ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತ್ ಕುಮಾರ್ ಇಲ್ಲದ ಬೆಂಗಳೂರು ದಕ್ಷಿಣಕ್ಕೆ ಉತ್ತರಾಧಿಕಾರಿ ಯಾರು?

|
Google Oneindia Kannada News

Recommended Video

Ananth Kumar Demise : ಅನಂತ್ ಕುಮಾರ್ ಸಾವಿನಿಂದ ಬೆಂಗಳೂರಿಗೆ ಆಗುವ ಎಫೆಕ್ಟ್? ಯಾರಾಗಬಹುದು ಉತ್ತರಾಧಿಕಾರಿ?

ಬೆಂಗಳೂರು, ನವೆಂಬರ್ 13: 1996 ರಿಂದ 2014 ರವರೆಗೆ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಸತತ ಆರು ಬಾರಿ ಗೆದ್ದು, ಅಜೇಯರಾಗಿ ಉಳಿದವರು ಅನಂತ್ ಕುಮಾರ್.

ಸ್ಪರ್ಧಿಸಿದ್ದ ಒಂದು ಚುನಾವಣೆಯಲ್ಲೂ ಸೋಲದೆ, ಅನಂತ್ ಕುಮಾರ್ ಇಲ್ಲದ ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಊಹಿಸಿಕೊಳ್ಳುವುದಕ್ಕೂ ಸಾಧ್ಯವಾಗದಷ್ಟರ ಮಟ್ಟಿಗೆ ಈ ಭಾಗದಲ್ಲಿ ಜನಪ್ರಿಯತೆ ಗಳಿಸಿದವರು ಅವರು.

2014ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನೆನಪು 2014ರ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆ ನೆನಪು

ಆದರೆ ಇಂದು ಅವರಿಲ್ಲ. ಅವರ ಸ್ಥಾನವನ್ನು ತುಂಬಬಲ್ಲ ನಾಯಕರನ್ನು ಹುಡುಕುವುದು ಬಿಜೆಪಿಗೆ ಸುಲಭದ ವಿಷಯವಲ್ಲ. ಲೋಕಸಭಾ ಚುನಾವಣೆಗೆ ಇನ್ನು ಕೆಲವು ತಿಂಗಳುಗಳಷ್ಟೇ ಬಾಕಿ ಉಳಿದಿದೆ. 2014 ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳನ್ನೂ ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದ ಬಿಜೆಪಿಗೆ ಈ ಬಾರಿಯೂ ಅದನ್ನು ಮರುಕಳಿಸುವಂತೆ ಮಾಡುವುದು ಅತ್ಯಗತ್ಯ. ಆದರೆ ಅನಂತ್ ಇಲ್ಲದ ಬೆಂಗಳೂರು ರಾಜಕೀಯವನ್ನು ಊಹಿಸಿಕೊಳ್ಳುವುದಾದರೂ ಹೇಗೆ?!

ತೇಜಸ್ವಿನಿ ಅನಂತ್ ಕುಮಾರ್ ರಾಜಕೀಯಕ್ಕೆ?

ತೇಜಸ್ವಿನಿ ಅನಂತ್ ಕುಮಾರ್ ರಾಜಕೀಯಕ್ಕೆ?

ಇಂಥ ಸಂದರ್ಭಗಳಲ್ಲಿ ಯಾವುದೇ ಪಕ್ಷವು ಮೃತ ನಾಯಕರ ಕುಟುಂಬದ ಓರ್ವ ವ್ಯಕ್ತಿಯನ್ನೇ ಕಣಕ್ಕಿಳಿಸುವುದು ಸಾಮಾನ್ಯ, ಅನುಕಂಪದ ಅಲೆ ಕೆಲಸ ಮಾಡೀತು ಎಂಬ ನಿರೀಕ್ಷೆ. ಆದರೆ ರಾಜಕೀಯ ಪಂಡಿತರ ಪ್ರಕಾರ ಅನುಕಂಪದ ಅಲೆ ಹೆಚ್ಚಾಗಿ ಉಪಚುನಾವಣೆಗಳಲ್ಲಿ ಕೆಲಸ ಮಾಡುತ್ತದೆಯೇ ಹೊರತು ಇಂಥ ಚುನಾವಣೆಗಳಲ್ಲಿ ಅದನ್ನು ನಂಬಿಕೊಂಡಿರುವುದಕ್ಕೆ ಸಾಧ್ಯವಿಲ್ಲ.

ರಾಜಕೀಯಕ್ಕೆ ಬರುವ ಸೂಚನೆ ನೀಡದ ತೇಜಸ್ವಿನಿ

ರಾಜಕೀಯಕ್ಕೆ ಬರುವ ಸೂಚನೆ ನೀಡದ ತೇಜಸ್ವಿನಿ

ತೇಜಸ್ವಿನಿ ಅನಂತ್ ಕುಮಾರ್ ಅವರು ಅನಂತ್ ಕುಮಾರ್ ಕುಟುಂಬದ ವತಿಯಿಂದ ನಿರ್ಮಾಣವಾದ ಅದಮ್ಯ ಚೇತನ ಟ್ರಸ್ಟ್ ಅನ್ನು ಹಲವು ವರ್ಷಗಳಿಂದ ನೋಡಿಕೊಳ್ಳುತ್ತಿದ್ದಾರೆ. ಸದಾ ಸಮಾಜಸೇವೆಯಲ್ಲೇ ಆಸಕ್ತಿ ಹೊಂದಿರುವ ಅವರು, ಪತಿ ಅನಂತ್ ಕುಮಾರ್ ಅವರ ರಾಜಕೀಯ ಯಶಸ್ಸುಗಳಿಗೆ ಬೆನ್ನೆಲುಬಾಗಿದ್ದವರು. ಆದರೆ ಅವರೇ ಸ್ವತಃ ರಾಜಕೀಯಕ್ಕೆ ಬರುವ ಬಗ್ಗೆ ಅವರು ಎಂದಿಗೂ ಆಸಕ್ತಿ ತೋರಿಲ್ಲ.ಅದೂ ಅಲ್ಲದೆ, ಆಪ್ತ ಮೂಲಗಳ ಪ್ರಕಾರ ತೇಜಸ್ವಿನಿ ಅವರು ರಾಜಕೀಯಕ್ಕೆ ಬರುವುದು ಸ್ವತಃ ಅನಂತ್ ಕುಮಾರ್ ಅವರಿಗೇ ಇಷ್ಟವಿರಲಿಲ್ಲ!

ಅನಂತ್ ಕುಮಾರ್ ನಿಧನ : ಕರ್ನಾಟಕ ಬಿಜೆಪಿಗೆ ದೊಡ್ಡ ನಷ್ಟ ಅನಂತ್ ಕುಮಾರ್ ನಿಧನ : ಕರ್ನಾಟಕ ಬಿಜೆಪಿಗೆ ದೊಡ್ಡ ನಷ್ಟ

ಅನಂತ್ ಇಲ್ಲದ ಬೆಂಗಳೂರು ದಕ್ಷಿಣ

ಅನಂತ್ ಇಲ್ಲದ ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ತಮ್ಮ ಸ್ವಂತ ಮನೆ ಎಂಬಷ್ಟು ಆಸ್ಥೆಯಿಂದ ಬೆಳೆಸಿದ್ದರು ಅನಂತ್ ಕುಮಾರ್. ಈ ಭಾಗದ ಜನರ ವಿಶ್ವಾಸ ಗಳಿಸಿದ್ದರು. ಕಳೆದ ಎರಡೂವರೆ ದಶಕಗಳಿಂದ ಅನಂತ್ ಗಳಿಸಿದ್ದ ವಿಶ್ವಾಸ, ಸಂಪಾದಿಸಿದ್ದ ಅಭಿಮಾನಿಗಳು ಲೆಕ್ಕಕ್ಕೆ ಸಿಗುವಂಥದ್ದಲ್ಲ. ಆದರೆ ಇದೀಗ ಬಿಜೆಪಿಗೆ ಬೇರೊಬ್ಬ ಅಭ್ಯರ್ಥಿಯನ್ನು ಇಲ್ಲಿ ಕಣಕ್ಕಿಳಿಸುವುದು ಅನಿವಾರ್ಯ. ಆದರೆ ಇದು ನಿಜಕ್ಕೂ ಬಿಜೆಬಿಗೆ ವರವಾಗುತ್ತದೆಯೇ ಎಂಬುದು ಮಾತ್ರ ಅನುಮಾನ!

ಅಡ್ವಾಣಿ ಆಯ್ಕೆ ಮಾಡಿದ್ದು ಭವಿಷ್ಯದ ಪಿಎಂ ಸ್ಥಾನಕ್ಕೆ, ತ್ರಿವಿಕ್ರಮನಂತೆ ಬೆಳೆದಿದ್ದರು ಅನಂತ್ ಅಡ್ವಾಣಿ ಆಯ್ಕೆ ಮಾಡಿದ್ದು ಭವಿಷ್ಯದ ಪಿಎಂ ಸ್ಥಾನಕ್ಕೆ, ತ್ರಿವಿಕ್ರಮನಂತೆ ಬೆಳೆದಿದ್ದರು ಅನಂತ್

ಕಾಂಗ್ರೆಸ್ ಸ್ಟ್ರಾಟಜಿ ಏನು?

ಕಾಂಗ್ರೆಸ್ ಸ್ಟ್ರಾಟಜಿ ಏನು?

ಕಳೆದ ಆರು ಚುನಾವಣೆಗಳಲ್ಲಿ ಗೆದ್ದ ಅನಂತ್ ಕುಮಾರ್ ಬೆಂಗಳೂರು ದಕ್ಷಿಣ ಕ್ಷೇತ್ರದ ಬಗೆಗಿನ ಆಸೆಯನ್ನೇ ಕಾಂಗ್ರೆಸ್ ಬಿಟ್ಟುಬಿಡುವಂತೆ ಮಾಡಿದ್ದರು. ಆದರೆ ಈ ವರ್ಷ ಸ್ಪರ್ಧೆ ಸ್ವಲ್ಪ ಕಷ್ಟವೇ ಇತ್ತು ಎನ್ನಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿದ್ದ ವಿಜಯ್ ಕುಮಾರ್ ಅವರು ಹೃದಯಾಘಾತಕ್ಕೊಳಗಾಗಿ ಅಕಾಲಿಕ ಮರಣವನ್ನಪ್ಪಿದರು. ಅವರ ಸಹೋದರ ಬಿ ಎನ್ ಪ್ರಹ್ಲಾದ್ ಅವರನ್ನೇ ಬಿಜೆಪಿ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಯಿತಾದರೂ ಅನುಕಂಪದ ಅಲೆಯ ಹೊರತಾಗಿಯೂ ಅವರು ಚುನಾವಣೆಯಲ್ಲಿ ಸೋತರು. ಬೆಂಗಳೂರು ದಕ್ಷಿಣಕ್ಕೇ ಸೇರುವ ಈ ಕ್ಷೇತ್ರದ ಸೋಲು ಸ್ವತಃ ಅನಂತ್ ಕುಮಾರ್ ಅವರಿಗೂ ಕೊಂಚ ಆಘಾತವನ್ನುಂಟು ಮಾಡಿತ್ತು.

ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್ಮಾಜಿ ಸಿಎಂ ಪತ್ನಿಯನ್ನು ಸೋಲಿಸಿ ರಾಜಕೀಯ ಬದುಕು ಆರಂಭಿಸಿದ್ದ ಅನಂತ್ ಕುಮಾರ್

ವಿಧಾನಸಭೆ ಚುನಾವಣೆ ಫಲಿತಾಂಶದ ಪ್ರಭಾವ

ವಿಧಾನಸಭೆ ಚುನಾವಣೆ ಫಲಿತಾಂಶದ ಪ್ರಭಾವ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ 15 ಅನ್ನು ಗೆದ್ದಿದ್ದು, ನಗರ ಭಾಗದ ಮತದಾರರು ಕಾಂಗ್ರೆಸ್ ಪರ ವಾಲಿದ್ದಾರೆ ಎಂಬುದಕ್ಕೆ ಸೂಚನೆ ನೀಡಿದೆ. ಈ ಹೊತ್ತಿನಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಭದ್ರಕೋಟೆಯನ್ನು ನಿರ್ಮಿಸಿದ್ದ ಅನಂತ್ ಇಲ್ಲವಾಗಿರುವುದು ಬಿಜೆಪಿಗಂತೂ ತುಂಬಲಾರದ ನಷ್ಟವೇ ಸರಿ. 1996 ರಲ್ಲಿ ಮಾಜಿ ಮುಖ್ಯಮಂತ್ರಿ ಗುಂಡು ರಾವ್ ಅವರ ಪತ್ನಿ ವರಲಕ್ಷ್ಮಿ ಅವರೊಂದಿಗೆ ಕಣಕ್ಕಿಳಿದುವ ಗೆಲುವು ಸಾಧಿಸುವ ಮೂಲಕ ಚೊಚ್ಚಲ ಚುನಾವಣೆಯಲ್ಲೇ ಯಶಸ್ಸು ಗಳಿಸಿದ್ದ ಅನಂತ್ ಕುಮಾರ್ ಮತ್ತೆಂದೂ ಹಿಂತಿರುಗಿ ನೋಡಿದ್ದೇ ಇಲ್ಲ. 2014 ರ ಲೋಕಸಭಾ ಚುನಾವಣೆಯಲ್ಲಿ ಇನ್ಫೋಸಿಸ್ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರನ್ನು ಸೋಲಿಸಿ ಆರನೇ ಬಾರಿಗೆ ಗೆಲುವು ಸಾಧಿಸಿದ್ದರು ಅನಂತ್ ಕುಮಾರ್.

ಮಧ್ಯಮ ವರ್ಗದ ಹಿಂದುಗಳೇ ಜಾಸ್ತಿ

ಮಧ್ಯಮ ವರ್ಗದ ಹಿಂದುಗಳೇ ಜಾಸ್ತಿ

ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಮಧ್ಯಮ ವರ್ಗದ ಹಿಂದು ಮತಗಳೇ ಜಾಸ್ತಿ. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 88.23 ಪ್ರತಿಶತ ಹಿಂದುಗಳಿದ್ದರೆ, ಶೇ.7.03ರಷ್ಟು ಮುಸ್ಲಿಮರು, ಶೇ.4.12 ರಷ್ಟು ಕ್ರೈಸ್ತರು ಇದ್ದಾರೆ. ಇದೇ ಕಾರಣಕ್ಕೆಂದೇ ಮುಂಬರುವ ಲೋಕಸಭಾ ಚುನಾವಣೆಯನ್ನೂ ದೃಷ್ಟಿಯಲ್ಲಿಟ್ಟುಕೊಂಡೇ ಕಾಂಗ್ರೆಸ್, ಬ್ರಾಹ್ಮಣರಾದ ದಿನೇಶ್ ಗುಂಡೂರಾವ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನೂ ನೀಡಿದೆ! ಅದೂ ಅಲ್ಲದೆ, ಶಂಕರ ಜಯಂತಿಯನ್ನು ಆಚರಿಸುವ ಭರವಸೆ ನೀಡಿದ್ದು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಸಂಘ ಸ್ಥಾಪನೆಗೆ 25 ಕೋಟಿ ರೂ. ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಿದ್ದು, ಎಲ್ಲವೂ ಬ್ರಾಹ್ಮಣರ ಓಲೈಕೆಗಾಗಿಯೇ ಆಗಿದೆ. ಈ ಎಲ್ಲವೂ ಈ ಬಾರಿಯ ಲೋಕಸಭಾ ಚುನಾವಣೆಯ ಮೇಲೆ ಪರಿಣಾಮ ಬೀರಬಹುದು. ಸರಿಯಾದ ಅಭ್ಯರ್ಥಿಗಳನ್ನು ನಿಲ್ಲಿಸುವಲ್ಲಿ ಕಾಂಗ್ರೆಸ್ ಎಡವಿದ್ದರಿಂದ ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲು ಕಾಣಬೇಕಾಯಿತು. ಆದರೆ ಈ ಬಾರಿ ಹಾಗಾಗುವುದಕ್ಕೆ ಬಿಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಅದರಲ್ಲೂ ಲೋಕಸಭೆಯಲ್ಲೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಬಿಜೆಪಿಗೆ ಕಷ್ಟವೇ.

English summary
How Ananth Kumar's death affects Bengaluru politics in 2019 Lo Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X