ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇಸಿಗೆಯಲ್ಲಿ ದೇಹಕ್ಕೆ ತಂಪನ್ನೀಯುವ ದಾಸವಾಳ

|
Google Oneindia Kannada News

ಬೇಸಿಗೆಯ ದಿನಗಳಲ್ಲಿ ದೇಹದ ಮೇಲೆ ಆಗುವ ಪರಿಣಾಮವನ್ನು ಅರಿತು ಅದಕ್ಕೆ ಬೇಕಾದ ಔಷಧಿಗಳನ್ನು ನಮ್ಮ ಪೂರ್ವಜರು ತಮ್ಮ ಸುತ್ತಮುತ್ತಲಿನ ಪ್ರಕೃತಿಯಿಂದಲೇ ಮಾಡಿಕೊಳ್ಳುತ್ತಿದ್ದರು. ಮನೆಯಲ್ಲಿ ಅಲಂಕಾರಕ್ಕಾಗಿ ನೆಡುವ ಹೂವಿನ ಗಿಡದಲ್ಲಿಯೂ ನಮ್ಮ ದೇಹವನ್ನು ತಂಪಾಗಿಸುವ ಗುಣವಿದೆ ಎಂದರೆ ನಂಬಲೇಬೇಕಾಗಿದೆ. ಇಂತಹ ಹೂ ಗಿಡಗಳ ಪೈಕಿ ದಾಸವಾಳವೂ ಒಂದಾಗಿದೆ.

ಬೇಸಿಗೆಯ ದಿನಗಳಲ್ಲಿ ಬಿಸಿಲಿನಿಂದ ತಪ್ಪಿಸಿಕೊಂಡು ದಣಿದ ದೇಹವನ್ನು ತಂಪಾಗಿಸಿಟ್ಟುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಅವತ್ತಿನ ದಿನಗಳಲ್ಲಿ ತಮ್ಮ ಸುತ್ತಮುತ್ತ ದೊರೆಯುವ ಗಿಡ, ಮರ, ಬಳ್ಳಿಗಳ ಮಹತ್ವ ಅರಿತು ಅವುಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕ ಬಿಸಿಲಿಗೆ ಸೆಡ್ಡು ಹೊಡೆದು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಈಗಲೂ ಅದನ್ನು ಮಾಡಿಕೊಂಡರೆ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಲು ಸಾಧ್ಯವಿದೆ.

ಬೇಸಿಗೆಯಲ್ಲಿ ಕಾಡುವ ಕಾಮಾಲೆಯತ್ತ ಜಾಗ್ರತೆ ಇರಲಿ!ಬೇಸಿಗೆಯಲ್ಲಿ ಕಾಡುವ ಕಾಮಾಲೆಯತ್ತ ಜಾಗ್ರತೆ ಇರಲಿ!

 ಇದು ಎಷ್ಟೊಂದು ಆರೋಗ್ಯಕಾರಿ ಗೊತ್ತಾ?

ಇದು ಎಷ್ಟೊಂದು ಆರೋಗ್ಯಕಾರಿ ಗೊತ್ತಾ?

ಮನುಷ್ಯರ ದೇಹವನ್ನು ತಂಪಾಗಿಸುವ ಗುಣ ಹಲವು ಹಣ್ಣು ತರಕಾರಿಯಲ್ಲಿ ಮಾತ್ರವಲ್ಲದೆ ಹೂವಿನ ಗಿಡಗಳಲ್ಲಿಯೂ ಇದೆ ಎನ್ನುವುದಕ್ಕೆ ದಾಸವಾಳವೇ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ನಾವೆಲ್ಲರೂ ಹೂವಿನ ಸುಂದರತೆಯನ್ನು ನೋಡಿದ್ದೇವೆ. ಜತೆಗೆ ಅದು ಪೂಜೆಗೆ ಶ್ರೇಷ್ಠವೂ ಹೌದು. ಇಷ್ಟು ಮಾತ್ರವಲ್ಲದೆ ಇದು ಎಷ್ಟೊಂದು ಆರೋಗ್ಯಕಾರಿ ಎನ್ನುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ.

ದಾಸವಾಳ ಹೂ, ಎಲೆ, ಬೇರು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿದ್ದು, ಇದನ್ನರಿತು ಸಕಾಲದಲ್ಲಿ ಅದನ್ನು ಬಳಸಿಕೊಂಡಿದ್ದೇ ಆದರೆ ಹಲವು ರೋಗಗಳಿಂದ ದೂರವಿರಲು ಸಾಧ್ಯವಾಗಲಿದೆ. ದಾಸವಾಳದಲ್ಲಿ ಹಲವು ಜಾತಿಯ ಗಿಡಗಳಿದ್ದು ಅವುಗಳಲ್ಲಿ ಬಿಳಿ ದಾಸವಾಳ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ. ಇದರ ಹೂ, ಎಲೆ, ಬೇರು ಸರ್ವ ವಿಧದಲ್ಲಿಯೂ ಉಪಯೋಗಕಾರಿಯಾಗಿದೆ.

 ಅತಿಹೆಚ್ಚು ತಂಪುಕಾರಕ ಗುಣಗಳಿವೆ

ಅತಿಹೆಚ್ಚು ತಂಪುಕಾರಕ ಗುಣಗಳಿವೆ

ದಾಸವಾಳದಲ್ಲಿ ತಂಪುಕಾರಕ ಗುಣಗಳು ಅಧಿಕ ಪ್ರಮಾಣದಲ್ಲಿರುವ ಕಾರಣ ಇದನ್ನು ಬೇಸಿಗೆಯ ದಿನಗಳಲ್ಲಿ ಬಳಸಿಕೊಳ್ಳುವುದು ಒಳ್ಳೆಯದು. ಸಾಮಾನ್ಯವಾಗಿ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗುವುದು ಸಹಜ. ಇದರಿಂದ ತಲೆನೋವು, ಉರಿಮೂತ್ರ, ಸಮರ್ಪಕವಾಗಿ ಮಲವಿಸರ್ಜನೆಯಾಗದಿರುವುದು ಹೀಗೆ ಹತ್ತು ಹಲವು ಸಮಸ್ಯೆಗಳು ಕಾಡುತ್ತವೆ.

ತಲೆಯಲ್ಲಿ ಏನೋ ಭಾರವಾದಂತೆ ಕೆಲವೊಮ್ಮೆ ಭಾಸವಾಗುತ್ತಿರುತ್ತದೆ. ಜತೆಗೆ ತುರಿಕೆಯೂ ಕಾಣಿಸಿಕೊಳ್ಳಬಹುದು. ಇನ್ನು ದೇಹದ ಉಷ್ಣಾಂಶವು ಹೆಚ್ಚಾಗಬಹುದು ಇದನ್ನು ಕಡಿಮೆ ಮಾಡಿ ಹಗುರವಾಗಬೇಕಾದರೆ ದಾಸವಾಳದ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಬಳಿಕ ಅದನ್ನು ಕಿವುಚಿ ಎಲೆಗಳನ್ನು ಬೇರ್ಪಡಿಸಿ ಲೋಳೆಯಾದ ನೀರನ್ನು ಶೇಖರಿಸಿಟ್ಟುಕೊಂಡು ಸ್ನಾನ ಮಾಡುವ ವೇಳೆ ಮೊದಲಿಗೆ ಆ ನೀರನ್ನು ತಲೆಗೆ ಸುರಿದುಕೊಂಡರೆ ತಂಪಾದ ಅನುಭವವಾಗುತ್ತದೆ.

 ಹೊಟ್ಟೆಯಲ್ಲಿನ ಸಮಸ್ಯೆಗೆ ಪರಿಹಾರ

ಹೊಟ್ಟೆಯಲ್ಲಿನ ಸಮಸ್ಯೆಗೆ ಪರಿಹಾರ

ಒಂದೈದು ನಿಮಿಷಗಳ ಕಾಲ ನೀರು ಹಾಕಿ ತೊಳೆದು ಬಳಿಕ ಸ್ನಾನ ಮಾಡಿದರೆ ತಲೆಯೆಲ್ಲ ಹಗುರವಾಗುತ್ತದೆ. ದೇಹದಲ್ಲಿ ಉಲ್ಲಾಸವಿರುತ್ತದೆ. ಇದು ಕೂದಲು ಉದುರುವುದು, ಹೊಟ್ಟಿನ ಸಮಸ್ಯೆಗೂ ಸಹಕಾರಿಯಾಗುತ್ತದೆ. ಶಾಂಪುಗಳು ಇನ್ನೂ ಮಾರುಕಟ್ಟೆಯನ್ನು ಆಕ್ರಮಿಸದ ಕಾಲದಲ್ಲಿ ಹಳ್ಳಿಗಳಲ್ಲಿ ಹಿಂದಿನ ಕಾಲದವರು ಇದನ್ನೇ ಬಳಸುತ್ತಿದ್ದರು.

ದಾಸವಾಳದಲ್ಲಿ ಗರ್ಭವೃದ್ಧಿ ಮಾಡುವ, ಕೂದಲನ್ನು ಬೆಳೆಸುವ, ದಾಹ ತಣಿಸುವ, ಧಾತು ವೃದ್ಧಿಸುವ ಗುಣವೂ ಇದೆ ಎನ್ನಲಾಗುತ್ತಿದೆ. ಹೂಗಳು, ಬೇರು, ಎಲೆಗಳು ಉಪಯುಕ್ತವಾಗಿದ್ದು, ಎಲೆಗಳನ್ನು ಹಿಂಡಿ ಪ್ರತಿದಿನ ಐದಾರು ಚಮಚದಷ್ಟು ರಸವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿನ ಸಮಸ್ಯೆಗಳು ಪರಿಹಾರವಾಗುತ್ತವೆ. ಇನ್ನು ಇದೇ ರಸದೊಂದಿಗೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಪಿತ್ತ ಕಡಿಮೆಯಾಗುತ್ತದೆ. ಬಿಳಿ ದಾಸವಾಳದ ಬೇರನ್ನು ಹಸುವಿನ ಹಾಲಿನಲ್ಲಿ ಅರೆದು ಸೇವಿಸಿದರೆ ಗರ್ಭಧಾರಣೆಗೆ ಸಹಕಾರಿ.

 ಮೂಲವ್ಯಾಧಿಯನ್ನು ನಿಯಂತ್ರಿಸಲು ಸಾಧ್ಯ

ಮೂಲವ್ಯಾಧಿಯನ್ನು ನಿಯಂತ್ರಿಸಲು ಸಾಧ್ಯ

ಬೇರಿನ ರಸವನ್ನು ಗೋಪಿ ಚಂದನದ ಜೊತೆ ಸೇವಿಸಿದರೆ ಗರ್ಭಸ್ರಾವ ತಡೆಯಲು ಸಾಧ್ಯವಾಗುತ್ತದೆ. ದಾಸವಾಳದ ಎಲೆಯನ್ನು ಅರೆದು ತಲೆಗೆ ಲೇಪಿಸಿದರೆ ಕೂದಲು ಉದುರುವುದನ್ನು ತಡೆಗಟ್ಟಬಹುದು. ಬಿಳಿ ದಾಸವಾಳದ ಹೂವುಗಳನ್ನು ತುಪ್ಪದಲ್ಲಿ ಹುರಿದು ತಿನ್ನುವುದರಿಂದ ಮೂಲವ್ಯಾಧಿಯನ್ನು ನಿಯಂತ್ರಿಸಬಹುದಾಗಿದೆ. ಎಲೆ ಮತ್ತು ಹೂಗಳನ್ನು ಕಲ್ಲು ಸಕ್ಕರೆಯೊಂದಿಗೆ ಅರೆದು ಸೇವಿಸುತ್ತಾ ಬಂದರೆ ಹೊಟ್ಟೆಯಲ್ಲಿ ಕಾಣಿಸುವ ಕೆಲವೊಂದು ತೊಂದರೆಗಳು ಮಾಯವಾಗುವುವು.

ಹಳ್ಳಿಗಳಲ್ಲಿ ದಾಸವಾಳವನ್ನು ತಮ್ಮ ಮನೆಯ ಸುತ್ತ ನೆಟ್ಟು ಬೆಳೆಸುತ್ತಾರೆ. ಹೀಗಾಗಿ ಇವುಗಳ ಬಳಸಲು ತೊಂದರೆಯಾಗುವುದಿಲ್ಲ. ಬೇಸಿಗೆಯ ದಿನಗಳಲ್ಲಿ ದಾಸವಾಳವನ್ನು ಉಪಯೋಗಿಸುವುದನ್ನು ಕಲಿತರೆ ಆರೋಗ್ಯ ಕಾಪಾಡಿಕೊಳ್ಳುವುದು ಕಷ್ಟವಾಗುವುದಿಲ್ಲ ಎಂಬುವುದಂತು ಸತ್ಯ.

English summary
The hibiscus flower has the cooling Qualities of a man's body.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X