ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆರಿಗೆದಾರರ ಹಣವನ್ನು JNU ಬಳಸುತ್ತಿರುವುದು ಹೇಗೆ?

|
Google Oneindia Kannada News

ದೇಶಕ್ಕೆ ಅತ್ಯುತ್ತಮ ರಾಜಕಾರಣಿಗಳನ್ನು, ಹಲವು ಕೊಡುಗೆಗಳನ್ನು ಕೊಟ್ಟರೂ ಜೆಎನ್ ಯು ಹೆಚ್ಚಾಗಿ ಸುದ್ಧಿಯಾಗಿರುವುದು ಬೇಡದ ಕಾರಣಕ್ಕಾಗಿಯೇ. ವಿವಾದಾತ್ಮಕ ಹೇಳಿಕೆಗಳು, ವಿದ್ಯಾರ್ಥಿಗಳ ನಿರ್ಭೀತಿಯ ಭಾಷಣದಿಂದಾಗಿ ಸರ್ಕಾರಕ್ಕೂ ತಲೆನೋವು ಎನ್ನಿಸಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು) ಈಗ ಸುದ್ದಿಯಲ್ಲಿರುವುದು ಶುಲ್ಕ ಹೆಚ್ಚಳದ ಕಾರಣಕ್ಕೆ.

ಹಾಗೆ ನೋಡುವುದಕ್ಕೆ ಹೋದರೆ "ಬೌದ್ಧಿಕ ಭಯೋತ್ಪಾದನೆ" ಎಂಬ ಪದ ಹುಟ್ಟಿಕೊಂಡಿದ್ದೇ ಜೆಎನ್ ಯುವಿನಿಂದ. ಭಾರತೀಯ ತೆರಿಗೆದಾರರ ಹಣವನ್ನು ಜೆಎನ್ ಯು ದುರುಪಯೋಗ ಮಾಡಿಕೊಳ್ಳುತ್ತಿದ್ದೆ ಎಂಬ ಆರೋಪವೂ ಹಲವು ಬಾರಿ ಕೇಳಿಬಂದಿದೆ. ಆದರೆ ಆ ಆರೋಪ ಎಷ್ಟರ ಮಟ್ಟಿಗೆ ಸತ್ಯ?

ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?ವಿದ್ಯಾರ್ಥಿಗಳ ಹೋರಾಟದ ಬಗ್ಗೆ ಸರ್ಕಾರಗಳಿಗೆ ಏಕೆ ಭಯ?

'ಕ್ವಾರ್ಟ್ಜ್ ಇಂಡಿಯಾ' 2016 ರಲ್ಲಿ ಪ್ರಕಟಿಸಿದ್ದ "ತೆರಿಗೆದಾರರ ಹಣವನ್ನು ಜೆಎನ್ ಯು ಹೇಗೆ ಬಳಸಿಕೊಳ್ಳುತ್ತಿದೆ?" ಎಂಬ ಲೇಖನ ಈ ಅನುಮಾನಗಳಿಗೆ ತೆರೆ ಎಳೆದಿತ್ತು. ನಿಜವಾಗಿಯೂ ಜೆಎನ್ ಯು ತೆರಿಗೆದಾರರ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆಯೇ ಎಂಬ ಕುರಿತಂತೆ ಅದು ನೀಡಿದ ಮಾಹಿತಿ ಇಲ್ಲಿದೆ. ಇನ್ಫೋಗ್ರಾಫಿಕ್ ನಲ್ಲಿದೆ ವಿವರ.

ವಿದ್ಯಾರ್ಥಿಗಳ ಸಂಖ್ಯೆ

ವಿದ್ಯಾರ್ಥಿಗಳ ಸಂಖ್ಯೆ

2013-2014 ರಲ್ಲಿ ದೇಶದ ಪ್ರಮುಖ ವಿಶ್ವವಿದ್ಯಾಲಯಗಳಿಗೆ ಆಯ್ಕೆಯಾದ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ದೆಹಲಿ ವಿವಿಯ ವಿದ್ಯಾರ್ಥಿಗಳ ಸಂಖ್ಯೆ 6,15,582 ಇದ್ದರೆ, ಜೆಎನ್ ಯು ಸೇರಿದ್ದು ಕೇವಲ 7,300 ಜನ.

ಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸಸದಾ ಸುದ್ದಿಯಲ್ಲೇ ಇರುವ JNU ಹಿಂದಿದೆ ವೈಭವದ ಇತಿಹಾಸ

ವಾರ್ಷಿಕ ಆದಾಯ

ವಾರ್ಷಿಕ ಆದಾಯ

ಜೆಎನ್ ಯುವಿಗೆ ಯುಜಿಸಿ(University Grants Commission) ಯಿಂದ ವಾರ್ಷಿಕ ಸುಮಾರು 250 ಕೋಟಿ ರೂ. ಅನುದಾನ ಸಿಕ್ಕರೂ ಅದು ಬೇರೆ ಬೇರೆ ಮೂಲಗಳಿಂದ ತನ್ನ ಆದಾಯವನ್ನು ಹೆಚ್ಚಿಸಿಕೊಂಡಿದೆ. ಬನಾರಸ್ ಹಿಂದು ವಿವಿ ಪ್ರತಿವರ್ಷ ಸುಮಾರು 550 ಕೋಟಿ ರೂ. ಗೂ ಅಧಿಕ ಅನುದಾನವನ್ನು ಪಡೆಯುತ್ತಿದೆ.

ಜೆಎನ್ ಯು ವಾರ್ಷಿಕ ಆದಾಯದ ವಿವರ

ಜೆಎನ್ ಯು ವಾರ್ಷಿಕ ಆದಾಯದ ವಿವರ

ಯುಜಿಸಿಯಿಂದ ಜೆಎನ್ ಯು ಗೆ ಸಿಕ್ಕ ಅನುದಾನ 243 ಕೋಟಿ ರೂಪಾಯಿಯಾದರೆ, ವಿದ್ಯಾರ್ಥಿಗಳ ಶುಲ್ಕದಿಂದ ಬರುವ ಆದಾಯ 6.16 ಕೋಟಿ ರೂ. ಹಾಗೆಯೇ ಹಾಸ್ಟೆಲ್ ನಿಂದ 0.1 ಕೋಟಿ ರೂ., ವಿವಿ ಜಮೀನು ಮತ್ತು ಕಟ್ಟಡದ ಆದಾಯದಿಂದ 3.4ಕೋಟಿ ರೂ., ಪ್ರಕಾಶನದಿಂದ 0.08 ಕೋಟಿ ರೂ., ಇತರೆ ಮೂಲಗಳಿಂದ 3.35 ಕೋಟಿ ರೂ., ಬಜೆಟ್ ಗೆ ಅನುಗುಣವಾಗಿ ಬಂದ ಇತರ ಅನುದಾನ 55.18 ಕೋಟಿ ರೂ.

JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?JNU ಶುಲ್ಕ ಹೆಚ್ಚಳ: ಪ್ರತಿಭಟನೆ ಏಕೆ? ಕೇಂದ್ರ ವಿವಿಗಳ ಶುಲ್ಕ ಎಷ್ಟು?

ಯಾರಿಂದ ಹೆಚ್ಚು ವೆಚ್ಚವಾಗಿದ್ದು?

ಯಾರಿಂದ ಹೆಚ್ಚು ವೆಚ್ಚವಾಗಿದ್ದು?

ಅತೀ ಹೆಚ್ಚು ವೆಚ್ಚ ಮಾಡಿದ ವಿವಿಗಳು ಪಟ್ಟಿಯಲ್ಲಿ ಅಲಿಗಢ ಮುಸ್ಲಿಂ ವಿವಿ ಅಗ್ರಸ್ಥಾನದಲ್ಲಿದ್ದರೆ ಜೆಎನ್ ಯು ಮೂರನೇ ಸ್ಥಾನದಲ್ಲಿದೆ. ಮಿಕ್ಕಂತೆ ದೆಹಲಿ ವಿವಿ ಎರಡನೇ ಸ್ಥಾನದಲ್ಲಿದ್ದು ಹೈದರಾಬಾದ್ ವಿವಿ ಐದನೇ ಸ್ಥಾನದಲ್ಲಿದೆ.

ಜೆಎನ್ ಯು ವಾರ್ಷಿಕ ವೆಚ್ಚ

ಜೆಎನ್ ಯು ವಾರ್ಷಿಕ ವೆಚ್ಚ

ಜೆಎನ್ ಯು ಗೆ ಯುಜಿಸಿಯಿಂದ ಕಡಿಮೆ ಅನುದಾನ ಸಿಕ್ಕರೂ ಅದು ಭಾರತದ ಅತ್ಯಂತ ಪ್ರಮುಖ ವಿವಿಗಳಲ್ಲಿ ಒಂದಾಗಿದೆ. ಈ ಕುರಿತು ಮಾತನಾಡಿದ ನವದೆಹಲಿಯ ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್ ನ ಪ್ರೊ.ಪೀಟರ್ ರೊನಾಲ್ಡ್ ಡಿಸೋಜಾ, "ನಾವು ನಮ್ಮದೇಶದ ಪತ್ರಕರ್ತರು, ಕಲಾವಿದರು, ಅನುವಾದಕರು, ಹೋರಾಟಗಾರರು, ಪ್ರೊಫೆಸರ್ ಗಳು, ಬರಹಗಾರರು, ರಾಜಕಾರಣಿಳು, ವಿಜ್ಞಾನಿಗಳಲ್ಲಿ ಹುಡುಕಿದರೆ ಹೆಚ್ಚಿನವರು ಜೆಎನ್ ಯು ವಿದ್ಯಾರ್ಥಿಗಳೇ ಸಿಕ್ಕುತ್ತಾರೆ. ಸಂಶೋಧನೆ, ವಿಶ್ಲೇಷಣಾ ಕ್ಷೇತ್ರ ಸಿಬಿಐ, ವಿದೇಶಾಂಗ ಮತ್ತು ಸಚಿವ ಸಂಪುಟ ಕಾರ್ಯದರ್ಶಿ ಹುದ್ದೆಗಳಲ್ಲಿ ಜೆಎನ್ ಯು ಹಳೇ ವಿದ್ಯಾರ್ಥಿಗಳೇ ಸಿಕ್ಕುತ್ತಾರೆ. ಆದರೂ ಅವರನ್ನು ದೇಶವಿರೋಧಿಗಳೆಂದು ಕರೆಯುತ್ತಿರುವುದೇಕೆ? ಇಂಥ ಆರೋಪ ಶುರುವಾಗಿದ್ದು ಯಾವಾಗ?" ಎಂದು ಪ್ರಶ್ನಿಸುತ್ತಾರೆ.

English summary
Here Is a Detailed Article On How Delhi's Jawaharlal Nehru University Uses Tax Payers Money.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X