ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಸುಂಕದ ಕಟ್ಟೆ'ಗಳಲ್ಲಿ FASTag ಹೇಗೆ ಕೆಲಸ ಮಾಡುತ್ತದೆ?

|
Google Oneindia Kannada News

ದೇಶದಲ್ಲಿ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಚಲಿಸುವ ವಾಹನಗಳು ಡಿ.1ರಿಂದ ಫಾಸ್‌ಟ್ಯಾಗ್ (FASTag) ಹೊಂದುವುದು ಕಡ್ಡಾಯವಾಗಲಿದೆ. ಸುಂಕದ ಕಟ್ಟೆಗಳಲ್ಲಿ (ಟೋಲ್ ಸಂಗ್ರಹ ಕೇಂದ್ರ) ಉಂಟಾಗುವ ಉದ್ದನೆಯ ಸರದಿಯನ್ನು ತಪ್ಪಿಸಲು ಈ ಫಾಸ್‌ಟ್ಯಾಗ್ ತಂತ್ರಜ್ಞಾನ ನೆರವಾಗಲಿದೆ. ಫಾಸ್‌ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಸುಂಕ ಕಟ್ಟುವುದು ಅನಿವಾರ್ಯ. ಫಾಸ್‌ಟ್ಯಾಗ್ ತಂತ್ರಜ್ಞಾನ ಏನು? ಇದು ಹೇಗೆ ಕೆಲಸ ಮಾಡುತ್ತದೆ ಎಂಬ ಮಾಹಿತಿ ಇಲ್ಲಿದೆ.

ಫಾಸ್‌ಟ್ಯಾಗ್ ಪ್ರೀ-ಪೇಯ್ಡ್ ಟ್ಯಾಗ್ ಸೌಲಭ್ಯ. ಇದು 2014ರಲ್ಲಿಯೇ ಭಾರತದಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿತ್ತು. ಅದು ಈಗ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲಿಯೂ ಕಡ್ಡಾಯವಾಗಿ ಜಾರಿಯಾಗುತ್ತಿದೆ. ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಇದನ್ನು ನಿರ್ವಹಿಸುತ್ತಿದೆ. ಫಾಸ್‌ಟ್ಯಾಗ್ ಒಂದು ರೀತಿ ವಾಹನಗಳ 'ಆಧಾರ್ ಕಾರ್ಡ್‌'ನಂತೆ ಕಾರ್ಯ ನಿರ್ವಹಿಸುತ್ತದೆ.

FASTag ಅಂದ್ರೇನು? ಡಿ.1 ರಿಂದ ಅದು ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ?FASTag ಅಂದ್ರೇನು? ಡಿ.1 ರಿಂದ ಅದು ಎಲ್ಲಾ ವಾಹನಕ್ಕೂ ಕಡ್ಡಾಯ ಏಕೆ?

ಟೋಲ್ ಫ್ಲಾಜಾಕ್ಕೆ ಪ್ರವೇಶಿಸುವ ವಾಹನವನ್ನು ಈಗ ಮಾಡುತ್ತಿರುವಂತೆ ಶುಲ್ಕ ಪಾವತಿಗಾಗಿ ನಿಲ್ಲಿಸಬೇಕಾಗಿಲ್ಲ. ರೇಡಿಯೋ ತರಂಗಾಂತರ ಗುರುತು (ಆರ್‌ಎಫ್‌ಐಡಿ) ಅಥವಾ ಆರ್‌ಎಫ್‌ಐಡಿ ತಂತ್ರಜ್ಞಾನವು ವಾಹನ ಟೋಲ್ ಫ್ಲಾಜಾದ ಮೂಲಕ ಸಾಗುತ್ತಿದ್ದಂತೆಯೇ ಸ್ವಯಂಚಾಲಿತವಾಗಿ ಫಾಸ್‌ಟ್ಯಾಗ್‌ನಲ್ಲಿರುವ ಹಣ ಕಡಿತಗೊಳ್ಳುವಂತೆ ಮಾಡುತ್ತದೆ.

ಐದು ವರ್ಷಗಳ ವ್ಯಾಲಿಡಿಟಿ

ಐದು ವರ್ಷಗಳ ವ್ಯಾಲಿಡಿಟಿ

ವಾಹನ ಮಾಲೀಕರು ತಮ್ಮ ಟ್ಯಾಗ್‌ ಖಾತೆಯನ್ನು ಚಾಲನೆಗೊಳಿಸಿದ ಬಳಿಕ ಅದನ್ನು ವಾಹನದ ವಿಂಡ್‌ಸ್ಕ್ರೀನ್‌ಗೆ ಅಳವಡಿಸಲಾಗುತ್ತದೆ. ಟೋಲ್ ಫ್ಲಾಜಾದಲ್ಲಿ ಅಳವಡಿಸಿರುವ ಆಂಟೆನಾ ವಿಂಡ್‌ಸ್ಕ್ರೀನ್‌ನಲ್ಲಿರುವ ಟ್ಯಾಗ್‌ನ ಕೋಡ್‌ಗಳನ್ನು ಗ್ರಹಿಸುತ್ತದೆ. ಇದರಿಂದ ತಾನಾಗಿಯೇ ವಾಹನ ಮಾಲೀಕರ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಸುಂಕ ಪಾವತಿಗಾಗಿ ವಾಹನ ನಿಲ್ಲಿಸಿ ಹಣ ಕೊಡುವ ಸಮಯ ಇದರಿಂದ ಉಳಿತಾಯವಾಗುತ್ತದೆ. ಜತೆಗೆ ಚಿಲ್ಲರೆ ಸಮಸ್ಯೆಯೂ ಎದುರಾಗುವುದಿಲ್ಲ. ಒಮ್ಮೆ ಖರೀದಿಸಿದ ಬಳಿಕ ಈ ಟ್ಯಾಗ್ ಐದು ವರ್ಷಗಳ ಅವಧಿವರೆಗೆ ಸಿಂಧುವಾಗಿರುತ್ತದೆ.

ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಸುಂಕ

ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಸುಂಕ

ಡಿ.1ರಿಂದ ಎಲ್ಲ ರಾಷ್ಟ್ರೀಯ ಹೆದ್ದಾರಿಗಳ ಲೇನ್‌ಗಳು ಫಾಸ್‌ಟ್ಯಾಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕಡ್ಡಾಯ. ಹಾಗೆಯೇ ವಾಹನಗಳ ಮಾಲೀಕರು ಕೂಡ ತಮ್ಮ ವಾಹನಗಳಲ್ಲಿ ಫಾಸ್‌ಟ್ಯಾಗ್‌ಅನ್ನು ಹೊಂದಿರಬೇಕು. ಇಲ್ಲದಿದ್ದರೆ ಫಾಸ್‌ಟ್ಯಾಗ್‌ಗೆ ಮಾತ್ರ ಅವಕಾಶ ಕಲ್ಪಿಸುವ ಲೇನ್‌ನಲ್ಲಿ ಹೋದರೆ ದುಪ್ಪಟ್ಟು ಸುಂಕ ತೆರಬೇಕಾಗುತ್ತದೆ.

ಫಾಸ್‌ಟ್ಯಾಗ್ ಬ್ರ್ಯಾಂಡ್ ಹೆಸರು ಭಾರತೀಯ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪೆನಿ ನಿಯಮಿತದ (ಐಎಚ್‌ಎಂಸಿಎಲ್) ಸ್ವಾಮ್ಯಕ್ಕೆ ಒಳಪಟ್ಟಿದೆ. ಐಎಚ್ಎಂಸಿಎಲ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್‌ಎಚ್‌ಎಐ) ವಿದ್ಯುನ್ಮಾನ ಸುಂಕ ವಸೂಲಿ ಮತ್ತು ಅದಕ್ಕೆ ಪೂರಕವಾದ ಯೋಜನೆಗಳನ್ನು ನಿರ್ವಹಿಸುತ್ತದೆ. ಪ್ರಸ್ತುತ ದೇಶದಲ್ಲಿನ 500ಕ್ಕೂ ಅಧಿಕ ಟೋಲ್ ಪ್ಲಾಜಾಗಳಲ್ಲಿ ಫಾಸ್‌ಟ್ಯಾಗ್ ಸ್ವೀಕರಿಸುವ ವ್ಯವಸ್ಥೆ ಇದೆ.

ಡಿಸೆಂಬರ್‌ನಿಂದ ಫಾಸ್ಟ್‌ಟ್ಯಾಗ್‌ ಕಡ್ಡಾಯ: ತಪ್ಪಿದರೆ ದುಪ್ಪಟ್ಟು ಟೋಲ್ ಕಟ್ಟಿ

ಫಾಸ್‌ಟ್ಯಾಗ್ ಎಲ್ಲೆಲ್ಲಿ ಸಿಗುತ್ತದೆ?

ಫಾಸ್‌ಟ್ಯಾಗ್ ಎಲ್ಲೆಲ್ಲಿ ಸಿಗುತ್ತದೆ?

ಫಾಸ್‌ಟ್ಯಾಗ್‌ಗಳನ್ನು ಎಲ್ಲ ಟೋಲ್ ಪ್ಲಾಜಾಗಳಲ್ಲಿ, ಇಂಡಿಯನ್ ಆಯಿಲ್, ಹಿಂದೂಸ್ಥಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಪೆಟ್ರೋಲ್‌ ಬಂಕ್‌ಗಳಲ್ಲಿ, ಬ್ಯಾಂಕುಗಳು, ಪೇಟಿಎಂ ಮೊಬೈಲ್ ಆಪ್ ಹಾಗೂ ಅಮೇಜಾನ್.ಇನ್‌ಗಳಿಂದ ಪಡೆದುಕೊಳ್ಳಬಹುದು.

ದೇಶದಾದ್ಯಂತ ದೊರಕುವ ಪೆಟ್ರೋಲ್‌ ಬಂಕ್‌ಗಳಲ್ಲಿ ಲಭ್ಯವಾಗುವ ಫಾಸ್‌ಟ್ಯಾಗ್‌ಗಳನ್ನು ಗ್ರಾಹಕರು ಬಳಿಕ ತಮ್ಮ ಆಯ್ಕೆಯ ಬ್ಯಾಂಕ್ ಖಾತೆಗೆ ಜೋಡಣೆ ಮಾಡಿಕೊಳ್ಳಬಹುದು. ಈ ಸೌಲಭ್ಯವು ಗ್ರಾಹಕರಿಗೆ ಹೆಚ್ಚು ನೆರವಾಗಲಿದೆ. ಜತೆಗೆ ನಿಮ್ಮ ಗ್ರಾಹಕರನ್ನು ತಿಳಿಯಿರಿ (ಕೆವೈಸಿ) ನಿಯಮಗಳನ್ನು ತುಂಬಬೇಕಾದ ಅಗತ್ಯವಿಲ್ಲ.

ಎಎಸ್‌ಬಿಐ, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಪೇಟಿಎಂ ಪೇಮೆಂಟ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಎಫ್‌ಸಿ ಫರ್ಸ್ಟ್ ಬ್ಯಾಂಕ್‌ಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ಮೂಲಕ ಗ್ರಾಹಕರು ತಮ್ಮ ಕಾರ್, ಜೀಪ್, ವ್ಯಾನ್‌ ಮುಂತಾದ ವಾಹನಗಳಿಗೆ ಆನ್‌ಲೈನ್‌ ಮೂಲಕ ಫಾಸ್‌ಟ್ಯಾಗ್ ಖರೀದಿ ಮಾಡಬಹುದು.

ಒಮ್ಮೆ ಫಾಸ್‌ಟ್ಯಾಗ್‌ಅನ್ನು ಚಾಲನೆಗೊಳಿಸಿದರೆ ಬಳಿಕ ಅದನ್ನು 'ಮೈ ಫಾಸ್‌ಟ್ಯಾಗ್ ಕಸ್ಟಮರ್ ಆಪ್ ಮತ್ತು ಫಾಸ್‌ಟ್ಯಾಗ್ ಪಾಯಿಂಟ್ ಆಫ್ ಸೇಲ್ಸ್ ಆಪ್ ಮೂಲಕ ರೀಚಾರ್ಜ್ ಮಾಡಲು ಅವಕಾಶವಿದೆ. ರೀಚಾರ್ಜ್‌ಗೆ ಬ್ಯಾಂಕ್ ಖಾತೆಗಳನ್ನು ಜೋಡಣೆ ಮಾಡಿರುವ ಯುಪಿಐ ಆಪ್‌ಗಳು ಇರುವುದು ಅಗತ್ಯ.

ಫಾಸ್‌ಟ್ಯಾಗ್ ಖರೀದಿಸಲು ಏನು ಬೇಕು?

ಫಾಸ್‌ಟ್ಯಾಗ್ ಖರೀದಿಸಲು ಏನು ಬೇಕು?

ಫಾಸ್‌ಟ್ಯಾಗ್‌ಅನ್ನು ಬ್ಯಾಂಕ್, ಪೆಟ್ರೋಲ್ ಬಂಕ್ ಅಥವಾ ಇತರ ಕಡೆ ಖರೀದಿ ಮಾಡಲು ವಾಹನ ನೋಂದಣಿ ಪ್ರಮಾಣಪತ್ರ, ವಾಹನ ಮಾಲೀಕರ ಪಾಸ್‌ಪೋರ್ಟ್ ಗಾತ್ರದ ಫೋಟೊ, ಗುರುತಿನ ಪತ್ರ ಮತ್ತು ವಿಳಾಸ ಖಾತರಿಯ ದಾಖಲೆ ಬೇಕು.

ದೇಶದ ಟೋಲ್ ಮಾರುಕಟ್ಟೆ ಸಂಗ್ರಹ ವರ್ಷಕ್ಕೆ 20,000 ಕೋಟಿ ಅಂದಾಜಿಸಲಾಗಿದೆ. ಎಲ್ಲ ಹೊಸ ವಾಹನಗಳ ವಿಂಡ್ ಸ್ಕ್ರೀನ್ ಮೇಲೆ ಫಾಸ್‌ಟ್ಯಾಗ್ ಇರುವುದನ್ನು ಸರ್ಕಾರ 2016 ನವೆಂಬರ್‌ನಲ್ಲಿ ಕಡ್ಡಾಯಗೊಳಿಸಿದೆ. ಆಟೊಮೊಬೈಲ್ ತಯಾರಕರಿಗೆ ಈ ವ್ಯವಸ್ಥೆ ಅಳವಡಿಸುವಂತೆ ಸೂಚಿಸಲಾಗಿದೆ. ಹಳೆಯ ವಾಹನಗಳ ಮಾಲೀಕರು ತಮ್ಮ ಕಾರ್ ಡೀಲರ್‌ಗಳ ಮೂಲಕ ಫಾಸ್‌ಟ್ಯಾಗ್‌ಗಳನ್ನು ಪಡೆದುಕೊಳ್ಳಬಹುದು. ಮೊದಲ ಬಾರಿಗೆ ಟ್ಯಾಗ್ ಸೇರಿಕೊಳ್ಳಲು 200 ರೂ. ಶುಲ್ಕ ಪಾವತಿಸಬೇಕು. ಜತೆಗೆ ವಾಹನದ ಮಾದರಿಗೆ ಅನುಗುಣವಾಗಿ ಫಾಸ್‌ಟ್ಯಾಗ್ ನೀಡುವ ಸಂಸ್ಥೆಗೆ ಟ್ಯಾಗ್ ಖರೀದಿ ವೇಳೆ ಠೇವಣಿ ಮೊತ್ತ ಇರಿಸಬೇಕು. ಫಾಸ್‌ಟ್ಯಾಗ್ ಖಾತೆ ಸ್ಥಗಿತಗೊಳಿಸಿದಾಗ ಆ ಠೇವಣಿ ಮೊತ್ತ ಮರಳಿಸಲಾಗುತ್ತದೆ.

ಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕುಡಿ.1ರಿಂದ ಫಾಸ್ಟ್‌ ಟ್ಯಾಗ್ ಇಲ್ಲದಿದ್ದರೆ ದುಪ್ಪಟ್ಟು ಟೋಲ್ ಕಟ್ಬೇಕು

English summary
Using FASTag will be mandatory from Dec 1 for vehicles in NH Toll plazas. How FASTag works? Whats are the benefits of FASTags? Where it is available? Here is the details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X