ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿಗರು ಸಹಾಯ 2.0 ಮೂಲಕ ದೂರು ನೀಡುವುದು ಹೇಗೆ?

|
Google Oneindia Kannada News

ಬೆಂಗಳೂರು, ನವೆಂಬರ್ 27: ಬೆಂಗಳೂರು ನಗರದ ಜನರು ದೂರುಗಳನ್ನು ನೀಡಲು ಬಿಬಿಎಂಪಿ 'ಸಹಾಯ 2.0' ತಂತ್ರಾಶವನ್ನು ಅಭಿವೃದ್ಧಿಪಡಿಸಿದೆ. ನಮ್ಮ ಬೆಂಗಳೂರು ಅಪ್ಲಿಕೇಶನ್‌ನಲ್ಲಿ ಸಹ ಈ ತಂತ್ರಾಶ ಲಭ್ಯವಿದೆ.

ಹೊಸ ವೈಶಿಷ್ಟ್ಯತೆಗಳ ಜೊತೆಗೆ ಬಳಕೆದಾರರ ಸ್ನೇಹಿಯಾಗಿ 'ಸಹಾಯ 2.0' ತಂತ್ರಾಶವನ್ನು ಅಭಿವೃದ್ಧಿಗೊಳಿಸಲಾಗಿದೆ. ಬಿಬಿಎಂಪಿ ಸಹಾಯವಾಣಿ, ನಮ್ಮ ಬೆಂಗಳೂರು ಅಪ್ಲಿಕೇಶನ್ ಸೇರಿದಂತೆ ಜನರು ಎಲ್ಲಿ ದೂರು ನೀಡಿದರೂ ಅದು ಸಹ ಈ ತಂತ್ರಾಂಶದಲ್ಲಿ ದಾಖಲಾಗಲಿದೆ.

ಬಿಬಿಎಂಪಿ ನೇಮಕಾತಿ; 1322 ಹುದ್ದೆಗಳಿಗೆ ಅರ್ಜಿ ಆಹ್ವಾನ ಬಿಬಿಎಂಪಿ ನೇಮಕಾತಿ; 1322 ಹುದ್ದೆಗಳಿಗೆ ಅರ್ಜಿ ಆಹ್ವಾನ

ರಸ್ತೆ ಗುಂಡಿ, ಪಾದಚಾರಿ ಮಾರ್ಗ, ಬೀದಿ ದೀಪ, ಕಸ ವಿಲೇವಾರಿ ಮುಂತಾದ ವಿಚಾರಗಳ ಕುರಿತು 'ಸಹಾಯ 2.0' ಮೂಲಕ ಜನರು ದೂರು ನೀಡಬಹುದು. ಈ ದೂರನ್ನು ಮುಂದಿನ ಹಂತಕ್ಕೆ ತೆಗೆದುಕೊಂಡು ಹೋಗಲು ಬಿಬಿಎಂಪಿ ಅಗತ್ಯ ವ್ಯವಸ್ಥೆಯನ್ನು ಮಾಡಿದೆ.

ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು 31 ತಂಡಗಳನ್ನು ರಚಿಸಿದ ಬಿಬಿಎಂಪಿ ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚಲು 31 ತಂಡಗಳನ್ನು ರಚಿಸಿದ ಬಿಬಿಎಂಪಿ

 How Bengaluru People Can File Complaint In Sahaaya

ಜನರು ದೂರು ದಾಖಲು ಮಾಡಿದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಸ್‌ಎಂಎಸ್ ಮೂಲಕ ಮಾಹಿತಿ ಹೋಗಲಿದೆ. 'ನಮ್ಮ ಬೆಂಗಳೂರು' ಅಪ್ಲಿಕೇಶನ್ ಮೂಲಕ ಜನರು ದೂರಿನ ಸ್ಥಿತಿಗತಿ ತಿಳಿದುಕೊಳ್ಳಬಹುದಾಗಿದೆ.

ಬೆಂಗಳೂರು; ಕಸ ಹಾಕುವುದು ತಡೆಯಲು ರಸ್ತೆಗಿಳಿದ ಗಸ್ತು ಪಡೆ ಬೆಂಗಳೂರು; ಕಸ ಹಾಕುವುದು ತಡೆಯಲು ರಸ್ತೆಗಿಳಿದ ಗಸ್ತು ಪಡೆ

ಅಧಿಕಾರಿಗಳಿಗೆ ದೂರಿನ ಸಂಕ್ಷಿಪ್ತ ವಿವರ, ಗೂಗಲ್ ಮ್ಯಾಪ್ ಸಮೇತ ಸಂಪೂರ್ಣ ವಿವರ ಮತ್ತು ಸ್ಥಳದ ಮಾಹಿತಿ ರವಾನೆಯಾಗುತ್ತದೆ. ಅಧಿಕಾರಿಗಳು ದೂರನ್ನು ಬಗೆಹರಿಸಲು ಸಹ ಕಾಲಮಿತಿಯನ್ನು ನಿಗದಿ ಮಾಡಲಾಗಿದೆ.

ಜನರು ನೀಡಿದ ದೂರು ನಿಗದಿತ ಕಾಲಮಿತಿಯಲ್ಲಿ ಬಗೆಹರಿಯದಿದ್ದರೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ರವಾನೆಯಾಗಲಿದೆ. ದೂರು ನೀಡಿದ ಜನರಿಗೂ ಸಹ ಪುನಃ ಮಾಹಿತಿ ತಿಳಿಯುವಂತೆ ವ್ಯವಸ್ಥೆ ತಂತ್ರಾಂಶ ಅಭಿವೃದ್ಧಿಗೊಳಿಸಲಾಗಿದೆ.

ದೂರು ಬಗೆಹರಿದ ಕೂಡಲೇ ಜನರಿಗೆ ಸಹ ಮಾಹಿತಿ ಹೋಗಲಿದೆ. ಅವರು ಪುನಃ ಅಭಿಪ್ರಾಯವನ್ನು ದಾಖಲು ಮಾಡಲು ಸಹ ಅವಕಾಶ ನೀಡಲಾಗಿದೆ. ಗೂಗಲ್ ಪ್ಲೇ ಸ್ಟೋರ್ ಮೂಲಕ ಜನರು 'ಸಹಾಯ 2.0' ಡೌನ್ ಲೋಡ್ ಮಾಡಿಕೊಳ್ಳಬಹುದು.

English summary
Bruhat Bengaluru Mahanagara Palike (BBMP) has developed unified application Namma Bengaluru (Sahaaya2.0) for citizens to register their complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X