• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾಗೆ ಬಳಸುತ್ತಿರುವ ಹೈಡ್ರಾಕ್ಸಿಕ್ಲೋರೊಕ್ವಿನ್ ಹಿಂದಿದೆ ಕುತೂಹಲಕಾರಿ ಇತಿಹಾಸ

|

ಇಂದು ಇಡೀ ವಿಶ್ವವನ್ನೇ ಬಾಧಿಸುತ್ತಿರುವ ಕೊರೊನಾ ಸೋಂಕಿಗೆ ಭಾರತೀಯ ಮೂಲದ ಹೈಡ್ರಾಕ್ಸಿಕ್ಲೋರೋಕ್ವಿನ್ ಮಾತ್ರೆಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಕೊರೊನಾಗೆ ನಿರ್ದಿಷ್ಟವಾಗಿ ಇನ್ನೂ ಔಷಧಿ ಕಂಡು ಹಿಡಿದಿಲ್ಲವಾದರೂ ಸದ್ಯಕ್ಕೆ ಲಭ್ಯವಿರುವ ಔಷಧಿಗಳಲ್ಲಿ ಇದು ಪರಿಣಾಮಕಾರಿ ಆಗಿದೆ ಎಂದು ವಿಶ್ವದ ಅನೇಕ ದೇಶಗಳಲ್ಲಿ ವೈದ್ಯರು ಇದನ್ನೇ ಶಿಫಾರಸು ಮಾಡುತಿದ್ದಾರೆ. ಇದನ್ನು ಸರಬರಾಜು ಮಾಡಲು ವಿಶ್ವದ ಕನಿಷ್ಠ 30 ದೇಶಗಳು ಭಾರತಕ್ಕೆ ದುಂಬಾಲು ಬಿದ್ದಿವೆ.

ಈ ಔಷಧದ ಹಿಂದಿದೆ ಬರೋಬ್ಬರಿ 120 ವರ್ಷಗಳಿಗೂ ಹೆಚ್ಚಿನ ರೋಚಕ ಇತಿಹಾಸ. 1799 ರಲ್ಲಿ, ಟಿಪ್ಪು ಸುಲ್ತಾನನನ್ನು ಬ್ರಿಟಿಷರು ಸೋಲಿಸಿದಾಗ, ಇಡೀ ಮೈಸೂರು ಸಾಮ್ರಾಜ್ಯ ಬ್ರಿಟಿಷರ ನಿಯಂತ್ರಣಕ್ಕೆ ಬಂದಿತು. ಮುಂದಿನ ಕೆಲವು ದಿನಗಳವರೆಗೆ, ಬ್ರಿಟಿಷ್ ಸೈನಿಕರು ತಮ್ಮ ವಿಜಯೋತ್ಸವದ ಅಚರಣೆಯಲ್ಲಿ ತೊಡಗಿದರು. ಆದರೆ ಕೆಲ ವಾರಗಳು ಕಳೆಯುತಿದ್ದಂತೆಯೇ ಹಲವು ಸೈನಿಕರು ಮಲೇರಿಯಾದಿಂದ ಅನಾರೋಗ್ಯಕ್ಕೆ ಒಳಗಾಗಲು ಪ್ರಾರಂಭಿಸಿದರು. ಶ್ರೀರಂಗಪಟ್ಟಣವು ತೀವ್ರ ಸೊಳ್ಳೆಗಳ ಕಾಟದಿಂದ ಕೂಡಿದ ಜವುಗು ಪ್ರದೇಶವಾಗಿದ್ದು ಇದಕ್ಕೆ ಕಾರಣವಾಗಿತ್ತು. ಮುಂದೆ ಓದಿ...

ಕೋವಿಡ್19ಗೂ ಮಲೇರಿಯಾ ಮದ್ದು ಬಳಸಿ: ಆರೋಗ್ಯ ಇಲಾಖೆ

 ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿತ್ತು

ಭಾರತೀಯರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿತ್ತು

ಸ್ಥಳೀಯ ಭಾರತೀಯರಿಗೆ ಸ್ವಯಂ ರೋಗನಿರೋಧಕ ಶಕ್ತಿ ಹೆಚ್ಚಿತ್ತು. ಬಹುಶಃ ಭಾರತೀಯರು ಬಳಸುತ್ತಿದ್ದ ಮಸಾಲೆಯುಕ್ತ ಆಹಾರ ಪದ್ಧತಿಗಳು ಇದಕ್ಕೆ ಸ್ವಲ್ಪ ಮಟ್ಟಿಗೆ ಕಾರಣವಾಗಿರಬಹುದು. ಭಾರತೀಯ ಸೈನಿಕರು ಮತ್ತು ಅಧಿಕಾರಿಗಳು ಇದ್ದಕ್ಕಿದ್ದಂತೆ ಕಠಿಣ ಭಾರತೀಯ ಪರಿಸ್ಥಿತಿಗಳಿಗೆ ಹೊಂದಿಕೊಂಡರು. ಆದರೆ ಬ್ರಿಟಿಷ್‌ ಸೈನಿಕರಿಗೆ ಇದಕ್ಕೆ ಹೊಂದಿಕೊಳ್ಳಲು ಸಾಧ್ಯವಾಗಲಿಲ್ಲ. ಸೊಳ್ಳೆ ಕಾಟದಿಂದ ಪಾರಾಗಲು ಬ್ರಿಟಿಷ್ ಸೈನ್ಯವು ತಕ್ಷಣವೇ ತಮ್ಮ ಕ್ಯಾಂಪ್‌ ಅನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಸ್ಥಳಾಂತರಿಸಿತು. ಆ ಪ್ರದೇಶವೇ ಇಂದಿನ ಬೆಂಗಳೂರು ಕಂಟೋನ್ಮೆಂಟ್ ಏರಿಯಾ ಆಗಿದೆ. ಆದರೆ ಮಲೇರಿಯಾ ಸಮಸ್ಯೆ ಇನ್ನೂ ಮುಂದುವರೆಯಿತು.

 ಆವಿಷ್ಕಾರವಾಯಿತು ಕ್ವಿನೈನ್ ಎಂಬ ಟಾನಿಕ್

ಆವಿಷ್ಕಾರವಾಯಿತು ಕ್ವಿನೈನ್ ಎಂಬ ಟಾನಿಕ್

ಅದೇ ಸಮಯದಲ್ಲಿ, ಯುರೋಪಿಯನ್ ವಿಜ್ಞಾನಿಗಳು ಮಲೇರಿಯಾ ಚಿಕಿತ್ಸೆಗಾಗಿ ಬಳಸಬಹುದಾದ "ಕ್ವಿನೈನ್" ಎಂಬ ರಾಸಾಯನಿಕ ಸಂಯೋಜನೆಯ ಟಾನಿಕ್ ಅನ್ನು ಕಂಡುಹಿಡಿದಿದ್ದರು. ಆದರೆ ಇದನ್ನು ಇನ್ನೂ ದೊಡ್ಡ ಪ್ರಮಾಣದಲ್ಲಿ ಪರೀಕ್ಷಿಸಲಾಗಿರಲಿಲ್ಲ. ಅನಿವಾರ್ಯವಾಗಿ ಬ್ರಿಟಿಷ್ ಸೈನ್ಯವು ಈ ಸಮಯದಲ್ಲಿ ಕ್ವಿನೈನ್ ಅನ್ನು ಬೃಹತ್ ಪ್ರಮಾಣದಲ್ಲಿ ಆಮದು ಮಾಡಿಕೊಂಡಿತು ಮತ್ತು ಎಲ್ಲಾ ಸೈನಿಕರಿಗೆ ವಿತರಿಸಲಾಯಿತು. ಅವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ನಿಯಮಿತವಾಗಿ ಡೋಸೇಜ್ ಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದರು. ಭಾರತದ ಎಲ್ಲ ಪ್ರದೇಶಗಳಲ್ಲಿ ಇದನ್ನು ಬ್ರಿಟಿಷ್‌ ಸೈನಿಕರಿಗೆ ಹಂಚಲಾಯಿತು. ಏಕೆಂದರೆ ಎಲ್ಲ ಪ್ರದೇಶಕ್ಕೂ ಸ್ವಲ್ಪ ಮಟ್ಟಿಗೆ ಮಲೇರಿಯಾ ಸಮಸ್ಯೆ ಇತ್ತು.

ಆದರೆ ಒಂದು ಸಣ್ಣ ಸಮಸ್ಯೆ ಇತ್ತು. ಅನಾರೋಗ್ಯದದಿಂದಿದ್ದ ಸೈನಿಕರು ಶೀಘ್ರವಾಗಿ ಚೇತರಿಸಿಕೊಂಡರೂ, ಉಷ್ಣವಲಯದ ಭಾರತದ ಹವಾಗುಣಕ್ಕೆ ಹೊಂದಿಕೊಳ್ಳಲಾಗದ ಇನ್ನೂ ಅನೇಕ ಸೈನಿಕರು ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಅವರು ಕ್ವಿನೈನ್ ಔಷಧವನ್ನು ನಿಗದಿಪಡಿಸಿದ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತಿಲ್ಲ ಎಂಬ ವಿಷಯ ನಂತರ ತಿಳಿದು ಬಂತು. ಅದು ತುಂಬಾ ಕಹಿಯಿದ್ದ ಕಾರಣ ಕ್ವಿನೈನ್ ಸೇವಿಸದ ಬ್ರಿಟಿಷ್ ಸೈನಿಕರು ತಮ್ಮ ರೋಗನಿರೋಧಕ ಶಕ್ತಿ ಕುಗ್ಗಲು ಅವರೇ ಕಾರಣರಾದರು.

ಕಡೆಗೂ ಕೊರೊನಾಗೆ ಸಿಕ್ತು ಮದ್ದು: ರೋಗ ಗೆದ್ದವರ ರಕ್ತವೇ ಇದಕ್ಕೆ ಗುದ್ದು!

 ಬ್ರಿಟಿಷರು ಕುಡಿದರು ಈ

ಬ್ರಿಟಿಷರು ಕುಡಿದರು ಈ "ಜಿನ್ ಟಾನಿಕ್"

ನಂತರ ಎಲ್ಲಾ ಉನ್ನತ ಬ್ರಿಟಿಷ್ ಅಧಿಕಾರಿಗಳು ಮತ್ತು ವಿಜ್ಞಾನಿಗಳು ತಮ್ಮ ಸೈನಿಕರನ್ನು ಈ ಡೋಸೇಜ್ ‌ಗಳನ್ನು ಕಟ್ಟುನಿಟ್ಟಾಗಿ ತೆಗೆದುಕೊಳ್ಳಲು ಮನವೊಲಿಸತೊಡಗಿದರು. ಆಗ ಮದ್ಯದೊಂದಿಗೆ ಬೆರೆಸಿದ ಕಹಿಯಾದ ಕ್ವಿನೈನ್ ಸ್ವಲ್ಪ ಮಟ್ಟಿಗೆ ಸಿಹಿಯಾಗುವುದು ಅವರ ಅನುಭವಕ್ಕೆ ಬಂತು. ಆಗ ಕ್ವಿನೈನ್ ನೊಂದಿಗೆ ಬೆರೆಸಿ ಸೇವಿಸುತಿದ್ದ ಮದ್ಯವು ಜಿನ್ ಆಗಿತ್ತು. ಮತ್ತು ಕ್ವಿನೈನ್ ನೊಂದಿಗೆ ಬೆರೆಸಿದ ಜಿನ್ ಅನ್ನು "ಜಿನ್ ಟಾನಿಕ್" ಎಂದು ಕರೆಯಲಾಯಿತು. ಬ್ರಿಟಿಷ್ ಸೈನಿಕರು ಹಿಂಜರಿಕೆ ಇಲ್ಲದೆ ಇದನ್ನು ಸೇವಿಸಲು ಆರಂಭಿಸಿದರು.

ಕೊರೊನಾ ಕಥೆ ಹೀಗಾದ್ರೆ, ಎಬೋಲಾಗೆ ವೈದ್ಯರ ಚಿಕಿತ್ಸೆ ಹೇಗಿತ್ತು?

 ಬ್ರಿಟಿಷರ ಡಿಸ್ಟಿಲ್ಲರಿ ಖರೀದಿಸಿದ ವಿಠಲ್ ಮಲ್ಯ

ಬ್ರಿಟಿಷರ ಡಿಸ್ಟಿಲ್ಲರಿ ಖರೀದಿಸಿದ ವಿಠಲ್ ಮಲ್ಯ

ನಂತರ ಬ್ರಿಟಿಷ್‌ ಸೈನ್ಯವು ತಮ್ಮ ಮಾಸಿಕ ಪಡಿತರ ಭಾಗವಾಗಿ "ಟಾನಿಕ್ ವಾಟರ್" (ಕ್ವಿನೈನ್) ಜೊತೆಗೆ ಕೆಲವು ಬಾಟಲಿಗಳ ಜಿನ್ ‌ಗಳನ್ನು ವಿತರಿಸಲು ಪ್ರಾರಂಭಿಸಿತು. ಬ್ರಿಟಿಷ್ ಸೈನಿಕರಲ್ಲಿ ಹೆಚ್ಚುತ್ತಿರುವ ಜಿನ್ ಮತ್ತು ಇತರ ರೀತಿಯ ಮದ್ಯದ ಬೇಡಿಕೆಯನ್ನು ಪೂರೈಸಲು, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ಬೆಂಗಳೂರಿನಲ್ಲಿ ಮತ್ತು ಸುತ್ತಮುತ್ತ ಕೆಲವು ಡಿಸ್ಟಿಲ್ಲರಿಗಳನ್ನು ನಿರ್ಮಿಸಿತು. ನಂತರ ಅದನ್ನು ದೇಶದ ಇತರ ಭಾಗಗಳಿಗೆ ಸರಬರಾಜು ಮಾಡಲು ಆರಂಭಿಸಲಾಯಿತು. ಸ್ವಾತಂತ್ರ್ಯಾನಂತರ ಬ್ರಿಟಿಷರ ಈ ಡಿಸ್ಟಿಲ್ಲರಿಗಳನ್ನು ವಿಠಲ್ ಮಲ್ಯ (ವಿಜಯ್ ಮಲ್ಯ ಅವರ ತಂದೆ) ಅವರು ಖರೀದಿಸಿದರು. ನಂತರ ಯುನೈಟೆಡ್ ಬ್ರೂವರೀಸ್ ಎಂಬ ಹೆಸರಿನಡಿಯಲ್ಲಿ ಕಂಪೆನಿ ಸ್ಥಾಪಿಸಿದರು.

ನಂತರ ಕ್ವಿನೈನ್ ಬಹಳಷ್ಟು ಬಾರಿ ಆವಿಷ್ಕಾರಗೊಂಡು ಹೈಡ್ರಾಕ್ಸಿಕ್ಲೋರೊಕ್ವಿನ್ ಎಂದು ರೂಪಾಂತರಗೊಂಡಿದೆ. ಇಂದಿಗೂ ಮಲೇರಿಯಾ ಜ್ವರ ಅಥವಾ ಇತರ ಸೋಂಕಿಗೆ ವಿಶ್ವದಲ್ಲಿ ಅತ್ಯಂತ ಹೆಚ್ಚು ಬಳಕೆ ಆಗುತ್ತಿರುವ ಔಷಧಿ ಇದಾಗಿದೆ. ಕನಿಷ್ಠ ಅಡ್ಡಪರಿಣಾಮ ಹೊಂದಿರುವುದು ಇದಕ್ಕೆ ಕಾರಣ ಎನ್ನಬಹುದು. ಇದರ ಪೇಟೆಂಟ್‌ ಅನ್ನು ಭಾರತ ಹೊಂದಿರುವುದು ಹೆಮ್ಮೆಯ ವಿಷಯವೂ ಆಗಿದೆ.

English summary
Here is a history of hydroxychloroquine which is using as medicine to treat coronavirus all over world,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more