ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತ್ಯಂತ ಮುಖ್ಯ ಜಲಮಾರ್ಗ "ಸೂಯೆಜ್ ಕಾಲುವೆ" ಹಿಂದಿದೆ ರೋಚಕ ಇತಿಹಾಸ

|
Google Oneindia Kannada News

ವಿಶ್ವದ ಅತಿ ದಟ್ಟಣೆಯ ಸಮುದ್ರ ಮಾರ್ಗ ಎನಿಸಿಕೊಂಡಿರುವ ಈಜಿಪ್ಟ್‌ನ "ಸೂಯೆಜ್ ಕಾಲುವೆ"ಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ನೂರಾರು ದೊಡ್ಡ ದೊಡ್ಡ ಹಡಗುಗಳು ಠಿಕಾಣಿ ಹೂಡಿವೆ. ಸಂಚಾರಕ್ಕೆ ಅವಕಾಶವಾಗದೇ ನಿಂತಲ್ಲೇ ನಿಂತಿದ್ದು, ಇದರ ಪರಿಣಾಮ ಸದ್ಯಕ್ಕೆ ಜಾಗತಿಕ ವ್ಯಾಪಾರದ ಮೇಲೆ ಗೋಚರಿಸಲು ಆರಂಭಿಸಿದೆ. ಇದು ಇನ್ನಷ್ಟು ದಿನ ಹೀಗೇ ಮುಂದುವರೆದರೆ ಹಲವು ದೇಶಗಳ ವ್ಯಾಪಾರ ವ್ಯವಹಾರಕ್ಕೆ ಬಹು ದೊಡ್ಡ ಅಡ್ಡಿಯಾಗುವುದಾಗಿಯೂ ತಿಳಿದುಬಂದಿದೆ. ಆದರೆ ಸೂಯೆಜ್ ಕಾಲುವೆಯಲ್ಲಿ ಆಗಿದ್ದಾದರೂ ಏನು?

ಇದೇ ಮಂಗಳವಾರ ಈ ಜಲಮಾರ್ಗದಲ್ಲಿ ತೈವಾನ್ ಸಾರಿಗೆ ಕಂಪೆನಿ ಎವರ್‌ಗ್ರೀನ್ ಮರೈನ್ ಹೆಸರಿನ ಹಡಗು ತೆರಳುವಾಗ ಭಾರಿ ಗಾಳಿ ಬೀಸಿತ್ತು. ಇದರಿಂದ ತೀರಗಳಲ್ಲಿನ ಮರಳು ನೀರಿಗೆ ಸೇರಿ ಮುಂದಿನ ಮಾರ್ಗ ಸರಿಯಾಗಿ ಕಾಣಿಸದ ಕಾರಣ ಹಡಗು ಸಾಗಿಸುವುದು ಕಷ್ಟಕರವಾಗಿತ್ತು. ಇದರಿಂದ ನಿಯಂತ್ರಣ ಕಳೆದುಕೊಂಡ ನಾವಿಕರು ಅದನ್ನು ಮರಳಿನ ಮೇಲೆ ಸಾಗಿಸಿದ್ದರಿಂದ ಈ ಬೃಹತ್ ಹಡಗು ಅಲ್ಲೇ ಸಿಲುಕಿಕೊಂಡಿದೆ. ಹಡಗು ತೆರವುಗೊಳಿಸಲು ಕಾರ್ಯಾಚರಣೆ ಮುಂದುವರೆದಿದ್ದು, ಇದರಿಂದ ನೂರಾರು ಬೋಟ್‌ಗಳು ಸಾಗಲು ಅವಕಾಶವಾಗದೇ ಅಲ್ಲೇ ಉಳಿದುಕೊಂಡಿವೆ. ಇದರಿಂದ ಪ್ರತಿ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ವೆಚ್ಚವಾಗುತ್ತಿದೆ. ಈ ಸೂಯೆಜ್ ಕಾಲುವೆ ಇಷ್ಟು ಪ್ರಮುಖವೇಕೆ? ಸೂಯೆಜ್ ಕಾಲುವೆ ಕಥೆನೇನು? ಇಲ್ಲಿದೆ ಅದರ ರೋಚಕ ಇತಿಹಾಸ...

 ಸೂಯೆಜ್ ಕಾಲುವೆಯಲ್ಲಿ ಸಿಲುಕಿರುವ ಹಡಗಿನ ಸಿಬ್ಬಂದಿ ಎಲ್ಲರೂ ಭಾರತೀಯರು ಸೂಯೆಜ್ ಕಾಲುವೆಯಲ್ಲಿ ಸಿಲುಕಿರುವ ಹಡಗಿನ ಸಿಬ್ಬಂದಿ ಎಲ್ಲರೂ ಭಾರತೀಯರು

 ಹತ್ತು ವರ್ಷಗಳ ಕಾಲ ಈ ಕಾಲುವೆ ನಿರ್ಮಾಣ

ಹತ್ತು ವರ್ಷಗಳ ಕಾಲ ಈ ಕಾಲುವೆ ನಿರ್ಮಾಣ

ಯುರೋಪ್ ಹಾಗೂ ಏಷ್ಯಾ ಸಂಪರ್ಕಿಸುವ 193 ಕಿಲೋ ಮೀಟರ್‌ ಜಲ ಮಾರ್ಗ ಸೂಯೆಜ್ ಕಾಲುವೆಯಾಗಿದೆ. ಈಜಿಪ್ಟ್‌ನಲ್ಲಿರುವ ಈ ಕಾಲುವೆಯನ್ನು 1859ರಿಂರ 1869ರವರೆಗೂ ಸುಮಾರು ಹತ್ತು ವರ್ಷಗಳ ಕಾಲ ಕಟ್ಟಲಾಗಿದೆ. ಮೆಡಿಟರೇನಿಯನ್ ಸಮುದ್ರ ಹಾಗೂ ಕೆಂಪು ಸಮುದ್ರ ಸಂಪರ್ಕಿಸುವ ಈ ಕಾಲುವೆ, ಅಟ್ಲಾಂಟಿಕ್ ಸಮುದ್ರ ಹಾಗೂ ಭಾರತ, ಪಶ್ಚಿಮ ಪೆಸಿಫಿಕ್ ಭೂಪ್ರದೇಶಕ್ಕೆ ಅತಿ ವೇಗವಾಗಿ ತಲುಪಬಹುದಾದ ಮಾರ್ಗವೂ ಎನಿಸಿಕೊಂಡಿದೆ.
ವಿಶ್ವದಲ್ಲೇ ಸದಾ ಕಾರ್ಯನಿರತ ಮಾರ್ಗ ಎಂದು ಈ ಕಾಲುವೆಯನ್ನು ಕರೆಯಲಾಗುತ್ತದೆ. ಸುಮಾರು 150 ವರ್ಷಗಳಿಂದಲೂ ಈ ಕಾಲುವೆ ಕಾರ್ಯನಿರತವಾಗಿದೆ. ರಾಜಕೀಯ, ಆರ್ಥಿಕ, ತಾಂತ್ರಿಕ ಸಮಸ್ಯೆಗಳಿಂದಾಗಿ ಇದುವರೆಗೂ ಸುಮಾರು ಐದು ಬಾರಿ ಈ ಕಾಲುವೆ ಸಂಚಾರ ಸ್ಥಗಿತಗೊಂಡಿತ್ತು. ಎಂಟು ವರ್ಷಗಳ ಹಿಂದೆ ಒಮ್ಮೆ ಇದು ಸ್ಥಗಿತಗೊಂಡಿದ್ದು ಬಿಟ್ಟರೆ ಇದೇ ಮಾರ್ಚ್ 23ಕ್ಕೆ ಸ್ಥಗಿತಗೊಂಡಿದೆ.

 ನೆಪೋಲಿಯನ್‌ಗಳು ಹಾಕಿದ ರೂಪುರೇಷೆ

ನೆಪೋಲಿಯನ್‌ಗಳು ಹಾಕಿದ ರೂಪುರೇಷೆ

ಸೆನಾಸ್ರೆಟ್ III ಅವಧಿಯಲ್ಲಿ (1887-1849 ಬಿ.ಸಿ) ಈ ಕಾಲುವೆ ನಿರ್ಮಾಣ ಕೆಲಸಕ್ಕೆ ಮೂಲ ರೂಪ ದೊರೆತಿತ್ತು. ಈತನ ಕಾಲಾವಧಿ ನಂತರ ಬಂದ ರಾಜರೂ ಈ ಕಾಲುವೆಯು ಹಂತಹಂತವಾಗಿ ಅಭಿವೃದ್ಧಿಯಾಗುವಲ್ಲಿ ಕೊಡುಗೆ ನೀಡಿದರು. ಯುರೋಪ್ ಹಾಗೂ ಏಷ್ಯಾ ದೇಶಗಳ ನಡುವಿನ ಕಡಲ ವ್ಯಾಪಾರ ಜಾಗತಿಕ ಆರ್ಥಿಕತೆಗೆ ನಿರ್ಣಾಯಕವಾದ್ದರಿಂದ ಸುಮಾರು 300 ವರ್ಷಗಳ ಹಿಂದೆ ಈ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿತ್ತು.
1799ರಲ್ಲಿ ನೆಪೋಲಿಯನ್ ಗಳು ಇದಕ್ಕೆ ಪಕ್ಕಾ ರೂಪುರೇಷೆ ಹಾಕಿದರು. 1800ರಲ್ಲಿ ಫ್ರೆಂಚ್ ಇಂಜಿನಿಯರ್ ಫರ್ಡಿನಾಂಡ್ ಡಿ ಲೆಸೆಪ್ ಈ ಕಾಲುವೆ ನಿರ್ಮಾಣಕ್ಕೆ ಈಜಿಪ್ಟ್‌ ವೈಸರಾಯ್ ಅವರನ್ನು ಒತ್ತಾಯಿಸಿದರು. 1858ರಲ್ಲಿ ಸೂಯೆಜ್ ಶಿಪ್ ಚಾನೆಲ್ ಕಂಪನಿ ಇದರ ನಿರ್ಮಾಣ ಕಾರ್ಯ ಕೈಗೊಂಡು 99 ವರ್ಷಗಳ ಕಾಲ ಕಾಲುವೆಯನ್ನು ಬಳಕೆ ಮಾಡಿತ್ತು. ಆನಂತರ ಈಜಿಪ್ಟ್ ಸರ್ಕಾರಕ್ಕೆ ಇದರ ಹಕ್ಕನ್ನು ಹಸ್ತಾಂತರಿಸಲಾಯಿತು. ಹಲವು ಸಮಸ್ಯೆಗಳ ನಡುವೆಯೂ, 1869ರಲ್ಲಿ ಈ ಕಾಲುವೆಯನ್ನು ಅಂತರರಾಷ್ಟ್ರೀಯ ಸಂಚಾರಕ್ಕೆ ತೆರೆಯಲಾಯಿತು.

 ಸೂಯೆಜ್ ಕಾಲುವೆ ತನ್ನದಾಗಿಸಿಕೊಂಡ ಈಜಿಪ್ಟ್‌

ಸೂಯೆಜ್ ಕಾಲುವೆ ತನ್ನದಾಗಿಸಿಕೊಂಡ ಈಜಿಪ್ಟ್‌

ಈ ಕ್ಯಾನಲ್ ಕಂಪನಿಯಲ್ಲಿ ಫ್ರೆಂಚ್ ಹಾಗೂ ಬ್ರಿಟಿಷ್ ಪಾಲು ಹೊಂದಿದ್ದು, 1936ರ ಒಪ್ಪಂದದ ಭಾಗವಾಗಿ ಸೂಜೆಯ್ ಕಾಲುವೆಯುದ್ದಕ್ಕೂ ರಕ್ಷಣಾ ಪಡೆ ನೇಮಿಸಿ ಬ್ರಿಟಿಷ್ ಸರ್ಕಾರ ತನ್ನ ಹಕ್ಕು ಉಳಿಸಿಕೊಳ್ಳಲು ಮುಂದಾಗಿತ್ತು. 1954ರಲ್ಲಿ ಈಜಿಪ್ಟ್‌ ರಾಷ್ಟ್ರೀಯವಾದಿಗಳ ಒತ್ತಡ ಎದುರಿಸುತ್ತಿದ್ದ ಉಭಯ ದೇಶಗಳು ಏಳು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದವು. ಈ ಒಪ್ಪಂದ ಬ್ರಿಟಿಷ್ ಸೈನ್ಯವನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು.
1956ರಲ್ಲಿ ಈಜಿಪ್ಟ್ ಅಧ್ಯಕ್ಷ ಅಬ್ದಲ್ ನಾಸೆರ್, ಸೂಯೆಜ್ ಕಾಲುವೆಯನ್ನು ರಾಷ್ಟ್ರೀಕರಣಗೊಳಿಸಿ ನೈಲ್ ನದಿಯಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಹಣ ನೀಡಿದರು. ಇದು ಬ್ರಿಟನ್, ಫ್ರಾನ್ಸ್ ಮತ್ತು ಇಸ್ರೇಲ್ ಜೊತೆಗಿನ ಈಜಿಪ್ಟ್ ಬಿಕ್ಕಟ್ಟನ್ನು ಹೆಚ್ಚಿಸಿತು.

 1957ರಲ್ಲಿ ಕೊನೆಯಾದ ಸಂಘರ್ಷ

1957ರಲ್ಲಿ ಕೊನೆಯಾದ ಸಂಘರ್ಷ

ವಿಶ್ವಸಂಸ್ಥೆ ಮಧ್ಯ ಪ್ರವೇಶದ ನಂತರ 1957ರಲ್ಲಿ ಈ ಸಂಘರ್ಷ ಕೊನೆಗೊಂಡಿತು. ವಿಶ್ವದಲ್ಲೇ ಮೊದಲ ಬಾರಿ ಅಮೆರಿಕ ಶಾಂತಿಪಾಲನಾ ಪಡೆ ನಿಯೋಜಿಸಿದ ಮೊದಲ ಉದಾಹರಣೆ ಇದಾಗಿದೆ. ಆಕ್ರಮಣಕಾರಿ ಪಡೆಗಳು ತಮ್ಮ ಸೈನ್ಯವನ್ನು ಹಿಂತೆಗೆದುಕೊಳ್ಳುತ್ತಿದ್ದದಂತೆ ಈಜಿಪ್ಟ್ ಹಾಗೂ ಇಸ್ರೇಲ್ ನಡುವೆ ಶಾಂತಿ ಕಾಪಾಡಲು ಅಮೆರಿಕ ಸೇನೆ ಸಿನಾಯ್‌ನಲ್ಲಿ ಬೀಡುಬಿಟ್ಟಿತು.
1967ರಲ್ಲಿ ನಾಸೆರ್, ಶಾಂತಿಪಾಲನಾ ಪಡೆಗಳನ್ನು ಸಿನಾಯ್ ‌ನಿಂದ ಹೊರ ಹೋಗುವಂತೆ ಆದೇಶಿಸಿದ್ದು ಉಭಯ ದೇಶಗಳ ನಡುವೆ ಹೊಸ ಸಂಘರ್ಷಕ್ಕೆ ಕಾರಣವಾಯಿತು. ಇಸ್ರೇಲಿಗಳು ಸಿನಾಯ್ ಆಕ್ರಮಿಸಿಕೊಂಡರೆ, ಪ್ರತಿಯಾಗಿ ಈಜಿಪ್ಟ್ ಎಲ್ಲಾ ಹಡಗುಗಳಿಗೆ ಕಾಲುವೆಯನ್ನು ನಿರ್ಬಂಧಿಸಿತು. ಇದು 1975ರವರೆಗೂ ಮುಂದುವರೆಯಿತು. ಈ ಕಾಲುವೆ 1973ರಲ್ಲಿ ಅರಬ್- ಇಸ್ರೇಲಿ ಯುದ್ಧದ ಕೇಂದ್ರ ಬಿಂದುವಾಗಿತ್ತು. ಅನಂತರ ಉಭಯ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿದವು.

 ನಾಲ್ಕು ದಿನಗಳಿಂದ ಸಂಚಾರ ಸ್ಥಗಿತ

ನಾಲ್ಕು ದಿನಗಳಿಂದ ಸಂಚಾರ ಸ್ಥಗಿತ

ಸದ್ಯಕ್ಕೆ ಹಡಗು ಸಿಲುಕಿರುವುದರಿಂದ ಈ ಮಾರ್ಗದ ಮೂಲಕ ಅನೇಕ ದೇಶಗಳಿಗೆ ಸಾಗುವ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ದಿನಕ್ಕೆ ಈ ಮಾರ್ಗದಲ್ಲಿ ಸರಾಸರಿ 50 ಹಡಗುಗಳು ಸಂಚರಿಸುತ್ತವೆ. ಕೆಲವು ಸಮಯದಲ್ಲಿ ಇನ್ನೂ ಹೆಚ್ಚಿನ ಹಡಗುಗಳು ಓಡಾಡುತ್ತವೆ. ಜಾಗತಿಕ ವ್ಯಾಪಾರದ ಶೇ 12ರಷ್ಟು ಉತ್ಪನ್ನಗಳು ಇಲ್ಲಿಂದಲೇ ಸಾಗಾಟವಾಗುತ್ತವೆ. ಮಂಗಳವಾರದಿಂದ ಹಡಗು ಇಲ್ಲಿಯೇ ಸಿಲುಕಿಕೊಂಡಿದ್ದು, ಸುಮಾರು 200 ಹಡಗುಗಳು ಜಲಮಾರ್ಗ ತೆರವಿಗಾಗಿ ಕಾದಿವೆ.

English summary
Global trade has been impacted very badly after ever green container ship stucked in the Suez Canal. So what is the importance of this canal? Here is its history...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X