ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಜಾಬ್‌ ವಿವಾದದ ನಡುವೆ ಕರ್ನಾಟಕದ ಖಾಸಗಿ ಶಾಲೆಗಳಲ್ಲಿ ಪೋಷಕರಿಗೂ ಡ್ರೆಸ್‌ ಕೋಡ್‌!

|
Google Oneindia Kannada News

ಬೆಂಗಳೂರು, ಫೆಬ್ರವರಿ 23: ರಾಜ್ಯದಲ್ಲಿ ಹಿಜಾಬ್‌ ವಿವಾದವು ತೀವ್ರವಾಗಿದೆ. ಸದ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿದೆ. ಶಾಲೆಯಲ್ಲಿ ಹಿಜಾಬ್‌ ಧರಿಸಬಹುದೇ, ಧರಿಸಬಾರದೇ ಎಂಬ ಬಗ್ಗೆ ವಾದ ವಿವಾದ ನಡೆಯುತ್ತಿದೆ. ಈ ನಡುವೆ ರಾಜ್ಯದ ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಈಗ ಪೋಷಕರಿಗೆ ಡ್ರೆಸ್ ಕೋಡ್‌ ಆರಂಭ ಮಾಡಿದೆ ಎಂದು ಡೆಕಾನ್‌ ಹೆರಾಲ್ಡ್‌ ವರದಿ ಮಾಡಿದೆ.

ಹಲವಾರು ಪಾಲಕರು ತಮ್ಮ ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಅನೌಪಚಾರಿಕ ಉಡುಪುಗಳಲ್ಲಿ ಬರುವುದನ್ನು ಗಮನಿಸಿರುವ ಖಾಸಗಿ ಶಾಲೆಗಳು ಈ ತೀರ್ಮಾನಕ್ಕೆ ಬಂದಿದೆ. ಕೆಲವು ಖಾಸಗಿ ಅನುದಾನರಹಿತ ಶಾಲೆಗಳು ಪೋಷಕರಿಗೆ ಡ್ರೆಸ್ ಕೋಡ್ ಅನ್ನು ವಿಧಿಸಿವೆ ಎಂದು ವರದಿ ಉಲ್ಲೇಖ ಮಾಡಿದೆ.

 ರಂಜಾನ್‌ ವೇಳೆ ಹಿಜಾಬ್‌ಗೆ ಅನುಮತಿ ನೀಡಿ: ಹೈಕೋರ್ಟ್‌ಗೆ ಹೊಸ ಅರ್ಜಿ ರಂಜಾನ್‌ ವೇಳೆ ಹಿಜಾಬ್‌ಗೆ ಅನುಮತಿ ನೀಡಿ: ಹೈಕೋರ್ಟ್‌ಗೆ ಹೊಸ ಅರ್ಜಿ

ಶಾಲೆಗಳು ಕಳುಹಿಸಿರುವ ಸುತ್ತೋಲೆಯಲ್ಲಿ ಲಭ್ಯವಿರುವ ವಿವರಗಳ ಪ್ರಕಾರ, ಮಕ್ಕಳನ್ನು ಶಾಲೆಯಲ್ಲಿ ಬಿಡುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಪೋಷಕರು ಅಥವಾ ಪಾಲಕರು ಬರ್ಮುಡಾ, ಶಾರ್ಟ್ಸ್, ಸ್ಪೋರ್ಟ್ಸ್ ವೇರ್‌, ಹೌಸ್ ವೇರ್, ಸ್ಲೀವ್‌ಲೆಸ್ ಮತ್ತು ಟ್ರ್ಯಾಕ್ ಪ್ಯಾಂಟ್ ಇತ್ಯಾದಿಗಳನ್ನು ಧರಿಸುವುದನ್ನು ನಿರ್ಬಂಧಿಸಲಾಗಿದೆ. ಈ ಬಗ್ಗೆ ಕೆಲವು ಶಾಲೆಗಳು ಸುತ್ತೋಲೆಯನ್ನು ಹೊರಡಿಸಿದೆ.

ಹಿಜಾಬ್ ಧಾರಣೆ ಕಡ್ಡಾಯಗೊಳಿಸುವ ವಾದ ಪುರಸ್ಕರಿಸಬಾರದು: ಎಜಿಹಿಜಾಬ್ ಧಾರಣೆ ಕಡ್ಡಾಯಗೊಳಿಸುವ ವಾದ ಪುರಸ್ಕರಿಸಬಾರದು: ಎಜಿ

 ಬೆಂಗಳೂರು ದಕ್ಷಿಣದ ಶಾಲೆಯೊಂದರ ಸುತ್ತೋಲೆಯಲ್ಲಿ ಹೀಗಿದೆ..

ಬೆಂಗಳೂರು ದಕ್ಷಿಣದ ಶಾಲೆಯೊಂದರ ಸುತ್ತೋಲೆಯಲ್ಲಿ ಹೀಗಿದೆ..

ಬೆಂಗಳೂರು ದಕ್ಷಿಣದಲ್ಲಿರುವ ಒಂದು ಪ್ರಾಥಮಿಕ ಶಾಲೆ ಹೊರಡಿಸಿದ ಅಂತಹ ಒಂದು ಸುತ್ತೋಲೆಯ ಪ್ರಕಾರ, "ಶಾಲೆಗೆ ಭೇಟಿ ನೀಡುವಾಗ ಡ್ರೆಸ್ ಕೋಡ್‌ಗೆ ಬದ್ಧರಾಗಿರಿ. ಫಾರ್ಮಲ್/ಸೆಮಿ ಫಾರ್ಮಲ್ ಬಟ್ಟೆಯನ್ನು ಧರಿಸಿ. ಶಾರ್ಟ್ಸ್, ಬರ್ಮುಡಾ, ಸ್ಲೀವ್‌ಲೆಸ್, ಟ್ರ್ಯಾಕ್ ಪ್ಯಾಂಟ್‌ಗಳು, ಸ್ಪೋರ್ಟ್ಸ್ ವೇರ್‌, ನೈಟ್‌ವೇರ್, ಹೌಸ್ ವೇರ್ ಇತ್ಯಾದಿಗಳನ್ನು ಧರಿಸುವುದನ್ನು ತಪ್ಪಿಸಿ," ಎಂದು ಸುತ್ತೋಲೆಯಲ್ಲಿ ಉಲ್ಲೇಖ ಮಾಡಲಾಗಿದೆ. ಖಾಸಗಿ ಶಾಲೆಗಳ ಆಡಳಿತ ಪ್ರತಿನಿಧಿಗಳು ಮತ್ತು ಮುಖ್ಯ ಪ್ರಾಧ್ಯಾಪಕರ ಪ್ರಕಾರ, ಪೋಷಕರು ಅಥವಾ ಪಾಲಕರು ಮಕ್ಕಳನ್ನು ಶಾಲೆಯಲ್ಲಿ ಬಿಡಲು ಬರುವಾಗ ಅಥವಾ ಶಾಲೆಯಿಂದ ಕರೆದುಕೊಂಡು ಹೋಗುವಾಗ ಯಾವ ಬಟ್ಟೆ ಹಾಕಬಹುದು ಹಾಗೂ ಯಾವ ಬಟ್ಟೆಯನ್ನು ಹಾಕಬಾರದು ಎಂಬ ಡ್ರೆಸ್‌ ಕೋಡ್‌ ಅನ್ನು ವಿಧಿಸಲು ಒತ್ತಾಯ ಮಾಡಿದೆ.

"ನೈಟ್‌ವೇರ್‌ಗಳಲ್ಲಿ ಶಾಲೆಗೆ ಬರುವ ಪೋಷಕರು"

ಬೆಂಗಳೂರಿನ ಜಯನಗರದಲ್ಲಿರುವ ಖಾಸಗಿ ಅನುದಾನರಹಿತ ಶಾಲೆಯ ಪ್ರಾಂಶುಪಾಲರು, "ನಮ್ಮ ಶಿಕ್ಷಕರು, ಸಿಬ್ಬಂದಿ ಮತ್ತು ಕೆಲವು ಪೋಷಕರಿಗೆ ಎಷ್ಟು ಮುಜುಗರವಾಗುತ್ತದೆ ಎಂದು ನೀವು ನಂಬುವುದಿಲ್ಲ. ಕೆಲವು ಪಾಲಕರು ತಮ್ಮ ನೈಟ್‌ವೇರ್‌ಗಳನ್ನು ಹಾಕಿಕೊಂಡು ಮಕ್ಕಳನ್ನು ಶಾಲೆಯಲ್ಲಿ ಬಿಡಲು ಅಥವಾ ಶಾಲೆಯಿಂದ ಕರೆದುಕೊಂಡು ಹೋಗಲು ಬರುತ್ತಾರೆ," ಎಂದು ತಿಳಿಸಿದ್ದಾರೆ.

 ಪೋಷಕರಿಂದ ಮಿಶ್ರ ಪ್ರತಿಕ್ರಿಯೆ

ಪೋಷಕರಿಂದ ಮಿಶ್ರ ಪ್ರತಿಕ್ರಿಯೆ

ಈ ಕ್ರಮಕ್ಕೆ ಪೋಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪೋಷಕರಾದ ಶಿಲ್ಪಾ ಪ್ರಶಾಂತ್ ಮಾತನಾಡಿ, "ನಮ್ಮ ಮಕ್ಕಳು ಸೇರಿದಂತೆ ನೂರಾರು ಮಕ್ಕಳು ನಮ್ಮನ್ನು ನೋಡುತ್ತಾರೆ ಎಂಬ ಕಾರಣಕ್ಕೆ ನಾವು ಪೋಷಕರು ಸ್ವಲ್ಪ ಡ್ರೆಸ್ ಸೆನ್ಸ್ ಹೊಂದಿರಬೇಕು ನಿಜ. ನಾವು ಧರಿಸುವ ಬಟ್ಟೆ ಇತರರಿಗೆ ಮುಜುಗರವಾಗಬಾರದು," ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದಾಗ್ಯೂ, ಕೆಲವು ಪೋಷಕರು ಉಡುಗೆ ತಮ್ಮ ಆಯ್ಕೆ ಎಂದು ಭಾವಿಸುತ್ತಾರೆ. "ಶಾಲೆಗಳು ಪೋಷಕರಿಗೆ ಡ್ರೆಸ್ ಕೋಡ್ ಹೇರಬಾರದು. ನಮಗೆ ಆರಾಮದಾಯಕವಾದುದನ್ನು ಧರಿಸಲು ನಮಗೆ ಅವಕಾಶ ನೀಡಬೇಕು. ಕೆಲವು ಖಾಸಗಿ ಶಾಲೆಗಳು ಪೋಷಕರನ್ನೂ ನಿಯಂತ್ರಿಸಲು ಪ್ರಾರಂಭಿಸಿರುವುದು ಬೇಸರದ ಸಂಗತಿ," ಎಂದು ಪೋಷಕಿ ವಾಣಿ ಸಿ ಹೇಳಿದ್ದಾರೆ.

"ಅನೇಕ ದೇವಾಲಯಗಳಲ್ಲಿಯೇ ವಸ್ತ್ರ ಸಂಹಿತೆ"

ಕರ್ನಾಟಕದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್‌ಗಳ ಪ್ರಧಾನ ಕಾರ್ಯದರ್ಶಿ ಡಿ ಶಶಿ ಕುಮಾರ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿ, "ನಾವು ಪೋಷಕರಿಗೆ ಕೆಲವು ಸಂಸ್ಥೆಗಳು ವರ್ಕ ಫ್ರಮ್‌ ಹೋಮ್‌ ನೆಪದಲ್ಲಿ ಅಧಿಕ ಕೆಲಸ ನೀಡುವುದನ್ನು ದೂರಬೇಕೇ ಎಂದು ತಿಳಿದಿಲ್ಲ. ಶಾಲೆಗಳು ಈಗಾಗಲೇ ಆಫ್‌ಲೈನ್‌ನಲ್ಲಿ ಆರಂಭವಾಗಿದೆ. ಆದರೆ ಪೋಷಕರು ತಮ್ಮ ಮನೆಯ ಬಟ್ಟೆಯಲ್ಲೇ ಶಾಲೆಗೆ ಬರುವುದು ಆಶ್ಚರ್ಯಕರವಾಗಿದೆ," ಎಂದಿದ್ದಾರೆ. ಕಚೇರಿ ಕೆಲಸ, ಡ್ರಾಪ್ ಅಥವಾ ಪಿಕ್ ಅಪ್ ಉದ್ದೇಶಗಳಿಗಾಗಿ ಶಾಲಾ ಆವರಣಕ್ಕೆ ಪ್ರವೇಶಿಸುವಾಗ ಪೋಷಕರು ಯೋಗ್ಯವಾದ ಉಡುಗೆಯನ್ನು ಧರಿಸಬೇಕು ಎಂದು ಕೂಡಾ ಅಭಿಪ್ರಾಯ ಪಟ್ಟಿದ್ದಾರೆ. "ಬರ್ಮುಡಾ, ಶಾರ್ಟ್ಸ್‌ನಂತಹ ಉಡುಪುಗಳನ್ನು ಅನೇಕ ದೇವಾಲಯಗಳಲ್ಲಿ ಅನುಮತಿಸಲಾಗುವುದಿಲ್ಲ ಮತ್ತು ಪೋಷಕರು ಅದನ್ನು ಶಾಲೆಗೆ ಹೇಗೆ ಧರಿಸುತ್ತಾರೆ," ಎಂದು ಪ್ರಶ್ನೆ ಮಾಡಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Amid of Hijab Row Private Schools in Karnataka Come Up With Dress Code for Parents.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X