ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿಯ ಮುಂಡ್ಕಾ ಅಗ್ನಿ ಅವಘಡ: ಹಲವರ ಜೀವ ಉಳಿಸಿದ ಅಪತ್ಭಾಂದವರು

|
Google Oneindia Kannada News

ದೆಹಲಿ, ಮೇ 15: ಪಶ್ಚಿಮ ದೆಹಲಿಯ ಮುಂಡ್ಕಾದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವು ಬೆಂಕಿಗೆ ಆಹುತಿಯಾಗಿ 27 ಮಂದಿ ಮೃತಪಟ್ಟ ದಾರುಣ ಘಟನೆಯಲ್ಲಿ ಉಳಿದವರು ತಮ್ಮ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ತಮ್ಮ ಪ್ರಾಣ ಆಪತ್ತಿನಲ್ಲಿದ್ದರೂ ಮಾನವೀಯತೆಯ ದೃಷ್ಟಿಯಿಂದ ತಮ್ಮ ಜತೆಗಿರುವ ಅಸಹಾಯಕರನ್ನು ರಕ್ಷಿಸಿ, ಧೀರತೆ ತೋರಿದ್ದಾರೆ.

ಪ್ರತ್ಯಕ್ಷದರ್ಶಿಗಳಾದ ಮೂವರನ್ನು ಇಂಡಿಯಾ ಟುಡೆ ಸಂದರ್ಶಿಸಿದ್ದು, ಅದರ ಆಯ್ದ ಭಾಗ ಇಲ್ಲಿದೆ. ಅಮಾಯಕರ ಪ್ರಾಣವನ್ನು ರಕ್ಷಿಸಲು ಈ ಮೂವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಜೀವಗಳನ್ನು ಉಳಿಸಿದ್ದಾರೆ.

ಆರು ಮಕ್ಕಳನ್ನು ರಕ್ಷಿಸಿದ ಮಹಿಳೆ:

ಎಂಟು ದಿನಗಳ ಹಿಂದೆ ಈ ಕಟ್ಟಡದಲ್ಲಿರುವ ಕೈಗಾರಿಕೆಯಲ್ಲಿ52 ವರ್ಷದ ಮಮತಾ ದೇವಿ ಕೆಲಸಕ್ಕೆ ಸೇರಿದ್ದರು. ಇವರ ಪತಿ ವಿಶೇಷಚೇತರಾಗಿದ್ದು, ಮಹಿಳೆಯೇ ಕುಟುಂಬಕ್ಕೆಆಧಾರವಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

ಮುಂಡ್ಕಾ ಕಟ್ಟಡ ಅಗ್ನಿ ಅವಘಡ: ಸ್ಥಳಕ್ಕೆ ದೆಹಲಿ ಸಿಎಂ ಭೇಟಿ, ತನಿಖೆಗೆ ಆದೇಶಮುಂಡ್ಕಾ ಕಟ್ಟಡ ಅಗ್ನಿ ಅವಘಡ: ಸ್ಥಳಕ್ಕೆ ದೆಹಲಿ ಸಿಎಂ ಭೇಟಿ, ತನಿಖೆಗೆ ಆದೇಶ

"ಬೆಂಕಿ ವ್ಯಾಪಿಸುತ್ತಿದ್ದಂತೆ ಎಲ್ಲಡೆ ಜನರ ಕೂಗಾಟ, ಚೀರಾಟ ಕೇಳಲು ಆರಂಭವಾಯಿತು. ಜೀವವನ್ನು ರಕ್ಷಿಸಲು ಜನರು ಎಲ್ಲೆಡೆ ಓಡಲು ಆರಂಭಿಸಿದರು. ಕ್ಷಣಾರ್ಧದಲ್ಲೇ ದಟ್ಟ ಹೊಗೆ ಕೊಠಡಿಯ ತುಂಬ ಆವರಿಸಿತು. ಜನರು ಉಸಿರುಗಟ್ಟಿ ಮೂರ್ಛೆ ಹೋಗಲು ಆರಂಭಿಸಿದರು. ಆಗ ಆ ಹೊತ್ತಿಗಾಗಲೇ ಕ್ರೇನ್‌ ಬಂದು ಕಿಟಿಕಿ ಗಾಜುಗಳನ್ನು ಪುಡಿ ಮಾಡಿತು. ಈ ವೇಳೆ ಕೊಠಡಿಯಲ್ಲಿ 6 ಮಂದಿ ಮಕ್ಕಳಿದ್ದರು. ಅವರನ್ನು ರಕ್ಷಿಸುವುದು ನನ್ನ ಹೊಣೆ ಎಂಬುದನ್ನು ಅರಿತು, ಅವರನ್ನು ಶೀಘ್ರ ಕ್ರೇನ್‌ ಬಳಿಗೆ ಕರೆದುಕೊಂಡು ಬಂದು, ಅದರಲ್ಲಿ ಕೂರಿಸಿದೆ. ಈ ವೇಳೆ ನನ್ನ ಕೈ ಮತ್ತು ಕಾಲಿಗೆ ತೀವ್ರವಾಗಿ ಗಾಯಗಳಾಯಿತು. ಮನೆಯವರು ಕಣ್ಣ ಮುಂದೆ ಬಂದರು. ನನ್ನು ಮಕ್ಕಳನ್ನು ನೆನದು ಪ್ರಾಣವನ್ನು ರಕ್ಷಿಸಿಕೊಳ್ಳಲು ಕಿಟಕಿಯಿಂದ ಹೊರಕ್ಕೆ ಧುಮುಕಿದೆ,'' ಎಂದು ಮಮತಾ ದೇವಿ ವಿವರಿಸಿದರು.

Heroes who saved lives in Delhi Mundka fire incident

ಕಿಟಕಿ ಗಾಜು ಹೊಡೆದು ಜನರ ರಕ್ಷಣೆ:

ಕಳೆದ ಒಂದು ವರ್ಷದಿಂದ ಅವಿನಾಶ್‌(27) ಕೈಗಾರಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟನೆ ಸಂದರ್ಭದಲ್ಲಿ ಅವಿನಾಶ್‌ ಕಟ್ಟಡದ ಕಿಟಕಿ ಗಾಜು ಹೊಡೆದು ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸಿದ್ದಾರೆ.

ದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 20 ಜನ ಸಜೀವ ದಹನದೆಹಲಿಯಲ್ಲಿ ಭಾರೀ ಅಗ್ನಿ ಅವಘಡ: 20 ಜನ ಸಜೀವ ದಹನ

"ಎರಡನೇ ಅಂತಸ್ತಿನ ಕಟ್ಟಡದಲ್ಲಿ ಸಭೆ ನಡೆಯುತ್ತಿತ್ತು. ಸಭೆಯಲ್ಲಿ ಸುಮಾರು 70 ರಿಂದ 80 ಮಂದಿ ಭಾಗವಹಿಸಿದ್ದರು. ಈ ವೇಳೆಗಾಗಲೇ ಕಟ್ಟಡಕ್ಕೆ ಬೆಂಕಿ ತಗುಲಿ, ಎಲ್ಲೆಡೆ ದಟ್ಟ ಹೊಗೆ ಆವರಿಸಲು ಪ್ರಾರಂಭವಾಗಿತ್ತು. ಮೂರನೇ ಅಂತಸ್ತಿನಿಂದ ವ್ಯಕ್ತಿಯೊಬ್ಬರು ಮೆಟ್ಟಿಲು ಇಳಿದು ಕೆಳಬಂದು, ನಮ್ಮ ಎದುರೇ ಮೂರ್ಛೆ ಹೋಗಿ ಕೆಳಕ್ಕೆ ಬಿದ್ದರು. ನಾವಿದ್ದ ಕಟ್ಟಡದಲ್ಲಿ ಮಹಿಳೆಯರು ಮತ್ತು ಮಕ್ಕಳಿದ್ದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತು ನಾನು ಕಿಟಕಿ ಗಾಜನ್ನು ಹೊಡೆಯಲು ಪ್ರಾರಂಭಿಸಿದೆ. ಏನು ಮಾಡಿದರೂ ಕಿಟಕಿಯ ಗಾಜು ಪುಡಿಯಾಗುತ್ತಿರಲಿಲ್ಲ. ಅಲ್ಲಿದ್ದ ಪಿಠೋಪಕರಣಗಳು, ಚೂಪಾದ ವಸ್ತುಗಳಿಂದ ಗಾಜನ್ನು ಹೊಡೆಯಲು ಆರಂಭಿಸಿದೆ. ಅಂತಿಮವಾಗಿ ಗಾಜು ಪುಡಿ ಪುಡಿಯಾಯಿತು. ನಂತರ ಮಹಿಳೆಯರು, ಮಕ್ಕಳನ್ನುಕ್ರೇನ್‌ ಸಹಾಯದಿಂದ ಕೆಳಕ್ಕೆ ಇಳಿಸಲಾಯಿತು. ಈ ಸಮಯದಲ್ಲಿ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುವುದೇ ನನ್ನ ಮೊದಲ ಆದ್ಯತೆಯಾಗಿತ್ತು,'' ಎಂದು ಅವಿನಾಶ್‌ ಹೇಳಿದರು.

Heroes who saved lives in Delhi Mundka fire incident

ಮೂರ್ಛೆ ಹೋದವರನ್ನು ರಕ್ಷಿಸಿದ ಅಪತ್ಭಾಂದವ:
"ಕಟ್ಟಡಕ್ಕೆ ಬೆಂಕಿ ತಗುಲಿದ ಪರಿಣಾಮ ಒಳಗಿದ್ದ ಜನರ ಆಕ್ರಂದನ ಮುಗಿಲುಮುಟ್ಟಿತ್ತು. ಕೆಲವರು ಸತ್ತು ಬಿದ್ದಿರುವುದನ್ನು ನೋಡಿ ಹೃದಯ ತುಂಬಿ ಬಂತು. ಹಲವರು ದಟ್ಟ ಹೊಗೆಯ ಕಾರಣ ಮೂರ್ಛೆ ಹೋಗಿ ನೆಲದ ಮೇಲೆ ಬಿದ್ದಿದ್ದರು. ಇಂಥವರನ್ನು ಗುರುತಿಸಿ, ಅವರಿಗೆ ಪ್ರಜ್ಞೆ ಬರುವಂತೆ ಮಾಡಲಾಯಿತು. ನಾನು ಸೇರಿದಂತೆ ಇತರರು ಈ ರೀತಿಯ 12ಕ್ಕೂ ಹೆಚ್ಚು ಮಂದಿ ಮೂರ್ಛೆ ಹೋಗಿದ್ದವರನ್ನು ರಕ್ಷಿಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆವು. ಆದರೆ ಬೆಂಕಿ ಮತ್ತು ಹೊಗೆ ಹೆಚ್ಚಾದ ಪರಿಣಾಮ ಇನ್ನೂ ಹೆಚ್ಚಿನ ಜನರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಈ ರೀತಿಯ ಪರಿಸ್ಥಿತಿಯಲ್ಲಿ ಸಹ ಮಾನವರ ರಕ್ಷಣೆಗೆ ಧಾವಿಸಬೇಕಿರುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿದೆ,'' ಎಂದು ಘಟನೆಯಲ್ಲಿ ಅಪತ್ಭಾಂದವನಂತೆ ಹಲವರನ್ನು ರಕ್ಷಿಸಿದ ವಿನೀತ್‌ ಅವರು ವಿನೀತವಾಗಿ ನುಡಿದಿದ್ದಾರೆ.

English summary
Meet the heroes of Delhi Mundka fire incident, who saved dozens of lives risking their own
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X