• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಂದ್ರನ ಅಂಗಳದಲ್ಲಿ ಲ್ಯಾಂಡರ್ ವಿಕ್ರಮ್ ಪತ್ತೆಯಾಗಿದ್ದು ಹೇಗೆ?

|
   ಕೊನೆಕ್ಷಣದಲ್ಲಿ ಸಂಪರ್ಕ ಮಿಸ್ ಆಗಿದ್ದು ಯಾಕೆ ಗೊತ್ತಾ..? | Chandrayaan 2

   ನವದೆಹಲಿ, ಸೆ. 08: ಇಸ್ರೋದ ಮಹತ್ವದ ಚಂದ್ರಯಾನ2 ಯೋಜನೆಯ ಪ್ರಮುಖ ಅಂಗಗಳಾದ ಆರ್ಬಿಟರ್ ಹಾಗೂ ಲ್ಯಾಂಡರ್ ಗಳ ಪೈಕಿ ಆರ್ಬಿಟರ್ ಸುರಕ್ಷಿತವಾಗಿ ಚಂದ್ರನ ಸುತ್ತುತ್ತಿರುವುದು ಈಗ ಭಾರತದ ಪಾಲಿಗೆ ಬಲ ತಂದಿದೆ. ಚಂದ್ರನ ದಕ್ಷಿಣ ಭಾಗದ ಮೇಲ್ಮೈನಲ್ಲಿ ಸುರಕ್ಷಿತವಾಗಿ ಇಳಿಯಬೇಕಿದ್ದ ವಿಕ್ರಮ್ ಲ್ಯಾಂಡರ್ ಬಗ್ಗೆ ಸುಳಿವು ಸಿಗದೆ ಕಂಗಾಲಾಗಿದ್ದ ಇಸ್ರೋಗೆ ಈಗ ಜೀವ ಬಂದಿದೆ. ಚಂದ್ರನ ಸುತ್ತ ಸುತ್ತಿರುವ ಆರ್ಬಿಟರ್ ಭಾನುವಾರದಂದು ವಿಕ್ರಮ್ ಪತ್ತೆ ಹಚ್ಚಿದೆ.

   ಚಂದ್ರಯಾನ 2 ಲ್ಯಾಂಡರ್ ವಿಕ್ರಮ್ ವೈಫಲ್ಯಕ್ಕೆ ಏನು ಕಾರಣ?

   "ಶನಿವಾರ ಬೆಳಗ್ಗೆ 1.53ರ ಸುಮಾರಿಗೆ ಸಾಫ್ಟ್ ಲ್ಯಾಂಡಿಂಗ್ ಆಗಬೇಕಿದ್ದ ವಿಕ್ರಮ್ ಮೇಲೆ ಒತ್ತಡ ಹೆಚ್ಚಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಇಳಿಯಲು ಆರಂಭಿಸಿದ್ದು ಹಾಗೂ ಥ್ರಸ್ಟರ್ ಅಸಮರ್ಪಕ ನಿರ್ವಹಣೆಯಿಂದ ಚಂದ್ರನ ಮೇಲ್ಮೈನಿಂದ 2.1 ಕಿ.ಮೀ.ದೂರವಿದ್ದಾಗ ಬೆಂಗಳೂರಿನ ಕೇಂದ್ರದೊಡನೆ ಸಂಪರ್ಕ ಕಳೆದುಕೊಂಡಿತ್ತು. ಈಗ ಚಂದ್ರನ ಮೇಲ್ಮೈನಲ್ಲೇ ವಿಕ್ರಮ್ ಪತ್ತೆಯಾಗಿದ್ದು, ಲ್ಯಾಂಡರ್ ನಾಶವಾಗಿಲ್ಲ ಎಂಬುದು ಸ್ಪಷ್ಟವಾಗಿದೆ. ವಿಕ್ರಮ್ ಇರುವ ಜಾಗವನ್ನು ಥರ್ಮಲ್​ ಇಮೇಜಿಂಗ್​ ಮೂಲಕ ಆರ್ಬಿಟರ್​ ಪತ್ತೆ ಮಾಡಿ ಚಿತ್ರ ಕಳಿಸಿದೆ" ಎಂದು ಇಸ್ರೋ ಮುಖ್ಯಸ್ಥ ಕೆ. ಶಿವನ್​ ತಿಳಿಸಿದ್ದಾರೆ.

   ವಿಕ್ರಂ ಲ್ಯಾಂಡರ್​ ನ ಕಮ್ಯೂನಿಕೇಷನ್ ಕಿಟ್ ಇನ್ನು ಕಾರ್ಯ ನಿರ್ವಹಿಸುವಂತೆ ಕಾಣುತ್ತಿಲ್ಲ. ಇನ್ನೂ 13 ದಿನಗಳ ಕಾಲ ನಿರಂತರವಾಗಿ ಸಂಪರ್ಕ ಸಾಧಿಸುವ ಪ್ರಯತ್ನ ನಡೆಯಲಿದೆ. ಚಂದ್ರನ ಸುತ್ತ ಸುತ್ತುತ್ತಿರುವ ಆರ್ಬಿಟರ್ ಇನ್ನೂ 7 ವರ್ಷ ಅಲ್ಲೇ ಇರಲಿದೆ. ಅದರಿಂದ ಫೋಟೋಗಳನ್ನು ತೆಗೆದು ಪರಿಸ್ಥಿತಿ ವಿಶ್ಲೇಷಣೆ ಮಾಡಬಹುದು. ಸ್ವಯಂ ಚಾಲಿತವಾಗಿ ಪುನರಾರಂಭ ಗೊಂಡು ಭೂಮಿಯೊಂದಿಗೆ ಸಂಪರ್ಕ ಬರುವ ನಿರೀಕ್ಷೆ ಇದ್ದೇ ಇದೆ.

   ಆರ್ಬಿಟರ್ ಥರ್ಮಲ್ ಇಮೇಜಿಂಗ್

   ಆರ್ಬಿಟರ್ ಥರ್ಮಲ್ ಇಮೇಜಿಂಗ್

   ಚಂದ್ರಯಾನದ ಆರ್ಬಿಟರ್ ಒಂದು ವರ್ಷಕ್ಕೂ ಹೆಚ್ಚು ಸಮಯ ಅಲ್ಲಿ ತನ್ನ ಕಾರ್ಯಾಚರಣೆ ನಡೆಸಬಲ್ಲದಾಗಿದೆ. ಚಂದ್ರದ ದಕ್ಷಿಣ ಧ್ರುವದ ವಿಶಿಷ್ಟ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಲಿದೆ, ಪ್ರಸ್ತುತ ತನ್ನಿಂದ ಬೇರ್ಪಟ್ಟ ಲ್ಯಾಂಡರ್ ಈಗ ಎಲ್ಲಿದೆ, ಅದರ ಸ್ಥಿತಿಗತಿಗಳು ಹೇಗಿವೆ ಎಂಬುದನ್ನು ಥರ್ಮಲ್ ಇಮೇಜಿಂಗ್ ತಂತ್ರಜ್ಞಾನದ ಮೂಲಕ ಇಸ್ರೋ ನಿರ್ವಹಣಾ ಕೇಂದ್ರಕ್ಕೆ ತಲುಪಿಸಿದೆ. ಅತ್ಯಂತ ಕತ್ತಲೆ ಪ್ರದೇಶದಲ್ಲೂ ಶಾಖೋತ್ಪಾದನೆ ವಸ್ತುವಿನ ಇನ್ಫ್ರಾರೆಡ್ ವಿಕಿರಣದ ಮೂಲಕ ಚಿತ್ರವನ್ನು ತೆಗೆಯುವ ಕೆಮೆರಾವನ್ನು ಆರ್ಬಿಟರ್ ಹೊಂದಿದೆ.

   ಆರ್ಬಿಟರ್ ಎಂಬ ಗಸ್ತುವಾಹನ

   ಆರ್ಬಿಟರ್ ಎಂಬ ಗಸ್ತುವಾಹನ

   2,379 ಕೆಜಿ ತೂಕದ ಆರ್ಬಿಟರ್ ಎಂಟು ವೈಜ್ಞಾನಿಕ ಪೇಲೋಡ್‌ಗಳನ್ನು (ಅಧ್ಯಯನ ಸಾಧನಗಳು) ಹೊಂದಿದ್ದು, ಇವು ಚಂದ್ರನ ಮೇಲ್ಮೈಅನ್ನು ಪರೀಕ್ಷಿಸಿ ಚಂದ್ರನ ಹೊರಭಾಗದ ವಾತಾವರಣವನ್ನು ಅಧ್ಯಯನ ಮಾಡಲಿವೆ. ಚಂದ್ರನ ಮೇಲ್ಮೈನಿಂದ 100 ಕಿ.ಮೀ. ದೂರದಲ್ಲಿ ಸುತ್ತಲಿದ್ದು, ಲ್ಯಾಂಡರ್ ಜತೆ ಸಂಪರ್ಕ ಸಾಧಿಸಲು ಸಹ ಪ್ರಯತ್ನ ಮುಂದುವರಿಸಲಿದೆ.

   ಇದು ವೈಫಲ್ಯವಲ್ಲ, ಹಿನ್ನಡೆಯಷ್ಟೇ; ಚಂದ್ರಯಾನ ಕಳೆದುಕೊಂಡಿದ್ದು ಶೇ 5ರಷ್ಟು ಮಾತ್ರ

   ಮೂರು ರೀತಿ ಇಮೇಜಿಂಗ್ ವ್ಯವಸ್ಥೆ

   ಮೂರು ರೀತಿ ಇಮೇಜಿಂಗ್ ವ್ಯವಸ್ಥೆ

   ಸಾಮಾನ್ಯವಾಗಿ ಬಾಹ್ಯಾಕಾಶ ಯೋಜನೆಗಳ ಇಂಥ ಸಾಧನಗಳಲ್ಲಿ ಅತ್ಯಾಧುನಿಕ ಕೆಮೆರಾ ಲೆನ್ಸ್ ಗಳ ಜೊತೆಗೆ ಥರ್ಮಲ್ ಇಮೇಜಿಂಗ್, ನಿಯರ್ ಇನ್ಫ್ರಾರೆಡ್ ಬಳಕೆ ಫೋಟೊ ತೆಗೆಯುವುದು ಹಾಗೂ ಅತಿ ಕಡಿಮೆ ಬೆಳಕಿನಲ್ಲಿ ಇಮೇಜಿಂಗ್ ಮೂರು ವಿಧಾನ ಬಳಸಲಾಗುತ್ತದೆ. ಇದರಲ್ಲಿ ಥರ್ಮಲ್ ಇಮೇಜಿಂಗ್ ಅತ್ಯಂತ ಪರಿಣಾಮಕಾತಿಯಾಗಿದ್ದು, ಬೆಳಕಿಲ್ಲದ ತಾಣಗಳಲ್ಲಿ ಧೂಳು, ಹೊಗೆ, ಮಂಜಿನ ನಡುವೆ ಇರುವ ವಸ್ತುವನ್ನು ಪತ್ತೆ ಹಚ್ಚಿ ಚಿತ್ರ ತೆಗೆಯಬಲ್ಲದಾಗಿದೆ. ಹೀಗಾಗಿ, ಚಂದ್ರನ ಮೇಲ್ಮೈನಲ್ಲಿರುವ ಪ್ರತಿಕೂಲ ಹವಾಮಾನ ಪರಿಸ್ಥಿತಿಯಲ್ಲೂ ವಿಕ್ರಮ್ ಪತ್ತೆ ಹಚ್ಚಲು ಸಾಧ್ಯವಾಗಿದೆ.

   ಆರ್ಬಿಟರ್ ಸಾಮರ್ಥ್ಯ

   ಆರ್ಬಿಟರ್ ಸಾಮರ್ಥ್ಯ

   ಚಂದ್ರನ ಅಂಗಳದ 0.3 ಮೀಟರ್ ಅಥವಾ .08 ಅಡಿಗಳ ತನಕ ಏನೇ ಕಂಡರೂ ಚಿತ್ರಿಸುವ ಸಾಮರ್ಥ್ಯವನ್ನು ಆರ್ಬಿಟರ್ ಬಳಿ ಇರುವ ಕೆಮರಾ ಹೊಂದಿದೆ. ಇನ್ಫ್ರಾರೆಡ್ ವಿಕಿರಣ ಬಳಿಸಿ ಥರ್ಮೋಗ್ರಾಫಿ ಮೂಲಕ ತೆಗೆಯುವ ಚಿತ್ರಗಳು 14,000 nm ತರಂಗಾಂತರ ತನಕ ಕಾರ್ಯ ನಿರ್ವಹಿಸಬಲ್ಲುದು, ಸಾಮಾನ್ಯ ಕೆಮೆರಾದ ಸಾಮರ್ಥ್ಯ ಬೆಳಕಿದ್ದಲ್ಲಿ 400 ರಿಂದ 700 ನ್ಯಾನೋ ಮೀಟರ್ ತನಕ ರೇಂಜ್ ಇರುತ್ತದೆ. ಹೀಗಾಗಿ, ಆರ್ಬಿಟರ್ ಉಳಿದುಕೊಂಡಿದ್ದು ಇಸ್ರೋ ಪಾಲಿಗೆ ವರವಾಗಿ ಪರಿಣಮಿಸಲಿದೆ.

   ಭಾರತದ ಚಂದ್ರಯಾನ ಏಕೆ ಇಷ್ಟು ಮಹತ್ವದ್ದು? ಇಲ್ಲಿದೆ ವಿವರ

   3-ಲ್ಯಾಂಡರ್(ವಿಕ್ರಮ್), 2-ರೋವರ್ (ಪ್ರಜ್ಞಾನ್) (27ಕೆಜಿ, 50 ವ್ಯಾಟ್ ಶಕ್ತಿ)

   3-ಲ್ಯಾಂಡರ್(ವಿಕ್ರಮ್), 2-ರೋವರ್ (ಪ್ರಜ್ಞಾನ್) (27ಕೆಜಿ, 50 ವ್ಯಾಟ್ ಶಕ್ತಿ)

   3-ಲ್ಯಾಂಡರ್ ಗಳಿದ್ದು ಡಾ. ವಿಕ್ರಮ್ ಎ ಸಾರಾಭಾಯಿ ಹೆಸರಿನಲ್ಲಿ ವಿಕ್ರಮ್ ಎಂಬ ಹೆಸರಿಡಲಾಗಿದೆ. (1,471 ಕೆಜಿ, 650 ವ್ಯಾಟ್ ಶಕ್ತಿ ಹೊಂದಿದೆ.) ಒಟ್ಟು 14 ಪೇ ಲೋಡ್(ನಾಸಾದ ವೈಜ್ಞಾನಿಕ ಉಪಕರಣ ಸೇರಿ) ಹೊಂದಿದೆ. ಎರಡು ರೋವರ್ (ಪ್ರಜ್ಞಾನ್ ಹೆಸರು) (27ಕೆಜಿ, 50 ವ್ಯಾಟ್ ಶಕ್ತಿ)

   ಅತಿಯಾದ ತಾಪಮಾನದಲ್ಲಿ ಉಳಿದುಕೊಳ್ಳಬಲ್ಲ ಲ್ಯಾಂಡರ್, ಸೂರ್ಯನ ಸಂಪರ್ಕ ಇಲ್ಲದ ಚಂದ್ರನಲ್ಲಿ -180 ಸೆ. ವಾತಾವರಣದಲ್ಲಿ ಶೀತವನ್ನು ಸಹಿಸಿಕೊಳ್ಳಲಾರದು. ಅದರೊಂದಿಗೆ ಮತ್ತೆ ಸಂಪರ್ಕ ಸಾಧಿಸಲು ಇನ್ನೂ 13 ದಿನಗಳು ಸಿಗಲಿವೆ. ವಿಕ್ರಮ್ ಗೆ ಆರ್ಬಿಟರ್ ಹಾಗೂ ರೋವರ್ ಎರಡರ ಜೊತೆ ಸ್ವಂತವಾಗಿ ಸಂವಹನ ನಡೆಸುವ ಸಾಮರ್ಥ್ಯವಿದೆ ಜೊತೆಗೆ ಬೆಂಗಳೂರಿನ ಬ್ಯಾಲಾಳುವಿನ ಐ ಡಿ ಎಸ್ ಎನ್ ಕೇಂದ್ರದ ಜೊತೆಗೆ ಸಂವಹನ ನಡೆಸಬಹುದು.

   English summary
   Vikram lander that had lost communication with the space agency just moments before its scheduled soft landing on Saturday.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X
   We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more