• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಹೋಂ ಸ್ಟೇ'; ಕೊಡಗಿಗೆ ಕಪ್ಪುಚುಕ್ಕೆಯಾಗುತ್ತಿವೆಯೇ ಈ ಆತಿಥ್ಯದ ಮನೆಗಳು?

|

ಹಸಿರಿನ ಸಿರಿ ಹೊದ್ದ ಕೊಡಗಿನ ಚೆಲುವನ್ನು ಕಣ್ತುಂಬಿಕೊಳ್ಳಲು ರಾಜ್ಯ, ದೇಶ ಮಾತ್ರವಲ್ಲ ವಿದೇಶಗಳಿಂದಲೂ ಜನ ಬರುತ್ತಿದ್ದರು. ಆದರೆ ಪ್ರಕೃತಿ ಎಂದರೆ ಕೊಡಗು ಎಂಬಷ್ಟು ಹೆಸರಾಗಿದ್ದ ಈ ಜಿಲ್ಲೆಯ ಸಂಪೂರ್ಣ ಚಿತ್ರಣವೇ ಬದಲಾಗಿ ಹೋದದ್ದು, ಕಳೆದ ವರ್ಷ ಆಗಸ್ಟ್ ನಲ್ಲಿ ಸಂಭವಿಸಿದ ಮಳೆ, ಭೂಕುಸಿತದಿಂದ.

ಮಡಿಕೇರಿ ಹೋಂ ಸ್ಟೇ ದಂಧೆಗೆ ಬೀಳಲಿದೆ ಮೂಗುದಾರ!

ಭೂಕುಸಿತದ ಜಾಡು ಹಿಡಿದು ಹೊರಟಾಗ ಹಲವು ಅಚ್ಚರಿಗಳು ಎದುರಾದವು. ಭೂಮಿಯ ಮೇಲೆ ಮನುಷ್ಯನ ಅತಿಕ್ರಮಣ ಸಾಬೀತಾಗಿತ್ತು. ಅದಕ್ಕೆ ಒಂದು ಉದಾಹರಣೆಯಾಗಿ ದೊರೆತದ್ದು, ಹೋಂ ಸ್ಟೇಗಳು. ಎಲ್ಲೆಂದರಲ್ಲಿ ನಿರ್ಮಾಣವಾಗಿರುವ ಹೋಂಸ್ಟೇಗಳು ಕೊಡಗಿನ ಸಂಸ್ಕೃತಿಗೆ ಮಾರಕವಾಗಿವೆ ಎಂಬ ಆರೋಪ ಇದೀಗ ಕೇಳಿ ಬರುತ್ತಿದ್ದು, ಹೋಂಸ್ಟೇಗಳ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳು ಇವಕ್ಕೆ ಪುಷ್ಠಿ ನೀಡುತ್ತಿರುವುದೂ ಸುಳ್ಳಲ್ಲ. ಪ್ರವಾಸೋದ್ಯಮಕ್ಕೆ ಬೆನ್ನಾಗಿ ನಿಲ್ಲಬೇಕಿದ್ದ ಈ ಹೋಂ ಸ್ಟೇಗಳು ಜಿಲ್ಲೆಗೆ ಕಪ್ಪುಚುಕ್ಕೆಯಾಗುತ್ತಿರುವುದಾದರೂ ಏಕೆ? ಇಲ್ಲಿದೆ ಅದಕ್ಕೆ ಉತ್ತರ...

 ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ನೆರವಾಗಿದ್ದ ಹೋಂ ಸ್ಟೇ

ಆರ್ಥಿಕ ಪರಿಸ್ಥಿತಿ ಸರಿದೂಗಿಸಲು ನೆರವಾಗಿದ್ದ ಹೋಂ ಸ್ಟೇ

ಒಂದು ಕಾಲದಲ್ಲಿ ಕಾಫಿ ಬೆಲೆ ಕುಸಿದಾಗ ಕೆಲವು ಬೆಳೆಗಾರರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸಲು ಆರಂಭಿಸಿದ ಹೋಂ ಸ್ಟೇ ಉದ್ಯಮ ಬಹಳಷ್ಟು ಮಂದಿಯ ಬದುಕಿಗೆ ಆಸರೆಯಾಗಿತ್ತು. ಆದರೆ ವರ್ಷಗಳು ಉರುಳುತ್ತಿದ್ದಂತೆ ಹೋಂ ಸ್ಟೇ ಉದ್ದೇಶವೇ ಬದಲಾಯಿತು. ಹೋಂ ಸ್ಟೇ ಅನ್ನು ಅಕ್ರಮ ಚಟುವಟಿಕೆಗೆ ಬಳಸುವ ಮೂಲಕ ಹಣ ಗಳಿಸುವ ದಂಧೆಗೆ ಇಳಿದಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಕೊಡಗಿನ ಹೋಂಸ್ಟೇಗಳ ಅಕ್ರಮಕ್ಕಿಲ್ಲವೆ ತಡೆ?

 ಗೌಪ್ಯವಾಗಿ ಸಾಗುವ ಅಕ್ರಮ ಚಟುವಟಿಕೆ

ಗೌಪ್ಯವಾಗಿ ಸಾಗುವ ಅಕ್ರಮ ಚಟುವಟಿಕೆ

ಇಂದು ಕೊಡಗಿನಲ್ಲಿ ಹೋಂ ಸ್ಟೇಗಳು ನಾಯಿಕೊಡೆಗಳಂತೆ ನಿರ್ಮಾಣವಾಗಿವೆ. ಇವುಗಳ ಪೈಕಿ ಕೆಲವು ಪರವಾನಗಿ ಹೊಂದಿದ್ದರೆ ಬಹಳಷ್ಟು ಹೋಂಸ್ಟೇಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ. ಕೆಲವು ಹೋಂಸ್ಟೇಗಳನ್ನು ಸ್ಥಳೀಯ ಕಾಫಿ ಬೆಳೆಗಾರರು ಪ್ರಾಮಾಣಿಕವಾಗಿ ನಡೆಸುತ್ತಿದ್ದರೆ, ಮತ್ತೆ ಕೆಲವು ಹೋಂಸ್ಟೇಗಳನ್ನು ಅಕ್ರಮ ಚಟುವಟಿಕೆಗಾಗಿ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ. ಹೊರಗಿನವರು ಹೋಂಸ್ಟೇ ಉದ್ಯಮಕ್ಕಾಗಿ ಕೋಟ್ಯಂತರ ಹಣವನ್ನು ಸುರಿಯುತ್ತಿದ್ದಾರೆ. ಇಲ್ಲಿನ ಕಾಫಿ ಎಸ್ಟೇಟ್ ಖರೀದಿಸಿ ಅಲ್ಲಿ ಹೋಂಸ್ಟೇ ನಿರ್ಮಿಸಿ ಬಳಿಕ ಅಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಾರೆ. ಕೆಲವು ಪ್ರಕರಣಗಳು ಮಾತ್ರ ಆಗೊಮ್ಮೆ ಈಗೊಮ್ಮೆ ಬೆಳಕಿಗೆ ಬರುತ್ತವೆಯಾದರೂ ಉಳಿದಂತೆ ಎಲ್ಲವೂ ಇಲ್ಲಿ ಗೌಪ್ಯವಾಗಿಯೇ ನಡೆಯುತ್ತಿವೆ.

 ಹಣ ಮಾಡುವ ಹಪಹಪಿ

ಹಣ ಮಾಡುವ ಹಪಹಪಿ

ಈಗಾಗಲೇ ಹೋಂಸ್ಟೇನಲ್ಲಿ ಹನಿಟ್ರಾಪ್, ವೇಶ್ಯಾವಾಟಿಕೆ, ರೇವ್ ಪಾರ್ಟಿ ಮೊದಲಾದ ಅಕ್ರಮ ಚಟುವಟಿಕೆ ನಡೆದಿರುವ ಸುದ್ದಿಗಳು ಹೊರ ಬರುತ್ತಿರುವುದರಿಂದ ಹೋಂಸ್ಟೇ ನಡೆಸುವವರನ್ನು ಸಂಶಯದಿಂದ ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮೊದಲೆಲ್ಲ ಹೋಂಸ್ಟೇ ಸ್ಥಾಪನೆಗೆ ಕಠಿಣ ಕ್ರಮಗಳಿರಲಿಲ್ಲ. ಆದರೆ ಇದೀಗ ಹಲವು ರೀತಿಯ ಕಾನೂನು ಕ್ರಮಗಳಿದ್ದು, ಎಲ್ಲ ನಿಯಮಗಳನ್ನು ಪಾಲನೆ ಮಾಡಲೇಬೇಕಾಗಿದೆ. ಇದನ್ನು ಪಾಲಿಸಿಕೊಂಡು ಪ್ರಾಮಾಣಿಕವಾಗಿ ಹೋಂಸ್ಟೇಗಳನ್ನು ನಡೆಸುವವರು ಇದ್ದಾರೆ. ಆದರೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಕೇವಲ ಹಣ ಮಾಡುವ ದೃಷ್ಟಿಯಿಂದ ಅಕ್ರಮ ಚಟುವಟಿಕೆಗೆ ಅವಕಾಶ ಮಾಡಿಕೊಡುತ್ತಾ ಹೋಂಸ್ಟೇ ನಡೆಸುವವರು ಹೆಚ್ಚಾಗಿದ್ದು, ಇಲ್ಲಿ ಹಣವೊಂದಿದ್ದರೆ ಎಲ್ಲವೂ ದೊರೆಯುತ್ತದೆ. ಹೀಗಾಗಿ ವೀಕೆಂಡ್ ಮಸ್ತಿಗಾಗಿ ಜನ ಇತ್ತ ಮುಖ ಮಾಡುತ್ತಿದ್ದಾರೆ.

ಕೊಡಗು: ಅಕ್ರಮ ಹೋಂಸ್ಟೇ ತಡೆಗೆ ಕಠಿಣ ಕ್ರಮ

 ಬಂದವರ ಮಾಹಿತಿಯನ್ನೂ ಪಡೆಯುವುದಿಲ್ಲ

ಬಂದವರ ಮಾಹಿತಿಯನ್ನೂ ಪಡೆಯುವುದಿಲ್ಲ

ಕೆಲವರು ಹೊರ ಜಿಲ್ಲೆ, ರಾಜ್ಯಗಳಿಂದ ಬಂದು ಕಾಫಿ ತೋಟ ಖರೀದಿಸಿ ಭವ್ಯ ಬಂಗಲೆ ಕಟ್ಟಿ ವ್ಯವಹಾರ ಮಾಡುತ್ತಾರೆ. ಅಲ್ಲಿಗೆ ಸ್ಥಳೀಯರಿಗೆ ಪ್ರವೇಶವೇ ಇಲ್ಲದ ಕಾರಣದಿಂದ ಅಲ್ಲಿ ಏನು ನಡೆಯುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ಯಾವತ್ತಾದರೊಂದು ದಿನ ಖಚಿತ ಮಾಹಿತಿ ಸಿಕ್ಕಿ ಪೊಲೀಸರು ಕದ ತಟ್ಟಿದಾಗ ಮಾತ್ರ ಅಲ್ಲಿ ಏನು ನಡೆಯುತ್ತಿತ್ತು ಎಂಬುದು ಬೆಳಕಿಗೆ ಬರುತ್ತದೆ. ಕಳೆದೊಂದು ದಶಕದಲ್ಲಿ ಕೊಡಗಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಪಟ್ಟಣ ಮಾತ್ರವಲ್ಲದೆ, ಹಳ್ಳಿಹಳ್ಳಿಗಳಲ್ಲಿಯೂ ಪ್ರವಾಸಿಗರು ಕಾಣಸಿಗುತ್ತಾರೆ. ಕಾಫಿ ತೋಟಗಳ ನಡುವೆ ಇರುವ ಹೋಂಸ್ಟೇಗಳಲ್ಲಿ ಒಂದೆರಡು ದಿನಗಳನ್ನು ಕಳೆದು ಹೋಗುತ್ತಾರೆ. ಹಾಗೆ ಬಂದವರು ಯಾರು? ಅವರ ಹಿನ್ನಲೆ ಏನು? ಇದ್ಯಾವುದನ್ನು ಪ್ರಶ್ನಿಸದೆ ವಾಸ್ತವ್ಯಕ್ಕೆ ಅನುವು ಮಾಡಿಕೊಡುತ್ತಿರುವುದು ದುರಂತವೇ ಸರಿ.

 ಗಾಳಿಗೆ ತೂರಿಹೋದ ಕಾನೂನು

ಗಾಳಿಗೆ ತೂರಿಹೋದ ಕಾನೂನು

ಎಲ್ಲ ಹೋಂಸ್ಟೇಗಳನ್ನು ಅಧಿಕೃತವಾಗಿ ನೋಂದಣಿ ಮಾಡಿ ಸಿಸಿಟಿವಿ ಅಳವಡಿಸಿ ಪಕ್ಕ ಮಾಹಿತಿಗಳನ್ನು ಪೊಲೀಸರಿಗೆ ನೀಡಬೇಕೆಂಬ ಕಾನೂನು ಇದ್ದರೂ ಅದನ್ನೆಲ್ಲ ಗಾಳಿಗೆ ತೂರಿ ಕೆಲವರು ಅನಧಿಕೃತವಾಗಿ ಹೋಂಸ್ಟೇಗಳನ್ನು ನಡೆಸುತ್ತಿದ್ದು ಅಲ್ಲಿ ಎಲ್ಲ ರೀತಿಯ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಡಲಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕೊಡಗಿಗೊಂದು ಸುತ್ತು ಹೊಡೆದು ಅಕ್ರಮ ಹೋಂಸ್ಟೇಗಳಿಗೆ ಕಡಿವಾಣ ಹಾಕುವುದಲ್ಲದೆ, ಅಧಿಕೃತ ಹೋಂಸ್ಟೇಗಳತ್ತ ನಿಗಾ ವಹಿಸದೆ ಹೋದರೆ ಮುಂದೊಂದು ದಿನ ಅಕ್ರಮ ಚಟುವಟಿಕೆಗಳಿಗೆ ಕೊಡಗು ತಾಣವಾಗುವ ದಿನಗಳು ದೂರವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is said that homestays are becoming threat to the culture of kodagu and the illegal activities in the name of homestays are proving this,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more