• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆನ್ ಬಿಡದ ಕೊರೊನಾ ಭೂತ-2: 30 ದಿನದಲ್ಲೇ 70,000 ಮಂದಿಗೆ ನಿರುದ್ಯೋಗ!

|

ವಾಶಿಂಗ್ಟನ್, ಮೇ.10: ನೊವೆಲ್ ಕೊರೊನಾ ವೈರಸ್ ಹಾಗೂ ಲಾಕ್ ಡೌನ್ ಹೊಡೆತಕ್ಕೆ ದೈತ್ಯರಾಷ್ಟ್ರ ಅಮೆರಿಕಾದಲ್ಲಿ ಲಕ್ಷಾಂತರ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅಮೆರಿಕಾದ ಕೇಂದ್ರ ಕಾರ್ಮಿಕ ಇಲಾಖೆಯು ನಿರುದ್ಯೋಗ ಪ್ರಮಾಣ ಏರಿಕೆ ಬಗ್ಗೆ ಮನೆ ಮನೆ ಸಮೀಕ್ಷೆ ನಡೆಸಿದೆ.

ಸಾಂಕ್ರಾಮಿಕ ಪಿಡುಗು ಹರಡಿದ ಸಂದಿಗ್ಘ ಸ್ಥಿತಿಯಲ್ಲಿ ಉದ್ಯೋಗ ಕಡಿತದ ಪ್ರಭಾವ ಹೇಗಿದೆ ಎಂಬ ಅಂಕಿ-ಅಂಗಳನ್ನು ಕಾರ್ಮಿಕ ಇಲಾಖೆ ಸಮೀಕ್ಷೆ ಮೂಲಕ ಸಂಗ್ರಹಿಸಿದೆ. ಮಾರ್ಚ್ ತಿಂಗಳಲ್ಲಿ ನಿರುದ್ಯೋಗ ಪ್ರಮಾಣ ಶೇ.4.4ರಷ್ಟು ಏರಿಕೆಯಾಗಿದ್ದು, 6.4 ಮಿಲಿಯನ್ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ.

ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?ಬೆನ್ ಬಿಡದ ಕೊರೊನಾ ಭೂತ-1: ಖಿನ್ನತೆಯಲ್ಲಿ ಮುಳುಗಿತಾ ಅಮೆರಿಕಾ?

ಕೊರೊನಾ ವೈರಸ್ ಭೀತಿಯಲ್ಲಿ ಉದ್ಯೋಗ ಸಿಕ್ಕರೂ ಕೆಲಸ ಮಾಡುವುದಕ್ಕೆ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಕಾರ್ಮಿಕರು ಉದ್ಯೋಗ ಹುಡುಕುವುದನ್ನೇ ಬಿಟ್ಟಿದ್ದಾರೆ. ದೇಶದಲ್ಲಿ ಉದ್ಯೋಗ ಉಳ್ಳವರು ಅಥವಾ ಉದ್ಯೋಗ ಹುಡುಕುವವರ ಅನುಪಾತವು ಏಪ್ರಿಲ್ ತಿಂಗಳಿನಲ್ಲಿ ಶೇ.60.2 ರಿಂದ ಶೇ.2.5ಕ್ಕೆ ಇಳಿಕೆ ಕಂಡಿದೆ. ಕಳೆದ 1973 ಜನವರಿ ಬಳಿಕ ಮೊದಲ ಬಾರಿಗೆ ದಾಖಲೆ ಮಟ್ಟದಲ್ಲಿ ಕನಿಷ್ಠ ಪ್ರಮಾಣಕ್ಕೆ ಇಳಿಕೆ ಕಂಡಿದೆ.

 ಪಾರ್ಟ್ ಟೈಮ್ ಉದ್ಯೋಗವಾದರೂ ಕೊಡಿ ಪ್ಲೀಸ್!

ಪಾರ್ಟ್ ಟೈಮ್ ಉದ್ಯೋಗವಾದರೂ ಕೊಡಿ ಪ್ಲೀಸ್!

ಅಮೆರಿಕಾದಲ್ಲಿ ಉದ್ಯೋಗದ ಅಗತ್ಯತೆ ಉಳ್ಳವರಿಗೆ ಶಾಶ್ವತ ಉದ್ಯೋಗ ಅಥವಾ ಪೂರ್ಣಾವಧಿ(ಫುಲ್ ಟೈಮ್) ಉದ್ಯೋಗ ಸಿಗುತ್ತಿಲ್ಲ. ಕನಿಷ್ಠ ಅಲ್ಪಾವಧಿ(ಪಾರ್ಟ್ ಟೈಮ್) ಉದ್ಯೋಗವನ್ನಾದರೂ ನೀಡಿ ಎಂದು ಹುಡುಕುತ್ತಿರುವವರ ಅನುಪಾತವು ಶೇ. .22.8 ರಿಂದ ಶೇ.8.7ಕ್ಕೆ ಇಳಿಕೆ ಕಂಡಿದೆ.

 ಅಮೆರಿಕಾದಲ್ಲಿ 30 ದಿನದಲ್ಲಿ 70,000 ಉದ್ಯೋಗ ಕಡಿತ

ಅಮೆರಿಕಾದಲ್ಲಿ 30 ದಿನದಲ್ಲಿ 70,000 ಉದ್ಯೋಗ ಕಡಿತ

ವಿಶ್ವದ ದೊಡ್ಡಣ್ಣ ನೆಲದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದೇ ಭಾಗ್ಯ ಅನ್ನುವಂತಾ ಕಾಲವೊಂದಿತ್ತು. ಆದರೆ ಅಮೆರಿಕಾದಲ್ಲಿ ಸಂಪೂರ್ಣ ಚಿತ್ರಣ ಇದೀಗ ಬದಲಾಗಿದೆ. ಕಳೆದ ಒಂದು ತಿಂಗಳಿನಲ್ಲಿ 70 ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ತಿಂಗಳಿಗಿಂತ ಮೊದಲು ದೇಶದಲ್ಲಿ 15.9 ಮಿಲಿಯನ್ ಇದ್ದ ನಿರುದ್ಯೋಗಿಗಳ ಸಂಖ್ಯೆ 30 ದಿನಗಳಲ್ಲೇ 23.1 ಮಿಲಿಯನ್ ಗೆ ಏರಿಕೆಯಾಗಿದೆ. ಈ ಪೈಕಿ 18.1 ಮಿಲಿಯನ್ ಉದ್ಯೋಗಿಗಳು ತಾತ್ಕಾಲಿಕವಾಗಿ ತಮ್ಮನ್ನು ಕಂಪನಿಯು ವಜಾಗೊಳಿಸಿದೆ. ಆರು ತಿಂಗಳ ನಂತರ ಮತ್ತೆ ಉದ್ಯೋಗಕ್ಕೆ ತೆರಳಬೇಕು ಎನ್ನುತ್ತಿದ್ದಾರೆ. ಇನ್ನು, 2.6 ಮಿಲಿಯನ್ ಉದ್ಯೋಗಿಗಳು ಶಾಶ್ವತವಾಗಿ ತಮ್ಮ ಕೆಲಸ ಕಳೆದುಕೊಂಡಿದ್ದೀವಿ ಎನ್ನುತ್ತಿದ್ದಾರೆ.

 3 ಟ್ರಿಲಿಯನ್ ಡಾಲರ್ ವಾರ್ಷಿಕ ನೆರವು ಘೋಷಿಸಿದ ಅಮೆರಿಕಾ

3 ಟ್ರಿಲಿಯನ್ ಡಾಲರ್ ವಾರ್ಷಿಕ ನೆರವು ಘೋಷಿಸಿದ ಅಮೆರಿಕಾ

ಏಪ್ರಿಲ್ ತಿಂಗಳಿನಲ್ಲಿ ಉದ್ಯೋಗ ಕಳೆದುಕೊಂಡ ಕಾರ್ಮಿಕರು ಆರ್ಥಿಕ ನೆರವಿಗಾಗಿ ಬೇಡಿಕೆಯಿಟ್ಟರು. ಅಮೆರಿಕಾ ಸರ್ಕಾರವು ಆರಂಭಿಕ ಹಂತದ ವ್ಯಾಪಾರಕ್ಕಾಗಿ ಉದ್ಯೋಗ ಕಳೆದುಕೊಂಡವರಿಗಾಗಿ 3 ಟ್ರಿಲಿಯನ್ ಡಾಲರ್ ಸಾಲ ಯೋಜನೆ ಘೋಷಿಸಿತು. ಸಣ್ಣ ಉದ್ಯಮಿಗಳು ಹಾಗೂ ವ್ಯಾಪಾರಿಗಳು ಈ ಸಾಲಸೌಲಭ್ಯದ ಪ್ರಯೋಜನ ಪಡೆಯಲು ಸೂಚಿಸಲಾಯಿತು.

 ಆನ್ ಲೈನ್ ಕಂಪನಿಗಳಲ್ಲಿ ಕಾರ್ಮಿಕರ ಬೇಡಿಕೆ ಹೆಚ್ಚು

ಆನ್ ಲೈನ್ ಕಂಪನಿಗಳಲ್ಲಿ ಕಾರ್ಮಿಕರ ಬೇಡಿಕೆ ಹೆಚ್ಚು

ವಾಲ್ ಮಾರ್ಟ್ ಹಾಗೂ ಅಮೆಜಾನ್ ಕಂಪನಿಗಳಲ್ಲಿ ಕಾರ್ಮಿಕರಿಗೆ ಹೆಚ್ಚಿನ ಬೇಡಿಕೆಯಿದೆ. ಆನ್ ಲೈನ್ ಶಾಪಿಂಗ್ ಪ್ರಕ್ರಿಯೆ ಜೋರಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಕಾರ್ಮಿಕರು ಉದ್ಯೋಗ ಸಿಗುತ್ತದೆ ಎಂದರೂ ಕೊರೊನಾ ವೈರಸ್ ಭೀತಿ ಹಿನ್ನೆಲೆ ಕೆಲಸಕ್ಕೆ ಬರುತ್ತಿಲ್ಲ. ವಾಹನ ಚಾಲಕರು, ಡೆಲಿವರಿ ಬಾಯ್ಸ್ ಹೀಗೆ ಹಲವು ಉದ್ಯೋಗಗಳು ಖಾಲಿ ಉಳಿದಿವೆ. ಅಮೆರಿಕಾ ಜನಸಂಖ್ಯೆ ಮತ್ತು ಉದ್ಯೋಗಸ್ಥರ ಅನುಪಾತವನ್ನು ಗಮನಿಸಿದಾಗ ಶೇ.51.3 ರಿಂದ ಶೇ.8.7ಕ್ಕೆ ಇಳಿಕೆ ಕಂಡಿದೆ. 1948ರಿಂದ ಈಚೆಗೆ ಮೊದಲ ಬಾರಿಗೆ ಇಷ್ಟೊಂದು ಇಳಿಕೆ ಕಂಡು ಬಂದಿದೆ.

 2.1 ಮಿಲಿಯನ್ ಉದ್ಯೋಗಿಗಳ ಕೆಲಸ ಕಿತ್ತುಕೊಂಡ ಏಪ್ರಿಲ್!

2.1 ಮಿಲಿಯನ್ ಉದ್ಯೋಗಿಗಳ ಕೆಲಸ ಕಿತ್ತುಕೊಂಡ ಏಪ್ರಿಲ್!

ಕಳೆದ ಏಪ್ರಿಲ್ ತಿಂಗಳೊಂದರಲ್ಲೇ ಅಮೆರಿಕಾದ ಚಿಲ್ಲರೇ ವ್ಯಾಪಾರಿ ಅಂಗಡಿಗಳಲ್ಲಿ ಸುಮಾರು 2.1 ಮಿಲಿಯನ್ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದು, ದೇಶದಲ್ಲಿ ನಿರುದ್ಯೋಗಿಗಳ ಸಂಖ್ಯೆ 8,42,000ಕ್ಕೆ ಏರಿಕೆಯಾಯಿತು. ಉತ್ಪಾದನಾ ವಲಯದಲ್ಲಿ 1.3 ಮಿಲಿಯನ್ ಕಾರ್ಮಿಕರು ನಿರುದ್ಯೋಗಿಗಳಾದರು. ಆಹಾರ ಉತ್ಪಾದನೆಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ 86,300ಕ್ಕೆ ಇಳಿಕೆ ಕಂಡಿತು. ಕೈಗಾರಿಕಾ ಕಾಮಗಾರಿಗಳಲ್ಲಿ ದುಡಿಯುವ 9,75,000 ಉದ್ಯೋಗಿಗಳು, ತಾತ್ಕಾಲಿಕವಾಗಿ ನಿರುದ್ಯೋಗಿಗಳಾಗಿದ್ದಾರೆ.

English summary
How Badly Coronavirus Hit America: More Than 70,000 People Lost Their Job In Just 30 Days.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X