ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊರಜಗತ್ತನ್ನೇ ನೋಡದ ಮಕ್ಕಳು, ಹೆದರುವ ಕಣ್ಣುಗಳು... ಕೊರೊನಾ ಕಾಲದಲ್ಲಿ ಹುಟ್ಟಿದ ಮಕ್ಕಳ ಪಾಡೇ ಬೇರೆ...

|
Google Oneindia Kannada News

ಕೊರೊನಾ ಸೋಂಕು ಎಲ್ಲಾ ಕ್ಷೇತ್ರವನ್ನು ಬದಲಾಯಿಸಿಬಿಟ್ಟಿದೆ. ಕ್ಷೇತ್ರಗಳ ಮೇಲಷ್ಟೇ ಅಲ್ಲ, ಜನರು ಬದುಕುವ ರೀತಿ ಮೇಲೂ ಪರಿಣಾಮ ಬೀರಿದೆ. ಕೊರೊನಾ ನಮ್ಮೆಲ್ಲರ ಜೀವನಶೈಲಿಯಲ್ಲಿ ಬದಲಾವಣೆ ತಂದಿರುವುದನ್ನು ಅಲ್ಲಗಳೆಯುವಂತಿಲ್ಲ. ಅದರಲ್ಲೂ ಮಕ್ಕಳ ದೈಹಿಕ, ಮಾನಸಿಕ ಸ್ಥಿತಿಗತಿಗಳ ಮೇಲೆ ಕೊರೊನಾ ಬೀರುತ್ತಿರುವ ಪ್ರಭಾವ ಆತಂಕ ಮೂಡಿಸದೇ ಇರದು.

ಇದರೊಂದಿಗೆ, ಕೊರೊನಾ ಆರಂಭವಾದ ಅವಧಿಯಲ್ಲಿ ಹುಟ್ಟಿದ ಮಕ್ಕಳ ಸ್ಥಿತಿ ಇನ್ನೂ ಕಳವಳಕಾರಿಯಾಗಿದೆ. ಕಳೆದ ವರ್ಷ ಭಾರತದಲ್ಲಿ ಸೋಂಕು ಕಾಣಿಸಿಕೊಂಡ ಅವಧಿಯಲ್ಲಿ ಹುಟ್ಟಿದ ಮಕ್ಕಳ ಬೆಳವಣಿಗೆಯ ದಿಕ್ಕೇ ಬೇರೆ ರೂಪ ಪಡೆದುಕೊಂಡಿದೆ. ಸೋಂಕಿನ ಕಾರಣವಾಗಿ ಮಗುವನ್ನು ಹೆಚ್ಚು ಜನರೊಂದಿಗೆ ಬೆರೆಸದ, ಮಕ್ಕಳನ್ನು ಮನೆಯೊಳಗೆಯೇ ಅತಿ ಹೆಚ್ಚಾಗಿ ಕಾಳಜಿ ಮಾಡುವ ಕಾರಣ ಮಕ್ಕಳು ಬೆಳೆಯುವ ರೀತಿಯೇ ಭಿನ್ನ ರೀತಿಯಿದೆ. ಇದು ಮುಂದೆ ಮಕ್ಕಳ ಸಾಮಾಜಿಕ ನಡವಳಿಕೆ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ. ಇದಕ್ಕೆ ಹಲವು ಉದಾಹರಣೆಗಳು ಸಿಗುತ್ತಿವೆ... ಮುಂದೆ ಓದಿ...

 'ಕೋವಿಡ್‌ ಲಾಕ್‌ಡೌನ್‌ನಿಂದ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ ಬಗ್ಗೆ ಮಾಹಿತಿಯಿಲ್ಲ': ಕೇಂದ್ರ ಸಚಿವೆ 'ಕೋವಿಡ್‌ ಲಾಕ್‌ಡೌನ್‌ನಿಂದ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚಳ ಬಗ್ಗೆ ಮಾಹಿತಿಯಿಲ್ಲ': ಕೇಂದ್ರ ಸಚಿವೆ

 ಕೊರೊನಾ ಭೀತಿ ನಡುವೆ ಹೊರಜಗತ್ತನ್ನೇ ನೋಡದ ಮಕ್ಕಳು

ಕೊರೊನಾ ಭೀತಿ ನಡುವೆ ಹೊರಜಗತ್ತನ್ನೇ ನೋಡದ ಮಕ್ಕಳು

ಈ ಒಂದು ಉದಾಹರಣೆಯನ್ನೇ ನೋಡಿ... ಕಳೆದ ವರ್ಷ ಏಪ್ರಿಲ್‌ನಲ್ಲಿ ಬೆಂಗಳೂರಿನ ನಿವಾಸಿ ಪವಿತ್ರಾ ಎಂಬುವರಿಗೆ ಮುದ್ದಾದ ಮಗುವಾಯಿತು. ಆದರೆ ಮಗು ಹುಟ್ಟಿದ ಸಂಭ್ರಮ ಒಂದೆಡೆಯಾದರೆ, ಕೊರೊನಾ ಭೀತಿ ಒಂದೆಡೆ. "ಈ ಒಂದೂವರೆ ವರ್ಷ, ಸೋಂಕು ಹರಡುವ ಭಯದಿಂದ ಮಗುವನ್ನು ಹೊರಗೆ ಎಲ್ಲೂ ಕರೆದುಕೊಂಡು ಹೋಗಲಿಲ್ಲ. ಜನರೊಂದಿಗೂ ಬೆರೆಯಲಿಲ್ಲ. ಇದೀಗ ಮನೆಯಲ್ಲಿ ಯಾರಾದರೂ ಬೇರೆ ವ್ಯಕ್ತಿ ಕಾಣಿಸಿಕೊಂಡರೆ ಮಗು ಕಿರುಚಿಕೊಳ್ಳಲು ಶುರು ಮಾಡುತ್ತದೆ. ಬೇರೆ ಜನರನ್ನು ಕಂಡರೆ ಭಯಪಟ್ಟು ಆತಂಕದಿಂದ ಅಳಲು ಆರಂಭಿಸುತ್ತದೆ. ಈ ಒಂದೂವರೆ ವರ್ಷದ ಅವಧಿಯಲ್ಲಿ 20 ಜನಕ್ಕಿಂತ ಹೆಚ್ಚು ಜನರನ್ನು ಮಗು ನೋಡೇ ಇಲ್ಲ" ಎಂದು ಪವಿತ್ರಾ ಆತಂಕ ವ್ಯಕ್ತಪಡಿಸುತ್ತಾರೆ.

 ಸಣ್ಣ ಶಬ್ದಕ್ಕೂ ಬೆಚ್ಚಿಬೀಳುವ ಮಕ್ಕಳು

ಸಣ್ಣ ಶಬ್ದಕ್ಕೂ ಬೆಚ್ಚಿಬೀಳುವ ಮಕ್ಕಳು

"ವೈದ್ಯರ ಬಳಿ ತಪಾಸಣೆಗೆ ಮಾತ್ರ ಮಗುವನ್ನು ಹೊರಗೆ ಕರೆದುಕೊಂಡು ಹೋಗುತ್ತಿದ್ದೆವು. ಹೆಚ್ಚು ಜನರನ್ನೂ ಮಗು ನೋಡಲು ಅವಕಾಶವಾಗಲಿಲ್ಲ. ಈಗ ಹೊರಗೆ ಕರೆದುಕೊಂಡುಬಂದರೆ ರಸ್ತೆಯಲ್ಲಿ ವಾಹನಗಳ ಹಾರ್ನ್ ಶಬ್ದಕ್ಕೂ ಮಗು ಬೆಚ್ಚಿಬೀಳುತ್ತಿದೆ. ಯಾರಾದರೂ ಕಂಡರೆ ಭಯದಿಂದ ಚೀರುತ್ತದೆ" ಎಂದು ಆತಂಕ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ನಡವಳಿಕೆ ಸಮಸ್ಯೆಯ ಮೊದಲನೇ ಲಕ್ಷಣ ಮಗುವಲ್ಲಿ ಕಾಣಿಸಲು ಆರಂಭಿಸಿದೆ. ಇದು ಕೇವಲ ಪವಿತ್ರಾ ಸಮಸ್ಯೆಯಲ್ಲ. ಕೊರೊನಾ ಕಾಲದಲ್ಲಿ ಹುಟ್ಟಿದ ಮಕ್ಕಳದ್ದು ಬಹುಪಾಲು ಇದೇ ಸ್ಥಿತಿ.

ಮುಂದಿನ ವಾರ 2-6 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆಯ 2ನೇ ಡೋಸ್ ಪ್ರಯೋಗಮುಂದಿನ ವಾರ 2-6 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆಯ 2ನೇ ಡೋಸ್ ಪ್ರಯೋಗ

 ಪುಟ್ಟ ಮನಸ್ಸಿನಲ್ಲಿ ಪುಟ್ಟ ಮನೆಯೇ ಪ್ರಪಂಚ

ಪುಟ್ಟ ಮನಸ್ಸಿನಲ್ಲಿ ಪುಟ್ಟ ಮನೆಯೇ ಪ್ರಪಂಚ

ಕೊರೊನಾ ಸೋಂಕಿನ ಕಾರಣವಾಗಿ ಮಕ್ಕಳು ಮನೆಯಲ್ಲೇ ನಿಶ್ಶಬ್ದ ವಾತಾವರಣದಲ್ಲಿ ಬೆಳೆಯುತ್ತಿದ್ದು, ಇದೀಗ ಹೊರಗೆ ಸಣ್ಣ ಶಬ್ದ ಬಂದರೂ, ಜನರ ಗುಂಪು ಕಂಡರೂ ಆತಂಕಗೊಳ್ಳುತ್ತವೆ. ಮನೆಗೆ ಬೇರೆ ವ್ಯಕ್ತಿ ಬಂದರೆ ಭಯದಿಂದ ಅಳಲು ಆರಂಭಿಸುತ್ತವೆ. ಇವೆಲ್ಲವನ್ನೂ ಬಿಟ್ಟು, ತಮ್ಮ ಮನೆ ಹೊರತಾಗಿ ಹೊರಗಿನ ಪ್ರಪಂಚಕ್ಕೇ ಕಣ್ಣು ಬಿಡಲು ಅವಕ್ಕಿನ್ನೂ ಸಾಧ್ಯವಾಗಿಲ್ಲ. ಈ ಪುಟ್ಟ ಮನಸ್ಸಿನಲ್ಲಿ ಮನೆಯೇ ಪ್ರಪಂಚವಾಗಿ ಕುಟುಂಬದವರೇ ಎಲ್ಲವೂ ಆಗಿದ್ದಾರೆ. ಇದರಿಂದ ಹೊರಗೆ ಬೇರೇನನ್ನೂ ಕಾಣಲು ಅವಕ್ಕೆ ಅಸಾಧ್ಯವಾಗಿದೆ.

 ಆತಂಕ ತುಂಬಿದ ಪೋಷಕರ ನಡುವೆ ಬೆಳೆಯುತ್ತಿರುವ ಮಗು

ಆತಂಕ ತುಂಬಿದ ಪೋಷಕರ ನಡುವೆ ಬೆಳೆಯುತ್ತಿರುವ ಮಗು

"ಇಂಥ ಅನಿಶ್ಚಿತ ವಾತಾವರಣದಲ್ಲಿ ಬೆಳೆಯಲು ಆರಂಭಿಸಿದ ಮಕ್ಕಳ ಮೇಲೆ ಮುಂದೆ ಹಲವು ಒತ್ತಡಗಳು ಎದುರಾಗುತ್ತವೆ" ಎಂದು ಮಾನಸ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್‌ನ ಹಿರಿಯ ಮನಶಾಸ್ತ್ರಜ್ಞ ಡಾ. ಅಲೋಕ್ ಕುಲಕರ್ಣಿ ಹೇಳುತ್ತಾರೆ. "ಕೊರೊನಾ ಅವಧಿಯಲ್ಲಿ ಹುಟ್ಟಿದ ಮಕ್ಕಳು ಆತಂಕ ತುಂಬಿರುವ ಪೋಷಕರ ನಡುವೆಯೇ ಬೆಳೆಯುತ್ತಿದ್ದಾರೆ. ಮಕ್ಕಳು ಬೆಳೆಯುತ್ತಿರುವ ಸಮಾಜದ ಪರಿಸರವೂ ಈಗ ಭಯದಲ್ಲೇ ತುಂಬಿಕೊಂಡಿದೆ. ಹೀಗಾಗಿ ನವಜಾತ ಶಿಶುಗಳಿಗೆ, ಪುಟ್ಟ ಮಕ್ಕಳಿಗೆ ಹೊರಗೆ ಪ್ರಪಂಚ ನೋಡಲು ಅವಕಾಶವೇ ಸಿಗುತ್ತಿಲ್ಲ. ಇದು ಮಕ್ಕಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಮಕ್ಕಳ ನಡವಳಿಕೆ, ಪ್ರವೃತ್ತಿ ಬೇರೆಯದೇ ಆಗಿದೆ. ಹೈಪರ್ ಆಕ್ಟಿವ್ ಆಗುವ ಸಮಸ್ಯೆಯೂ ಕಂಡುಬರುತ್ತಿದೆ ಎಂದು ಹೇಳುತ್ತಾರೆ. ಇದು ಮಕ್ಕಳ ಪುಟ್ಟ ಮೆದುಳಿಗೆ ಹೆಚ್ಚಿನ ಒತ್ತಡವನ್ನೇ ಸೃಷ್ಟಿಸಲಿದೆ ಎಂದು ಹೇಳುತ್ತಾರೆ.

 ಇರುವ ಅವಕಾಶದಲ್ಲಿ ಸಮಾಜದೊಂದಿಗೆ ಬೆರೆಯುವ ಅವಕಾಶ ಕಲ್ಪಿಸಿ

ಇರುವ ಅವಕಾಶದಲ್ಲಿ ಸಮಾಜದೊಂದಿಗೆ ಬೆರೆಯುವ ಅವಕಾಶ ಕಲ್ಪಿಸಿ

ಇದು ಮುಂದೆ ಮಕ್ಕಳ ಮಾನಸಿಕ, ಸಾಮಾಜಿಕ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಮುಂದೆ ಇದು ನಿರೀಕ್ಷೆಗಿಂತ ಅತಿ ದೊಡ್ಡ ಸಮಸ್ಯೆಯಾಗಿ ಕಾಡಲಿದೆ ಎಂದು ಮಕ್ಕಳ ಸಲಹಾ ಕೇಂದ್ರದ ನಯನಾ ಶ್ರೀವಾಸ್ತವ ಹೇಳುತ್ತಾರೆ. ಹೊಸ ವ್ಯಕ್ತಿಗಳು ಕಾಣಿಸಿಕೊಂಡರೆ ಈಗ ಮಕ್ಕಳಿಗೆ ಕಿರಿಕಿರಿಯಾಗುತ್ತದೆ. ಹೀಗಾದಾಗ ಪೋಷಕರು ಮಕ್ಕಳಿಗೆ ತಮ್ಮಷ್ಟಕ್ಕೆ ತಾವೇ ಇರಲು ಬಿಟ್ಟರೆ ಮುಂದೆ ಏನು? ಮಕ್ಕಳಿಗೆ ಹೊರಗಿನ ಪ್ರಪಂಚವೇ ತಿಳಿಯದೇ ಹೋದರೆ ಏನಾಗಬಹುದು? ಆದ್ದರಿಂದ ಪೋಷಕರು ಇರುವ ಅವಕಾಶದಲ್ಲೇ ಮಕ್ಕಳಿಗೆ ಸಮಾಜದೊಂದಿಗೆ ಬೆರೆಯುವ ಬೇರೆ ಆಯ್ಕೆಯತ್ತ ಚಿಂತಿಸಬೇಕಿದೆ.

English summary
Babies born in covid era affected psychologically in many ways. Here is detail about that,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X