ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನಸಿನ ಕನ್ಯೆ ಹೇಮಾ ಮಾಲಿನಿ 100 ಕೋಟಿ ಆಸ್ತಿಯ ಒಡತಿ!

|
Google Oneindia Kannada News

ಮಥುರಾ, ಮಾರ್ಚ್ 26: ಬಿಜೆಪಿ ಸಂಸದೆ, ಬಾಲಿವುಡ್ ನಟಿ ಹೇಮಾ ಮಾಲಿನಿ ಅವರು ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ನೀಡಿದ ಅಫಿಡವಿಟ್ ನಲ್ಲಿ ತಮ್ಮ ಆಸ್ತಿಯ ವಿವರ ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕನಸಿನ ಕನ್ಯೆ ಹೇಮಾ ಮಾಲಿನಿ ರೂ.100 ಕೋಟಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್ ನಲ್ಲಿ ಉಲ್ಲೇಖಿಸಿದ್ದಾರೆ. 2014 ರ ಚುನಾವಣೆಯ ಸಮಯದಲ್ಲಿ ರೂ.66 ಕೋಟಿ ಮೌಲ್ಯದ ಆಸ್ತಿಯನ್ನು ಅವರು ಹೊಂದಿದ್ದರು.

ಕೃಷ್ಣ ಜನ್ಮಭೂಮಿ ಮಥುರಾ: ಲೋಕಸಭಾ ಕ್ಷೇತ್ರ ಪರಿಚಯ ಕೃಷ್ಣ ಜನ್ಮಭೂಮಿ ಮಥುರಾ: ಲೋಕಸಭಾ ಕ್ಷೇತ್ರ ಪರಿಚಯ

ಉತ್ತರ ಪ್ರದೇಶದ ಮಥುರಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹೇಮಾ ಮಾಲಿನಿ, ಮಂಗಳವಾರ ತಮ್ಮ ನಾಮಪತ್ರ ಸಲ್ಲಿಸಿದರು. ಲೋಕಸಭೆ ಚುನವಣೆ ಏಪ್ರಿಲ್ 11 ರಿಂದ ಆರಂಭವಾಗಲಿದ್ದು, ಮೇ.19 ರವರೆಗೆ ಒಟ್ಟು ಏಳು ಹಂತಗಳಲ್ಲಿ ನಡೆಯಲಿದೆ.

5 ವರ್ಷದಲ್ಲಿ ತಲಾ 10 ಕೋಟಿ ರೂ.ಆದಾಯ

5 ವರ್ಷದಲ್ಲಿ ತಲಾ 10 ಕೋಟಿ ರೂ.ಆದಾಯ

ಕಳೆದ ಐದು ವರ್ಷಗಳಿಂದ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಸಿಂಗ್ ಡಿಯೋಲ್ ದಂಪತಿ ತಲಾ 10 ಕೋಟಿ ರೂ.ನಷ್ಟು ಆದಾಯ ಗಳಿಸಿದ್ದಾರೆ ಎಂಬುದು ಆದಾಯ ತೆರಿಗೆ ಇಲಾಖೆಯಿಂದ ತಿಳಿದುಬಂದಿದೆ.

2014-15 ರಲ್ಲಿ 3.12 ಕೋಟಿ ರೂ, 2015-16 ರಲ್ಲಿ 1.19 ಕೋಟಿ ರೂ., 2016-17 ರಲ್ಲಿ 4.30 ಕೋಟಿ ರೂ. ಸಂಪಾದಿಸಿದ್ದಾರೆ.

ಮರ್ಸಿಡಝ್ ಕಾರ್

ಮರ್ಸಿಡಝ್ ಕಾರ್

ಇದರೊಟ್ಟಿಗೆ ಅವರ ಬಳಿ 33.62 ಲಕ್ಷ ರೂ ಬೆಲೆಯ ಮರ್ಸಿಡಝ್ ಕಾರು ಮತ್ತು 4.75ಲಕ್ಷ ರೂ.ಮೌಲ್ಯದ ಟೊಯೋಟಾ ಕಾರಿದೆ.

1965 ರಲ್ಲಿ ಧರ್ಮೇಂದ್ರ ಅವರು ಕೊಂಡುಕೊಂಡಿದ್ದ ರೇಂಜ್ ರೋವರ್ ಕಾರು ಇಂದಿಗೂ ಅವರ ಬಳಿ ಇದೆ. ಆಗ ಆ ಕಾರಿಗೆ ಅವರು ನೀಡಿದ್ದ ಹಣ, 7000 ರೂ!

ಗೌಡರ ಕುಟುಂಬದ ವಿರುದ್ಧ ನಿಂತಿರುವ ಎ.ಮಂಜು ಆಸ್ತಿ ಎಷ್ಟು? ಗೌಡರ ಕುಟುಂಬದ ವಿರುದ್ಧ ನಿಂತಿರುವ ಎ.ಮಂಜು ಆಸ್ತಿ ಎಷ್ಟು?

ಸಾಲ ಎಷ್ಟಿದೆ?

ಸಾಲ ಎಷ್ಟಿದೆ?

6.75 ಕೋಟಿ ರೂ.ನಷ್ಟು ಸಾಲವನ್ನು ಹೇಮಾ ಮಾಲಿನಿ ಹೊಂದಿದ್ದು, ಪತಿ ಧರ್ಮೇಂದ್ರ ಹೆಸರಿನಲ್ಲಿ 7.37 ಕೋಟಿ ರೂ. ಸಾಲವಿದೆ. ಮುಂಬೈಯ ಜುಹು ವೈಲ್ ಪಾರ್ಲೆಯಲ್ಲಿ ಬಂಗಲೆ ನಿರ್ಮಿಸಲು ತೆಗೆದುಕೊಂಡ ಸಾಲವದು.

ಕೇವಲ 9 ನೇ ವಯಸ್ಸಿನಲ್ಲಿಯೇ ಶಾಲೆಯನ್ನು ಬಿಟ್ಟು ನೃತ್ಯ ಕಲಿಯುವುದಕ್ಕೆ ಆರಂಭಿಸಿದ್ದ ಹೇಮಾಮಾಲಿನಿ ನಂತರ ಮೆಟ್ರಿಕ್ಯುಲೇಶನ್ ಮುಗಿಸಿದರು. 2012 ರಲ್ಲಿ ಉದಯಪುರದ ಪದ್ಮಾವತಿ ಸಿಂಘಾನಿಯಾ ವಿವಿಯಲ್ಲಿ ಡಾಕ್ಟರೇಟ್ ಪದವಿಯನ್ನೂ ಪಡೆದಿದ್ದಾರೆ.

ಎರಡು ಬಾರಿ ರಾಜ್ಯಸಭೆ ಸದಸ್ಯೆಯಾಗಿದ್ದ ಹೇಮಾಮಾಲಿನಿ

ಎರಡು ಬಾರಿ ರಾಜ್ಯಸಭೆ ಸದಸ್ಯೆಯಾಗಿದ್ದ ಹೇಮಾಮಾಲಿನಿ

2003 ರಿಂದ 2009 ಮತ್ತು 2011 ರಿಂದ 2012 ರ ಅವಧಿಯಲ್ಲಿ ಎರಡು ಬಾರಿ ರಾಜ್ಯಸಭೆಗೆ ಹೇಮಾ ಮಾಲಿನಿ ಆಯ್ಕೆಯಾಗಿದ್ದರು. 2014 ರಲ್ಲಿ ಮಥುರಾ ಕ್ಷೇತ್ರದಿಂದಲೇ ಸ್ಪರ್ಧಿಸಿ, ರಾಷ್ಟ್ರೀಯ ಲೋಕ ದಳದ ಅಭ್ಯರ್ಥಿ ಜಯಂತ್ ಚೌಧರಿ ಅವರನ್ನು 3,30,743 ಮತಗಳಿಂದ ಸೋಲಿಸುವ ಮೂಲಕ ಹೇಮಾಮಾಲಿನಿ ದಾಖಲೆ ಬರೆದಿದ್ದರು.

ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಹೊಂದಿರುವ ಆಸ್ತಿ ಎಷ್ಟು?

English summary
Bollywood dream girl, BJP MP from Mathura constituency, Hema Malini announces her assets. She has property, valued more than Rs.100 crore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X