ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುಸು ಆದರೂ ಪೋಲಿತನ ಹರೆಯಕ್ಕೆ ಭೂಷಣ, ಇದಕ್ಕೆ ನೀವೇನಂತೀರಿ?

By ಅನಿಲ್
|
Google Oneindia Kannada News

ಇಂಥವನ್ನೆಲ್ಲ ಅನುಭವ ಅಂತ ಪರಿಗಣಿಸುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಗೆಳೆಯರಿಗೆ ಹಾಗೂ ವಯಸ್ಸಿನಲ್ಲಿ ನನಗಿಂತ ಕಿರಿಯರಿಗೆ ಹೇಳಿಕೊಳ್ತಾ ಇರ್ತೀನಿ. ಈ ಸಲ ಒನ್ಇಂಡಿಯಾ ಓದುಗರ ಜತೆಗೆ ಹೇಳಿಕೊಳ್ಳೋಣ ಅನ್ನಿಸಿತು. ಆದ್ದರಿಂದ ನೀವಿದನ್ನು ಓದ್ತಾ ಇದ್ದೀರಿ.

ನಿಮ್ಮ ಕೈಲಿ ಮೊಬೈಲೋ, ಟ್ಯಾಬ್ ಲೆಟ್ಟೋ ಅಥವಾ ಲ್ಯಾಪ್ ಟಾಪ್ ಇದ್ದು, ಅದನ್ನು ನೀವು ಜನಜಂಗುಳಿಯಿಂದ ಕೂತು ಗಮನಿಸುತ್ತಿದ್ದೀರಿ ಅಂತಲೋ ಅಥವಾ ನಿಮ್ಮ ಕೋಣೆಯ ಕದವಿಟ್ಟುಕೊಂಡಿದ್ದೀರಿ ಅಂತಲೋ ಗೊತ್ತಾದರೆ ಕೆಲ ಕಣ್ಣುಗಳು ಅನುಮಾನಾಸ್ಪದವಾಗಿ ನಿಮ್ಮನ್ನು ನೋಡಿದ ಅನುಭವ ಆಗಿದೆಯಾ? ನಾನು ಅಂದುಕೊಳ್ಳುವ ಹಾಗೆ ಆಗಿರಲೇ ಬೇಕು.

ಮಾಗಿಯ ಚಳಿಗೆ ಬೆಚ್ಚಗಿನ ಸನ್ನಿ ಲಿಯೋನ್ ಪ್ಲಸ್ 18 ಜೋಕ್ಸ್ಮಾಗಿಯ ಚಳಿಗೆ ಬೆಚ್ಚಗಿನ ಸನ್ನಿ ಲಿಯೋನ್ ಪ್ಲಸ್ 18 ಜೋಕ್ಸ್

ಏಕೆಂದರೆ, ನಮ್ಮ ಕಾಲದವರೇ ಹಾಗೆ (ನನಗೂ ನಿಮಗೂ ಹೆಚ್ಚೆಂದರೆ ಹತ್ತರಿಂದ ಹದಿನೆಂಟು ವರ್ಷದ ವ್ಯತ್ಯಾಸ ಇರಬಹುದು). ಒಂದು ಗಂಟೆಗೆ ಇಪ್ಪತ್ತೋ ಮೂವತ್ತು ರುಪಾಯಿ ಕೊಟ್ಟು ಸೈಬರ್ ಸೆಂಟರ್ ಗೆ ಹೋಗುತ್ತಿದ್ದ ಜಮಾನ ನಮ್ಮದು. ಹಾಗೆ ಸೈಬರ್ ಸೆಂಟರ್ ಗೆ ಹೋಗಿ ಹೊರಬರುವಾಗ ಈಗ ನೀವು ಎದುರಿಸುವಂಥ ಅದೇ ಕಣ್ಣುಗಳು ನಮ್ಮನ್ನೂ ಬೇಟೆ ಆಡುತ್ತಿದ್ದವು.

ಶಕೀಲಾ ಫೇಮಸ್ ಆಗಿದ್ದ ಕಾಲವದು

ಶಕೀಲಾ ಫೇಮಸ್ ಆಗಿದ್ದ ಕಾಲವದು

ಈಗಿನ ಹಾಗೆ ಸನ್ನಿಲಿಯೋನ್ ಫೇಮಸ್ ಆಗಿದ್ದ ಕಾಲ ಏನಲ್ಲ ಅದು. ಶಕೀಲಾ ಅಂದರೆ ವರ್ಲ್ಡ್ ಫೇಮಸ್. ಆಕೆಯ ಎದುರು ಮೋಹನ್ ಲಾಲ್- ಮಮ್ಮುಟ್ಟಿಯಂಥ ಮಹಾನ್ ನಟರ ಸಿನಿಮಾಗಳೇ ಸೋಲಲು ಆರಂಭಿಸಿದ್ದವು. ಜನರ ಅಭಿರುಚಿ ಅಷ್ಟು ಹಾಳಾಯಿತೇ ಎಂದು ಲೊಚಗುಟ್ಟುತ್ತಿದ್ದವರು ಸಹ ಅದೇ ಸೈಬರ್ ಸೆಂಟರ್ ಗೆ ಹೋಗಿಬರುತ್ತಿದ್ದರು.

ಊರಿಗೆ ಹೊರಟರೆ ನಮಗೆ ಸಂತಸ

ಊರಿಗೆ ಹೊರಟರೆ ನಮಗೆ ಸಂತಸ

ಗೆಳೆಯನ ಮನೆಯಲ್ಲಿ ಎಲ್ಲರು ಯಾವುದಾದರೂ ಊರಿಗೂ ಹೊರಟರು, ಅವನ ಮನೆಯಲ್ಲೇ ವಿಸಿಡಿ/ಡಿವಿಡಿ ಪ್ಲೇಯರ್ ಇದೆಯೆಂದರೆ ಅದು ಜೂನ್ ತಿಂಗಳೇ ಆದರೂ ಅವನ ಮನೆಯಲ್ಲೇ ಕಂಬೈನ್ ಸ್ಟಡಿ ಅಂತ ನಾವೊಂದಿಷ್ಟು ಮಂದಿ ಹೊರಟು ಬಿಡ್ತಿದ್ದೀವಿ. ಮೂವತ್ತೋ- ಐವತ್ತೋ ರುಪಾಯಿ ಒಂದು ವಿಸಿಡಿಗೆ (ಅಪರೂಪಕ್ಕೆ 'ಅಂಥ' ಸಿನಿಮಾದ ಡಿವಿಡಿಯೂ ಸಿಕ್ತಿತ್ತು) ಬಾಡಿಗೆ ಕೊಟ್ಟು, ನೋಡಿ ಕೃತಾರ್ಥರಾಗುತ್ತಿದ್ದೆವು. ವಿಸಿಡಿ/ಡಿವಿಡಿ ಪ್ಲೇಯರ್ ಇಲ್ಲವೆಂದರೆ ಅದನ್ನೂ ಬಾಡಿಗೆ ತರುತ್ತಿದ್ದುದು ಉಂಟು. ಅಬ್ಬಾ ಆಗೆಲ್ಲ ಎಂಥ ಮೂಢನಂಬಿಕೆಗಳು, ವಿಲಕ್ಷಣ ಕುತೂಹಲಗಳು ಅಂದರೆ ಈಗ ಹೇಳಿಕೊಳ್ಳುವುದಕ್ಕೆ ನಾಚಿಕೆ, ಸಂಕೋಚ, ಇಷ್ಟು ಅವಮಾನ ಎಲ್ಲವೂ ಆಗುತ್ತದೆ.

ಸುಲಭಕ್ಕೆ ವಿಡಿಯೋದಲ್ಲಿ ಸಿಕ್ಕಿಬಿಡ್ತಾರೆ

ಸುಲಭಕ್ಕೆ ವಿಡಿಯೋದಲ್ಲಿ ಸಿಕ್ಕಿಬಿಡ್ತಾರೆ

ಆದರೆ, ನಾನು ಇವತ್ತು ಹೇಳಲು ಹೊರಟಿರುವ ವಿಷಯ ಏನೆಂದರೆ, ಇಂಟರ್ ನೆಟ್ ಈಗ ಬಹಳ ಸಸ್ತಾ. ಮೊಬೈಲ್- ಟ್ಯಾಬ್ಲೆಟ್- ಲ್ಯಾಪ್ ಟಾಪ್ ಇಲ್ಲದಿರುವವರೇ ಅಪರೂಪ. 'ಅಂಥ' ವಿಡಿಯೋಗಳಿಗೆ ಹುಡುಕಾಡುತ್ತಾ ಹೋಗಬೇಕು, ಅವಮಾನ ಆಗಿಬಿಟ್ಟರೆ, ದುಬಾರಿಯೇನೋ ಅಂತೆಲ್ಲ ಯೋಚನೆ ಇಲ್ಲ. ಆ ಕಾರಣದಿಂದ ಸನ್ನಿ ಲಿಯೋನ್, ಮಿಯಾ ಖಲೀಫಾ ಇನ್ನೂ ಯಾರ್ಯಾರೋ ಸುಲಭಕ್ಕೆ ವಿಡಿಯೋದಲ್ಲಿ ಸಿಕ್ಕಿಬಿಡ್ತಾರೆ. ಶಕೀಲಾಗೆ ಈಗ ವಿಸಿಡಿ/ಡಿವಿಡಿ ಪ್ಲೇಯರ್ ಥರವೇ ವಯಸ್ಸಾಗಿದೆ. ಎಲ್ಲೆಲ್ಲೋ ಕ್ಯಾಮೆರಾ ಇಟ್ಟರು, ಕದ್ದು ನೋಡಿದರು, ಸಿಕ್ಕಿಬಿದ್ದರು ಅನ್ನೋರು ಸಹ ಮುಂಚಿನಗಿಂತ ಹೆಚ್ಚಾಗಿದ್ದಾರೆ.

ಎಲ್ಲವನ್ನೂ ತಣಿಸಲು ಹೊರಟು ನಿಲ್ಲಬಾರದು

ಎಲ್ಲವನ್ನೂ ತಣಿಸಲು ಹೊರಟು ನಿಲ್ಲಬಾರದು

ದೈಹಿಕ ಆಕರ್ಷಣೆ ವಯಸ್ಸಿಗೆ ಹುಟ್ಟುವಂಥದ್ದು. ಆದರೆ ಆ ಎಲ್ಲ ಆಕರ್ಷಣೆಯನ್ನು ತಣಿಸಲು ಹೊರಟುಬಿಡುವುದು ಬಹಳ ಅಪಾಯ. ಅದೇ ರೀತಿ ಅದುಮಿಟ್ಟು, ನಿರ್ನಾಮ ಮಾಡಿಯೇ ಬಿಡುತ್ತೇನೆ ಎಂದು ನಿರ್ಧರಿಸುವುದು ಕೂಡ ಒಪ್ಪಲು ಸಾಧ್ಯವಿಲ್ಲ ಬಿಡಿ. ಆದ್ದರಿಂದ ನಮಗೆ ಸಿಗುತ್ತಿರುವುದು ಏನು? ಅದು ಇಷ್ಟು ಕಡಿಮೆ ಅಥವಾ ಪುಕ್ಕಟೆ ಸಿಕ್ಕಿರುವುದು ಯಾಕೆ ಅನ್ನೋದು ಅರ್ಥ ಮಾಡಿಕೊಳ್ಳಿ. ಇಂಟರ್ ನೆಟ್ ಅನ್ನು ಸಕಾರಾತ್ಮಕವಾಗಿ ಬಳಸುವುದು ಹೀಗೆ-ಹಾಗೆ ಎಂದು ಕೊರೆಯುವ ಅಗತ್ಯ ಖಂಡಿತಾ ಇಲ್ಲ. ನಿಮಗೆ ಗೊತ್ತಿಲ್ಲದಿರುವುದು ಏನೂ ಇಲ್ಲ. ಆ ನಂತರ ಹದಿಹರೆಯ ಅನ್ನೋದು ವಯಸ್ಸಿನ ಭಾಗವೇ ಹೊರತು ಅದೇ ಪೂರ್ಣವಾದ ಆಯುಷ್ಯವಲ್ಲ. ಆಯಾ ವಯಸ್ಸಿನ ಕುತೂಹಲಕ್ಕೆ ಒಂದು ನಿಲ್ದಾಣ ಇರುತ್ತದೆ. ಆಗ ಅದು ಅಲ್ಲಿ ನಿಲ್ಲುತ್ತದೆ ಹಾಗೂ ನಿಲ್ಲಲೇ ಬೇಕು. ಆ ನಿಲ್ದಾಣದ ನಂತರವೂ ಅಲ್ಲಿ ನಿಂತೇ ಇರಬಾರದು ಕೂಡ. ಇದಕ್ಕೆ ನೀವೇನಂತೀರಿ?

English summary
How attraction in teenage changing trends in recent days? Here is the experience shared by a Oneindia Kannada reader.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X