ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಖಾತೆ, ಮೊಬೈಲ್ ಫೋನ್‌ಗಳ ಆಧಾರ್ ಸಂಖ್ಯೆ ಡೀಲಿಂಕ್ ಮಾಡುವುದು ಹೇಗೆ?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 27: ಬ್ಯಾಂಕ್ ಖಾತೆ ತೆರೆಯಲು, ಶಾಲೆ ಪ್ರವೇಶಾತಿಯಲ್ಲಿ ಮತ್ತು ಮೊಬೈಲ್ ಸಿಮ್ ತೆಗೆದುಕೊಳ್ಳಲು ಆಧಾರ್ ಸಂಖ್ಯೆ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಮಹತ್ವದ ತೀರ್ಪು ನೀಡಿದೆ.

ಆದರೆ, ಈಗಾಗಲೇ ಜನರು ತಮ್ಮ ಬ್ಯಾಂಕ್ ಖಾತೆಗಳನ್ನು ಆಧಾರ್‌ಗೆ ಲಿಂಕ್ ಮಾಡಿಸಿದ್ದಾರೆ. ಆಧಾರ್ ಜೋಡಣೆ ಕಡ್ಡಾಯ ಎಂದು ಬ್ಯಾಂಕ್ ಗಡುವು ನೀಡಿದ್ದರಿಂದ ಅನಿವಾರ್ಯವಾಗಿ ಬ್ಯಾಂಕ್ ಖಾತೆಗೆ ಜನರು ಆಧಾರ್ ಜೋಡಿಸಿದ್ದಾರೆ.

ಮಾತ್ರವಲ್ಲ, ಮೊಬೈಲ್ ಸೇವಾ ಕಂಪೆನಿಗಳು ಹಾಗೂ ಪೇಟಿಎಂ, ಫೋನ್‌ ಪೇ ಮುಂತಾದ ಡಿಜಿಟಲ್ ವ್ಯಾಲೆಟ್‌ಗಳಲ್ಲಿಯೂ ಕೆವೈಸಿ ಅಪ್ಡೇಟ್ ಮಾಡಲು ಆಧಾರ್ ಜೋಡಣೆಯನ್ನು ಕಡ್ಡಾಯಗೊಳಿಸಿದ್ದವು. ಹೊಸ ಸಿಮ್ ತೆಗೆದುಕೊಳ್ಳಲು ಮತ್ತು ಹಳೆಯ ಸಿಮ್ ಉಳಿಸಿಕೊಳ್ಳಲು ಸಹ ಆಧಾರ್ ಸಂಖ್ಯೆ ನೀಡಲೇಬೇಕು ಎಂದು ಸೂಚಿಸಲಾಗಿತ್ತು.

ಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿಯಾವುದಕ್ಕೆ ಆಧಾರ್ ಕಡ್ಡಾಯ? ಯಾವುದಕ್ಕೆ ಕಡ್ಡಾಯವಲ್ಲ? ಚಿತ್ರ ಮಾಹಿತಿ

ಈಗ ಆಧಾರ್ ಕಡ್ಡಾಯವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಕಾರಣ, ಈ ಹಿಂದೆ ಮಾಡಿರುವ ಆಧಾರ್ ಜೋಡಣೆಗಳನ್ನು ಕಡಿತಗೊಳಿಸಲು ಅನೇಕರು ಮುಂದಾಗಿದ್ದಾರೆ. ಆಧಾರ್ ಜೋಡಣೆಯನ್ನು ಕಡಿತಗೊಳಿಸುವುದು (ಅನ್‌ಲಿಂಕ್) ಹೇಗೆ ಎಂಬ ವಿವರ ಇಲ್ಲಿದೆ.

ಮೊಬೈಲ್ ವ್ಯಾಲೆಟ್

ಮೊಬೈಲ್ ವ್ಯಾಲೆಟ್

ಉದಾಹರಣೆಗೆ ಪೇಟಿಎಂಗೆ ಮಾಡಿರುವ ಆಧಾರ್ ಜೋಡಣೆಯನ್ನು ತೆಗೆಯಲು ಈ ಕ್ರಮಗಳನ್ನು ಅನುಸರಿಸಬಹುದು.
* ಪೇಟಿಎಂ ಗ್ರಾಹಕ ಸೇವೆ ಸಂಖ್ಯೆ 01204456456 ಕರೆ ಮಾಡಿ
* ಆಧಾರ್ ಜೋಡಣೆಯನ್ನು ಕಡಿತಗೊಳಿಸಲು ನಿಮ್ಮ ಇ-ಮೇಲ್ ವಿಳಾಸಕ್ಕೆ ಕಳುಹಿಸುವಂತೆ ತಿಳಿಸಿ
* ಪೇಟಿಎಂನಿಂದ ಬರುವ ಮೇಲ್‌ನಲ್ಲಿ ಈ ಮನವಿಯನ್ನು ಕಾರ್ಯಗತಗೊಳಿಸಲು ನಿಮ್ಮ ಆಧಾರ್ ಕಾರ್ಡ್‌ನ ಸ್ಪಷ್ಟ ಚಿತ್ರವನ್ನು ಕಳುಹಿಸುವಂತೆ ಕೋರಲಾಗುತ್ತದೆ. ಅದರಂತೆ ಆ ಸೂಚನೆಯನ್ನು ಪಾಲಿಸಿ.
* ಬಳಿಕ 72 ಗಂಟೆಗಳಲ್ಲಿ ಆಧಾರ್ ಡೀಲಿಂಕ್ ಆಗಲಿದೆ ಎಂದು ಪೇಟಿಎಂನ ದೃಢಪಡಿಸುವ ಮೇಲ್ ಬರಲಿದೆ.
* ಆಧಾರ್ ಡೀಲಿಂಕ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
* ಇದೇ ರೀತಿಯ ಪ್ರಕ್ರಿಯೆಯನ್ನು ಉಳಿದ ಡಿಜಿಟಲ್ ವ್ಯಾಲೆಟ್ ಸಂಸ್ಥೆಗಳಿಗೂ ಅನುಸರಿಸಬಹುದು.

ಬ್ಯಾಂಕ್ ಖಾತೆಗೆ, ಸಿಮ್ ಕಾರ್ಡ್ ಗೆ ಆಧಾರ್ ಕಡ್ಡಾಯ ಸಾಧ್ಯವಿಲ್ಲ: ಸುಪ್ರೀಂಬ್ಯಾಂಕ್ ಖಾತೆಗೆ, ಸಿಮ್ ಕಾರ್ಡ್ ಗೆ ಆಧಾರ್ ಕಡ್ಡಾಯ ಸಾಧ್ಯವಿಲ್ಲ: ಸುಪ್ರೀಂ

ಬ್ಯಾಂಕ್ ಖಾತೆಯಿಂದ ಡೀಲಿಂಕ್ ಮಾಡುವುದು

ಬ್ಯಾಂಕ್ ಖಾತೆಯಿಂದ ಡೀಲಿಂಕ್ ಮಾಡುವುದು

* ನಿಮ್ಮ ಬ್ಯಾಂಕ್‌ನ ಶಾಖೆಗೆ ಭೇಟಿ ನೀಡಿ
* ಆಧಾರ್ ಜೋಡಣೆ ತೆಗೆದುಹಾಕಲು ಫಾರಂ ಪಡೆದುಕೊಳ್ಳಿ
* ಫಾರ್ಮ್ ಭರ್ತಿ ಮಾಡಿ ಸಲ್ಲಿಸಿ
* 48 ಗಂಟೆಗಳಲ್ಲಿ ನಿಮ್ಮ ಆಧಾರ್ ಜೋಡಣೆ ರದ್ದಾಗಲಿದೆ
* ಜೋಡಣೆ ರದ್ದಾಗದೆ ಇದ್ದರೆ, ಬ್ಯಾಂಕ್‌ನ ಗ್ರಾಹಕ ಸೇವೆಗೆ ಕರೆ ಮಾಡಿ ಸರಿಪಡಿಸಬಹುದು.ಬ್ಯಾಂಕ್ ಖಾತೆಗೆ, ಮೊಬೈಲ್ ಸಂಖ್ಯೆಗೆ ಜೋಡಣೆಯಾದ ಆಧಾರ್ ಏನ್ಮಾಡ್ತಾರೆ?

ಬ್ಯಾಂಕ್ ಖಾತೆಗೆ, ಮೊಬೈಲ್ ಸಂಖ್ಯೆಗೆ ಜೋಡಣೆಯಾದ ಆಧಾರ್ ಏನ್ಮಾಡ್ತಾರೆ?ಬ್ಯಾಂಕ್ ಖಾತೆಗೆ, ಮೊಬೈಲ್ ಸಂಖ್ಯೆಗೆ ಜೋಡಣೆಯಾದ ಆಧಾರ್ ಏನ್ಮಾಡ್ತಾರೆ?

ಮೊಬೈಲ್ ಫೋನ್ ನಂಬರ್

ಮೊಬೈಲ್ ಫೋನ್ ನಂಬರ್

* ಮೊಬೈಲ್ ಕಂಪೆನಿ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿ
* ಆಧಾರ್ ಸಂಪರ್ಕ ಕಡಿತಗೊಳಿಸುವಂತೆ ಕೋರಿಕೆ ಸಲ್ಲಿಸಿ. ಅದಕ್ಕೆ ಸಂಬಂಧಿಸಿದ ಇ-ಮೇಲ್ ರವಾನಿಸುವಂತೆ ಕೇಳಿ
* ಮೊಬೈಲ್ ಕಂಪೆನಿಯಿಂದ ಆಧಾರ್ ಕಾರ್ಡ್‌ನ ಫೋಟೊ ಕಳಿಸುವಂತೆ ಕೋರಿಕೆಯ ಮೇಲ್ ನಿಮಗೆ ತಲುಪುತ್ತದೆ. ಅವರ ಸೂಚಿಸಿದ ಕ್ರಮಗಳನ್ನು ಅನುಸರಿಸಿ.
* 72 ಗಂಟೆಗಳಲ್ಲಿ ಆಧಾರ್ ಜೋಡಣೆಯನ್ನು ರದ್ದುಗೊಳಿಸಿದ್ದನ್ನು ದೃಢಪಡಿಸುವ ಮೇಲ್ ನಿಮಗೆ ಸಿಗುತ್ತದೆ.

ಪರಿಶೀಲಿಸುವುದು ಹೇಗೆ?

ಪರಿಶೀಲಿಸುವುದು ಹೇಗೆ?

ಈಗಾಗಲೇ ಆಧಾರ್ ಜೋಡಣೆ ಮಾಡಿರುವ ವಿವಿಧ ಖಾಸಗಿ ಕಂಪೆನಿಗಳಿಗೆ ಅದನ್ನು ಕಡಿತಗೊಳಿಸುವ ಪ್ರಕ್ರಿಯೆ ದೊಡ್ಡ ತಲೆನೋವಾಗಲಿದೆ.

ಆಧಾರ್ ಜೋಡಣೆಯನ್ನು ತೆಗೆದುಹಾಕಿದರೂ ಖಾಸಗಿ ಕಂಪೆನಿಗಳು ಅಲ್ಲಿ ಜನರ ಖಾಸಗಿತನದ ಗೋಪ್ಯತೆಯನ್ನು ಕಾಯ್ದುಕೊಳ್ಳುತ್ತವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಸುಲಭವಲ್ಲ.

ಏಕೆಂದರೆ ಆಧಾರ್‌ಗೆ ಸಂಬಂಧಿಸಿದಂತೆ ಅವರು ಪಡೆದುಕೊಂಡ ಸಂಪೂರ್ಣ ದತ್ತಾಂಶವನ್ನು ಎಲ್ಲ ಕಡತ, ದಾಖಲೆಗಳಿಂದಲೂ ಅಳಿಸಿ ಹಾಕಬೇಕು. ಈ ಪ್ರಕ್ರಿಯೆ ನಡೆದಿದೆ ಎನ್ನುವುದನ್ನು ಪರಿಶೀಲಿಸುವುದು ಕೂಡ ಕಷ್ಟ.

ರಿಲಯನ್ಸ್‌ನಂತಹ ಟೆಲಿಕಾಂ ಕಂಪೆನಿಗಳು ಆರಂಭದಿಂದಲೂ ಆಧಾರ್ ಸಂಖ್ಯೆಗೆ ಮಾತ್ರವೇ ತನ್ನ ಸಿಮ್‌ಗಳನ್ನು ವಿತರಿಸಿವೆ. ಉಳಿದ ಕಂಪೆನಿಗಳು ಹಳೆಯ ಗ್ರಾಹಕರು ಆಧಾರ್ ಜೋಡಣೆ ಮಾಡುವಂತೆ ಸೂಚಿಸಿದ್ದವು.

ಈಗ ರಿಲಯನ್ಸ್ ಕಂಪೆನಿಯ ಜಿಯೊ ಸಿಮ್‌ಗೆ ಆಧಾರ್ ಸಂಖ್ಯೆ ನೀಡಿರುವ ಗ್ರಾಹಕರು ಯಾವ ಕ್ರಮ ಅನುಸರಿಸಬೇಕು ಎನ್ನುವುದು ಸ್ಪಷ್ಟವಾಗಿಲ್ಲ.

English summary
How to delink your Aadhar number from your Bank account, Mobile phone number and Digital wallet? Here is some information.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X