ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊಸಕೋಟೆ ಕದನ; ಕೋಟ್ಯಾಧಿಪತಿಗಳ ಹೋರಾಟ!

|
Google Oneindia Kannada News

ಬೆಂಗಳೂರು, ನವೆಂಬರ್ 17 : ಬೆಂಝ್‌, ಪಾಡ್ರೋ, ಆಡಿ, ಮಹೀಂದ್ರಾ ಜೀಪ್, ಹುಂಡೈ ಕಾರು ಸೇರಿದಂತೆ ಬೈರತಿ ಸುರೇಶ್ ಮತ್ತು ಪದ್ಮಾವತಿ ಸುರೇಶ್ 424 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದರು. ಪದ್ಮಾವತಿ ಸುರೇಶ್ ಹೊಸಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ.

ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿಯಿಂದ ಎಂಟಿಬಿ ನಾಗರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಕಣದಲ್ಲಿದ್ದಾರೆ.

ಹೊಸಕೋಟೆ ಉಪ ಕದನ; ಬಿಜೆಪಿ, ಎಂಟಿಬಿಗೆ ಕಷ್ಟದ ಸಮಯ! ಹೊಸಕೋಟೆ ಉಪ ಕದನ; ಬಿಜೆಪಿ, ಎಂಟಿಬಿಗೆ ಕಷ್ಟದ ಸಮಯ!

ಬೈರತಿ ಸುರೇಶ್ ಮತ್ತು ಪದ್ಮಾವತಿ ಸುರೇಶ್ ಒಟ್ಟು 16.63 ಕೋಟಿ ಚರಾಸ್ಥಿ ಹೊಂದಿದ್ದಾರೆ. ಸ್ಥಿರಾಸ್ಥಿ 407 ಕೋಟಿ. ದಂಪತಿಗಳು ಹೊಂದಿರುವ ಬಹುತೇಕ ಆಸ್ತಿ ಹೆಬ್ಬಾಳ ಮತ್ತು ಸುತ್ತಮುತ್ತಲೇ ಇದೆ. ಉದ್ಯಮ ನಡೆಸುತ್ತಿರುವುದಾಗಿ ಪದ್ಮಾವತಿ ಸುರೇಶ್ ಆದಾಯದ ಮೂಲ ಹೇಳಿದ್ದಾರೆ.

ಶರತ್ ಬಚ್ಚೇಗೌಡ ಉಚ್ಛಾಟನೆ?: ಮುಂದಿರುವ ಷರತ್ತುಗಳೇನು ಶರತ್ ಬಚ್ಚೇಗೌಡ ಉಚ್ಛಾಟನೆ?: ಮುಂದಿರುವ ಷರತ್ತುಗಳೇನು

Hoskote Congress Candidate Padmavathi Suresh Assets

ದಂಪತಿಗಳ ಬಳಿಕ ಪಾಡ್ರೋ, ಆಡಿ, ಹುಂಡೈ ಐ20, ಬೆಂಝ್, ಮೂರು ಇನ್ನೋವಾ, ಒಂದು ಮಹೀಂದ್ರಾ ಜೀಪ್ ಹೊಂದಿದ್ದಾರೆ. 1ಜೆಸಿಬಿಯೂ ಇದ್ದು, ಕಾರುಗಳ ಮೌಲ್ಯವೇ 3.13 ಕೋಟಿ ಆಗುತ್ತದೆ ಎಂದು ಅಫಿಡೆವಿಟ್‌ ಹೇಳುತ್ತದೆ.

ಬಿಜೆಪಿ ವಿರುದ್ಧ ಸಿಡಿದೆದ್ದು ನಿಂತ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಸ್ತಿ 138 ಕೋಟಿ ರೂ. ಬಿಜೆಪಿ ವಿರುದ್ಧ ಸಿಡಿದೆದ್ದು ನಿಂತ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಆಸ್ತಿ 138 ಕೋಟಿ ರೂ.

ಬೈರತಿ ಸುರೇಶ್ ದಂಪತಿಗಳ ಬಳಿ 3,512 ಗ್ರಾಂ ಚಿನ್ನ, 60 ಕೆಜಿ ಬೆಳ್ಳಿ ಇದೆ. ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡೆವಿಟ್ ಪ್ರಕಾರ 24.75 ಕೋಟಿ ರೂ. ಸಾಲವಿದೆ. 2018-19ನೇ ಸಾಲಿನಲ್ಲಿ ಪದ್ಮಾವತಿ ಸುರೇಶ್ 9,11,585 ಕೋಟಿ ರೂ. ಆದಾಯ ತೆರಿಗೆ ಕಟ್ಟಿದ್ದಾರೆ.

ಎದುರಾಳಿಗಳ ಆಸ್ತಿ ಎಷ್ಟು?
* ಶರತ್ ಬಚ್ಚೇಗೌಡ, ಪ್ರತಿಭಾ ದಂಪತಿ 138 ಕೋಟಿ ರೂ.
* ಎಂಟಿಬಿ ನಾಗರಾಜ್ 1,223 ಕೋಟಿ ರೂ.

English summary
Hoskote seat by election Congress candidate Padmavathi and her husband Hebbal MLA Byrathi Suresh announced assets worth Rs 424 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X