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

ಕರಾವಳಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್

ಇನ್ನು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕೆಜೆಪಿ ಹಾಗೂ ಬಿಎಸ್ ಆರ್ ಕಾಂಗ್ರೆಸ್ ಸೇರಿ ಪಡೆದ ಒಟ್ಟು ಮತ ಪ್ರಮಾಣ ಶೇ 32.3. ಇನ್ನು ಕರಾವಳಿ ಕರ್ನಾಟಕದಲ್ಲಿ ಈ ಬಾರಿ ಇಪ್ಪತ್ತೊಂದು ಸ್ಥಾನಗಳ ಪೈಕಿ ಹದಿನೆಂಟರಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಮತ ಗಳಿಕೆ ಪ್ರಮಾಣ ಶೇ ಐವತ್ತರಷ್ಟು. ಆದರೆ ದಕ್ಷಿಣ ಕರ್ನಾಟಕ ಭಾಗದಲ್ಲಿ 51 ಸ್ಥಾನಗಳಲ್ಲಿ ಬಿಜೆಪಿ ಗೆದ್ದಿದ್ದು 9 ಸ್ಥಾನಗಳಲ್ಲಿ ಮಾತ್ರ.

ಹೈ-ಕ ಭಾಗದಲ್ಲಿ ಕಾಂಗ್ರೆಸ್ ಗೆ ಪ್ಲಸ್

ಹೈ-ಕ ಭಾಗದಲ್ಲಿ ಕಾಂಗ್ರೆಸ್ ಗೆ ಪ್ಲಸ್

ದಕ್ಷಿಣ ಕರ್ನಾಟಕ ಭಾಗದಲ್ಲಿ ಜೆಡಿಎಸ್ 25 ಸ್ಥಾನಗಳಲ್ಲಿ ಗೆದ್ದಿದೆ. ಇನ್ನು ಕಳೆದ ವಿಧಾನಸಭಾ ಚುನಾವಣೆಗೆ ಹೋಲಿಸಿದರೆ ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಶೇ 7.6ರಷ್ಟು ಹೆಚ್ಚು ಮತ ಗಳಿಸಿದೆ. ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಲ್ಲಿ ಕಾಂಗ್ರೆಸ್ ಶೇ 42.2ರಷ್ಟು ಮತಗಳನ್ನು ಗಳಿಸಿದೆ.

ಉಲ್ಟಾ ಹೊಡೆದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ

ಉಲ್ಟಾ ಹೊಡೆದ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರ

ಅಂದಹಾಗೆ, ವಿಧಾನಸಭಾ ಚುನಾವಣೆ ಹತ್ತಿರವಾದಂತೆ ಸಿದ್ದರಾಮಯ್ಯ ಅವರು ಅಹಿಂದ ಸಮೀಕರಣದ ದಾಳವನ್ನೇ ಉರುಳಿಸಿದರು. ಈಗಿನ ಫಲಿತಾಂಶ ನೋಡಿದರೆ ಅಂತಿಮವಾಗಿ ಅದರಿಂದ ಲಾಭವಾದಂತೇನೂ ಕಾಣುವುದಿಲ್ಲ. ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಕೂಡ ಉಲ್ಟಾ ಹೊಡೆಯಿತು. ಲಿಂಗಾಯತ ಸಮುದಾಯದ ಶೇ ಅರವತ್ತೆರಡರಷ್ಟು ಮತಗಳು ಬಿಜೆಪಿ ಪಾಲಾದವು.

ಮೇಲ್ಜಾತಿ ಮತಗಳು ಕಮಲದ ತೆಕ್ಕೆಗೆ

ಮೇಲ್ಜಾತಿ ಮತಗಳು ಕಮಲದ ತೆಕ್ಕೆಗೆ

ಈ ಬಾರಿಯ ಚುನಾವಣೆಯಲ್ಲಿ ಚಲಾವಣೆಯಾದ ಮೇಲ್ಜಾತಿಯ ಮತಗಳ ಪೈಕಿ ಶೇ ಐವತ್ತೆರಡರಷ್ಟು ಬಿಜೆಪಿ ಪಾಲಾಗಿವೆ. ಇತರ ಹಿಂದುಳಿದ ಜಾತಿಗಳ ಮತಗಳು ಶೇ ನಲವತ್ತರಷ್ಟು ಕಾಂಗ್ರೆಸ್ ಪಾಲಾಗಿದ್ದರೆ, ಶೇ ಮೂವತ್ತೇಳರಷ್ಟು ಮತಗಳು ಬಿಜೆಪಿಗೆ ಬಿದ್ದಿವೆ. ಸಿದ್ದರಾಮಯ್ಯ ಅವರ ಪರವಾಗಿ ಶೇ 48ರಷ್ಟು ದಲಿತರು ಮತ ಚಲಾಯಿಸಿದ್ದಾರೆ. ಈ ಮತ ಪ್ರಮಾಣ ಬಿಜೆಪಿಗೆ ಸಿಕ್ಕಿರುವುದು ಶೇ 28ರಷ್ಟು ಮಾತ್ರ.

ಕ್ರಿಶ್ಚಿಯನ್ನರ ಮತಗಳ ಪೈಕಿ ಬಿಜೆಪಿಗೆ ಹೆಚ್ಚು ಪಾಲು

ಕ್ರಿಶ್ಚಿಯನ್ನರ ಮತಗಳ ಪೈಕಿ ಬಿಜೆಪಿಗೆ ಹೆಚ್ಚು ಪಾಲು

ಆದರೆ, ಕ್ರಿಶ್ಚಿಯನ್ನರ ಮತ ಪ್ರಮಾಣದ ಬಗ್ಗೆ ಸಿಎಸ್ ಡಿಎಸ್ ಸಮೀಕ್ಷೆ ಅಚ್ಚರಿಯ ಅಂಶವನ್ನು ಹೊರಹಾಕಿದೆ. ಕ್ರಿಶ್ಚಿಯನ್ನರ ಶೇ ನಲವತ್ತರಷ್ಟು ಮತಗಳು ಬಿಜೆಪಿಗೆ ಬಿದ್ದಿವೆ. ಇನ್ನು ಆದಿವಾಸಿಗಳ ಪೈಕಿ ಶೇ 46ರಷ್ಟು ಕಾಂಗ್ರೆಸ್ ಪರವಾಗಿ, ಶೇ 32ರಷ್ಟು ಬಿಜೆಪಿಗೆ ಹಾಗೂ ಜೆಡಿಎಸ್ ಗೆ ಶೇ 17ರಷ್ಟು ಮತಗಳು ದೊರೆತಿವೆ.

ಮುಸ್ಲಿಮರ ಶೇ 65ರಷ್ಟು ಮತಗಳು 'ಕೈ'ಗೆ

ಮುಸ್ಲಿಮರ ಶೇ 65ರಷ್ಟು ಮತಗಳು 'ಕೈ'ಗೆ

ಸಿಎಸ್ ಡಿಎಸ್ ಸಮೀಕ್ಷೆಯಿಂದ ಬಯಲಾಗಿರುವ ಮತ್ತೊಂದು ಅಂಶದ ಪ್ರಕಾರ, ಶೇ 65ರಷ್ಟು ಮುಸ್ಲಿಮರು ಕಾಂಗ್ರೆಸ್ ಪರವಾಗಿ ನಿಂತಿದ್ದಾರೆ. ಬಡವರ ಮತಗಳಲ್ಲಿ ಶೇ 42ರಷ್ಟು, ಕೆಳ ವರ್ಗದ ಶೇ 39ರಷ್ಟು ಮತಗಳು, ಮಧ್ಯಮ ವರ್ಗದ ಶೇ 34ರಷ್ಟು ಹಾಗೂ ಮೇಲ್ವರ್ಗದ ಶೇ 33ರಷ್ಟು ಮತಗಳು ಕಾಂಗ್ರೆಸ್ ಪರವಾಗಿ ಬಿದ್ದಿವೆ.

English summary
Let us take a look at how the state voted. The Congress ended up with a vote share of 38 per cent and the BJP got 36.2 per cent. The JD(S) on the other hand got 18.3 per cent of the vote share. This indicates that there was no anti-incumbency factor and the Congress’s vote share more or less the same compared to 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X