ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೊಂಬಾಟ್ ಗುರೂ: ರಜೆ ಹಾಕದ ಬರ್ಗರ್ ಕಿಂಗ್ ಉದ್ಯೋಗಿಗೆ ಸಿಕ್ಕಿದ್ದು ಹೇಗೆ 1 ಕೋಟಿ ರೂ.?

|
Google Oneindia Kannada News

ನವದೆಹಲಿ, ಜುಲೈ 1: ಬರ್ಗರ್ ಕಿಂಗ್. ಈ ಕಂಪನಿಯ ಹೆಸರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಬರ್ಗರ್ ಪ್ರಿಯರ ಪಾಲಿಗೆ ಅಚ್ಚುಮೆಚ್ಚಿನ ತಾಣವೇ ಈ ಬರ್ಗರ್ ಕಿಂಗ್. ಈಗ ಅದೇ ಕಂಪನಿಯ ಉದ್ಯೋಗಿಯೊಬ್ಬರು ಸಖತ್ ಸುದ್ದಿ ಆಗುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಮಾಡುತ್ತಿರುವ ಬರ್ಗರ್ ಕಿಂಗ್ ಉದ್ಯೋಗಿಯ ಹೆಸರೇ ಕೇವಿನ್ ಫೋರ್ಡ್. ತಮ್ಮ ಪ್ರಾಮಾಣಿಕತೆ, ನಿಷ್ಠೆ ಮತ್ತು ಬದ್ಧತೆಯಿಂದಲೇ ಈ ಉದ್ಯೋಗಿಯು ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದ್ದು ಇದೀಗ ಹಳೆಯ ಸುದ್ದಿ.

ಆನ್‌ಲೈನ್ ಗೆಳತಿಗೆ 5.7 ಕೋಟಿ ಕೊಟ್ಟ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್!ಆನ್‌ಲೈನ್ ಗೆಳತಿಗೆ 5.7 ಕೋಟಿ ಕೊಟ್ಟ ಬೆಂಗಳೂರಿನ ಬ್ಯಾಂಕ್ ಮ್ಯಾನೇಜರ್!

ಬರ್ಗರ್ ಕಿಂಗ್ ಕಂಪನಿಯಲ್ಲಿ ಅವಿರತವಾಗಿ ದುಡಿದ ಕೇವಿನ್ ಫೋರ್ಡ್, ಒಂದೇ ಒಂದು ದಿನ ಕೂಡ ತಮ್ಮ ಉದ್ಯೋಗಕ್ಕೆ ರಜೆ ಹಾಕಿದವರಲ್ಲ. ಹಾಗೆ ರಜೆ ಹಾಕದೇ ಶ್ರಮಿಸಿದ ಕೇವಿನ್ ಫೋರ್ಡ್ ಈಗ ಕೋಟಿಯ ಒಡೆಯರಾಗಿದ್ದಾರೆ. ಅದು ಹೇಗೆ ಎಂಬ ಕುತೂಹಲಕ್ಕೆ ಈ ವರದಿಯಲ್ಲಿ ಉತ್ತರವನ್ನು ಓದಿ ತಿಳಿಯಿರಿ.

27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇವಿನ್ ಫೋರ್ಡ್

27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಕೇವಿನ್ ಫೋರ್ಡ್

ಬರ್ಗರ್ ಕಿಂಗ್ ಕಂಪನಿಯಲ್ಲಿ ಕಳೆದ 27 ವರ್ಷಗಳಿಂದಲೂ ಕೇವಿನ್ ಫೋರ್ಡ್ ಉದ್ಯೋಗಿಯಾಗಿ ದುಡಿದಿದ್ದಾರೆ. ಈ 27 ವರ್ಷಗಳ ಅವಧಿಯಲ್ಲಿ ಕೇವಿನ್ ಫೋರ್ಡ್ ಒಂದೇ ಒಂದು ದಿನ ರಜೆಯನ್ನು ತೆಗೆದುಕೊಂಡಿಲ್ಲ. ಯಾವುದೇ ರಜೆಯಿಲ್ಲದೇ ಪ್ರತಿನಿತ್ಯ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಉದ್ಯೋಗ ಬದ್ಧತೆಯನ್ನು ಪ್ರದರ್ಶಿಸಿದ ಕಾರಣಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಮಾಡಿದ್ದರು.

ಬರ್ಗರ್ ಕಿಂಗ್ ಕಂಪನಿ ಕಡೆಯಿಂದ ಉದ್ಯೋಗಿಗೆ ಉಡುಗೊರೆ

ಬರ್ಗರ್ ಕಿಂಗ್ ಕಂಪನಿ ಕಡೆಯಿಂದ ಉದ್ಯೋಗಿಗೆ ಉಡುಗೊರೆ

ಒಂದೇ ಒಂದು ದಿನ ರಜೆ ಹಾಕದೇ ಶ್ರಮವಹಿಸಿ ದುಡಿದ ಕೇವಿಡ್ ಫೋರ್ಡ್ ಅವರಿಗೆ ಬರ್ಗರ್ ಕಿಂಗ್ ಕಂಪನಿಯು ವಿಶೇಷ ಉಡುಗೊರೆಯೊಂದನ್ನು ನೀಡಿತು. ಕಂಪನಿ ಮಾಲೀಕರು ನೀಡಿದ ಉಡುಗೊರೆ ಚೀಲದಲ್ಲಿ ಸಿನಿಮಾ ಟಿಕೆಟ್, ಸ್ಟಾರ್‌ಬಕ್ಸ್ ಸಿಪ್ಪರ್, ಕೆಲವು ಚಾಕೊಲೇಟ್‌ಗಳು ಮತ್ತು ಮಿಂಟ್‌ಗಳು ಇದ್ದವು. ಈ ರೀತಿ ಚೀಲವನ್ನು ನೀಡುವ ಮೂಲಕ ಕಂಪನಿಯು ಅಭಿನಂದನೆ ಸಲ್ಲಿಸಿತು. ಇದಿಷ್ಟೇ ಆಗಿದ್ದರೆ ಉದ್ಯೋಗಿಗೆ ಒಂದೂವರೆ ಕೋಟಿ ರೂಪಾಯಿ ಸಿಗುತ್ತಿರಲಿಲ್ಲ. ಅಲ್ಲಿಂದ ಮುಂದೆ ನಡೆದಿರುವ ಕಥೆಯೇ ಬೇರೆಯಾಗಿದೆ.

ತಂದೆಗೆ ಉಡುಗೊರೆ ನೀಡಿದ್ದೇ ಪುತ್ರಿ ಕ್ರಿಯೇಟ್ ಮಾಡಿದ ಪೇಜ್!

ತಂದೆಗೆ ಉಡುಗೊರೆ ನೀಡಿದ್ದೇ ಪುತ್ರಿ ಕ್ರಿಯೇಟ್ ಮಾಡಿದ ಪೇಜ್!

27 ವರ್ಷಗಳ ನಿಸ್ವಾರ್ಥ ಸೇವೆಗೆ ಹೋಲಿಸಿದರೆ ಇಂಟರ್ನೆಟ್‌ಗಳಲ್ಲಿ ವ್ಯಕ್ತವಾಗಿದ್ದ ಬೆಂಬಲ ತೀರಾ ಕಡಿಮೆಯಾಗಿತ್ತು. ಕೇವಿನ್ ಫೋರ್ಡ್ ಪುತ್ರಿ ಸೆರೆನಾ ಆಲೋಚನೆಯೂ ಸಹ ಅದೇ ರೀತಿಯಾಗಿತ್ತು. ಹೀಗಾಗಿ ಅವರ ಪುತ್ರಿಯೇ ಆರಂಭಿಸಿದ GoFundMe ನಿಧಿಸಂಗ್ರಹಣೆ ಪುಟವು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿತು. ನಿರೀಕ್ಷೆಗೂ ಹೆಚ್ಚಿನ ಹುಚ್ಚು ಹಬ್ಬಿಸಿದ ಪುಟದಿಂದ ಕೋಟಿ ಕೋಟಿ ರೂಪಾಯಿ ಹಣ ಸಂಗ್ರಹಣೆ ಆಯಿತು.

ಒಂದೂವರೆ ಕೋಟಿ ರೂಪಾಯಿ ನೀಡಿತು ಅದೊಂದು ಪೇಜ್!

ಒಂದೂವರೆ ಕೋಟಿ ರೂಪಾಯಿ ನೀಡಿತು ಅದೊಂದು ಪೇಜ್!

GoFundMe ಪುಟದಿಂದಲೇ ಬರೋಬ್ಬರಿ 1.5 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಯಿತು. ಕಳೆದ 27 ವರ್ಷಗಳಲ್ಲಿ ತಮ್ಮ ಮಕ್ಕಳನ್ನು ಬೆಳೆಸುವುದರ ಜೊತೆಗೆ ಕರ್ತವ್ಯಕ್ಕೂ ರಜೆ ಹಾಕದೇ ಅವಿರತವಾಗಿ ಶ್ರಮಿಸಿದ ತಂದೆಗೆ ನಮನ ಸಲ್ಲಿಸುವ ನಿಟ್ಟಿನಲ್ಲಿ ಇದು ತಂದೆಗೆ ಮಗಳೇ ನೀಡಿದ ವಿಶೇಷ ಉಡುಗೊರೆಯಂತೆ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಕೇವಿನ್ ಫೋರ್ಡ್ ಬಗ್ಗೆ ವ್ಯಕ್ತವಾದ ಅಭಿಪ್ರಾಯಕ್ಕೆ ಅವರ ಹೃದಯ ತುಂಬಿ ಬಂತು.

ಮೊದಲು ದೇಣಿಗೆ ನೀಡಿದ ಆ ವ್ಯಕ್ತಿ ಯಾರು?

ಮೊದಲು ದೇಣಿಗೆ ನೀಡಿದ ಆ ವ್ಯಕ್ತಿ ಯಾರು?

ಬರ್ಗರ್ ಕಿಂಗ್ ಕೇವಿನ್ ಫೋರ್ಡ್ ಪರವಾಗಿ ನಿಧಿ ಸಂಗ್ರಹಣೆ ಅಭಿಯಾನವನ್ನೇ ನಡೆಸಲಾಯಿತು. ಈ ಹಂತದಲ್ಲಿ ಮೊದಲು ಅಭಿಯಾನಕ್ಕೆ ದೇಣಿಗೆ ನೀಡಿದ್ದು ಹಾಸ್ಯನಟ ಮತ್ತು ನಟ ಡೇವಿಡ್ ಸ್ಪೇಡ್. ಇವರು ಅಂದಾಜು 3.9 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ ಎಂದು ಕೇವಿನ್ ಭಾವುಕರಾಗಿ ಹೇಳಿದ್ದಾರೆ.

English summary
How Burger King employee gots more than 1 crore rupees in donations?. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X