ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದಿ ಹೇರಿಕೆ: ಯಡಿಯೂರಪ್ಪ ಹೇಳಿಕೆಗೆ ಅಮಿತ್ ಶಾ ಚೆಕ್ ಮೇಟ್!

By ಅಭಿಮುಖಿ ಬೆಂಗಳೂರು
|
Google Oneindia Kannada News

Recommended Video

ನಮ್ಮ ಬಾಷೆಯ ತಂಟೆಗೆ ಬಂದ್ರೆ ಸಹಿಸುವುದಿಲ್ಲ..? | Amit Shah | Oneindia Kannada

ಭಾಷೆ ಭಾವುಕತೆಗೆ ಸಂಬಂಧಿಸಿದ ವಿಷಯ. ಅದಕ್ಕಾಗಿ ಪ್ರಾಣ ತೆತ್ತವರಿದ್ದಾರೆ. ಅದರಲ್ಲೂ ದಕ್ಷಿಣ ಭಾರತದಲ್ಲಿ ಜಾತಿಯ ನಂತರ ಜನಾಭಿಪ್ರಾಯ ಸೃಷ್ಟಿಸುವ ತಾಕತ್ತಿರುವುದು ಭಾಷೆಗೇ!

ಇಷ್ಟು ವರ್ಷಗಳ ರಾಜಕೀಯ ಅನುಭವ ಪಡೆದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರಿಗೆ ಅದು ಗೊತ್ತಿಲ್ಲದ ವಿಷಯವೇನಲ್ಲ. ಆದ್ದರಿಂದಲೇ ಹಿಂದಿ ಹೇರಿಕೆಯ ವಿಷಯದಲ್ಲಿ ಹಾವೂ ಸಾಯುವ, ಕೋಲೂ ಮುರಿಯದ ಹೇಳಿಕೆಯನ್ನು ಅವರು ನೀಡಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ಮೌನ ಮುರಿದ ಯಡಿಯೂರಪ್ಪಹಿಂದಿ ಹೇರಿಕೆ ವಿರುದ್ಧ ಮೌನ ಮುರಿದ ಯಡಿಯೂರಪ್ಪ

ಹಿಂದಿ ಹೇರಿಕೆಯನ್ನು ವಿರೋಧಿಸಿದರೂ, ಬೆಂಬಲಿಸಿದರೂ ತಮಗೇ ಸಂಕಷ್ಟ ಎಂಬುದನ್ನು ತಿಳಿದೇ ಯಡಿಯೂರಪ್ಪ ಇಷ್ಟು ದಿನ ಯಾವ ಹೇಳಿಕೆಯನ್ನೂ ನೀಡದೆ ಸುಮ್ಮನೆ ಇದ್ದಿದ್ದು!

ಕನ್ನಡದ ಸ್ವಾಭಿಮಾನ ಮುಖ್ಯ

ಕನ್ನಡದ ಸ್ವಾಭಿಮಾನ ಮುಖ್ಯ

"ಭಾರತೀಯ ಸಂವಿಧಾನ ಅಂಗೀಕರಿಸಿದ ಭಾಷೆಗಳಲ್ಲಿ‌ ಯಾವುದೇ ತಾರತಮ್ಯ ಸಲ್ಲದು‌. ಕರ್ನಾಟಕ ರಾಜ್ಯದಲ್ಲಿ ಕನ್ನಡವೇ ಅಧಿಕೃತ ಭಾಷೆ ಮತ್ತು ಕನ್ನಡ ಭಾಷಾ ಸ್ವಾಭಿಮಾನಕ್ಕೆ ಧಕ್ಕೆ ತರುವ ಯಾವ ಪ್ರಯತ್ನವನ್ನೂ ನಮ್ಮ ಸರ್ಕಾರ ಸಹಿಸುವುದಿಲ್ಲ" ಎಂಬ ಹೇಳಿಕೆಯನ್ನು ಬಿ. ಎಸ್. ಯಡಿಯೂರಪ್ಪ ನೀಡಿದ್ದರು.

ಹಿಂದಿ ಹೇರಿಕೆ: ಬೆಂಕಿಗೆ ತುಪ್ಪ ಸುರಿದ 'ನಮ್ಮ ಕನ್ನಡ'ದ ಕೇಂದ್ರ ಸಚಿವಹಿಂದಿ ಹೇರಿಕೆ: ಬೆಂಕಿಗೆ ತುಪ್ಪ ಸುರಿದ 'ನಮ್ಮ ಕನ್ನಡ'ದ ಕೇಂದ್ರ ಸಚಿವ

ಕುತೂಹಲ ಕೆರಳಿಸಿದ್ದ ಯಡಿಯೂರಪ್ಪ ಪ್ರತಿಕ್ರಿಯೆ

ಕುತೂಹಲ ಕೆರಳಿಸಿದ್ದ ಯಡಿಯೂರಪ್ಪ ಪ್ರತಿಕ್ರಿಯೆ

ದಕ್ಷಿಣ ಭಾರತದಲ್ಲಿ ಕರ್ನಾಟಕವನ್ನು ಬಿಟ್ಟರೆ ಬೇರೆ ಯಾವ ರಾಜ್ಯಗಳಲ್ಲೂ ಬಿಜೆಪಿ ಅಧಿಕಾರದಲ್ಲಿಲ್ಲ. ಉಳಿದೆಲ್ಲ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿರುವುದರಿಂದ ಅವು ಹಿಂದಿ ಹೇರಿಕೆಯ ಬಗ್ಗೆ ಸಹಜವಾಗಿಯೇ ಧ್ವನಿ ಎತ್ತಬಲ್ಲವು. ಹಾಗೆ ಧ್ವನಿ ಎತ್ತುವುದರಿಂದ ರಾಜಕೀಯ ಲಾಭವೂ ದೊರೆಯುತ್ತದೆ ಎಂಬುದು ಅವರ ಲೆಕ್ಕಾಚಾರ. ಆದರೆ ಕರ್ನಾಟಕದಲ್ಲಿ ಹಾಗಿಲ್ಲ. ಕೇಂದ್ರದಲ್ಲಿ ಅಧಿಕಾರದಲ್ಲಿರುವ ತಮ್ಮದೇ ಸರ್ಕಾರದ ನಿಲುವಿಗೆ ವಿರೋಧ ಸೂಚಿಸುವುದು ಎಂದರೆ ಸುಲಭವಲ್ಲ. ಈ ಧ್ವಂಧ್ವದ ಅಡಕತ್ತರಿಯಲ್ಲಿ ಸಿಕ್ಕಿ ಒದ್ದಾಡುತ್ತಿದ್ದ ಯಡಿಯೂರಪ್ಪ ಕೊನೆಗೂ ತಮ್ಮ ಮೊದಲ ಆದ್ಯತೆ ಕನ್ನಡದ ಭಾಷಾ ಸ್ವಾಭಿಮಾನವನ್ನು ಉಳಿಸುವುದು ಎಂದಿದ್ದಾರೆ!

ಯಡಿಯೂರಪ್ಪ ಉದ್ದೇಶವೇನು?

ಯಡಿಯೂರಪ್ಪ ಉದ್ದೇಶವೇನು?

ಯಡಿಯೂರಪ್ಪನವರು ತಮ್ಮ ಈ ಹೇಳಿಕೆಯ ಮೂಲಕ 'ತಾವು ಕೇಂದ್ರ ಸರ್ಕಾರದ ಕೈಗೊಂಬೆ' ಎಂಬ ಟೀಕೆಯನ್ನು ಸುಳ್ಳುಮಾಡುವ ಪ್ರಯತ್ನ ನಡೆಸಿದ್ದಾರೆ. ಒಂದೇ ಪಕ್ಷ ಎಂದ ಮಾತ್ರಕ್ಕೆ ಕೇಂದ್ರದ ಎಲ್ಲಾ ನಿಲುವನ್ನೂ ಸ್ವೀಕರಿಸಲೇಬೇಕಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ. ಜೊತೆಗೆ ಕನ್ನಡಿಗರ ಮಟ್ಟಿಗೆ ಭಾಷೆ ಭಾವುಕತೆಯ ವಿಷಯ ಎಂಬುದನ್ನು ಬಲ್ಲ ಯಡಿಯೂರಪ್ಪ, ಕನ್ನಡಿಗರನ್ನು ಭಾವನಾತ್ಮಕವಾಗಿ ಸೆಳೆಯ ಯತ್ನ ಮಾಡಿದ್ದಾರೆ.

ಅಮಿತ್ ಶಾಗೆ ಬಹಿರಂಗ ಪತ್ರ: ಅಮಿತ್ ಶಾಗೆ ಬಹಿರಂಗ ಪತ್ರ: "ನಾವು ಕನ್ನಡಿಗರು ಹುಚ್ಚಾಟ ಮಾತ್ರ ಮಾಡೋಕ್ಕೆ ಹೋಗಬೇಡಿ"

Array

ಅಮಿತ್ ಶಾ ಚೆಕ್ ಮೇಟ್!

ಯಡಿಯೂರಪ್ಪ ಅವರ ಹೇಳಿಕೆಯಲ್ಲಿ ಹಾವೂ ಸಾಯಬೇಕು, ಕೋಲೂ ಮುರಿಯಬಾರದು ಎಂಬ ಜಾಣ್ಮೆ ಎದ್ದುಕಾಣುತ್ತದೆ. 'ಹಿಂದಿಹೇರಿಕೆ' ಎಂಬ ಪದವನ್ನು ಅವರ ಟ್ವೀಟ್ ನಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ. ಬದಲಾಗಿ ನನ್ನ ಆದ್ಯತೆ ಕನ್ನಡ ಎಂದಿದ್ದಾರೆ. ಈ ಮೂಲಕ ಹೈಕಮಾಂಡ್ ಸಹ ಅವರನ್ನು ಪ್ರಶ್ನಿಸದಂಥ ಜಾಣ ನಡೆ ಇಟ್ಟಿದ್ದಾರೆ. ಈ ಮೂಲಕ ಅಮಿತ್ ಶಾ ಅವರನ್ನು ಚೆಕ್ ಮೇಟ್ ಮಾಡಿದ್ದಾರೆ!

English summary
Karnataka CM BS Yediyurappa's statement on Hindi Imposition Checkmates Amit Shah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X